ಚೆಲುವಿನ ಚಿತ್ತಾರದ ನಟಿ ಅಮೂಲ್ಯ ಅವರು ತಮ್ಮ ಮುದ್ದು ಮುಖದ ಮೂಲಕ ನಮ್ಮ ಚಂದನವನದಲ್ಲಿ ನಟಿಸಿ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಅಮೂಲ್ಯ ಅವರು ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದರು ಮದುವೆಯಾದ ನಂತರ ಚಿತ್ರರಂಗದಿಂದ ದೂರ ಉಳಿದ ನಟಿ ಅಮೂಲ್ಯ ಈಗ ತಾಯಿತನದ ಖುಷಿಯನ್ನು ಅನುಭವಿಸುತ್ತಾ ಇದ್ದಾರೆ. ಇನ್ನು ನಟಿ ಅಮೂಲ್ಯ ಅವರಿಗೆ ಅವಳಿ ಗಂಡು ಮಕ್ಕಳು ಆದನಂತರ ಅಭಿಮಾನಿಗಳು ಹಾಗೂ ಸ್ನೇಹಿತರು ಮಕ್ಕಳಿಗೆ ಯಾವ ಹೆಸರನ್ನು ಇಡುತ್ತೀರಾ ಎಂದು ಸಾಕಷ್ಟು ಜನರು ಕಾಮೆಂಟ್ಸ್ ಮೂಲಕ ಕೇಳುತ್ತಾ ಇದ್ದರು ಇಂದು ಶಾಸ್ತ್ರೊತ್ತವಾಗಿ ನಾಟಿ ಅಮೂಲ್ಯ ಅವರ ಮಕ್ಕಳ ನಾಮಕರಣ ಶಾಸ್ತ್ರ ಮುಗಿದಿದ್ದು ಅಮೂಲ್ಯ ಅವರ ಮಕ್ಕಳ ಹೆಸರು ತುಂಬಾ ಕ್ಯೂಟ್ ಆಗಿ ಇದೆ.
ಹೌದು ನಟಿ ಅಮೂಲ್ಯ ಅವರು ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದರು ಮಕ್ಕಳ ಮುದ್ದಾದ ಫೋಟೋಗಳನ್ನು ನಟಿ ಅಮೂಲ್ಯ ಅವರು ಆಗಾಗ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ನಟಿ ಅಮೂಲ್ಯ ಯಾವುದೇ ಕಾರ್ಯಕ್ರಮಕ್ಕೆ ಭೇಟಿ ನೀಡಿದರು ಅಭಿಮಾನಿಗಳು ಮಕ್ಕಳ ಹೆಸರಿನ ಬಗ್ಗೆ ಕೇಳುತ್ತಿದ್ದರು. ಕೊನೆಗೂ ಅಮೂಲ್ಯ ತಮ್ಮ ಮಕ್ಕಳಿಗೆ ನಾಮಕರಣವನ್ನು ಮಾಡಿದ್ದು ತಮ್ಮ ಮಕ್ಕಳಿಗೆ ಅಥರ್ವ್ ಮತ್ತು ಆದವ್ ಎಂದು ನಾಮಕರಣವನ್ನು ಮಾಡಿದ್ದಾರೆ ಶಾಸ್ತ್ರೊತ್ತವಾಗಿ ನಡೆದ ಈ ನಾಮಕರಣ ಶಾಸ್ತ್ರದಲ್ಲಿ ಆಪ್ತರು ಹಾಗೂ ಕುಟುಂಬಸ್ಥರು ಭಾಗವಾಗಿದ್ದರು.
