ಗೃಹಜ್ಯೋತಿ (Gruhajyothi) ಯೋಜನೆ
ಯು ಕರ್ನಾಟಕ ಸರ್ಕಾರದ (Karnataka governmen) ಗ್ಯಾರಂಟಿ ಯೋಜನೆಗಳ (Guarantee Scheme) ಪೈಕಿ ಮೊದಲನೆಯ ಘೋಷಣೆಯಾಗಿತ್ತು. ಜೂನ್ ತಿಂಗಳಿನಿಂದ ಕೂಡ ಗೃಹಜ್ಯೋತಿ ಯೋಜನೆಗೆ ಅರ್ಜಿ ಆಹ್ವಾನ ಮಾಡಲಾಗುತ್ತಿದೆ, ಅರ್ಜಿ ಸಲ್ಲಿಸಿದವರಿಗೆಲ್ಲಾ ಈಗ ಶುಭಸುದ್ದಿ.
ಅದೇನೆಂದರೆ ಜುಲೈ 25ರ ಒಳಗೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದ ಫಲಾನುಭವಿಗಳು ತಮ್ಮ ಗೃಹಬಳಕೆ ವಿದ್ಯುತ್ ಗೆ ಆಗಸ್ಟ್ ತಿಂಗಳಲ್ಲಿ ಪಡೆಯುತ್ತಿದ್ದ ಕರೆಂಟ್ ಬಿಲ್ ಅನ್ನು ಜೀರೋ ಬಿಲ್ (Zero bill) ಆಗಿ ಪಡೆಯಲಿದ್ದಾರೆ. ಗರಿಷ್ಠ 200 ಯೂನಿಟ್ ವರೆಗೆ ಉಚಿತ ಇದ್ದರು ಕಳೆದ ಒಂದು ವರ್ಷದಲ್ಲಿ ಕುಟುಂಬಗಳು ಬಳಸಿರುವ ಸರಾಸರಿ ವಿದ್ಯುತ್ ಮೇಲೆ 10% ಮಾತ್ರ ಉಚಿತವಾಗಿ ಸಿಗಲಿದೆ ಎನ್ನುವ ಸರ್ಕಾರ ಕಂಡಿಷನ್ ಅನ್ನು ಮರೆಯುವಂತಿಲ್ಲ.
ಸದ್ಯಕ್ಕೀಗ ಇಂಧನ ಇಲಾಖೆಯ ತಿಳಿಸಿರುವ ಅಂಕಿ ಅಂಶದ ಪ್ರಕಾರ ಕರ್ನಾಟಕದಲ್ಲಿ ಒಟ್ಟು 2.5 ಕೋಟಿಗಿಂತ ಹೆಚ್ಚು ಕುಟುಂಬಗಳು ಇವೆ. ಆದರೆ ಈವರೆಗೆ ಗೃಹಜ್ಯೋತಿ ಯೋಜನೆಗೆ 1,18,50,474 ಜನ ಮಾತ್ರ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದಾರಂತೆ . ಹಾಗಾಗಿ ಯಾರಿಗೆಲ್ಲ ಮೊದಲ ತಿಂಗಳ ಗೃಹಜ್ಯೋತಿ ಅನುಕೂಲತೆ ಸಿಗಲಿದೆ ಎಂದು ನೋಡುವುದಾದರೆ ಜುಲೈ 25ರ ಒಳಗೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ.
ಈ ಮೇಲೆ ತಿಳಿಸಿದಂತೆ ಸರ್ಕಾರದ ಕಂಡೀಷನ್ ಒಳಗಡೆ ವಿದ್ಯುತ್ ಬಳಕೆ ಮಾಡಿದವರಿಗೆಲ್ಲರಿಗೂ ಕೂಡ ಜುಲೈ ತಿಂಗಳ ವಿದ್ಯುತ್ ಬಳಕೆಗೆ ಆಗಸ್ಟ್ ತಿಂಗಳಿನಲ್ಲಿ ಪಡೆಯುತ್ತಿದ್ದ ಬಿಲ್ ಜೀರೋ ಆಗಿ ಸಿಗಲಿದೆ. ಆದರೆ ಜುಲೈ 25 ರ ನಂತರ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಆಗಸ್ಟ್ ತಿಂಗಳ ಬದಲಾಗಿ ಸೆಪ್ಟೆಂಬರ್ ತಿಂಗಳಿನಿಂದ ಉಚಿತ ವಿದ್ಯುತ್ ಭಾಗ್ಯ ಸಿಗಲಿದೆ. ಪ್ರತಿ ತಿಂಗಳ 25ರಿಂದ ಮುಂದಿನ ತಿಂಗಳ 25ನೇ ದಿನಾಂಕವನ್ನು ವಿದ್ಯುತ್ ಮಾಪನ ರೀಡಿಂಗ್ ಮಾಡಲು ಬಳಸುವುದರಿಂದ ಈ ರೀತಿ ನಿಗದಿಯಾಗಿದೆ.
