ದೇಶದಾದ್ಯಂತ ಇರುವ ಎಲ್ಲ ಉದ್ಯೋಗಾಕಾಂಕ್ಷಿಗಳಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India) ವತಿಯಿಂದ ಸಿಹಿ ಸುದ್ದಿ ಇದೆ. ಬರೋಬ್ಬರಿ ಈ ವರ್ಷ 3000 ಹುದ್ದೆಗಳ ನೇಮಕಾತಿ (Recruitment) ಆಗುತ್ತಿದ್ದು, ಬ್ಯಾಂಕಿಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು ಎಂದು ಬಯಸುತ್ತಿರುವವರಿಗೆ ಇದೊಂದು ಒಳ್ಳೆ ಅವಕಾಶವಾಗಿದೆ.
ಬ್ಯಾಂಕಿಗ್ ಕ್ಷೇತ್ರವು ಯಾವುದೇ ಸರ್ಕಾರಿ ಹುದ್ದೆಗೆ ಕಡಿಮೆ ಇಲ್ಲದಂತಹ ವೇತನವನ್ನು ನೀಡುವಂತಹ ಉದ್ಯೋಗವಾಗಿದೆ ಮತ್ತು ಈ ಕ್ಷೇತ್ರದಲ್ಲಿ ಕೆಲಸದ ಅನುಭವ ಹೊಂದಿದ್ದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುಕೂಲತೆಯೂ ಸಿಗಲಿದೆ.
ಯಾವುದೇ ಹೆಚ್ಚಿನ ಕೆಲಸದ ಒತ್ತಡವಿರದ ಹಾಗೂ ಹೆಚ್ಚಿನ ಸಮಯ ಕೆಲಸ ಮಾಡಬೇಕಾದ ತೊಂದರೆ ಇಲ್ಲದ ಹುದ್ದೆಗಳು ಬ್ಯಾಂಕಿಂಗ್ ಹುದ್ದೆಗಳಾಗಿದ್ದು ಈ ಬಗ್ಗೆ ಆಸಕ್ತಿ ಇರುವವರಿಗಾಗಿ ನೇಮಕಾತಿ ಕುರಿತು ನೋಟಿಫಿಕೇಶನ್ ಮೇಲೆ ಇರುವ ಪ್ರಮುಖ ಸುದ್ದಿಗಳನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:-ಅಡಿಕೆ ಬದಲು ಚಕ್ಕೆ ಬೆಳೆದರೆ ರೈತನಿಗೆ ಹೆಚ್ಚಿನ ಲಾಭ, ಚಕ್ಕೆ ಬೆಳೆಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ.?
ನೇಮಕಾತಿ ಸಂಸ್ಥೆ:- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆಯ ಹೆಸರು:- ಅಪ್ರೆಂಟಿಸ್ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 3,000 ಪೋಸ್ಟ್ ಗಳು
ಉದ್ಯೋಗ ಸ್ಥಳ:- ಭಾರತದಾದ್ಯಂತ…
ಶೈಕ್ಷಣಿಕ ವಿದ್ಯಾರ್ಹತೆ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಉತ್ತೀರ್ಣರಾಗಿರಬೇಕು ಅಥವಾ ಅದಕ್ಕೆ ತತ್ಸಮಾನವಾದ ವಿದ್ಯಾರ್ಹತೆಯನ್ನು ಪಡೆದಿರಬೇಕು
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 27 ವರ್ಷಗಳು
ವಯೋಮಿತಿ ಸಡಿಲಿಕೆ:-
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 05 ವರ್ಷಗಳು
* OBC ಅಭ್ಯರ್ಥಿಗಳಿಗೆ 03 ವರ್ಷಗಳು
* PWD ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇರುತ್ತದೆ.
ಈ ಸುದ್ದಿ ಓದಿ:-ಪ್ರಿಪ್ಯಾಬ್ ಕಂಟೇನರ್ ಮನೆಗಳು, ಕೇವಲ ಏಳು ದಿನಗಳಲ್ಲಿ ರೆಡಿ ಭೇಟಿ ಆಗುತ್ತವೆ, ಇಡೀ ಕರ್ನಾಟಕದಾದ್ಯಂತ ಡೆಲಿವರಿ ಕೂಡ ಸಿಗುತ್ತದೆ.!
ಅರ್ಜಿ ಸಲ್ಲಿಸುವ ವಿಧಾನ:-
* https://portal.mhrdnats.gov.in/boat/login/user_login.action ಲಿಂಕ್ ಕ್ಲಿಕ್ ಮಾಡುವ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ
* ಅಪ್ಲಿಕೇಶನ್ ಓಪನ್ ಆಗುತ್ತದೆ, ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿಗಳನ್ನು ಸರಿಯಾಗಿ ಭರ್ತಿ ಮಾಡಿ
* ಯಾವುದೇ ಪ್ರಮಾಣ ಪತ್ರ ಅಥವಾ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅಥವಾ ಪ್ರಮಾಣ ಪತ್ರ ಸಂಖ್ಯೆಯನ್ನು ನಮೂದಿಸಿ
* ನಿಮ್ಮ ಕೆಟಗರಿ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಿ ತಪ್ಪದೇ ಇ-ರಶೀದಿ ಪಡೆಯಿರಿ
* ಎಲ್ಲ ಮಾಹಿತಿಯನ್ನು ಮತ್ತೊಮ್ಮೆ ಚೆಕ್ ಮಾಡಿ ಸಬ್ಮಿಟ್ ಕೊಡಿ ಅರ್ಜಿ ಸಲ್ಲಿಕೆಯಾದ ಮೇಲೆ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ.
ಅರ್ಜಿ ಶುಲ್ಕ:-
* ಆನ್ಲೈನ್ ಮೂಲಕವೇ ಅರ್ಜಿ ಶುಲ್ಕ ಪಾವತಿ ಮಾಡಬೇಕು
* PWD ಅಭ್ಯರ್ಥಿಗಳು ರೂ.400 + GST
* ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ / ಮಹಿಳಾ ಮತ್ತು EWS ಅಭ್ಯರ್ಥಿಗಳಿಗೆ – ರೂ.600 + GST
* ಉಳಿದ ಅಭ್ಯರ್ಥಿಗಳಿಗೆ – ರೂ.800 + GST
ಆಯ್ಕೆ ವಿಧಾನ:-
* ಕಂಪ್ಯೂಟರೈಸ್ಡ್ ಟೆಸ್ಟ್
* ದಾಖಲೆಗಳ ಪರಿಶೀಲನೆ
* ಸಂದರ್ಶನ.
ಈ ಸುದ್ದಿ ಓದಿ:-CSC ಸೆಂಟರ್ ತೆಗೆಯುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು.? ID ಪಡೆಯಲು ಮೊಬೈಲ್ ನಲ್ಲಿ ಅರ್ಜಿ ಹಾಕುವುದು ಹೇಗೆ.? ಇಲ್ಲಿದೆ ನೋಡಿ ಮಾಹಿತಿ.!
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 21 ಫೆಬ್ರವರಿ, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 06 ಮಾರ್ಚ್, 2024
* ಆನ್ಲೈನ್ನಲ್ಲಿ ಪರೀಕ್ಷೆ ನಡೆಯುವ ದಿನಾಂಕ – 10 ಮಾರ್ಚ್, 2024.