ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಕೆಲವರಿಗೆ ಮನೆ ವಿಷಯ ಬಂದಾಗ ಪ್ರತಿಯೊಂದು ವಿಷಯದಲ್ಲಿ ಕೂಡ ಅವರು ಸೆಲೆಕ್ಟಿವ್ ಆಗಿರುತ್ತಾರೆ. ಮನೆ ಪೇಂಟಿಂಗ್ ವಿಚಾರದಿಂದ ಹಿಡಿದು ಇಂಟೀರಿಯರ್ ಡಿಸೈನ್, ಮನೆ ಮೇನ್ ಡೋರ್ ಯಾವ ದಿಕ್ಕಿಗೆ ಇರಬೇಕು ಇತ್ಯಾದಿ ವಿಚಾರಗಳು ಮತ್ತು ಮನೆಗೆ ಸೆಲೆಕ್ಟ್ ಮಾಡುವ ಫಿಟ್ಟಿಂಗ್ ಗಳು ಇದೇ ಕಂಪನಿಯದಾಗಿರಬೇಕು ಎನ್ನುವುದರವರೆಗೆ ಅವರು ಮನೆ ಕಟ್ಟುವ ಮುಂಚೆ ಪ್ಲಾನಿಂಗ್ ಮಾಡಿಕೊಂಡಿರುತ್ತಾರೆ.
ಇದರಲ್ಲಿ ಸಾಟಿಸ್ಫೆಕ್ಷನ್ ಬೇಕಾದರೆ ಮನೆ ಕಟ್ಟಬೇಕು ಇನ್ನು ಕೆಲವರಿಗೆ ಇದೆಲ್ಲ ತುಂಬಾ ತಲೆನೋವಿನ ಕೆಲಸ ಕಟ್ಟಿರುವ ಮನೆಯನ್ನು ಕೊಂಡುಕೊಳ್ಳುವುದೇ ಬೆಸ್ಟ್ ಯಾವುದೇ ಟೆನ್ಶನ್ ಇಲ್ಲ ಹಣ ಕೊಟ್ಟು ಗೃಹಪ್ರವೇಶ ಮಾಡಿ ನೆಮ್ಮದಿಯಾಗಿರಬಹುದು ಎಂದುಕೊಳ್ಳುತ್ತಾರೆ. ಹಾಗಾದರೆ ಯಾವುದು ಬೆಸ್ಟ್ ? ಯಾವುದರಲ್ಲಿ ಯಾವ ರೀತಿ ರಿಸ್ಕ್ ಇರುತ್ತದೆ ಎನ್ನುವುದರಲ್ಲಿ ಕೆಲವು ಮುಖ್ಯ ಅಂಶಗಳನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತಿದ್ದೇವೆ.
ಈ ಸುದ್ದಿ ಓದಿ:- ರಾಜ್ಯದ ಜನತೆಗೆ ಸಿಹಿ ಸುದ್ದಿ.! ಇನ್ಮುಂದೆ ಈ ಸಾಲಗಳಿಗೆ ಬಡ್ಡಿ ಕಟ್ಟುವಂತಿಲ್ಲ ಸರ್ಕಾರದಿಂದ ಅಧಿಕೃತ ಘೋಷಣೆ.!
ಮೊದಲಿಗೆ ಕಟ್ಟಿರುವ ಮನೆ ಕೊಂಡುಕೊಳ್ಳುವುದರಿಂದ ಏನು ಲಾಭ ಏನು ನಷ್ಟ ಎನ್ನುವುದರ ಬಗ್ಗೆ ಹೇಳುವುದಾದರೆ ಕಟ್ಟಿರುವ ಮನೆ ಕೊಂಡುಕೊಂಡರೆ ಸಮಯ ಉಳಿಯುತ್ತದೆ. ಬ್ಯಾಂಕ್ ಲೋನ್ ಆಗಿದ್ದರೆ ಲೋನ್ ಆದ ತಕ್ಷಣವೇ ತಾವು ಯಾವುದರಲ್ಲಿ ಕೂಡ ಡಿಮ್ಯಾಂಡ್ ಮಾಡುವುದಿಲ್ಲ ಒಂದು ಚೆನ್ನಾಗಿರುವ ಮನೆ ಸಾಕು ಎಂದು ಅನಿಸಿದರೆ ಕೊಂಡುಕೊಂಡು ನೆಮ್ಮದಿಯಾಗಿರಬಹುದು.
