ಬಂಗಾರ ಈಗ ಆಭರಣವಾಗಿ ಅಲಂಕಾರ ಹೆಚ್ಚಿಸುವ ಅಥವಾ ಪ್ರತಿಷ್ಠೆಯ ವಿಷಯವಾಗಿ ಮಾತ್ರ ಉಳಿದಿಲ. ಲ ಬಂಗಾರವನ್ನು ಹೂಡಿಕೆಯ ಉದ್ದೇಶದಿಂದ ಕೂಡ ಖರೀದಿಸುವವರು ಇದ್ದಾರೆ ನಾವೇ ಗಮನಿಸಿರುವಂತೆ ದಿನದಿಂದ ದಿನಕ್ಕೆ ಬಂಗಾರದ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿರುತ್ತದೆ ಮತ್ತು ಇದು ಸದಾ ಏರಿಕೆಯಲ್ಲಿ ಇರುವುದರಿಂದ ಬಂಗಾರದ ಖರೀದಿ ನಮಗೆ ಬಹಳ ಲಾಭ ಬರುತ್ತದೆ ಎಂದು ನಾವು ತಿಳಿದುಕೊಂಡಿದ್ದೇವೆ.
ಒಂದು ಅರ್ಥದಲ್ಲಿ ಅದು ನಿಜ ಕೂಡ ಆಗಿದ್ದರು ಬಂಗಾರ ಖರೀದಿಸುವ ಸಮಯದಲ್ಲಿ ನಾವು ಕೆಲವು ವಿಷಯಗಳನ್ನು ತಿಳಿದುಕೊಳ್ಳದೆ ಯಾಮಾರಿದರೆ ಕೊಂಡುಕೊಳ್ಳುವ ವೇಳೆ ಕೂಡ ನಾವು ಅನಾವಶ್ಯಕವಾಗಿ ಹೆಚ್ಚು ಹಣ ಕೊಟ್ಟು ಮಾರಿದಾಗಲೂ ಡಿಮೆ ಹಣ ಕೈಗೆ ಸಿಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಂಗಾರ ಖರೀದಿಸುವ ಯಾರೇ ಆದರೂ ಈ ವಿಷಯಗಳನ್ನು ಬಗ್ಗೆ ಗಮನ ಕೊಟ್ಟು ನಿಮ್ಮ ಉದ್ದೇಶಕ್ಕನುಸಾರವಾಗಿ ಬಂಗಾರ ಖರೀದಿಸಿ.
ಈ ಸುದ್ದಿ ಓದಿ:- ರೈತರಿಗೆ ಬರ ಪರಿಹಾರ ಹಣ ಜಮೆ.! ನಿಮ್ಮ ಬ್ಯಾಂಕ್ ಖಾತೆ ಪರೀಕ್ಷಿಸಿಕೊಳ್ಳಿ, ಹಣ ಬಾರದೇ ಇದ್ದರೆ ಹೀಗೆ ಮಾಡಿ.!
