ರೈತರಿಗೆ ಶುಭ ಸುದ್ದಿ ರಸಗೊಬ್ಬರ ಖರೀದಿಗೆ ಕೇಂದ್ರ ಸರ್ಕಾರದಿಂದ ಬೃಹತ್‌ ರಿಯಾಯಿತಿ.!

 

WhatsApp Group Join Now
Telegram Group Join Now

ಕೇಂದ್ರ ಸರ್ಕಾರದಿಂದ (Central Government) ದೇಶದ ರೈತರಿಗೆ (for Farmers) ಸಾಕಷ್ಟು ಯೋಜನೆಗಳಿಂದ ನೆರವು ಸಿಗುತ್ತಿದೆ. ರೈತನು ಈ ದೇಶದ ಬೆನ್ನೆಲುಬು, ಕೃಷಿಯು (Agriculture) ನಮ್ಮ ದೇಶದ ಬಹುತೇಕ ಜನರ ಜೀವನ ಕಸಬು ಮತ್ತು ನಮ್ಮ ದೇಶದಲ್ಲಿ ಬಡ ರೈತರ ಸಂಖ್ಯೆಯೇ ಹೆಚ್ಚಾಗಿರುವುದರಿಂದ ರೈತನನ್ನು ಆರ್ಥಿಕವಾಗಿ ಸದೃಢನನ್ನಾಗಿಸಲು ಅನೇಕ ಯೋಜನೆಗಳ ಮೂಲಕ ಸರ್ಕಾರಗಳು ಸ್ಪಂದಿಸುತ್ತಿವೆ.

ರಾಜ್ಯ ಸರ್ಕಾರಗಳು ಕೂಡ ರೈತರಿಗಾಗಿಯೇ ವಿಶೇಷ ಯೋಜನೆಗಳನ್ನು ಕೂಡ ಕೈಗೊಂಡು ರಾಜ್ಯದ ರೈತರ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸುತ್ತಿವೆ. ಎರಡು ದಿನಗಳ ಹಿಂದೆಯಷ್ಟೇ ಫೆಬ್ರವರಿ 28ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PMKSY) 16ನೇ ಕಂತಿನ ಹಣವು ಬಿಡುಗಡೆಯಾಗಿ ಎಲ್ಲ ರೈತರು ಮನದಲ್ಲೂ ಸಂತಸ ಮೂಡಿದೆ.

ಈ ಸುದ್ದಿ ಓದಿ:- ನಿಮ್ಮ ಜಮೀನಿನ ಪಹಣಿಗೆ (RTC) ಆಧಾರ್ ಲಿಂಕ್ ಮಾಡುವುದು ಕಡ್ಡಾಯ.! ಮೊಬೈಲ್ ನಲ್ಲಿಯೇ ಲಿಂಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಇದರ ಬೆನ್ನಲ್ಲೇ ಈಗ ಕೇಂದ್ರ ಸರ್ಕಾರದ ವತಿಯಿಂದ ದೇಶದ ಎಲ್ಲಾ ರೈತರಿಗೂ ಮತ್ತೊಂದು ಸಿಹಿ ಸುದ್ದಿ ಇದೆ ಕಳೆದ ವರ್ಷದಲ್ಲಿ ಕರ್ನಾಟಕ ರಾಜ್ಯ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಮಳೆ ಕೊರತೆಯಿಂದಾಗಿ ಕೃಷಿ ಸಂಪೂರ್ಣ ನೆಲ ಕಚ್ಚಿತು ಈಗ ಹೊಸ ಹುರುಪಿನೊಂದಿಗೆ ಮತ್ತೆ ಈ ವರ್ಷದ ಕೃಷಿ ಕೆಲಸಕ್ಕೆ ಸನ್ನದ್ಧನಾಗುತ್ತಿದ್ದಾನೆ ರೈತನು.

ಈ ಸಂದರ್ಭದಲ್ಲಿ ಮುಂಗಾರು ಹಂಗಾಮಿನ ಬೆಳೆಗಳಿಗೆ ಭೂಮಿಯನ್ನು ಹದಗೊಳಿಸಿ ತಯಾರಾಗುತ್ತಿರುವ ದೇಶದ ರೈತನಿಗೆ ಸರ್ಕಾರದ ವತಿಯಿಂದ ಮತ್ತೊಂದು ನೆರವು ಸಿಗುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಕೃಷಿ ಚಟುವಟಿಕೆ ಅಗತ್ಯ ವಸ್ತುವಾಗಿರುವ ರಸಗೊಬ್ಬರಗಳ (fertilizers) ಬೆಲೆ ಇಳಿಕೆ ಮಾಡಿ ಸರ್ಕಾರ ರೈತರ ಹೊರೆ ಇಳಿಸಿದೆ.

