ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ತಮ್ಮ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲೂ ಬಡವರು ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಪರಿಚಯಿಸಿದ ಖ್ಯಾತಿ ಇವರದ್ದು.
ರೈತರು, ವಿದ್ಯಾರ್ಥಿಗಳು, ಕಾರ್ಮಿಕರು, ಮಹಿಳೆಯರು ಹೀಗೆ ಪ್ರತಿಯೊಂದು ವರ್ಗಕ್ಕೂ ಅನ್ವಯಿಸುವಂತೆ ಯೋಜನೆಗಳನ್ನು ಜಾರಿಗೆ ತಂದ ಇವರ ಬಹಳ ವಿಶೇಷವಾದ ಪ್ರಧಾನಮಂತ್ರಿ ಉಜ್ವಲ್ ಯೋಜನೆ (Pradhan Mantri Ujwal Yojane) ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಯಾಕೆಂದರೆ LPG ಬಳಕೆದಾರರಿಗೆ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ ಮುಂದಿನ ತಿಂಗಳಿನಿಂದ ನಿಮಗೆ ಮೂರು ಸಿಲಿಂಡರ್ ಉಚಿತವಾಗಿ ಸಿಗುತ್ತಿದೆ. ಕಾರಣ ಏನು? ಪಡೆಯುವುದು ಹೇಗೆ? ಎಲ್ಲಾ ಮಾಹಿತಿ ಹೀಗಿದೆ ನೋಡಿ.
ಈ ಸುದ್ದಿ ಓದಿ:- ಕೇವಲ 9 ಲಕ್ಷಕ್ಕೆ ಸೈಟ್ ಜೊತೆ ಮನೆ ಕೂಡ ಸಿಗುತ್ತಿದೆ. ಎಲ್ಲಿ? ಹೇಗೆ ಗೊತ್ತಾ? ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.!
ಪ್ರಧಾನಮಂತ್ರಿ ಉಜ್ವಲ್ ಯೋಜನೆಯ ಉದ್ದೇಶವು ಮಹಿಳೆಯರಿಗೆ ಹೊಗೆ ಮುಕ್ತ ವಾತಾವರಣದಲ್ಲಿ ಅಡುಗೆ ಮಾಡಲು ಅವಕಾಶ ಮಾಡಿಕೊಟ್ಟು ಅವರ ಆರೋಗ್ಯದ ರಕ್ಷಣೆ ಜೊತೆಗೆ ಪರಿಸರವನ್ನು ಕಾಪಾಡುವುದಾಗಿದೆ.
ಹಾಗಾಗಿ ಬಡತನ ರೇಖೆಗಿಂತ ಕೆಳಗಿರುವ ಅಂದರೆ BPL ಕಾರ್ಡ್ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ (free Gas Connection) ಕಲ್ಪಿಸಿಕೊಟ್ಟು ಆ ಸಮಯದಲ್ಲಿ ಉಚಿತವಾಗಿ ಒಂದು ಗ್ಯಾಸ್ ಸ್ಟೌವ್, ರೆಗ್ಯುಲೇಟರ್, ಸಿಲಿಂಡರ್ ಮತ್ತು ಗ್ಯಾಸ್ ಲೈಟರ್ ನೀಡುತ್ತಿತ್ತು.
ಇದಿಷ್ಟು ಮಾತ್ರವಲ್ಲದೆ ಪ್ರತಿ ಬಾರಿ ಸಿಲಿಂಡರ್ ಬುಕ್ ಮಾಡಿದಾಗ ಬೆಲೆಯಲ್ಲಿ ಕೂಡ ಸಬ್ಸಿಡಿ (Subsidy) ಸೌಲಭ್ಯ ಸಿಗುತ್ತಿತ್ತು. 2016ರಲ್ಲಿ ಜಾರಿಗೆ ಬಂದ ಈ ಯೋಜನೆ ಪ್ರಯೋಜನವನ್ನು ದೇಶದ ಕೋಟ್ಯಾಂತರ ಕುಟುಂಬಗಳು ಪಡೆದಿವೆ.
ಈ ಸುದ್ದಿ ಓದಿ:- ಖಾಸಗಿ ಶಾಲೆಯಲ್ಲಿ ಉಚಿತ ಅಡ್ಮಿಷನ್’ಗೆ ಅರ್ಜಿ ಆಹ್ವಾನ.! ಯಾವುದೇ ಫೀಸ್ ಇಲ್ಲದೆ ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಉಚಿತವಾಗಿ ಕೊಡಿಸಿ.!
