2023-24ನೇ ಸಾಲಿನಲ್ಲಿ ನಮ್ಮ ರಾಜ್ಯದಲ್ಲಿ ಭೀಕರ ಬರಗಾಲ (drought) ಬಂದ ಪರಿಣಾಮವಾಗಿ ಮುಂಗಾರು ಮಳೆ ವೈಫಲ್ಯದಿಂದ ಕೃಷಿ ಸಂಪೂರ್ಣ ನೆಲಕಚ್ಚಿತ್ತು. NDRF ಕೈಪಿಡಿ ಅನ್ವಯ ಬರ ಪರಿಶೀಲನೆ ನಡೆದು ವರದಿ ಪ್ರಕಾರ ಬಹುತೇಕ ಎಲ್ಲಾ ಜಿಲ್ಲೆಗಳ ತಾಲೂಕುಗಳು ಬರಪೀಡಿತವೆಂದು ಘೋಷಣೆಯಾಗಿದ್ದವು. ಇದರ ಪ್ರಕಾರವಾಗಿ ನೀಡಬೇಕಿದ್ದ ಬರ ಪರಿಹಾರದ ಹಣದ (drouht releaf fund) ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಜಟಾಪಟಿಯಾಗುತ್ತಿತ್ತು.
ಈ ನಡುವೆ ಜನವರಿ ತಿಂಗಳಲ್ಲಿಯೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವು ಬರ ಪರಿಹಾರದ ಹಣ ವರ್ಗಾವಣೆ ಮಾಡುವ ಮುನ್ನವೇ ಮೊದಲ ಕಂತಿನ ಹಣವಾಗಿ ರೂ.2000 ಹಣವನ್ನು ಎಲ್ಲ ಅರ್ಹ ಫಲಾನುಭವಿಗಳ ಖಾತೆಗೆ DBT ಮೂಲಕ ಜಮೆ ಮಾಡಿತ್ತು. ಅಂತಿಮವಾಗಿ ಈಗ ಕೇಂದ್ರ ಸರ್ಕಾರದಿಂದ ಕೂಡ ರಾಜ್ಯದ ಪಾಲಿಗೆ ಬರಬೇಕಿದ್ದ ಬರ ಪರಿಹಾರದ ಹಣ ಲೋಕಸಭೆ ಚುನಾವಣೆ ತರಾತುರಿ ನಡುವೆ ಸಂದಾಯವಾಗಿದೆ.
ಈ ಸುದ್ದಿ ಓದಿ:-ಇನ್ನು ಮುಂದೆ ಟ್ಯಾಂಕ್ ಕ್ಲೀನಿಂಗ್ ಬಹಳ ಸುಲಭ, ಕರ್ನಾಟಕದಲ್ಲಿ ಯಾವುದೇ ಕಡೆ ಇದ್ದರೆ ನಿಮ್ಮ ಮನೆ ಬಾಗಿಲಿಗೆ ಡೆಲಿವರಿ ಸಿಗುತ್ತದೆ.!
ರಾಜ್ಯ ಸರ್ಕಾರವು ಈ ಹಣವನ್ನು ಹಂತ ಹಂತವಾಗಿ ಎಲ್ಲಾ ತಾಲೂಕುಗಳಿಗೂ ಕೂಡ ಹಂಚಿಕೆ ಮಾಡುತ್ತಿವೆ. ಈಗಾಗಲೇ ಕೆಲ ತಾಲೂಕಿನ ಫಲಾನುಭವಿಗಳು ತಮ್ಮ ಪಾಲಿನ ಬರ ಪರಿಹಾರದ ಹಣವನ್ನು ಪಡೆದಿದ್ದಾರೆ ಮತ್ತು ಇನ್ನು ಅನೇಕರು ನಿರೀಕ್ಷೆಯಲ್ಲಿದ್ದಾರೆ. ಅವರಿಗೆಲ್ಲ ಒಂದು ಉಪಯುಕ್ತ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸ ಬಯಸುತ್ತಿದ್ದೇವೆ.
