ದೇಶದ ಎಲ್ಲ ಬ್ಯಾಂಕ್ ಗಳು ಮತ್ತು ಖಾಸಗಿ ಹಣಕಾಸು ಸಂಸ್ಥೆಗಳು ಕೂಡ ಬ್ಯಾಂಕ್ ಗಳ ಬ್ಯಾಂಕ್ ಎಂದು ಕರೆಯಲ್ಪಡುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ನಿಯಮಾವಳಿಗೆ ಒಳಪಟ್ಟಿರುತ್ತವೆ, ಇವುಗಳ ಎಲ್ಲಾ ಆರ್ಥಿಕ ಚಟುವಟಿಗೂ ಕೂಡ ಆರ್‌ಬಿ ಗೈಡ್ಲೈನ್ಸ್ ಮಿತಿಗೆ ಒಳಪಟ್ಟಿರುತ್ತದೆ.
ಕೆಲವೊಮ್ಮೆ RBI ಬ್ಯಾಂಕ್ ಗಳು ಹಾಗೂ ಅವುಗಳಲ್ಲಿ ಖಾತೆ ಹೊಂದಿರುವ ಗ್ರಾಹಕರ ಹಿತದೃಷ್ಟಿಯಿಂದ ಎಲ್ಲಾ ಬ್ಯಾಂಕ್ ಗಳಿಗೂ ಕೂಡ ಕೆಲ ನಿಯಮಗಳನ್ನು ಜಾರಿಗೆ ತರುತ್ತವೆ, ಅದರಲ್ಲಿ ಕೆಲ ಆದೇಶಗಳು ಕಡ್ಡಾಯವಾಗಿರುತ್ತದೆ ಆಗಷಬ್ಯಾಂಕ್ ಗಳು ಅದಕ್ಕೆ ಪೂರಕವಾಗಿ ನಡೆದುಕೊಳ್ಳಲೇ ಬೇಕಾಗುತ್ತದೆ. ಈ ರೀತಿ RBI ಬ್ಯಾಂಕ್ ಗಳ ಮೇಲೆ ಹೇರುವ ಕಾನೂನು ಅಥವಾ ನೀತಿ ನಿಯಮಗಳಿಗೆ ಬ್ಯಾಂಕ್ ಗಳಲ್ಲಿ ವಹಿವಾಟು ಹೊಂದಿರುವ ಗ್ರಾಹಕರು ಕೂಡ ಪಾತ್ರರಾಗುತ್ತಾರೆ.
ಆಧಾರ್ ಕಾರ್ಡ್ ಇರುವ ಎಲ್ಲರಿಗೂ ಹೊಸ ರೂಲ್ಸ್ ಜಾರಿ.!
ಈ ರೀತಿ RBI ಸೂಚನೆಯಿಂದ ಬ್ಯಾಂಕ್ ಗಳಲ್ಲಿ ಆಗುವ ಯಾವುದೇ ನೀತಿ ನಿಯಮಗಳ ಬದಲಾವಣೆ ಬಗ್ಗೆ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ಅವುಗಳ ಕುರಿತು ಮಾಹಿತಿ ತಲುಪಿಸುವ ವ್ಯವಸ್ಥೆ ಮಾಡುತ್ತದೆ. ಈಗ ಅಂತಹ ಒಂದು ಮಹತ್ವದ ಆದೇಶದ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಬ್ಯಾಂಕ್ ಆಫ್ ಬರೋಡ (BOB) ತನ್ನ ಗ್ರಾಹಕರಿಗೆ ತಿಳಿಸಿದೆ.