ಈಗ ಏಪ್ರಿಲ್ ತಿಂಗಳಿನಲ್ಲಿ ಮತ್ತೊಮ್ಮೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಪ್ರಯುಕ್ತ ಅರ್ಜಿ ಆಹ್ವಾನಿಸಲಾಗಿದೆ. ನೀವೇನಾದರೂ ಇನ್ನು ಸಹ ನಿಮ್ಮ ಕುಟುಂಬಕ್ಕೆ ಗ್ಯಾಸ್ ಸಂಪರ್ಕ ಪಡೆದೆ ಇಲ್ಲ ಎಂದರೆ ಮತ್ತು ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಹರಾಗಿದ್ದು ಅರ್ಜಿ ಸಲ್ಲಿಸಿದರೆ ಈ ಸಮಯದಲ್ಲಿ ನಿಮಗೆ ವರ್ಷಕ್ಕೆ ಮೂರು ಸಿಲಿಂಡರ್ ಉಚಿತವಾಗಿ ದೊರೆತ ರೀತಿ ಆಗುತ್ತದೆ.
ಇದು ಹೇಗೆಂದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಗ್ಯಾಸ್ ಸಂಪರ್ಕ ಪಡೆದಿರುವ ಕುಟುಂಬಗಳು ಈಗ ಉಳಿದ ಬಳಕೆದಾರರಿಗೆ ರೂ.900 ಇರುವ ಸಿಲಿಂಡರನ್ನು ದರವನ್ನು ರೂ.600 ಕ್ಕೆ ಖರೀದಿಸುತ್ತಿದ್ದಾರೆ.
ಅಂದರೆ ಸಿಲಿಂಡರಾ ಪಡೆದುಕೊಳ್ಳುವ ವೇಳೆಯಲ್ಲಿ ಪೂರ್ತಿ ಹಣ ಪಾವತಿ ಮಾಡಿ 900 ಕೊಟ್ಟು ಏಜೆನ್ಸಿಗಳಿಂದ ಗ್ಯಾಸ್ ಸಿಲಿಂಡರ್ ಪಡೆದಿದ್ದರು 300 ರೂಪಾಯಿಗಳ ಸಿಲಿಂಡರ್ ಸಬ್ಸಿಡಿ ಅವರ ಖಾತೆಗೆ ಮರಳಿ ಹೋಗುತ್ತಿದೆ ಹೀಗಾಗಿ ಅವರು ರೂ.600 ಕ್ಕೆ ಗ್ಯಾಸ್ ಖರೀದಿಸಿದ ರೀತಿ ಆಯ್ತು.
ಈ ಸುದ್ದಿ ಓದಿ:- ಹೊಸ ವೋಟರ್ ಐಡಿ ಗೆ ಅರ್ಜಿ ಸಲ್ಲಿಸಲು ತಿದ್ದುಪಡಿ ಮಾಡಿಸಲು ಕಡೇ ಅವಕಾಶ, ಮೊಬೈಲ್ ನಲ್ಲೇ ಅಪ್ಲೈ ಮಾಡವ ವಿಧಾನ ಇಲ್ಲಿದೆ ನೋಡಿ.!
ವರ್ಷದಲ್ಲಿ 12 ಸಿಲಿಂಡರ್ ಬಳಕೆ ಮಾಡಿದವರಿಗೆ ಈ ರೀತಿ ಪ್ರತಿ ಸಿಲಿಂಡರ್ ಬುಕ್ಕಿಂಗ್ ಮೇಲೆ ರೂ.300 ರೂಪಾಯಿಗಳ ಸಬ್ಸಿಡಿ ಸಿಗುತ್ತಿದೆ ಈ ಲೆಕ್ಕಾಚಾರದಲ್ಲಿ ಒಂದು ವರ್ಷಕ್ಕೆ ಮೂರು ಸಿಲಿಂಡರ್ ಗಳನ್ನು ಉಚಿತವಾಗಿ ಪಡೆದ ರೀತಿ ಆಗುತ್ತದೆ. ಹಾಗಾಗಿ ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಯಾರೆಲ್ಲ ಇನ್ನೂ ಸಹ ತಮ್ಮ ಮನೆಗಳಲ್ಲಿ ಗ್ಯಾಸ್ ಸೌಲಭ್ಯ ಹೊಂದಿಲ್ಲ ಅಂತಹ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಇಂದೇ ಆನ್ಲೈನ್ ಮೂಲಕ ಪ್ರಧಾನಮಂತ್ರಿ ಉಜ್ವಲ ಯೋಜನೆ ವೆಬ್ಸೈಟ್ನಲ್ಲಿ ಅಥವಾ ಆಫ್ಲೈನ್ ನಲ್ಲಿ ಹತ್ತಿರದ ಏಜೆನ್ಸಿಗಳಿಗೆ ಹೋಗುವ ಮೂಲಕ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಿ ಮತ್ತು ಸರ್ಕಾರದ ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಿ.