ಸ್ವಂತ ಜಮೀನು ಇಲ್ಲದವರಿಗೆ ಸಿಹಿ ಸುದ್ದಿ, ಭೂಮಿ ಖರೀದಿಗೆ 50% ಸಹಾಯಧನ ನೀಡುತ್ತಿರುವ ಸರ್ಕಾರ ಈಗಲೇ ಅರ್ಜಿ ಸಲ್ಲಿಸಿ

ಜಾಹೀರಾತು

ಸ್ವಂತ ಆಸ್ತಿ ಹೊಂದುವುದು ಪ್ರತಿಯೊಬ್ಬರ ಆಸೆ ಕನಸು. ಆದರೆ ಕನಿಷ್ಠ ಆಸ್ತಿ ಆದರು ಇರಲೇಬೇಕು ಎನ್ನುವುದು ಜೀವನ ನಿರ್ವಹಣೆಗೆ ಅತ್ಯಂತ ಮೂಲಭೂತವಾದ ವಿಷಯ. ಪಟ್ಟಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ಉದ್ಯೋಗ ಮುಖ್ಯ ಆದರೆ ಹಳ್ಳಿಗಾಡಿನಲ್ಲಿ ಜೀವನ ಸವೆಸುವವರಿಗೆ ಅವರ ಸ್ವಂತ ಜಮೀನು ಇರುವುದು ಕೂಡ ಅಷ್ಟೇ ಮುಖ್ಯ ಅವರ ಆದಾಯ ಮತ್ತು ಭದ್ರತೆ ಎರಡು ಕೂಡ ಆ ಜಮೀನು ಆಗಿರುತ್ತದೆ. ಅದರಲ್ಲೂ ಹಳ್ಳಿಯಲ್ಲಿ ಜೀವನ ಮಾಡುವವರಿಗೆ ಸ್ವಂತ ಜಮೀನು ಇರದೇ ಇದ್ದರೆ ಅವರ ಬದುಕು ಬಹಳ ಕಷ್ಟ.

ಈಗಾಗಲೇ ಮಾನ್ಯ ಸರ್ಕಾರ ಈಗಾಗಲೇ ಹಳ್ಳಿಗಳಲ್ಲಿ ಹಾಗೂ ನಗರಗಳಲ್ಲಿ ವಾಸಿಸುತ್ತಿರುವ ವಸತಿ ರಹಿತ ಕುಟುಂಬಗಳಿಗೆ ಕೆಲ ಯೋಜನೆ ಮೂಲಕ ಅವರಿಗೆ ಸೂರು ಕಟ್ಟಿ ಕೊಳ್ಳಲು
ಅನುಕೂಲ ಮಾಡಿ ಕೊಟ್ಟಿದೆ. ಅಂತೆಯೇ ಈ ಯೋಜನೆ ಅಡಿಯಲ್ಲಿ ಕೋಟ್ಯಾಂತರ ವಸತಿ ರಹಿತ ಕುಟುಂಬಗಳು ಅನುಕೂಲತೆ ಪಡೆದು ಭದ್ರತೆಯಲ್ಲಿ ಬದುಕುತ್ತಿದ್ದಾರೆ.

ಇದೇ ನಿಟ್ಟಿನಲ್ಲಿ ಈಗ ಭೂ ರಹಿತ ರೈತ ಕುಟುಂಬಗಳಿಗೆ ಭೂಮಿಯನ್ನು ಸಹಾ ಖರೀದಿಸುವುದಕ್ಕೆ ಹಣ ಸಹಾಯ ಮಾಡಬೇಕು ಎಂದು ಸರ್ಕಾರ ನಿರ್ಧರಿಸಿದೆ ಅದಕ್ಕಾಗಿ ಹೊಸ ಯೋಜನೆಯನ್ನು ತಂದಿದೆ. ಈಗಲೂ ಸಹ ಹಳ್ಳಿಗಳಲ್ಲಿ ಜಮೀನು ಹಂಚಿಕೆ ವಿಷಯದಲ್ಲಿ ಸಾಕಷ್ಟು ವ್ಯತ್ಯಾಸಗಳಿದೆ. ಕೃಷಿ ಮಾಡಿ ದೇಶಕ್ಕೆ ಹಸಿವು ನೀಗಿಸಬೇಕು ಎಂದು ಆಸೆ ಪಡುವ ಅದೆಷ್ಟೋ ರೈತ ಕುಟುಂಬಗಳು ಉಳಿಮೆ ಮಾಡಲು ಭೂಮಿ ಇಲ್ಲದೆ ಇತರ ಬಳಿ ಕೂಲಿ ಕೆಲಸಕ್ಕೆ ಹೋಗುವ ರೀತಿ ಆಗಿದೆ.