ಅದೇನೆಂದರೆ, ಇಂದು ಮತ್ತು ನಾಳೆ ಬರ ಪರಿಹಾರದ ಹಣ ಬಿಡುಗಡೆ ಆಗುತ್ತಿರುವ ಜಿಲ್ಲೆಗಳ ಪಟ್ಟಿಯನ್ನು ಈ ಕೆಳಗೆ ನೀಡುತ್ತಿದ್ದೇವೆ. ಒಂದು ವೇಳೆ ನಿಮಗೆ ಈಗಾಗಲೇ ಯಾವುದಾದರೂ ಹಣ ಬಂದಿದ್ದರೆ ಅದು ಬರ ಪರಿಹಾರದ ಹಣವೇ ಅಥವಾ ನಿಮಗೆ ಬರ ಪರಿಹಾರದ ಬಂದಿದೆಯೇ ಎನ್ನುವುದನ್ನು ಮಾಡುವ ವಿಧಾನ ಕೂಡ ತಿಳಿಸಿಕೊಡುತ್ತಿದ್ದೇವೆ. ಈ ವಿಧಾನಗಳನ್ನು ಅನುಸರಿಸಿ ಮಾಹಿತಿ ಪಡೆಯಿರಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ:-CCTV ಕ್ಯಾಮೆರಾ ಇನ್ಸ್ಟಾಲೇಶನ್ ಹಾಗೂ ಸರ್ವಿಸ್ ಮಾಡಲು ಉಚಿತ ತರಬೇತಿ ಕೊಡಲಾಗುತ್ತದೆ ಆಸಕ್ತರು ಭಾಗವಾಹಿಸಿ.!
ಇಂದು ಮತ್ತು ನಾಳೆ ಹಣ ಜಮೆಯಾಗುವ ತಾಲ್ಲೂಕುಗಳ ಪಟ್ಟಿ:–
* ಬೆಳಗಾವಿ ಜಿಲ್ಲೆಯ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳು
* ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲೂಕು
* ಧಾರವಾಡ ಜಿಲ್ಲೆಯ ಅಣ್ಣಾವರ, ಅಣ್ಣಿಗೆರೆ ಮತ್ತು ಕಲಘಟಕಿ ತಾಲೂಕುಗಳು
* ಗದಗ ಜಿಲ್ಲೆಯ ಮುಂಡರಗಿ ತಾಲೂಕು
* ಹಾಸನ ಜಿಲ್ಲೆಯ ಆಲೂರು, ಅರಸೀಕೆರೆ ಮತ್ತು ಹಾಸನ ತಾಲೂಕು
* ಹಾವೇರಿ ಜಿಲ್ಲೆಯ ಬ್ಯಾಡಗಿ ಹಾನಗಲ್ ಮತ್ತು ಶಿಗ್ಗಾವ್ ತಾಲೂಕುಗಳು
* ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕು
* ಮೈಸೂರು ಜಿಲ್ಲೆಯ ಕೆ ಆರ್ ನಗರ ತಾಲೂಕು
* ಉಡುಪಿ ಜಿಲ್ಲೆಯ ಹಬ್ರಿ ತಾಲೂಕು
* ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕು
ಬರ ಪರಿಹಾರದ ಹಣ ಜಮೆ ಆಗಿರುವುದನ್ನು ಪರಿಶೀಲಿಸುವ ವಿಧಾನ:-
* https://parihara.karnataka.gov.in ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಪರಿಹಾರ ಭೂಮಿ ಆನ್ಲೈನ್ (parihara Bhoomi online) ವೆಬ್ಸೈಟ್ ಗೆ ಭೇಟಿ ಕೊಡಿ
* * ಸ್ಕ್ರೀನ್ ನ ಎಡಭಾಗದಲ್ಲಿ ಪರಿಹಾರ ಪೇಮೆಂಟ್ ರಿಪೋರ್ಟ್ (parihara payment reports) ಎನ್ನುವ ವಿಭಾಗ ಕಾಣುತ್ತದೆ. ಅದರಲ್ಲಿ ಹಲವಾರು ಆಪ್ಷನ್ ಗಳು ಇರುತ್ತವೆ, ನೀವು ಈ ಲಿಸ್ಟ್ ನಲ್ಲಿ ನ್ಯೂ ರಿಪೋರ್ಟ್ (New report) ಎನ್ನುವುದರ ಮೇಲೆ ಕ್ಲಿಕ್ ಮಾಡಿ.
