ಮ್ಯಾರೇಜ್ ಸರ್ಟಿಫಿಕೇಟ್ (Marriage Certificate) ಎಂದರೆ ಒಂದು ಗಂಡು ಹಾಗೂ ಹೆಣ್ಣು ಕಾನೂನು ಬದ್ಧವಾಗಿ ವಿವಾಹ ಆಗಿದ್ದರೆ ಎನ್ನುವುದನ್ನು ಸೂಚಿಸುವ ದಾಖಲೆ ಆಗಿದೆ. ಇದನ್ನು ಹೆಚ್ಚಿನ ಜನರು ದಾಖಲೆ ಪತ್ರ ಭದ್ರತೆ ಉದ್ದೇಶದಿಂದ ಮಾಡಿಸುವುದು ಅಷ್ಟೇ ಎಂದುಕೊಂಡಿದ್ದಾರೆ.
ಇದರಿಂದ ಎಷ್ಟೆಲ್ಲಾ ಬೆನಿಫಿಟ್ ಇದೆ ಎನ್ನುವುದು ಬಹುತೇಕರಿಗೆ ತಿಳಿದೇ ಇಲ್ಲ ಹಾಗಾಗಿ ಇಂದು ಈ ಅಂಕಣದಲ್ಲಿ ನಾವು ಮ್ಯಾರೇಜ್ ಸರ್ಟಿಫಿಕೇಟ್ ಎಷ್ಟು ಮುಖ್ಯ? ಇದನ್ನು ಏಕೆ ಮಾಡಿಸಬೇಕು? ಇದರಿಂದ ಯಾವ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎನ್ನುವ ಮಾಹಿತಿಯನ್ನು ತಿಳಿಸುತ್ತಿದ್ದೇವೆ ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಅವರಿಗೂ ವಿಷಯ ತಿಳಿಯುವಂತೆ ಮಾಡಿ.
ಈ ಸುದ್ದಿ ಓದಿ:- ಜಂಟಿ ಖಾತೆಯನ್ನು ಏಕಮಾತ್ರ ಖಾತೆಯನ್ನಾಗಿ ಬದಲಾವಣೆ ಮಾಡಿಕೊಳ್ಳುವ ವಿಧಾನ, ಜಂಟಿ ಖಾತೆ ಹಕ್ಕು ವರ್ಗಾವಣೆ ಮಾಡಿಸುವುದು ಹೇಗೆ ನೋಡಿ.!
ಮ್ಯಾರೇಜ್ ಸರ್ಟಿಫಿಕೇಟ್ ಅಗತ್ಯತೆ:-
* ಮನೆ ಜಮೀನು ಸೈಟು ಇವುಗಳು ಗಂಡನಿಂದ ಹೆಂಡತಿಗೆ ಅಥವಾ ಹೆಂಡತಿಯಿಂದ ಗಂಡನ ಹೆಸರಿಗೆ ವರ್ಗಾವಣೆ ಆಗಬೇಕು ಎಂದರೆ ಅಂತಹ ಸಮಯದಲ್ಲಿ ಮ್ಯಾರೇಜ್ ಸರ್ಟಿಫಿಕೇಟ್ ಇರಲೇಬೇಕು
* ಹೊಸದಾಗಿ ಮದುವೆ ಆದವರು ಆಧಾರ್ ಕಾರ್ಡ್ ನಲ್ಲಿ ತಮ್ಮ ವಿಳಾಸ ಬದಲಾಯಿಸಿಕೊಳ್ಳಲು ಮತ್ತು ರೇಷನ್ ಕಾರ್ಡ್ ಗಳಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಿಸಲು ಅಥವಾ ಹೊಸ ರೇಷನ್ ಕಾರ್ಡ್ ನ್ನು ತನ್ನ ಕುಟುಂಬಕ್ಕಾಗಿ ಪಡೆಯಲು, ಮತ್ತು ಪಾಸ್ಪೋರ್ಟ್ ನಲ್ಲಿ ಗಂಡ ಹೆಂಡತಿ ಹೆಸರು ಸೇರಿಸಲು.
ದಾಖಲೆಯಾಗಿ ಮ್ಯಾರೇಜ್ ಸರ್ಟಿಫಿಕೇಟ್ ನೀಡಬೇಕಾಗುತ್ತದೆ.
* ಒಂದು ವೇಳೆ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಯಾರಾದರೂ ಒಬ್ಬರು ಅಕಾಲಿಕ ಮ’ರ’ಣವಾಗಿ ಅವರ ಹೆಸರಿನಲ್ಲಿ LIC ಅಥವಾ ಇನ್ನಿತರ ಇನ್ಸೂರೆನ್ಸ್ ಇದ್ದರೆ ಕ್ಲೈಮ್ ಮಾಡಲು ಬ್ಯಾಂಕ್ ನಲ್ಲಿ ಅಥವಾ ಹಣಕಾಸು ಸಂಸ್ಥೆಗಳ ಇನ್ನಿತರ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಅವುಗಳನ್ನು ಕ್ಲೈಮ್ ಮಾಡಲು ಮ್ಯಾರೇಜ್ ಸರ್ಟಿಫಿಕೇಟ್ ದಾಖಲೆಯಾಗಿ ಸಲ್ಲಿಸಬೇಕಾಗುತ್ತದೆ.
ಈ ಸುದ್ದಿ ಓದಿ:- ಕರ್ನಾಟಕ ರೇಷ್ಮೆ ಇಲಾಖೆ ನೇಮಕಾತಿ, ವೇತನ 56,600/- ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!