ಆದರೆ ಕೊಂಡುಕೊಳ್ಳುವ ಮನೆಯಲ್ಲಿ ಕೂಡ ಇದೇ ಲೊಕೇಶನ್ ನಲ್ಲಿ ಇರಬೇಕು, ಬಸ್ ಸ್ಟಾಪ್ ಹತ್ತಿರ ಇರಬೇಕು, ಮನೆ ವಾಸ್ತು ಪ್ರಕಾರ ಬೇಕು, ಇಂಟೀರಿಯರ್ ಇಷ್ಟ ಆಗಲಿಲ್ಲ ಎಂದು ಮನೆ ನೋಡಲು ಶುರು ಮಾಡಿದರೆ ಆಗ ಹತ್ತಾರು ಮನೆಗಳನ್ನು ನೋಡಿ ಸುಸ್ತಾಗುತ್ತದೆ, ಸಮಯ ವ್ಯರ್ಥವಾಗುತ್ತದೆ ಮತ್ತು ಟೆನ್ಶನ್ ಶುರುವಾಗುತ್ತದೆ. ಆಗ ಕಟ್ಟುವ ಮನೆಗಿಂತ ನಾವೇ ಸೈಟ್ ತೆಗೆದುಕೊಂಡು ಕಟ್ಟಿಸಿಕೊಳ್ಳುವುದು ಬೆಸ್ಟ್ ಎನಿಸುತ್ತದೆ.
ಈ ಸುದ್ದಿ ಓದಿ:- ಇನ್ಮುಂದೆ ಜಮೀನು, ಭೂ ದಾಖಲೆಗಳಿಗಾಗಿ ಅಲೆದಾಡುವ ಅವಶ್ಯಕತೆ ಇಲ್ಲ.! ರೈತರಿಗಾಗಿ ಹೊಸ ಸೇವೆ ಆರಂಭ…
ಕಟ್ಟಿರುವ ಮನೆ ಕೊಂಡುಕೊಳ್ಳುವುದಾದರೆ ಯಾವುದೇ ರೀತಿಯ ಪರ್ಮಿಷನ್ ತೆಗೆದುಕೊಳ್ಳುವ ಟೆನ್ಶನ್ ಇಲ್ಲ. ಮನೆ ಕಟ್ಟುವುದಾದರೆ ವರ್ಷ ಗಟ್ಟಲೆ ಕಾಯಬೇಕು ಮತ್ತು ಒಂದು ವರ್ಷ ಪೂರ್ತಿ ಪ್ರತಿದಿನ ಅದಕ್ಕಾಗಿ ಹೆಚ್ಚಿನ ಸಮಯ ಮೀಸಲಿಡಬೇಕು. ಡಿಸೈನ್ ಸೆಲೆಕ್ಟ್ ಮಾಡುವುದರಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲೂ ಕೂಡ ತುಂಬಾ ಕನ್ಫ್ಯೂಸ್ ಆಗುತ್ತದೆ, ಬಹಳ ಶ್ರಮ ಮತ್ತು ಸಮಯ ಹಿಡಿಯುತ್ತದೆ.