ಈ ಸುದ್ದಿ ಓದಿ:-ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ.! ಯಾವುದೇ ಪರೀಕ್ಷೆ ಇಲ್ಲ ನೇರ ಆಯ್ಕೆ.!
* ಸ್ಕ್ರೀನ್ ಮೇಲೆ ಹೊಸ ಇಂಟರ್ಫೇಸ್ ಓಪನ್ ಆಗುತ್ತದೆ. ಭೂಮಿ ಆನ್ಲೈನ್ – ಪರಿಹಾರ (ಇನ್ ಪುಟ್ ಸಬ್ಸಿಡಿ) ಪೇಮೆಂಟ್ ಡೀಟೇಲ್ಸ್ Bhoomi online – parihara (input subsidy) payment details ಎಂದು ಕಾಣುತ್ತದೆ.
* ಇದರಲ್ಲಿ ವರ್ಷ(Year), ಋತು (Season), ವಿಪತ್ತಿನ ವಿಧ (Calamity type) ಎನ್ನುವ ಆಕ್ಷನ್ ಕಾಣುತ್ತಿದೆ ಇದರಲ್ಲಿ ವರ್ಷ – 2022-24, ಋತು – ಮುಂಗಾರು (Kharif), ವಿಪತ್ತಿನ ವಿಧ – ಬರ (Drought) ಎಂದು ಸೆಲೆಕ್ಟ್ get data ಕ್ಲಿಕ್ ಮಾಡಿ, ಈಗ ನೀವು ನಾಲ್ಕು ವಿಧಾನದ ಮೂಲಕ ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ತಿಳಿದುಕೊಳ್ಳಬಹುದು.
ಈ ಸುದ್ದಿ ಓದಿ:-ಟೀಚರ್ ಕೆಲಸ ಬಿಟ್ಟು ಯಳಗ ಕುರಿ ಸಾಕಿ ಸಕ್ಸಸ್ ಆದ ಮಹಿಳೆ, ಒಂದು ಕುರಿಯಿಂದ 3000 ಲಾಭ.!
1. ಆಧಾರ್ ಮೂಲಕ
2. ಮೊಬೈಲ್ ನಂಬರ್ ಮೂಲಕ
3. ರೈತನ ಐಡಿ
4. ಸರ್ವೆ ನಂಬರ್
* ಈ ಮೇಲೆ ತಿಳಿಸಿದ ನಾಲ್ಕು ವಿಧಾನಗಳಲ್ಲಿ ನಿಮಗೆ ಯಾವುದು ಅನುಕೂಲ ಅದನ್ನು ಕ್ಲಿಕ್ ಮಾಡಿ ಉದಾಹರಣೆಗೆ ಆಧಾರ್ ಸಂಖ್ಯೆ ಕ್ಲಿಕ್ ಮಾಡಿದರೆ ಮುಂದಿನ ಹಂತದಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿದರೆ ಆ ರೈತನ ಯಾವ ಬ್ಯಾಂಕ್ ಖಾತೆಗೆ ಯಾವ ದಿನಾಂಕದಂದು ಎಷ್ಟು ಹಣ ಜಮೆ ಆಗಿದೆ ಮತ್ತು ಆ ರೈತನ ಭೂಮಿ ಸರ್ವೇ ನಂಬರ್, ಗ್ರಾಮ, ತಾಲೂಕು. ಜಿಲ್ಲೆ ಇತ್ಯಾದಿ ಸಂಪೂರ್ಣ ಮಾಹಿತಿ ಸಿಗುತ್ತದೆ.