ನಟಿ ಅಮೂಲ್ಯ ಅವರು ತಮ್ಮ ಅವಳಿ ಮಕ್ಕಳಿಗೆ ಅಥರ್ವ್ ಮತ್ತು ಆದವ್ ಎಂದು ಕಳೆದು ವಾರ ತಮ್ಮ ಮನೆಯಲ್ಲಿ ನಡೆದ ನಾಮಕರಣ ಶಾಸ್ತ್ರದಲ್ಲಿ ಹೆಸರಿಟ್ಟಿದ್ದಾರೆ ಇಂದು ನಟಿ ಅಮೂಲ್ಯ ಅವರು ಚಿತ್ರರಂಗ ಹಾಗೂ ಟಿವಿ ಕ್ಷೇತ್ರದ ಗಣ್ಯರು ಸ್ಟಾರ್ ನಟರು ಹಾಗೂ ಸ್ನೇಹಿತರಿಗೋಸ್ಕರ ನಾಮಕರಣ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ನಟಿ ಭವ್ಯ ಗೌಡ, ಮೇಘನ ಗಾಂಕರ್, ಚೈತ್ರ ವಾಸುದೇವ ಇನ್ನು ಮುಂತಾದವರು ಆಗಮಿಸಿ ಅಮೂಲ್ಯ ಜಗದೀಶ್ ದಂಪತಿಗೆ ಶುಭಾಶಯಗಳು ತಿಳಿಸಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ ನಮ್ಮ ನಿಮ್ಮೆಲ್ಲರ ನೆಚ್ಚಿನ ಡಿ ಬಾಸ್ ಆಗಮಿಸಿದ್ದರು ಕಾರ್ಯಕ್ರಮಕ್ಕೆ ಒಂದು ಹೊಸ ಹುರುಪನ್ನು ನೀಡಿದರು ಎಂದೇ ಹೇಳಿದರೆ ತಪ್ಪಾಗುವುದಿಲ್ಲ.
ದರ್ಶನ್ ಅವರು ಚಿತ್ರರಂಗದ ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನ ನೀಡಿದರು ಖುದ್ದಾಗಿ ಹೋಗುತ್ತಾರೆ ನಟಿ ಅಮೂಲ್ಯ ಅವರು ಸಹ ತಮ್ಮ ಮಕ್ಕಳ ನಾಮಕರಣ ಶಾಸ್ತ್ರಕ್ಕೆ ಡಿ ಬಾಸ್ ದರ್ಶನ್ ಅವರನ್ನು ಆಹ್ವಾನ ಮಾಡಿದರು ಹಾಗೆ ದರ್ಶನ್ ಅವರು ಕಾರ್ಯಕ್ರಮಕ್ಕೆ ಭೇಟಿ ನೀಡಿ ಅಮೂಲ್ಯ ದಂಪತಿಗಳಿಗೆ ಶುಭಾಶಯಗಳು ಹಾರೈಸಿದ್ದಾರೆ. ಹಾಗೆ ಕಾರ್ಯಕ್ರಮಕ್ಕೆ ನಟ ಗಣೇಶ್ ಸಹ ಆಗಮಿಸಿದ್ದರು ತಮ್ಮ ಮೊದಲ ಸಿನಿಮಾದ ನಟಿಯಾದಂತಹ ಅಮೂಲ್ಯ ಜಗದೀಶ್ ಅವರ ಮಕ್ಕಳ ನಾಮಕರಣ ಶಾಸ್ತ್ರಕ್ಕೆ ಗಣೇಶ್ ಅವರು ಆಗಮಿಸಿ ಶುಭಾಶಯಗಳನ್ನು ತಿಳಿಸಿದ್ದಾರೆ. ಗಣೇಶ್ ಅವರು ಅಮೂಲ್ಯ ಅವರಿಗೆ ಒಂದು ರೀತಿಯಲ್ಲಿ ಕುಟುಂಬ ಇದ್ದ ಹಾಗೆ ಯಾವುದೇ ಕಾರ್ಯಕ್ರಮಗಳು ಆದರೂ ಸಹಿತ ಇವರು ಆಗಮಿಸುತ್ತಾರೆ. ಇನ್ನು ಹೇಳಬೇಕೆಂದರೆ ಅಮೂಲ್ಯ ಅವರ ಮದುವೆಯನ್ನು ಖುದ್ದಾಗಿ ಗಣೇಶ್ ಹಾಗೂ ಅವರ ಪತ್ನಿ ಶಿಲ್ಪ ಅವರು ನಿಂತು ನೆರವೇರಿಸಿಕೊಟ್ಟಿದ್ದರು. ಈ ಮುದ್ದಾದ ಮಕ್ಕಳ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.