* ಪತಿ ಅಥವಾ ಪತ್ನಿ ವಿದೇಶದಲ್ಲಿ ಇದ್ದರೆ ಶೀಘ್ರವಾಗಿ ಪಾಸ್ಪೋರ್ಟ್ ಮಾಡಿಸಬೇಕಿದ್ದರೆ ಅಂತಹ ಸಂದರ್ಭದಲ್ಲಿ ಕೂಡ ಅನುಕೂಲಕ್ಕೆ ಬರುತ್ತದೆ ಹಾಕಿ ಕಾನೂನು ಬದ್ಧವಾಗಿ ನಡೆಯುವ ವಿಚ್ಛೇದನ ಪ್ರಕರಣಗಳಲ್ಲಿ ಪಾಲುದಾರಿಕೆ ಅಥವಾ ಮಕ್ಕಳ ಜವಾಬ್ದಾರಿ ಅಥವಾ ಜೀವನಾಂಶ ಇನ್ನಿತರ ವಿಷಯಗಳನ್ನು ನಿರ್ಧಾರ ಮಾಡುವಾಗ ಮ್ಯಾರೇಜ್ ಸರ್ಟಿಫಿಕೇಟ್ ದಾಖಲೆಯಾಗಿ ನೀಡಬೇಕಾಗುತ್ತದೆ
* ಭಾವನಾತ್ಮಕವಾಗಿ ನೋಡುವುದಾದರೆ ವಿವಾಹವಾಗುವ ಹೆಣ್ಣು ಮಕ್ಕಳಿಗೆ ಭದ್ರತೆಯ ಉದ್ದೇಶದಿಂದ ಅವರ ಆತ್ಮಸ್ಥೈರ್ಯ ವನ್ನು ಹೆಚ್ಚಿಸಲು ಈ ಮ್ಯಾರೇಜ್ ಸರ್ಟಿಫಿಕೇಟ್ ಎನ್ನುವುದು ಬೇಕೇ ಬೇಕು.
ಈ ಸುದ್ದಿ ಓದಿ:- ಬೋರ್ವೆಲ್ ಕೊರೆಸುವ ರೈತರಿಗೆ, 101% ಪಕ್ಕಾ ನೀರು, USA, ಜಪಾನೀಸ್ ಟೆಕ್ನಾಲಜಿ ಬಳಸಿ ನೀರಿನ ಪಾಯಿಂಟ್ ಮಾಡಲಾಗುತ್ತದೆ.!
* ಸರ್ಕಾರದ ವಿವಿಧ ಯೋಜನೆಯಡಿ ವಿವಾಹಕ್ಕೆ ಕೂಡ ಪ್ರೋತ್ಸಾಹ ಧನ ನೀಡಲಾಗುತ್ತದೆ. ಉದಾಹರಣೆಗೆ ಪ್ರಸ್ತುತವಾಗಿ ನಮ್ಮ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಿಂದ ಈ ಕಾರ್ಮಿಕರು ತಮ್ಮ ಮಕ್ಕಳ ಮದುವೆಗಾಗಿ ಅಥವಾ ತಮ್ಮ ಮದುವೆಗೆ ಈ ಪ್ರೋತ್ಸಾಹ ಧನ ಪಡೆಯಬಹುದು. ಇದೇ ರೀತಿ ವಿಶೇಷ ಮದುವೆ ಪ್ರೋತ್ಸಾಹ ಧನಗಳ ವ್ಯಾಪ್ತಿಗೆ ಒಳಪಡುವ ಫಲಾನುಭವಿಗಳು ಇದರ ಅನುಭೋಗ ಪಡೆಯಲು ದಾಖಲೆಯಾಗಿ ಮ್ಯಾರೇಜ್ ಸರ್ಟಿಫಿಕೇಟ್ ಸಲ್ಲಿಸಲೇಬೇಕು.
ಪ್ರಕ್ರಿಯೆ ಹೇಗೆ ನಡೆಯುತ್ತದೆ:-
* ವಿವಾಹ ನೊಂದಣಾಧಿಕಾರಿಗಳ ಕಚೇರಿಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ ಕೇಳಲಾಗುವ ಮೂಲಕ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಶುಲ್ಕ ಪಾವತಿಸಿ ವಿವಾಹವನ್ನು ನೋಂದಣಿ ಮಾಡಿಸಿಕೊಳ್ಳಬಹುದು
* ವಿವಾಹವಾದ ತಕ್ಷಣವೇ ಸಾಧ್ಯವಾದಷ್ಟು ಬೇಗ ಸರ್ಟಿಫಿಕೇಟ್ ಮಾಡಿಸಿಕೊಳ್ಳುವುದು ಸೂಕ್ತ
ಬೇಕಾಗುವ ದಾಖಲೆಗಳು:-
* ವಧುವಿನ ಆಧಾರ್ ಕಾರ್ಡ್
* ವರನ ಆಧಾರ್ ಕಾರ್ಡ್
* ನಿವಾಸ ದೃಢೀಕರಣ ಪತ್ರ
* ಮದುವೆಯ ಇನ್ವಿಟೇಶನ್ ಕಾರ್ಡ್ ಜೆರಾಕ್ಸ್
* ಸಾಕ್ಷಿಗಳ ಹೇಳಿಕೆ ಮತ್ತು ಸಹಿ
* ಇನ್ನಿತರ ಪ್ರಮುಖ ದಾಖಲೆಗಳು.