* ಬಂಗಾರದ ಬೆಲೆ ದಿನದಲ್ಲಿ ಎರಡು ಬಾರಿ ಬದಲಾಗುತ್ತಿರುತ್ತದೆ ಮತ್ತು ಬಂಗಾರದ ಪ್ಯೂರಿಟಿಗೆ ಅನುಗುಣವಾಗಿ ಬಂಗಾರದ ಬೆಲೆ ನಿರ್ಧಾರ ಆಗುತ್ತದೆ. 18 ಕ್ಯಾರೆಟ್, 22 ಕ್ಯಾರೆಟ್, 24 ಕ್ಯಾರೆಟ್ ಈ ಗುಣಮಟ್ಟದ ಆಧಾರದ ಮೇಲೆ ಬಂಗಾರದ ಬೆಲೆ ನಿರ್ಧಾರ ಆಗಿರುತ್ತದೆ. ಸಾಮಾನ್ಯವಾಗಿ ಹೂಡಿಕೆ ಉದ್ದೇಶದಿಂದ ಖರೀದಿಸುವವರು ಬಂಗಾರದ ಕಾಯಿನ್ ಅಥವಾ ಬಿಸ್ಕೆಟ್ ಖರೀದಿಸಲು ನೋಡುತ್ತಾರೆ
* ನಾವು ಬಂಗಾರ ಖರೀದಿಸುವಾಗ ವೇಸ್ಟೇಜ್ ಚಾರ್ಜಸ್ ಎಂದು ಹೇಳುವುದನ್ನು ಕೇಳಿರುತ್ತೇವೆ. ಈ ವೇಸ್ಟೇಜ್ ಚಾರ್ಜಸ್ ಸಾಮಾನ್ಯವಾಗಿ 10 ಗ್ರಾಮ್ ಗೆ 1 ಗ್ರಾಮ್ ನಷ್ಟು ಇರುತ್ತದೆ. ಕೆಲವು ಕಡೆ ಸ್ವಲ್ಪ ವ್ಯತ್ಯಾಸವೂ ಇರುತ್ತದೆ, ಈ ವೇಸ್ಟೇಜ್ ನ್ನು ನಾವು ಬಂಗಾರ ಮಾರುವ ವೇಳೆಯೂ ಕೂಡ ತೆಗೆದು ಬಂಗಾರಕ್ಕೆ ಬೆಲೆ ನಿಗದಿ ಮಾಡುತ್ತಾರೆ.
ಈ ಸುದ್ದಿ ಓದಿ:-ಅಂಗನವಾಡಿಯಲ್ಲಿ ಇನ್ಮುಂದೆ ಬೆಲ್ಲ, ಸಕ್ಕರೆ, ಅಡುಗೆ ಎಣ್ಣೆ ಎಲ್ಲಾ ರೇಷನ್ ಬಂದ್.!
* ನಾವು ಆಭರಣಗಳನ್ನು ಮಾಡಿಸಿಕೊಂಡಾಗ ಅದಕ್ಕೆ ಹರಳುಗಳು, ರೂಬಿ ಇವುಗಳನ್ನು ಕೂಡ ಸೇರಿಸಿ ಮಾಡಿಸಿಕೊಂಡಿರುತ್ತೇವೆ. ಇವುಗಳ ಬೆಲೆ ಬಂಗಾರದ ಬೆಲೆಯಷ್ಟು ಇರುವುದಿಲ್ಲ. ಕೆಲವೊಮ್ಮೆ 200-500 ಬೆಲೆಯ ಹರಳುಗಳಿಗೆ ಚಿನ್ನದಷ್ಟೇ ಬೆಲೆ ತೆಗೆದುಕೊಳ್ಳುವವರು ಕೂಡ ಇದ್ದಾರೆ ಹಾಗಾಗಿ ಈ ವಿಷಯದ ಬಗ್ಗೆಯೂ ಕೂಡ ಗಮನ ಕೊಡಿ
* ಮೇಕಿಂಗ್ ಚಾರ್ಜಸ್ ಎನ್ನುವ ವಿಷಯವನ್ನು ಕೂಡ ಕೇಳುತ್ತೇವೆ ಇದರರ್ಥ ಬಂಗಾರವನ್ನು ಅವರು ಡಿಸೈನ್ ಮಾಡಿಕೊಡುವುದಕ್ಕಾಗಿ ತೆಗೆದುಕೊಳ್ಳುವ ಚಾರ್ಜಸ್ ಆಗಿದೆ. ಕೆಲವು ಡಿಸೈನ್ ಗಳನ್ನು ಕೈನಲ್ಲಿಯೇ ಮಾಡುತ್ತಾರೆ ಮಿಷನ್ ಗಳಲ್ಲಿ ಮಾಡುವ ಡಿಸೈನ್ ಗೆ ಮ್ಯಾನುವಲ್ ಡಿಸೈನ್ ಗಿಂತ ಚಾರ್ಜಸ್ ಕಡಿಮೆ ಇರುತ್ತದೆ.
