ದೇಶದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸರ್ಕಾರದ ಕಡೆಯಿಂದ ಸಿಹಿ ಸುದ್ದಿ ಇದೆ. ಕೇಂದ್ರ ಸರ್ಕಾರದಿಂದ ಮತ್ತೊಂದು ನೇಮಕಾತಿ ಅಧಿಸೂಚನೆ ಬಿಡುಗಡೆಯಾಗಿದ್ದು, ಈ ಬಾರಿ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಖಾಲಿ ಇರುವ ಬರೋಬ್ಬರಿ 500ಕ್ಕಿಂತ ಹೆಚ್ಚು ಹುದ್ದೆಗಳಿಗೆ ಪದವಿ ಪೂರ್ತಿಗಳಿಸಿದ ಅರ್ಹ ಅಭ್ಯರ್ಥಿಗಳಿಂದ ಕೇಂದ್ರ ಲೋಕಸೇವಾ ಆಯೋಗ ಅರ್ಜಿ ಆಹ್ವಾನಿಸಿದೆ (UPSC CARF Recruitment 2024).
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ನೋಟಿಫಿಕೇಶನ್ ನಲ್ಲಿ ತಿಳಿಸಿರುವ ಹುದ್ದೆಗಳ ವಿವರ, ವೇತನ ಶ್ರೇಣಿ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ, ವಿದ್ಯಾರ್ಹತೆ ಹಾಗೂ ವಯೋಮಿತಿಗೆ ಸಂಬಂಧ ಪಟ್ಟ ಮಾನದಂಡಗಳು ಹಾಗೂ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಇತ್ಯಾದಿ ವಿಷಯಗಳ ಬಗ್ಗೆ ಈ ಲೇಖನದ ಸಹ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ. ತಪ್ಪದೆ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ:- ಈ ಲಿಸ್ಟ್ ನಲ್ಲಿ ಇರುವ ಮಹಿಳೆಯರಿಗೆ ಒಂದೇ ತಿಂಗಳಿಗೆ 2 ಬಾರಿ ಗೃಹಲಕ್ಷ್ಮಿ ಯೋಜನೆ 4000 ಹಣ ಬಂದಿದೆ.! ನೀವು ಚೆಕ್ ಮಾಡಿ
ನೇಮಕಾತಿ ಸಂಸ್ಥೆ:- ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್
ಹುದ್ದೆ ಹೆಸರು:- ಸಹಾಯಕ ಕಮಾಂಡೆಂಟ್
ಒಟ್ಟು ಹುದ್ದೆಗಳ ಸಂಖ್ಯೆ:- 506 ಹುದ್ದೆಗಳು…
ಹುದ್ದೆಗಳ ವಿವರ:-
* BSF – 186 ಹುದ್ದೆಗಳು
* CRPF – 120 ಹುದ್ದೆಗಳು
* CISF – 100 ಹುದ್ದೆಗಳು
* ITBP – 58 ಹುದ್ದೆಗಳು
* SSB – 42 ಹುದ್ದೆಗಳು
ಉದ್ಯೋಗ ಸ್ಥಳ:- ಭಾರತದಾದ್ಯಂತ…
ಈ ಸುದ್ದಿ ಓದಿ:- ಕೇವಲ 12,500 ಹೂಡಿಕೆ ಮಾಡಿ ಸಾಕು 1 ಕೋಟಿ ಸಿಗುತ್ತೆ ಪೋಸ್ಟ್ ಆಫೀಸ್ ಬೆಸ್ಟ್ ಸ್ಕೀಮ್ ಇದು.!
ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.56,100 ರಿಂದ 1,77,500 ವರೆಗೂ ಕೂಡ ವೇತನ ಇರುತ್ತದೆ. ಇದರೊಂದಿಗೆ ಇತರೆ ಸರ್ಕಾರಿ ಸೌಲಭ್ಯಗಳು ಕೂಡ ಸಿಗುತ್ತವೆ.
ಶೈಕ್ಷಣಿಕ ವಿದ್ಯಾರ್ಹತೆ:- ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಷಯದಲ್ಲಿ ಪದವಿ ಪೂರೈಸಿದ ಅಭ್ಯರ್ಥಿಯು ಅರ್ಜಿ ಸಲ್ಲಿಸಬಹುದಾಗಿದೆ.
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 20 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 25 ವರ್ಷಗಳು
ವಯೋಮಿತಿ ಸಡಿಲಿಕೆ:-
* SC/ ST ಮತ್ತು ಪ್ರವರ್ಗ – 1ರ ಅಭ್ಯರ್ಥಿಗಳಿಗೆ 05 ವರ್ಷಗಳು * OBC ಅಭ್ಯರ್ಥಿಗಳಿಗೆ 03 ವರ್ಷಗಳು
ಈ ಸುದ್ದಿ ಓದಿ:- HDFC ಬ್ಯಾಂಕಿನಿಂದ ಬಂಪರ್ ಆಫರ್, ಕೇವಲ 10 ನಿಮಿಷದಲ್ಲಿ ಸಿಗಲಿದೆ 10 ಲಕ್ಷದವರೆಗೆ ಸಾಲ.!
ಅರ್ಜಿ ಸಲ್ಲಿಸುವ ವಿಧಾನ:-
* ಮೊದಲಿಗೆ https://upsconline.nic.in/ ಭೇಟಿ ಕೊಡಿ
* ಅರ್ಜಿ ಸಲ್ಲಿಸಲು ಸೂಚಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಫಾರ್ಮೆಟ್ ಓಪನ್ ಆಗುತ್ತದೆ
* ಅದರಲ್ಲಿ ಕೇಳಲಾಗಿರುವ ಎಲ್ಲ ವೈಯಕ್ತಿಕ ವಿವರಗಳನ್ನು ಸರಿಯಾಗಿ ತುಂಬಿಸಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅಥವಾ ಪೂರಕ ದಾಖಲೆಗಳ ಸಂಖ್ಯೆಗಳನ್ನು ಕೇಳಿದ್ದಾರೆ ಸೂಕ್ತ ಸ್ಥಳದಲ್ಲಿ ಸರಿಯಾಗಿ ನಮೂದಿಸಿ.
* ಅರ್ಜಿ ಶುಲ್ಕ ಪಾವತಿಸಿದ ನಂತರ ಅರ್ಜಿ ಸಲ್ಲಿಕೆ ಯಶಸ್ವಿ ಆಗುತ್ತದೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ
ಆಯ್ಕೆ ವಿಧಾನ:-
* ಲಿಖಿತ ರೂಪದ ಸ್ಪರ್ಧಾತ್ಮಕ ಪರೀಕ್ಷೆ
* ನೇರ ಸಂದರ್ಶನ
* ದಾಖಲೆಗಳ ಪರಿಶೀಲನೆ
ಅರ್ಜಿ ಶುಲ್ಕ:-
* ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಅಥವಾ UPI ಪೇಮೆಂಟ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬಹುದು
* ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.200
* ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಈ ಸುದ್ದಿ ಓದಿ:- LPG ಗ್ಯಾಸ್ ಬಳಸುವವರಿಗೆ ಪ್ರಮುಖ ಸುದ್ದಿ.! ಈ ರೀತಿ ಸಿಲಿಂಡರ್ ಬಳಸುವ ಮುನ್ನ ಎಚ್ಚರ.!
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 24.04 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 14.05.2024