ದೇಶದ ಪ್ರತಿಯೊಂದು ಕುಟುಂಬಕ್ಕೂ ಕೂಡ ಮನೆಯ ಎಲ್ಲ ಸದಸ್ಯರ ಹೆಸರನ್ನು ಒಳಗೊಂಡ ರೇಷನ್ ಕಾರ್ಡ್ (Ration Card) ಇರಬೇಕು. ಯಾಕೆಂದರೆ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೇಷನ್ ಕಾರ್ಡ್ ಆಧಾರಿತವಾದ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿವೆ.
ನಮ್ಮ ರಾಜ್ಯ ಸರ್ಕಾರದಲ್ಲಿಯೇ ಹೇಳಬೇಕು ಎಂದರೆ ಈಗ ಸರ್ಕಾರ ಹೊರಡಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ (Gyarantee Scheme) ಎರಡು ಮುಖ್ಯ ಯೋಜನೆಗಳಾದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ (Annabhagya and Gruhalakshmi) ಅನುದಾನ ಪಡೆಯಬೇಕು ಎಂದರೆ ರೇಷನ್ ಕಾರ್ಡ್ ಇರಲೇಬೇಕು ಮತ್ತು ರೇಷನ್ ಕಾರ್ಡ್ ಹೆಸರು ಆಧಾರ್ ಕಾರ್ಡ್ ನಲ್ಲಿ ಇರುವಂತೆಯೇ ಇರಬೇಕು.
ಈ ಸುದ್ದಿ ನೋಡಿ:- SSLC ಆಗಿರುವವರಿಗೆ ಸಿಹಿಸುದ್ಧಿ ಭರ್ಜರಿ 25,000 ಉದ್ಯೋಗವಕಾಶ, ನೀವು ಇರುವ ಊರಿನಲ್ಲಿಯೇ ಕೆಲಸ 15,000 ವೇತನ, ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.!
ಇದರೊಂದಿಗೆ ಕೇಂದ್ರ ಸರ್ಕಾರದಿಂದಲೂ ಕೂಡ ಬಡತನ ರೇಖೆಗಿಂತ ಕೆಳಗಿರುವ ರೈತ ಕುಟುಂಬಗಳಿಗೆ, ವಿದ್ಯಾರ್ಥಿಗಳಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಮತ್ತು APL ಕಾರ್ಡ್ ಹೊಂದಿರುವವರಿಗೂ ಕೂಡ BPL ಕಾರ್ಡ್ ಹೊಂದಿರುವವರಿಗೆ ನೀಡುವಂತೆಯೇ ಆಯುಷ್ಮಾನ್ ಕಾರ್ಡ್ ಸೇರಿದಂತೆ ಹಲವಾರು ಯೋಜನೆಗಳ ನೆರವು ಸಿಗಲಿದೆ.
ಹಾಗಾಗಿ ದೇಶದ ನಾಗರಿಕರು ಎನ್ನುವ ಗುರುತಿನ ಚೀಟಿಗಾಗಿ ರೇಷನ್ ಕಾರ್ಡ್ ಹೊಂದಿರುವುದು ಒಳ್ಳೆಯದು. ಆದರೆ ಅನೇಕರು ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳಲ್ಲಿ ಹೆಸರನ್ನು ಹೊಂದಿದ್ದಾರೆ ಮತ್ತು ಕೆಲವರು ತಾವು ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರೂ ಕೂಡ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುವ ರೇಷನ್ ಕಾರ್ಡ್ ಗಳನ್ನು ಪಡೆಯುತ್ತಿದ್ದಾರೆ.
ಈ ಸುದ್ದಿ ನೋಡಿ:- ಜಮೀನು ತಂದೆ, ತಾತ, ಮುತ್ತಾತನ ಹೆಸರಿನಲ್ಲಿದ್ದರೆ ಅಥವಾ ಪಹಣಿ ಪತ್ರದಲ್ಲಿ ಹೆಸರಿನ ತಿದ್ದುಪಡಿ ಇದ್ದರೆ ಕಂದಾಯ ಅದಾಲತ್ ಜಾರಿ.!
ಇದರಿಂದ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ BPL ಕಾರ್ಡ್ ನೀಡಲಾಗುತ್ತಿಲ್ಲ ಮತ್ತು ಅಸಲಿ ಫಲಾನುಭವಿಗಳಿಗೆ ವಂ’ಚ’ನೆ ಆಗುತ್ತಿದೆ ಇದೆಲ್ಲವನ್ನು ತಪ್ಪಿಸಲು ಮತ್ತು ಈ ಮೂಲಕ ಸರ್ಕಾರಕ್ಕಾಗುತ್ತಿರುವ ನ’ಷ್ಟವನ್ನು ತಡೆಗಟ್ಟಲು ರೇಷನ್ ಕಾರ್ಡ್ ವಿಚಾರದಲ್ಲಿ ಪಾರದರ್ಶಕತೆ ತರಲು ನಿರ್ಧರಿಸಿ ಸರ್ಕಾರ ಪ್ರತಿಯೊಬ್ಬ ರೇಷನ್ ಕಾರ್ಡ್ ಫಲಾನುಭವಿಯು ಕೂಡ ಆಧಾರ್ ಕಾರ್ಡ್ ನ್ನು ರೇಷನ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸಬೇಕು ಎನ್ನುವ ಆದೇಶವನ್ನು ಹೊರಡಿಸಿದೆ.
