ಅಭಿಮಾನಿ ಕೊಟ್ಟ ಸರ್ಪ್ರೈಸ್ ಗಿಫ್ಟ್ ನೋಡಿ ಕೈ ಎತ್ತಿ ಮುಗಿದ ಅಶ್ವಿನಿ ಪುನೀತ್ ರಾಜಕುಮಾರ್ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರ.

ಅಪ್ಪು ಹಗಲಿ ಒಂದು ವರ್ಷಗಳು ಆಗಿದೆ ಇಲ್ಲಿಯ ತನಕ ಪ್ರತಿದಿನ ಒಂದಲ್ಲ ಒಂದು ವಿಚಾರವಾಗಿ ಅಪ್ಪು ಅವರನ್ನು ನೆನಪು ಮಾಡಿಕೊಳ್ಳುತ್ತಲೇ ಇದ್ದೇವೆ ಅವರು ಮಾಡಿರುವ ಸಹಾಯಗಳಿಂದ ಅಭಿಮಾನಿಗಳು ನಿತ್ಯವೂ ಸಹ ಅಪ್ಪು ಅವರ ಆರಾಧನೆಯನ್ನು ಮಾಡುತ್ತಿದ್ದಾರೆ. ಕೇವಲ ಕನ್ನಡಿಗರು ಮಾತ್ರವಲ್ಲದೇ ಇತರ ಭಾಷೆಯ ಅಭಿಮಾನಿಗಳು ಸಹ ಅಪ್ಪು ಅವರನ್ನು ಕಳೆದುಕೊಂಡು ನೋವನ್ನು ಅನುಭವಿಸುತ್ತಿದ್ದಾರೆ ಅಪ್ಪು ಅವರನ್ನು ಕಳೆದುಕೊಂಡ ನಂತರ ಅನಾಥ ಭಾವನೆ ಅವರಲ್ಲಿ ಮೂಡಿದೆ. ಎಷ್ಟೇ ಪ್ರಯತ್ನಿಸಿದರು ಸಹ ಆ ನೋವಿನಿಂದ ಹೊರಬರಲು ಸಾಧ್ಯವಾಗಿತ್ತಿಲ್ಲ. ಸಾಕಷ್ಟು ಮಂದಿ ಅಪ್ಪು ಅವರ ಫೋಟೋವನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ದಿನವೂ ಪೂಜೆಯನ್ನು ಸಲ್ಲಿಸಿ ಅಪ್ಪು ಅವರನ್ನು ಮತ್ತೆ ಹುಟ್ಟಿ ಬರಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.

WhatsApp Group Join Now
Telegram Group Join Now

ಪುನೀತ್ ರಾಜ್‌ಕುಮಾರ್ ಅವರು ಮಾಡುತ್ತಿದ್ದಂತಹ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಹಾಗೆ ಅವರ ಮಾರ್ಗದರ್ಶನದಲ್ಲಿ ನಾವು ಜೀವನಪೂರ್ತಿ ಇರುತ್ತೇವೆ ಎನ್ನುವಂತಹ ವಿಚಾರಗಳನ್ನು ಸಹ ವ್ಯಕ್ತಪಡಿಸಿದ್ದಾರೆ. ಅಪ್ಪು ಅವರ ಹೆಸರಿನಲ್ಲಿ ಅದೆಷ್ಟೋ ಒಳ್ಳೆಯ ಕೆಲಸಗಳು ಇಂದಿಗೂ ಸಹ ನಡೆದುಕೊಂಡು ಬರುತ್ತಿದೆ ಇದೀಗ ಅಪ್ಪು ಅವರ ಹೆಸರಿನಲ್ಲಿ ಮಾಡಿರುವಂತಹ ಮತ್ತೊಂದು ಒಳ್ಳೆಯ ಕೆಲಸ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಪ್ಪು ಅವರ ಅಭಿಮಾನಿಗಳೆಲ್ಲರೂ ಸೇರಿ ಅಪ್ಪು ಅವರ ಪತ್ನಿ ಅಶ್ವಿನಿ ಅವರಿಗೆ ಸರ್ಪ್ರೈಸ್ ಹಾಗೆ ಶಾಕ್ ಸಹ ನೀಡಿದ್ದಾರೆ ಹೌದು, ಅಪ್ಪು ಅವರ ಅಭಿಮಾನಿಗಳಾದ ಆಟೋ ಚಾಲಕರು ಸೇರಿಕೊಂಡು ತಮ್ಮ ಆಟೋಗಳ ಮೇಲೆ ಅಪ್ಪು ಅವರು ಇರುವಂತಹ ಭಾವಚಿತ್ರದೊಂದಿಗೆ ಹೂಗಳಿಂದ ಆಟೋಗಳನ್ನು ಅಲಂಕರಿಸಿ ಹೀಗೆ ಆಟೋಗಳನ್ನು ಸಂಪೂರ್ಣವಾಗಿ ಅಲಂಕರಿಸಿ ಅದನ್ನು ಅಪ್ಪು ಅವರ ಮನೆಯ ಮುಂದೆ ತಂದು ನಿಲ್ಲಿಸಿದ್ದಾರೆ ಇದನ್ನು ನೋಡಿದಂತಹ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ತುಂಬಾ ಖುಷಿಪಟ್ಟಿದ್ದಾರೆ ಹಾಗೆಯೇ ಅಪ್ಪು ಅವರ ಮೇಲಿರುವ ಅಭಿಮಾನಿಕ್ಕೆ ಸಂತಸವನ್ನು ವ್ಯಕ್ತಪಡಿಸಿ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

