ಕಾರ್ಮಿಕ ಭವಿಷ್ಯ ನಿಧಿ ಅಂದರೆ EPF ಬಗ್ಗೆ ಎಲ್ಲರಿಗೂ ತಿಳಿದಿದೆ, ಸಂಘಟಿತ ವಲಯದಲ್ಲಿ ದುಡಿಯುವ ಪ್ರತಿಯೊಬ್ಬ ಕಾರ್ಮಿಕನು ಕೂಡ ತನ್ನ ಸಂಬಳದ ತುಸು ಭಾಗವನ್ನು ತನ್ನ EPF ಖಾತೆಯಲ್ಲಿ ಉಳಿತಾಯ ಮಾಡುತ್ತಾನೆ. ಈ EPF ಖಾತೆಯಲ್ಲಿ ಉದ್ಯೋಗಿ, ಉದ್ಯೋಗದಾತ ಹಾಗೂ ಸರ್ಕಾರ ಈ ಮೂರು ಜನರ ಶೇರ್ ಇರುತ್ತದೆ ಉದ್ಯೋಗಿಯು ಕೆಲಸ ಬಿಟ್ಟ ನಂತರ ಇದನ್ನು ಕ್ಲೈಮ್ ಮಾಡಿಕೊಳ್ಳುತ್ತಾನೆ.
ಇಂದು ದೇಶದಾದ್ಯಂತ ಕೋಟ್ಯಾಂತರ ಕಾರ್ಮಿಕರು EPF ಖಾತೆಯನ್ನು ಹೊಂದಿ ಅದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಯಾವುದಾದರೂ ಹಣದ ಅನಿವಾರ್ಯತೆ ಇದ್ದಾಗಲೂ ತನ್ನ ಉದ್ಯೋಗಿ ಆತನ EPF ಖಾತೆ ಹಣವನ್ನು ಅಡ್ವಾನ್ಸ್ ಆಗಿ ಪಡೆದುಕೊಳ್ಳುವ ಅನುಕೂಲತೆಯನ್ನು ಸಹ ಈ EPF ಸಂಸ್ಥೆ ಮಾಡಿಕೊಟ್ಟಿದೆ.
ಬ್ಯಾಂಕ್ ನಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟವರಿಗೆ RBI ಹೊಸ ಸೂಚನೆ.! ಕೂಡಲೇ ಈ ಸುದ್ದಿ ನೋಡಿ ಎಚ್ಚೆತ್ತುಕೊಳ್ಳಿ.!
ಈಗ EPF ಪಿಂಚಣಿ ಯೋಜನೆಯಲ್ಲಿ ಜಮೆ ಆಗುವ ಹಣದ ಮೊತ್ತವನ್ನು ಹೆಚ್ಚಿಸಿಕೊಳ್ಳಲು ಕೂಡ ಅವಕಾಶ ಮಾಡಿಕೊಟ್ಟಿದೆ. ಈ ಪಿಂಚಣಿ ಸೌಲಭ್ಯವನ್ನು ಪಡೆಯಲು EPF ಗ್ರಾಹಕರು 10 ವರ್ಷ ಸೇವೆ ಸಲ್ಲಿಸಿರಬೇಕು. ಆಗ ಅವರ EPF ಕೊಡುಗೆಯ 8.33% ನೌಕರರ ಪಿಂಚಣಿಗೆ ಹೋಗುತ್ತದೆ ಈಗ ಅದರ ಮಿತಿಯನ್ನು ಹೆಚ್ಚಿಸಿಕೊಳ್ಳಲು EPFO ಗ್ರಾಹಕರಿಗೆ ಅವಕಾಶವನ್ನು ನೀಡಿದೆ.
ಈ ಹಿಂದೆಯೇ ಮೂರು ತಿಂಗಳವರೆಗೆ ಅವಕಾಶ ನೀಡಿತ್ತಾದ್ದರೂ ಮತ್ತೊಮ್ಮೆ ತನ್ನ ಗಡುವನ್ನು ವಿಸ್ತರಿಸಿದೆ. ಈ ಹಿಂದೆ ಜುಲೈ 26ಕ್ಕೆ ಇದರ ಕೊನೆಯ ದಿನ ನಿಗದಿ ಆಗಿತ್ತು. ಇನ್ನೂ ಸಹ ಈ EPF ಖಾತೆದಾರನಲ್ಲಿ ಈ ವಿಷಯದ ಬಗ್ಗೆ ಗೊಂದಲ ಇರುವುದು ಅರಿವಿಗೆ ಬಂದ ಕಾರಣ ಮತ್ತೊಮ್ಮೆ ಕಾಲಾವಕಾಶವನ್ನು ಹೆಚ್ಚಿಸಿದೆ.