ಆಹಾರ ಇಲಾಖೆ ಅಧಿಕಾರಿಗಳು ಹಲವಾರು ಬಾರಿ ಈ ಬಗ್ಗೆ ಸೂಚನೆ ಕೊಟ್ಟಿದ್ದಾರೆ ಮತ್ತು ಗ್ಯಾರಂಟಿ ಯೋಜನೆಗಳು ಜಾರಿ ಆದಮೇಲೆ ಈ ವಿಚಾರದಲ್ಲಿ ಹೆಚ್ಚು ಒತ್ತಡ ತರಲಾಗುತ್ತಿದೆ. ಆದರೆ ಇನ್ನು ಅನೇಕರು ಈ ಕೆಲಸದಲ್ಲಿ ನಿರ್ಲಕ್ಷ ತೋರುತ್ತಿದ್ದಾರೆ. ಅವರಿಗೆ ಕಡೆ ಅವಕಾಶವನ್ನು ಇಲಾಖೆ ಅಧಿಕಾರಿಗಳು ನೀಡಿದ್ದಾರೆ ಮತ್ತು ಈ ಬಾರಿ ಈ ಪ್ರಕ್ರಿಯೆ ಪೂರ್ತಿಗೊಳಿಸಿದವರಿಗೆ ಖಡಕ್ ಎಚ್ಚರಿಕೆ ಒಂದನ್ನು ಕೂಡ ನೀಡಿದ್ದಾರೆ.
ಈ ಸುದ್ದಿ ನೋಡಿ:- ಈ ಬೆಲೆ ಬೆಳೆದರೆ ಎಕರೆಗೆ 30 ಲಕ್ಷ ಆದಾಯ ಗ್ಯಾರಂಟಿ.!
ಅದೇನೆಂದರೆ, ಫೆಬ್ರವರಿ 28ರ ಒಳಗೆ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ ಇ-ಕೆವೈಸಿ (Ration Card-Aadhar Card link & e-KYC) ಪೂರ್ತಿಗೊಳಿಸಿದಂತಹ ಫಲಾನುಭವಿಗಳ ರೇಷನ್ ಕಾರ್ಡ್ ಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗುವುದು (Suspend) ಎಂದು ಪ್ರಕಟಣೆ ಹೊರಡಿಸಲಾಗಿದೆ ಮತ್ತು ಪ್ರಕ್ರಿಯೆಯನ್ನು ಪೂರ್ತಿಗೊಳಿಸಿದ ನಂತರ ನಿರ್ಬಂಧವನ್ನು ತೆರವುಗೊಳಿಸಲಾಗುವುದು ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.
ಒಂದು ವೇಳೆ ಈ ರೀತಿ ಏನಾದರೂ ರೇಷನ್ ಕಾರ್ಡ್ ಗಳು ಸ್ಥಗಿತಗೊಂಡರೆ ಆಗ ಸರ್ಕಾರದಿಂದ ಆ ತಿಂಗಳಿನಲ್ಲಿ ಪಡೆಯಬೇಕಾದ ಅನ್ನ ಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆಯಲಾಗುವುದಿಲ್ಲ. ಹಾಗಾಗಿ ಈ ಬಗ್ಗೆ ಯಾರೂ ನಿರ್ಲಕ್ಷ ತೋರದೆ ಈ ಕೂಡಲೇ ತಾವು ಪಡಿತರ ಪಡೆಯುತ್ತಿದ್ದ ನ್ಯಾಯಬೆಲೆ ಅಂಗಡಿಗಳಿಗೆ (fair price shop) ಹೋಗಿ ಪ್ರಕ್ರಿಯ ಪೂರ್ತಿಗೊಳಿಸಿ.
ಈ ಸುದ್ದಿ ನೋಡಿ:- ವಿದ್ಯಾಸಿರಿ ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ಸ್ಕಾಲರ್ಷಿಪ್ ಪಡೆಯಿರಿ.!
ಮತ್ತು ಆಹಾರ ಇಲಾಖೆ ಅಧಿಕಾರಿಗಳು ಪಡಿತರ ಅಂಗಡಿಗಳ ಸಿಬ್ಬಂದಿಗಳಿಗೂ ಕೂಡ ಈ ವಿಚಾರದಲ್ಲಿ ತಾತ್ಸರ ತೋರದೆ, ಫಲಾನುಭವಿಗಳಿಗೆ ಅನಾನುಕೂಲತೆ ಆಗದಂತೆ ಶೀಘ್ರವಾಗಿ ಇ-ಕೆವೈಸಿ ಮಾಡಿಕೊಡಬೇಕು ಎನ್ನುವ ಸೂಚನೆ ಕೂಡ ಕೊಟ್ಟಿದ್ದಾರೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಅವರಿಗೂ ವಿಷಯ ತಿಳಿಯುವಂತೆ ಮಾಡಿ.