ಈ ಸುದ್ದಿ ಓದಿ:-ರಾಜ್ಯದಲ್ಲಿ ಮತ್ತೊಮ್ಮೆ ಶಿಕ್ಷಕರ ನೇಮಕಾತಿ, 10,000 GPSTR, HSTR ನೇಮಕಾತಿ ಆರಂಭ.!
ಆದರೆ ಇದು ಖರೀದಿಸುವವರಿಗೆ ಅಷ್ಟೊಂದು ಗೊತ್ತಾಗುವುದಿಲ್ಲ ಮತ್ತು ಈ ಮೇಕಿಂಗ್ ಚಾರ್ಜಸ್ ಡಿಸೈನ್ ಹೆಚ್ಚಾಗಿ ಇರುವ ಕಾರಣಕ್ಕಾಗಿ ಹೆಚ್ಚು ಎಂದು ನಿರ್ಧಾರ ಆಗುವುದಿಲ್ಲ. ಆದರೆ ಕೆಲವರು ಹೆಚ್ಚು ಡಿಸೈನ್ ಇದೆ ಎಂದು ಹೇಳಿ ಹೆಚ್ಚು ಮೇಕಿಂಗ್ ಚಾರ್ಜಸ್ ಹಾಕುವ ಸಾಧ್ಯತೆ ಇರುತ್ತದೆ, ಹಾಗಾಗಿ ಇದರ ಬಗ್ಗೆಯೂ ಕೂಡ ಗಮನ ಕೊಡಿ
* ನೀವು ಯಾವುದೇ ಅಂಗಡಿಯಲ್ಲಿ ಅದು ಚಿಕ್ಕ ಅಂಗಡಿ ಆಗಿರಲಿ ಅಥವಾ ದೊಡ್ಡ ಶಾಪ್ ಆಗಲಿ ಬಂಗಾರ ಖರೀದಿ ಮಾಡಿದರೆ ತಪ್ಪದೇ ಅದಕ್ಕೆ ಬಿಲ್ ಮತ್ತು ಈಗ ಬಂಗಾರದ ಒಡವೆಗಳಿಗೆ ಸರ್ಟಿಫಿಕೇಟ್ ಕೂಡ ಕೊಡುತ್ತಾರೆ ಇದನ್ನು ಪಡೆದುಕೊಳ್ಳಿ ಯಾಕೆಂದರೆ ಇದರಲ್ಲಿ ನಿಮ್ಮ ಚಿನ್ನ ಎಷ್ಟು ತೂಕ ಇದೆ ಎಷ್ಟು ಕ್ಯಾರೆಟ್ ಚಿನ್ನ ಮೇಕಿಂಗ್ ಚಾರ್ಜಸ್ ಎಷ್ಟಿತ್ತು ಎಲ್ಲದಕ್ಕೂ ಕೂಡ ದಾಖಲೆ ಇರುತ್ತದೆ.
ಈ ಸುದ್ದಿ ಓದಿ:-ಆಯುಷ್ಮಾನ್ ಕಾರ್ಡ್ ಕಳೆದು ಹೋಗಿದ್ಯಾ.! ಮೊಬೈಲ್ ಮೂಲಕ ಮತ್ತೆ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ ನೋಡಿ.!
ಒಂದು ವೇಳೆ ಭವಿಷ್ಯದಲ್ಲಿ ನೀವು ಖರೀದಿಸಿದ ಚಿನ್ನದ ತೂಕ ಅಥವಾ ಗುಣಮಟ್ಟಕ್ಕೆ ಸಂಬಂಧಿಸಿದ ಹಾಗೆ ಸಮಸ್ಯೆ ಬಂದಾಗ ಈ ದಾಖಲೆ ಇದ್ದರೆ ಕಾನೂನಾತ್ಮಕವಾಗಿ ಹೋರಾಡಿ ನ್ಯಾಯ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ ಈ ಮಾಹಿತಿ ಇಷ್ಟ ಆದರೆ ತಪ್ಪದೇ ಎಲ್ಲರಿಗೂ ಶೇರ್ ಮಾಡಿ.!