ಅಪ್ಪು ಅವರ ಮೇಲಿರುವ ಈ ನಿಮ್ಮ ಅಭಿಮಾನ ಸದಾ ಕಾಲ ಹೀಗೆ ಇರಬೇಕು ಎಂದು ಕೇಳಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಮನೆ ಮುಂದೆ ನೆರೆದಿದ್ದಂತಹ ಸಾಕಷ್ಟು ಅಭಿಮಾನಿಗಳು ಅಶ್ವಿನಿ ಅವರಿಗೆ ಇನ್ನಷ್ಟು ಇದೇ ರೀತಿಯಲ್ಲಿ ಅಪ್ಪು ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತೇವೆ ಅದಕ್ಕೆ ನಿಮ್ಮ ಬೆಂಬಲ ಬೇಕು ಎಂದು ಸಹ ತಿಳಿಸಿದ್ದಾರೆ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ. ಅಪ್ಪು ಅವರ ಮೇಲಿನ ಹುಚ್ಚು ಪ್ರೀತಿ ಎಂದಿಗೂ ಸಹ ಕಡಿಮೆಯಾಗುವುದಿಲ್ಲ ಅಪ್ಪು ಅವರ ಇರುವಂತಹ ಭಾವಚಿತ್ರವನ್ನು ತಮ್ಮ ದೇಹದ ಮೇಲೆ ಅಚ್ಚು ಹಾಕಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಪುನೀತ್ ರಾಜ್‌ಕುಮಾರ್ ಅವರ ಹೆಸರು ಮತ್ತು ಫೋಟೋವನ್ನು ಲಗ್ನ ಪತ್ರಿಕೆಯಲ್ಲೂ ಸಹ ಪ್ರಿಂಟ್ ಮಾಡಿಸಲಾಗಿದೆ ಎಲ್ಲಾ ಅಭಿಮಾನಿಗಳಿಗೂ ಸಹ ಅಪ್ಪು ಅವರ ಮೇಲೆ ಇರುವಂತಹ ಪ್ರೀತಿ ಅವರ ಜೀವ ಇರುವವರೆಗೂ ಕಡಿಮೆಯಾಗುವುದಿಲ್ಲ‌. ಕುಟುಂಬದ ಸದಸ್ಯನಾಗಿ ಅಪ್ಪು ಅವರನ್ನು ಬಿಂಬಿಸಿದ್ದಾರೆ ಪುನೀತ್ ರಾಜ್‌ಕುಮಾರ್ ಅವರು ತೋರಿಸಿಕೊಟ್ಟಿರುವಂತಹ ದಾರಿಯಲ್ಲಿ ನಾವು ನಡೆಯುತ್ತೇವೆ ಅವರ ಸದ್ಗುಣ ಸನ್ಮಾರ್ಗ ನಮ್ಮಲ್ಲಿಯೂ ಸಹ ರೂಡಿಸಿಕೊಳ್ಳುತ್ತೇವೆ ಎಂದು ಸಾಕಷ್ಟು ಅಭಿಮಾನಿಗಳು ಶಪಥವನ್ನು ಸಹ ಮಾಡಿದ್ದಾರೆ. ಎಷ್ಟೋ ಮನಸುಗಳನ್ನು ತಿಳಿಗೊಳಿಸುವಂತಹ ಕೆಲಸವನ್ನು ನಮ್ಮ ಪುನೀತ್ ರಾಜ್‌ಕುಮಾರ್ ಅವರು ಮಾಡಿದ್ದಾರೆ. ಅಭಿಮಾನಿಗಳ ಪ್ರೀತಿ ನಿಮಗೆ ಇಷ್ಟವಾದರೆ ತಪ್ಪದೆ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now