ನಿಯಮಿತ ಪಿಂಚಣಿಗೆ ಈ ಕೊಡುಗೆ ಬಹಳ ಉಪಯುಕ್ತವಾಗಿದ್ದು ಕಾರ್ಮಿಕ ನಿಗೆ ವಯಸ್ಸಾದ ಕಾಲದಲ್ಲಿ ಬಹಳ ಅನುಕೂಲತೆ ನೀಡಲಿದೆ. ಆದರೆ ಈ ಪಿಂಚಣಿ ಯೋಜನೆಯ ಉದ್ದೇಶಕ್ಕಾಗಿ EPFO ಪರಿಗಣಿಸಿರುವ ಗರಿಷ್ಠ ಮಿತಿ ರೂ.15,000 ಮಾತ್ರ 8.33% ಲೆಕ್ಕಾಚಾರದಲ್ಲಿ ನೌಕರರ ಪಿಂಚಣಿ ಯೋಜನೆಗೆ 15000 ವೇತನ ಪಡೆದುಕೊಳ್ಳುವ ವ್ಯಕ್ತಿಯ ಕೇವಲ ರೂ.1,250 ಮಾತ್ರ ಜಮೆ ಆಗುತ್ತಿದೆ.
ರೈತರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರದಿಂದ ಸಿಗಲಿದೆ 1 ಲಕ್ಷ ಬೆಳೆವಿಮೆ, ತಪ್ಪದೆ ನೋಂದಣಿ ಮಾಡಿಸಿ.!
ಉಳಿದ ಮೊತ್ತವನ್ನು EPF ಖಾತೆಗೆ ಜಮಾ ಮಾಡಲಾಗುತ್ತದೆ ಉದ್ಯೋಗಿಗಳು ತಮ್ಮ ಮೂಲ ವೇತನದ ಮೇಲೆ ರೂ.15,000 ಮಿತಿಯನ್ನು ಹೊರತುಪಡಿಸಿ ಕೊಡುಗೆಯನ್ನು ಆರಿಸಿದರೆ, EPS ನಲ್ಲಿ ಠೇವಣಿ ಮಾಡಿದ ಮೊತ್ತವು ಹೆಚ್ಚಾಗುತ್ತದೆ. ಇದರಿಂದ ಕಾರ್ಮಿಕ 60 ವರ್ಷ ಆದ ಬಳಿಕ ಕೆಲಸದಿಂದ ನಿವೃತ್ತಿ ಹೊಂದಿದ ಮೇಲೆ ಪಡೆಯುವ ಪಿಂಚಣಿಯೂ ಹೆಚ್ಚಲಿದೆ.
ಈ ಹಿಂದೆಯೇ ಈ ವಿಚಾರದಲ್ಲಿ ನಿವೃತ್ತಿಯ ನಂತರ ಹೆಚ್ಚಿನ ಪಿಂಚಣಿ ಪಡೆಯಲು ನೌಕರರಿಗೆ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆ ಪ್ರಕಾರವಾಗಿ EPFO ಹೆಚ್ಚಿನ ಪಿಂಚಣಿ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವನ್ನು ನೀಡಿದೆ. EPFO ನ ಆನ್‌ಲೈನ್ ಪೋರ್ಟಲ್ ಅಥವಾ ಆಫ್‌ಲೈನ್‌ನಲ್ಲಿ ಹೆಚ್ಚಿನ ಪಿಂಚಣಿ ಆಯ್ಕೆಯನ್ನು ಆಯ್ಕೆ ಮಾಡಬಹುದು.
EPFO ತಿಳಿಸಿರುವ ಅರ್ಹತಾ ಮಾನದಂಡಗಳ ಪ್ರಕಾರ EPF ಠೇವಣಿದಾರರು ತಮ್ಮ ಸಂಬಳ ರೂ.5,000 ಅಥವಾ ರೂ.6,500 ಕ್ಕಿಂತ ಹೆಚ್ಚಿರುವಾಗ ಹೆಚ್ಚಿನ ಪಿಂಚಣಿ ಆಯ್ಕೆಯನ್ನು ಆರಿಸಿಕೊಳ್ಳಬಹುದು. EPS-95 ಸದಸ್ಯರಾಗಿರುವಾಗ ಪೂರ್ವ-ತಿದ್ದುಪಡಿ ಯೋಜನೆ ನೌಕರರ ಪಿಂಚಣಿ ಯೋಜನೆ ಅಡಿಯಲ್ಲಿ ಜಂಟಿ ಆಯ್ಕೆಯನ್ನು ಚಲಾಯಿಸಿದ EPFO ಚಂದಾದಾರರು ಸಹ ಈ ಆಯ್ಕೆಯನ್ನು ಆರಿಸಿಕೊಳ್ಳಬಹುದು.
EPFO ಸದಸ್ಯರು ಹಿಂದೆ ಆ ಆಯ್ಕೆಯನ್ನು ಆರಿಸಿಕೊಂಡಿದ್ದರೆ, EPFO ಅದನ್ನು ತಿರಸ್ಕರಿಸಿದರೆ, ಖಾತೆದಾರರು ಮತ್ತೊಮ್ಮೆ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಸೆಪ್ಟೆಂಬರ್ 1, 2014 ರಂತೆ ಇಪಿಎಸ್-95 ಸದಸ್ಯರಾಗಿರುವ ನೌಕರರು ತಮ್ಮ ಸಂಬಳದ ಶೇಕಡಾ 8.33% ರಷ್ಟು ಕೊಡುಗೆ ನೀಡಬಹುದು ಎಂದು ಕಳೆದ ವರ್ಷ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಹಾಗಾಗಿ ಆ ಆಯ್ಕೆಯನ್ನು EPFO ತನ್ನ ಗ್ರಾಹಕರಿಗೆ ಬಿಟ್ಟಿದೆ.