ಬರ ಪರಿಹಾರ ಹಣ ಜಮೆ ಆಗದ ರೈತರು ಕೂಡಲೇ ಈ ಕೆಲಸ ಮಾಡಿ.! ನಿಮ್ಮ ಖಾತೆಗೆ ಹಣ ಬರುತ್ತೆ.!

 

WhatsApp Group Join Now
Telegram Group Join Now

ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಇದರಿಂದ ಉಳಿದ ಎಲ್ಲರಿಗಿಂತ ರೈತನಿಗೆ ಹೆಚ್ಚಿನ ಕ’ಷ್ಟವಾಗಿದೆ. 2023-24ನೇ ಸಾಲಿನ ಕೃಷಿ ಸಂಪೂರ್ಣ ನೆಲಕಚ್ಚಿದ್ದು ರೈತನಿಗೆ ಸಾಲದ ಹೊರೆ ಹೆಗಲೇರಿದೆ ಮತ್ತು ವರ್ಷಪೂರ್ತಿ ಕುಟುಂಬ ನಿರ್ವಹಣೆಗಾಗಿ ಹಣ ಇಲ್ಲದೆ ರೈತ ಪರದಾಡುವಂತಾಗಿದೆ ಇದೆಲ್ಲವನ್ನು ಅರಿತ ಸರ್ಕಾರವು ರೈತರ ನೆರವಿಗೆ ಮುಂದಾಗಿದೆ.

ಈಗಾಗಲೇ NDRF ಮಾರ್ಗಸೂಚಿ ಪ್ರಕಾರ ಬರ ಅಧ್ಯಯನ ಕೂಡ ನಡೆದಿದ್ದು ರಾಜ್ಯದ 223 ತಾಲ್ಲೂಕುಗಳು ಬರಪೀಡಿತ ತಾಲೂಕುಗಳು ಎಂದು ಘೋಷಣೆಯಾಗಿವೆ. ಈಗ ರೈತರು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಬರ ಪರಿಹಾರದ ಮತ್ತು ಬೆಳೆ ಹಾನಿ ಪರಿಹಾರ ನೀಡಿದರೆ ಅನುಕೂಲತೆ ಆಗುತ್ತದೆ ಎಂದು ನಿರೀಕ್ಷಿಸುತ್ತಿದ್ದಾರೆ.

ಈ ಸುದ್ದಿ ಓದಿ:- ಫೆಬ್ರವರಿ ತಿಂಗಳ ಅಕ್ಕಿಯ ಹಣ ಪಡೆಯಲು ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!

ಕೇಂದ್ರ ಸರ್ಕಾರವು ಈ ವಿಚಾರದಲ್ಲಿ ಬಹಳ ವಿಳಂಬ ಮಾಡುತ್ತಿದೆ ಎನ್ನುವ ಆರೋಪ ಹೊರೆಸುತ್ತಿರುವ ರಾಜ್ಯ ಸರ್ಕಾರವು ರೈತರ ಮೇಲಿನ ಅಪಾರ ಕಾಳಜಿಯಿಂದ ಕೇಂದ್ರದಿಂದ ಹಣ ಬಿಡುಗಡೆ ಆಗುವ ಮೊದಲೇ ರೈತನಿಗೆ ಮೊದಲ ಕಂತಿನಲ್ಲಿ ರೂ.2000 ಹಣವನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿ ಇದಕ್ಕೆ ಫ್ರೂಟ್ಸ್ ತಂತ್ರಾಂಶದಲ್ಲಿ (FRUITS) ರೈತರು ಕಡ್ಡಾಯವಾಗಿ ನೋಂದಾಯಿಸಿಕೊಂಡಿರಬೇಕು.

ತಾವು ಹೊಂದಿರುವ ಜಮೀನಿನ RTC, ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ FID ಪಡೆದಿರಬೇಕು ಎಂದು ನಿಯಮವನ್ನು ಕಡ್ಡಾಯ ಮಾಡಿದೆ. ಯಾರು ಈ ಪ್ರಕ್ರಿಯೆ ಪೂರ್ತಿಗೊಳಿಸಿದ್ದಾರೋ ಅಂತಹ ರೈತರ ಖಾತೆಗೆ ಮೊದಲ ಕಂತಿನಲ್ಲಿ ರೂ.2000 ಹಣ DBT ಮೂಲಕ ಜಮೆಯಾಗಿದೆ.

ಈಗ ರಾಜ್ಯ ಸರ್ಕಾರದ ವತಿಯಿಂದ ಎರಡನೇ ಕಂತಿನ ಹಣ ಕೂಡ ಬಿಡುಗಡೆ ಆಗುತ್ತಿದೆ. ನೀವು ರೈತರಾಗಿದ್ದು ನಿಮಗೆ ಹಣ ಬಂದಿದೆಯೇ ಇಲ್ಲವೇ ಎನ್ನುವ ಗೊಂದಲ ಇದ್ದರೆ ನಿಮ್ಮ ಮೊಬೈಲ್ ಮೂಲಕವೇ ಅದನ್ನು ತಿಳಿದುಕೊಳ್ಳಬಹುದು. ಅದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಈ ಸುದ್ದಿ ಓದಿ:- ರೈತರಿಗೆ ಶುಭ ಸುದ್ದಿ ಸರ್ಕಾರದಿಂದ 2 ಲಕ್ಷದವರೆಗಿನ ಸಾಲ ಮನ್ನಾ.!