ರೈತ ಹಾಗೂ ರೈತನ ಪತ್ನಿಗೆ ಪ್ರತಿ ತಿಂಗಳು 3000 ಪಿಂಚಣಿ ನೀಡಲು ಹೊಸ ಯೋಜನೆ ಜಾರಿಗೆ ತಂದ ಕೇಂದ್ರ ಸರ್ಕಾರ.!
ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದ ಫಲಾನುಭವಿಗಳು ತಮ್ಮ ಅರ್ಜಿ ಸ್ಟೇಟಸ್ (Apllication Status) ಹೇಗಿದೆ ಎಂದು ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳುವ ಮೂಲಕ ತಾವು ಗೃಹಜ್ಯೋತಿ ಯೋಜನೆಗೆ ಅರ್ಹರಾಗಿದ್ದಾರಾ ಎನ್ನುವುದನ್ನು ಮತ್ತೊಮ್ಮೆ ದೃಢಪಡಿಸಿಕೊಳ್ಳಬಹುದು. ಅದಕ್ಕಾಗಿ ಇರುವ ಸುಲಭ ಹಂತದ ಬಗ್ಗೆ ತಿಳಿಸುತಿದ್ದೇವೆ ನೋಡಿ.
● ಮೊದಲಿಗೆ ನಿಮ್ಮ ಮೊಬೈಲ್ ಅಥವಾ ಪರ್ಸನಲ್ ಕಂಪ್ಯೂಟರ್ ಮೂಲಕ https://sevasindhugs.karnataka.gov.in/ ವೆಬ್ ಸೈಟ್ ಗೆ ಭೇಟಿ ಕೊಡಿ.
● ಸರ್ಕಾರದ ಗ್ಯಾರಂಟಿ ಯೋಜನೆಗಳ ಮೆನು ಇರುವ ಪೇಜ್ ಓಪನ್ ಆಗುತ್ತದೆ ಅದರಲ್ಲಿ ಆ ಮುಖಪುಟದ ಎಡಭಾಗದಲ್ಲಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ.
● ನಿಮ್ಮ ಅರ್ಜಿ ಸ್ಥಿತಿಯನ್ನು ತಿಳಿಯಿರಿ ಎನ್ನುವ ಆಪ್ಷನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
● ಮುಂದಿನ ಹಂತದಲ್ಲಿ ESCOM ಲಿಸ್ಟ್ ನಲ್ಲಿ ನಿಮ್ಮ ಮನೆಗೆ ವಿದ್ಯುತ್ ಸರಬರಾಜು ಆಗುವ ಕಂಪನಿ ಹೆಸರನ್ನು ಆರಿಸಿ ನಿಮ್ಮ ವಿದ್ಯುತ್ ಬಿಲ್ Account ID ನಮೂದಿಸಿ Check Status ಮೇಲೆ ಕ್ಲಿಕ್ ಮಾಡಿ.
ಕಟ್ಟಡ ಕಾರ್ಮಿಕರಿಗೆ ಬಿಗ್ ಶಾ-ಕ್ ಕಾರ್ಮಿಕ ಕಾರ್ಡುಗಳ ರದ್ದತಿಗೆ ಆದೇಶ ಹೊರಡಿಸಿದೆ ಸರ್ಕಾರ.!
● ತಕ್ಷಣವೇ ನಿಮ್ಮ ಪೇಜ್ ಮೇಲೆ ನೀವು ಅರ್ಜಿ ಸಲ್ಲಿಸಿರುವ Apllication ref Num, Account ID, Registration Date ಎಲ್ಲವನ್ನು ತೋರಿಸುತ್ತದೆ ನೀವು ಜುಲೈ 25 ರ ಒಳಗೆ ಅರ್ಜಿ ಸಲ್ಲಿಸಿದ್ದೀರಾ ಎನ್ನುವುದನ್ನು ಕನ್ಫರ್ಮ್ ಮಾಡಿಕೊಳ್ಳಿ, ಬಳಿಕ Staus ವಿಭಾಗದಲ್ಲಿ your application for Gruhajyothi Scheme is received and sent to ESCOM for processing ಎಂದು ಇದ್ದರೆ ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿ ಆಗಿದೆ ನೀವು ಆಗಸ್ಟ್ ತಿಂಗಳಲ್ಲಿ ಉಚಿತ ವಿದ್ಯುತ್ ಅನುಕೂಲತೆ ಪಡೆಯಲಿದ್ದೀರಿ ಎಂದರ್ಥ.