ಅದೇನೆಂದರೆ, RBI ಯು SBI ಮತ್ತು BOB ಬ್ಯಾಂಕ್ ಗಳಿಗೆ ಗ್ರಾಹಕರ ಹಕ್ಕುಗಳನ್ನು ಒಳಗೊಂಡಂತೆ ಪರಿಷ್ಕೃತ ಬ್ಯಾಂಕ್ ಲಾಕರ್ ಒಪ್ಪಂದವನ್ನು (New locker agreement) ನೀಡಿದೆ. ಈ ಹೊಸ ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಈ ಎರಡು ಬ್ಯಾಂಕುಗಳಲ್ಲಿ ಲಾಕರ್ ಸೌಲಭ್ಯ ಹೊಂದಿರುವ ಎಲ್ಲಾ ಗ್ರಾಹಕರು ಕೂಡ ಸಹಿ ಮಾಡಬೇಕಾಗುತ್ತದೆ. ಬ್ಯಾಂಕ್ ಗಳು ಕೂಡ ತನ್ನ ಗ್ರಾಹಕರಿಗೆ ಈ ಮಾಹಿತಿಯನ್ನು SMS ಮತ್ತು ಇಮೇಲ್ ಮೂಲಕ ತಿಳಿಸಿ ಬ್ಯಾಂಕ್ ಗೆ ಬಂದು ಮಾಹಿತಿ ತಿಳಿದುಕೊಂಡು ಈ ಅಗ್ರಿಮೆಂಟ್ ಗೆ ಸಹಿ ಮಾಡಲು ಕೇಳುತ್ತಿದೆ.
RBI ಆದೇಶದಲ್ಲಿ ಜೂನ್ 30ರ ಒಳಗೆ ಕನಿಷ್ಠ 50% , ಸೆಪ್ಟೆಂಬರ್ 30 ರೊಳಗೆ 75% ಮತ್ತು ಡಿಸೆಂಬರ್ 31ರ ಒಳಗೆ ನೂರಕ್ಕೆ ನೂರರಷ್ಟು ದೇಶದ ಎಲ್ಲಾ ಬ್ಯಾಂಕ್ಗಳು ಕೂಡ ಈ ಹೊಸ ಲಾಕರ್ ಅಗ್ರಿಮೆಂಟ್ ಮಾಹಿತಿಯನ್ನು ತನ್ನ ಗ್ರಾಹಕರಿಗೆ ತಿಳಿಸಿ ಸಹಿ ಪಡೆದಿರಬೇಕು ಎಂದು ಎಲ್ಲಾ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ.
ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ SBI ಮತ್ತು BOB ಬ್ಯಾಂಕ್ ಗಳಲ್ಲಿ ಬ್ಯಾಂಕ್ ಲಾಕರ್ ಹೊಂದಿದ್ದರೆ, ನೀವು ಬ್ಯಾಂಕ್‌ನಿಂದ SMS ಅನ್ನು ಸಹ ಸ್ವೀಕರಿಸಿರುತ್ತೀರಿ. ನೀವೇನಾದರೂ ಈ ರೀತಿ SMS ಪಡೆದಿದ್ದರೆ ತಪ್ಪದೆ ಈ ಕೂಡಲೇ ಕೆಲವು ಅಗತ್ಯ ದಾಖಲೆಗಳ ಜೊತೆ ನಿಮ್ಮ ಖಾತೆ ಇರುವ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ಈ ಹೊಸ ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಸಹಿ ಮಾಡಿ.
ರೇಷನ್ ಕಾರ್ಡ್ ಇಲ್ಲದವರಿಗೆ ಗುಡ್ ನ್ಯೂಸ್.! ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದರ ಬಗ್ಗೆ ಮಾಹಿತಿ.!
ಇಲ್ಲದಿದ್ದರೆ ನೀವು ನಂತರ ಇದರಿಂದಾಗಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಬಗ್ಗೆ ಏನೇ ಗೊಂದಲಗಳಿದ್ದರೂ ಕೂಡ ಅಲ್ಲಿನ ಸಿಬ್ಬಂದಿಯಿಂದ ವಿವರ ಪಡೆಯಬಹುದು, ಹೊಸ ನಿಯಮದ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಪ್ರತಿಯೊಬ್ಬರಿಗೂ ಕೂಡ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಈ ಉಪಯುಕ್ತ ಮಾಹಿತಿಯನ್ನು ಎಲ್ಲರ ಜೊತೆ ಶೇರ್ ಮಾಡಿ.