ಇಂತಹ ಸಮಸ್ಯೆಗಳನ್ನು ಮನಗಂಡ ಸರ್ಕಾರವು ಇಂತಹ ಮಹತ್ತರ ಯೋಜನೆಗೆ ಕೈ ಹಾಕಿದೆ. ಅದಕ್ಕಾಗಿ ಬಜೆಟ್ ಅಲ್ಲಿ ದೊಡ್ಡ ಮೊತ್ತದ ಹಣವನ್ನು ಎತ್ತಿಡುವ ಮೂಲಕ ಸಹಾಯಧನ ನೀಡಿ ಭೂಮಿ ಖರೀದಿ ಮಾಡುವುದಕ್ಕೆ ಪ್ರೋತ್ಸಾಹ ಮಾಡುವ ಕೆಲಸ ಮಾಡುತ್ತಿದೆ. ಈ ಯೋಜನೆಯ ಫಲಾನುಭವಿಗಳು ಆಗಬೇಕು ಎಂದು ಇಚ್ಚಿಸುತ್ತಿದ್ದರೆ ಅದಕ್ಕೆ ಹಲವು ನೀತಿ ನಿಯಮಗಳು ಸಹ ಅಪ್ಲೈ ಆಗುತ್ತದೆ. ಇದಕ್ಕಿರುವ ಕಂಡೀಶನ್ ಗಳನ್ನು ತಿಳಿದುಕೊಳ್ಳಲು ಮತ್ತು ಇದರ ಕುರಿತು ಹೆಚ್ಚಿನ ಮಾಹಿತಿಗೆ ಪೂರ್ತಿ ಓದಿ.

ಕೇಂದ್ರ ಸರ್ಕಾರವು ಭೂ ಒಡೆತನ ಕಾಯ್ದೆ ಅಡಿಯಲ್ಲಿ ಇಂತಹ ಮಹತ್ತರವಾದ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಉಪಯೋಗವನ್ನು ಗ್ರಾಮೀಣ ಭಾಗದ ಭೂಮಿ ರಹಿತ ಕೃಷಿ ಕಾರ್ಮಿಕ ಮಹಿಳೆಯರು ಪಡೆಯಬಹುದಾಗಿದೆ. ಆದಿ ದ್ರಾವಿಡ ಅಥವಾ ಅದರ ಉಪ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಈ ಯೋಜನೆ ಅಡಿಯಲ್ಲಿ ಶೇಕಡ 50ರಷ್ಟು ಸಹಾಯಧನ ಸರ್ಕಾರದಿಂದ ದೊರೆಯಲಿದೆ.

ಈ ಯೋಜನೆ ಅಡಿ ಭೂ ರಹಿತ ಕೃಷಿ ಕಾರ್ಮಿಕ ಮಹಿಳಾ ಕುಟುಂಬಗಳಿಗೆ ಘಟಕ ವೆಚ್ಚ 15 ಲಕ್ಷ ರೂ ಗೆ ಲಭ್ಯವಾಗುವಷ್ಟು ಭೂಮಿಯನ್ನು ಸರ್ಕಾರ ಅರ್ಧ ಭರಿಸುವ ಮೂಲಕ ಖರೀದಿಸಿ ನೀಡುತ್ತದೆ. ಈ ಯೋಜನೆಯ ಉಪಯೋಗ ಕೇಳಿ ದೇಶದ ಲಕ್ಷಾಂತರ ಭೂ ರಹಿತ ರೈತ ಕಾರ್ಮಿಕರ ಕುಟುಂಬದ ಸದಸ್ಯರು ಸಂತಸ ಪಟ್ಟಿದ್ದಾರೆ.

ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಹತ್ತಿರದಲ್ಲಿರುವ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ ಹಾಗೂ ಇಂತಹ ಉಪಯುಕ್ತ ಮಾಹಿತಿಯ ವಿಷಯವನ್ನು ನಿಮ್ಮ ಕುಟುಂಬದ ಮತ್ತು ಸ್ನೇಹಿತರ ಜೊತೆಗೂ ಹಂಚಿಕೊಳ್ಳುವ ಮೂಲಕ ಇನ್ನಷ್ಟು ಜನರಿಗೆ ತಲುಪಲು ಸಹಾಯ ಮಾಡಿ.

Leave a Comment

%d bloggers like this: