ಆಧಾರ್ ಕಾರ್ಡ್ (Aadhar card) ಅವಶ್ಯಕತೆ ಹಾಗೂ ಪ್ರಾಮುಖ್ಯತೆ ನಮ್ಮ ದೇಶದ ಎಲ್ಲರಿಗೂ ಕೂಡ ಅರಿವಾಗಿದೆ ಎಂದೇ ಹೇಳಬಹುದು. ಯಾಕೆಂದರೆ ದೇಶದ ಪ್ರತಿಯೊಬ್ಬ ನಾಗರಿಕನು ಕೂಡ ಆಧಾರ್ ಕಾರ್ಡ್ ಹೊಂದಿರಲೇಬೇಕು. ಆಧಾರ್ ಕಾರ್ಡನ್ನು ಮಕ್ಕಳ ಶಾಲಾ ದಾಖಲಾತಿ ಸಮಯದಿಂದ ಹಿಡಿದು ಉದ್ಯೋಗ ಸೇರಿಸಿಕೊಳ್ಳಲು, ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು, ರೇಷನ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ ದಾಖಲೆ ಮಾಡಿಸಿಕೊಳ್ಳಲು ದಾಖಲೆಯಾಗಿ ಕೇಳುತ್ತಾರೆ.
ಹಾಗಾಗಿ ಆಧಾರ್ ಕಾರ್ಡ್ ಇಲ್ಲದೆ ಸರ್ಕಾರಿ ವಲಯದ ಮತ್ತು ಖಾಸಗಿ ಕ್ಷೇತ್ರದ ಯಾವ ಕಾರ್ಯವು ನಡೆಯುವುದೇ ಇಲ್ಲ ಎಂದರೆ ತಪ್ಪಾಗುವುದಿಲ್ಲ. ಇದರೊಂದಿಗೆ ಆಗಾಗ UIDAI ನ ನಿಯಮಗಳ ಪ್ರಕಾರ ಇದನ್ನು ಅಪ್ಡೇಟ್ ಮಾಡಬೇಕಾದದ್ದು ಕೂಡ ಅಷ್ಟೇ ಮುಖ್ಯ. ಅದರ ಕುರಿತು ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ದೇಶದ ಎಲ್ಲಾ ನಾಗರಿಕರಿಗೂ ಕೂಡ ಯೂನಿಕ್ ಆದ 12 ಅಂಕಿಗಳುಳ್ಳ ಆಧಾರ್ ಸಂಖ್ಯೆ ಮತ್ತು ಕಾರ್ಡ್ ನೀಡುತ್ತದೆ. ಆಧಾರ್ ಕಾರ್ಡ್ ನ ಕುರಿತಾದ ಯಾವುದೇ ಗೊಂದಲ ಹಾಗೂ ಸಮಸ್ಯೆಗೂ ಕೂಡ ನಾವು ನೇರವಾಗಿ UADAI ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಡಬಹುದು ಅಥವಾ ದೇಶದ ಎಲ್ಲಾ ಭಾಗದಲ್ಲೂ ಕೂಡ ಆಧಾರ್ ಸೇವಾಕೇಂದ್ರಗಳು (Aadhar Sevakendra ) ಕಾರ್ಯನಿರ್ವಹಿಸುತ್ತಿವೆ.
ಇಲ್ಲಿ ಕೂಡ ಆಧಾರ್ ಕುರಿತು ಇರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು, ತಿದ್ದುಪಡಿ ಮಾಡಿಸಿಕೊಳ್ಳಬಹುದು. ಸದ್ಯಕ್ಕೆ ಈ ವರ್ಷದಲ್ಲಿ UIDAI ನಿಂದ ಘೋಷಣೆಯಾಗಿರುವ ಅತಿಮುಖ್ಯ ಆದೇಶವೇನೆಂದರೆ ಯಾರು ಕಳೆದ ಹತ್ತು ತಿಂಗಳಿಂದ ಒಮ್ಮೆ ಕೂಡ ಆಧಾರ್ ಅಪ್ಡೇಟ್ ಮಾಡಿಸಿಲ್ಲ ಅವರೆಲ್ಲರೂ ಆಧಾರ್ ಕಾರ್ಡ್ ಅಪ್ಡೇಟ್ (new rule for all those who have done aadhar card before 2023) ಮಾಡಿಸಿಕೊಳ್ಳಬೇಕು ಎಂದು.
ರೇಷನ್ ಕಾರ್ಡ್ ಇಲ್ಲದವರಿಗೆ ಗುಡ್ ನ್ಯೂಸ್.! ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದರ ಬಗ್ಗೆ ಮಾಹಿತಿ.!