* ಮೊದಲಿಗೆ ಪ್ಲೇ ಸ್ಟೋರ್ ಗೆ ಹೋಗಿ ಕರ್ನಾಟಕ ಸರ್ಕಾರದ DBT ಕರ್ನಾಟಕ ಎನ್ನುವ ಅಧಿಕೃತ ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕು.
* ರೈತನ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಬೇಕು ಮತ್ತು ಆ ಆಧಾರ್ ಕಾರ್ಡ್ ಲಿಂಕ್ ಆಗಿರುವ ಫೋನ್ ನಂಬರ್ ಗೆ OTP ಬರುತ್ತದೆ. ಅದನ್ನು ಕೂಡ ಎಂಟ್ರಿ ಮಾಡಬೇಕು.

* ಮುಂದಿನ ಹಂತದಲ್ಲಿ m-pin ಕ್ರಿಯೇಟ್ ಮಾಡಬೇಕು. ಇದು ನಿಮ್ಮ ಇಷ್ಟದ ನಾಲ್ಕು ಅಂಕಿಯ ನಂಬರ್ ಆಗಿರುತ್ತದೆ, ಅದನ್ನು ಕ್ರಿಯೇಟ್ ಮಾಡಿ ನಂತರ ಕನ್ಫರ್ಮ್ ಮಾಡದರೆ ಸೆಲೆಕ್ಟ್ ಬೆನಿಫಿಟ್ ಎಂದು ತೋರಿಸುತ್ತದೆ.

* ನೀವು ಅದೇ ಫೋನ್ ನಲ್ಲಿ ಒಂದಕ್ಕಿಂತ ಹೆಚ್ಚು ಫಲಾನುಭವಿಯ ಸ್ಟೇಟಸ್ ಚೆಕ್ ಮಾಡಿದ್ದರೆ ಸೆಲೆಕ್ಟ್ ಬೆನಿಫಿಶಿಯರಿ ಎನ್ನುವ ಆಕ್ಷನ್ ಬರುತ್ತದೆ ಅದರಲ್ಲಿ ಯಾವ ರೈತನ ಸ್ಟೇಟಸ್ ಚೆಕ್ ಮಾಡಬೇಕು ಅವರ ಹೆಸರನ್ನು ಸೆಲೆಕ್ಟ್ ಮಾಡಿ ಅವರಿಗೆ ಕ್ರಿಯೇಟ್ ಮಾಡಿದ್ದ m-pin ಎಂಟ್ರಿ ಮಾಡಿ, Login ಕ್ಲಿಕ್ ಮಾಡಿದರೆ ಮತ್ತೆ ನಾಲ್ಕು ಆಪ್ಷನ್ ಗಳು ತೋರಿಸುತ್ತದೆ ಅದರಲ್ಲಿ ಪೇಮೆಂಟ್ ಸ್ಟೇಟಸ್ ಎನ್ನುವುದನ್ನು ಕ್ಲಿಕ್ ಮಾಡಿ.

ಈ ಸುದ್ದಿ ಓದಿ:- ಗೃಹಲಕ್ಷ್ಮಿ ಹಣ 2000, ಅಕ್ಕಿ ಹಣ 1020, ಯುವ ನಿಧಿ 3,000 ಸರ್ಕಾರದಿಂದ ಬರಬೇಕಾದ ಎಲ್ಲಾ ಪೆಂಡಿಂಗ್ ಹಣ ಒಟ್ಟಿಗೆ ನಿಮ್ಮ ಖಾತೆಗೆ ಜಮೆ ಆಗಲು ಹೀಗೆ ಮಾಡಿ.!

* ರಾಜ್ಯ ಅಥವಾ ಕೇಂದ್ರ ಸರ್ಕಾರಗಳ ಯಾವುದೇ ಕಲ್ಯಾಣ ಯೋಜನೆಗಳ ಸಹಾಯಧನ ನಿಮ್ಮ ಖಾತೆಗೆ DBT ಮೂಲಕ ವರ್ಗಾವಣೆಯಾಗಿದ್ದರು ಕೂಡ ಅದರ ಮಾಹಿತಿ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದು. ನಿಮ್ಮ ಬ್ಯಾಂಕ್ ಖಾತೆಗೆ ರಾಜ್ಯ ಸರ್ಕಾರದಿಂದ ಇತ್ತೀಚೆಗೆ ಬೆಳೆ ಹಾನಿಯ ರೂ.2,000 ಜಮೆ ಆಗಿರುವ ಮಾಹಿತಿ ಕೂಡ ಸಿಗುತ್ತದೆ, ನಿಮ್ಮ ಯಾವ ಬ್ಯಾಂಕ್ ಖಾತೆಗೆ ಯಾವ ದಿನಾಂಕದಂದು ಹಣ ವರ್ಗಾವಣೆಯಾಗಿದೆ ಎಂಬ ಎಲ್ಲಾ ಮಾಹಿತಿಯನ್ನು ಕೂಡ ನೀವು ಇಲ್ಲಿ ತಿಳಿದುಕೊಳ್ಳಬಹುದಾಗಿದೆ.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now