ಆದರೆ ಮನೆ ಕೊಂಡುಕೊಂಡಾಗ ಇವುಗಳು ಕಡಿಮೆ. ಆದರೆ ಗ್ಯಾರಂಟಿ ವಿಚಾರ ಬಂದಾಗ ನಾವು ಕೊಂಡುಕೊಳ್ಳುವ ಮನೆ ಬಹಳ ಹಳೆಯದಾಗಿದ್ದರೆ ಯೋಚನೆ ಮಾಡಬೇಕು ಮೇಂಟೆನೆನ್ಸ್ ಗೆ ಹೆಚ್ಚು ಖರ್ಚಾಗುತ್ತದೆ. ಮನೆ ಕಟ್ಟುವಾಗ ನಾವೇ ಪ್ರಾಡಕ್ಟ್ ಸೆಲೆಕ್ಟ್ ಮಾಡುವುದರಿಂದ ಪ್ರತಿ ಹಂತದಲ್ಲಿ ನೋಡುವುದರಿಂದ ಮನೆ ಬಾಳಿಕೆ ಬಗ್ಗೆ ಸಮಾಧಾನ ಇರುತ್ತದೆ.
ಈ ಸುದ್ದಿ ಓದಿ:- ಫೆಬ್ರವರಿ 29 ರೊಳಗೆ ಈ ಕೆಲಸ ಮಾಡದೇ ಇದ್ರೆ ನಿಮ್ಮ ರೇಷನ್ ಕಾರ್ಡ್ ಬಂದ್ ಆಗಲಿದೆ.!
ಆದರೆ ಕಟ್ಟಿರುವ ಮನೆಯನ್ನು ಒಡೆದು ನೋಡಲು ಆಗುವುದಿಲ್ಲ ಹಾಗಾಗಿ ಕೊಂಡುಕೊಳ್ಳುವುದೇ ಆದರೆ ಕನ್ಸ್ಟ್ರಕ್ಷನ್ ಸಮಯದಲ್ಲಿ ತೆಗೆದ ಫೋಟೋಗಳು, ವಿಡಿಯೋ ನೋಡಿ ನಿರ್ಧಾರ ಮಾಡಬೇಕು. ಮನೆ ಕಟ್ಟಿ ಸೇಲ್ ಮಾಡುವವರು ಕೂಡ ಅವರು ಲಾಭವನ್ನು ನೋಡಿ ಸೇಲ್ ಮಾಡುತ್ತಾರೆ. ಹಾಗಾಗಿ 50 ಲಕ್ಷದ ಮನೆ ಆಗಿದ್ದರೆ ಒಂದು ವರ್ಷದ ಅವರ ಶ್ರಮ ಹಾಕಿರುವುದರಿಂದ 60 ಲಕ್ಷಕ್ಕೆ ಮಾರಾಟ ಮಾಡುತ್ತಾರೆ.
ನೀವೇ ಆ ಟೆನ್ಶನ್ ಎಲ್ಲ ತೆಗೆದುಕೊಳ್ಳುವುದರಿಂದ ಮನೆ ಕಟ್ಟುವಾಗ ಖಂಡಿತವಾಗಿಯೂ ಆ ರೀತಿ ಬೇರೆಯವರಿಗೆ ಲಾಭ ಮಾಡಿಕೊಡುವ ಹಣ ಉಳಿತಾಯ ಆಗುತ್ತದೆ ಎಲ್ಲಕ್ಕಿಂತ ಹೆಚ್ಚಾಗಿ ಮನೆ ಕಟ್ಟಿದ ಸಮಾಧಾನ ಸಿಗುತ್ತದೆ. ಎಲ್ಲದರ ಬಗ್ಗೆ ಕೂಡ ನಾಲೆಡ್ಜ್ ಬರುತ್ತದೆ ಇನ್ನು ನಿಮಗೆ ಮನೆ ಕೊಂಡುಕೊಳ್ಳುವುದೋ ಅಥವಾ ಕಟ್ಟುವುದೋ ಎನ್ನುವ ಕನ್ಫ್ಯೂಷನ್ ಇದ್ದರೆ ಈ ವಿಡಿಯೋವನ್ನು ನೋಡಿ ಡಿಸೈಡ್ ಮಾಡಿ.