ಎರಡು ಬಾರಿ ಇದಕ್ಕಿದ್ದ ಕಾಲಾವಕಾಶವನ್ನು ವಿಸ್ತರಿಸಲಾಗಿದೆ, ಈಗ ಕೂಡ ಸೆಪ್ಟೆಂಬರ್ 14ರ ವರೆಗೆ ಉಚಿತವಾಗಿ (free service) ಈ ರೀತಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಗಡುವು ಮುಗಿದಿರುವುದರಿಂದ ಆನ್ಲೈನಲ್ಲಿ 25ರೂ. ಹಾಗೂ ಆಫ್ಲೈನ್ನಲ್ಲಿ 50ರೂ. ಶುಲ್ಕ ಮತ್ತು ಸೂಕ್ತ ದಾಖಲೆಗಳನ್ನು ಕೊಟ್ಟು ಈ ಪ್ರಕ್ರಿಯೆ ಪೂರ್ತಿಗೊಳಿಸಬೇಕು.
ನಾವು ಒಮ್ಮೆ ಆಧಾರ್ ಕಾರ್ಡ್ ಪಡೆದ ಮೇಲೆ ನಮ್ಮ ಹೆಸರು ಅಥವಾ ವಿಳಾಸ ಇತ್ಯಾದಿಗಳಲ್ಲಿ ವ್ಯತ್ಯಾಸಗಳಾಗಿದ್ದರೆ ಅಥವಾ ನಾವೇ ಇವುಗಳನ್ನು ಬದಲಾವಣೆ ಮಾಡಿಕೊಂಡಾಗ, ಮೊಬೈಲ್ ಸಂಖ್ಯೆ ಬದಲಾಯಿಸಿದಾಗ, ಐದು ವರ್ಷದೊಳಗಿನ ಮಕ್ಕಳು ಐದು ವರ್ಷ ತುಂಬಿದ ಬಳಿಕ, 5 ರಿಂದ 15 ವರ್ಷದವರು 15 ವರ್ಷ ತುಂಬಿದ ಬಳಿಕ ತಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ (Aadhar update) ಮಾಡಿಸುತ್ತಾರೆ.
ಗೃಹಲಕ್ಷ್ಮಿ ಯೋಜನೆಯ 2000 ಹಣ ಯಾರಿಗೆಲ್ಲಾ ಬಂದಿಲ್ಲ ನಿಮ್ಮ ಮೊಬೈಲ್ ನಲ್ಲಿ ಹೀಗೆ ಮಾಡಿ ಹಣ ಬರುತ್ತದೆ.!
ಈ ರೀತಿ ನೀವು ಕಳೆದ 10 ವರ್ಷದಿಂದ ಒಮ್ಮೆಯಾದರೂ ಹೀಗೆ ಆಧಾರ್ ಅಪ್ಡೇಟ್ ಮಾಡಿಸಿದ್ದರೆ ಸಮಸ್ಯೆ ಇಲ್ಲ. ಆದರೆ ಯಾವುದೇ ಕಾರಣಕ್ಕೂ ಕಳೆದ ಹತ್ತು ವರ್ಷ ಅಂದರೆ 2013ರಿಂದ 2023ರ ಅವಧಿಯಲ್ಲಿ ಒಮ್ಮೆ ಕೂಡ ತಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿದದಿದ್ದರೆ ಕೂಡಲೇ ಬಯೋಮೆಟ್ರಿಕ್ ಮಾಹಿತಿ (Biometeic) , ಗುರುತಿನ ಪುರಾವೆ (POI) ಮತ್ತು ವಿಳಾಸದ ಪುರಾವೆ (POA) ನೀಡಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು.
ವಿಶಿಷ್ಟ ಗುರುತಿನ ಪ್ರಾಧಿಕಾರ ಸೂಚಿಸಿದಂತೆ ಒಂದು ವೇಳೆ ನೀವು ಈ ಕಾರ್ಯವನ್ನು ಪೂರ್ತಿಗೊಳಿಸದೆ ಇದ್ದರೆ ನಿಮ್ಮ ಆಧಾರ್ ಕಾರ್ಡ್ ರದ್ದಾಗಬಹುದು ಅಥವಾ ಸ್ಥಗಿತಗೊಂಡು (Suspend) ನೀವು ಇನ್ನು ಮುಂದೆ ಯಾವುದೇ ಚಟುವಟಿಕೆಗೆ ಆಧಾರ್ ಕಾರ್ಡ್ ಬಳಸದೆ ಹೋಗುವ ಪರಿಸ್ಥಿತಿ ಬರಬಹುದು ಹಾಗಾಗಿ ತಪ್ಪದೆ ಶೀಘ್ರವಾಗಿ ಇದನ್ನು ಪೂರ್ತಿ ಗೊಳಿಸಿ.
ರೇಷನ್ ಕಾರ್ಡ್ ಇದ್ದವರಿಗೆ ಕೇವಲ 428 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲೆಂಡರ್.!