ಈ ಸುದ್ದಿ ಓದಿ:-ತಹಶೀಲ್ದಾರ್ ಸೇರಿ 384 KAS ಹುದ್ದೆಗಳಿಗೆ ಅರ್ಜಿ ಆಹ್ವಾನ, KPSCಯಿಂದ ಅಧಿಕೃತ ಅಧಿಸೂಚನೆ ಪ್ರಕಟ.!

ಮುಂದಿನ ಮುಂಗಾರು ಹಂಗಾಮಿನಲ್ಲಿ ರೈತರ ಬಿತ್ತನೆಗೆ ನೆರವಾಗಲು 24,420 ಕೋಟಿ ರೂ. ರಸಗೊಬ್ಬರ ಸಹಾಯಧನ ನೀಡಲು ಕೇಂದ್ರ ಸಚಿವ ಸಂಪುಟ ಸಭೆ ಗುರುವಾಗ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಒಪ್ಪಿಗೆಯಾಗಿದ್ದು.

ಏಪ್ರಿಲ್ 1ರಿಂದ ಸೆಪ್ಚೆಂಬರ್ 30ರ ವರೆಗೆ ಮುಂಗಾರು ಬೆಳೆಯ ಅವಧಿಗೆ ಫಾಸ್ಪೇಟಿಕ್‌ ಹಾಗೂ ಪೊಟ್ಯಾಶಿಯಂ ಈ ಎರಡು ರಸಗೊಬ್ಬರಗಳಿಗೆ ಸಹಾಯಧನ ನೀಡಲು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. 2024-25ನೇ ಸಾಲಿನಲ್ಲಿ ಪೋಷಕಾಂಶ ಆಧಾರಿತ ರಸಗೊಬ್ಬರಕ್ಕೆ ಸಹಾಯ ನೀಡುವಂತೆ ರಸಗೊಬ್ಬರ ಇಲಾಖೆ ಸರ್ಕಾರಕ್ಕೆ ಪ್ರಸ್ತಾವಕ್ಕೆ ಸಲ್ಲಿಸಿತ್ತು ಅಂತಿಮವಾಗಿ ಸಂಪುಟ ಸಭೆಯಲ್ಲಿ ಅನುಮೋದನೆಯಾಗಿದೆ.

ಈ ಸುದ್ದಿ ಓದಿ:- ಈ ಬಿಸಿನೆಸ್ ನಲ್ಲಿ ತಿಂಗಳಿಗೆ 1 ಲಕ್ಷ ಅಲ್ಲ 3 ಲಕ್ಷ ದುಡಿಯಬಹುದು, ಫುಲ್ ಡಿಮ್ಯಾಂಡ್ ಇರುವ ಬಿಸಿನೆಸ್.!

ನಮ್ಮ ದೇಶದ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಕೈಗೆಟುಕುವ ಮತ್ತು ಸಮಂಜಸವಾದ ಬೆಲೆಯಲ್ಲಿ ರಸಗೊಬ್ಬರಗಳ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಬೆಲೆ ಆಧರಿಸಿ ರಸಗೊಬ್ಬರಗಳ ಬೆಲೆ ನಿಯಂತ್ರಣ ಮಾಡಲು ಸಹಾಯಧನ ನೀಡಲಾಗುತ್ತಿದೆ.

ಈ ಯೋಜನೆ ಮೂಲಕ ಮೂರು ಹೊಸ ರಸಗೊಬ್ಬರ ಶ್ರೇಣಿಗಳನ್ನು ಸೇರ್ಪಡೆ ಮಾಡಲಾಗಿದೆ. ಭೂಮಿಯ ಮಣ್ಣಿನ ಗುಣಮಟ್ಟ ಮತ್ತು ತಮ್ಮ ಭೂಮಿಗೆ ಬೇಕಾದ ಪೋಷಕಾಂಶಗಳ ಬಲವರ್ಧನೆಗೆ ಯಾವ ರಸಗೊಬ್ಬರಗಳ ಅವಶ್ಯಕತೆ ಇದೆಯೋ ಅದನ್ನೇ ಆಯ್ಕೆ ಮಾಡಿಕೊಳ್ಳಲು ರೈತರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಸಹಾಯಧನ ಬೆಲೆ:-

* ಸಾರಜನಕ (Nitrogen‌) – ಪ್ರತಿ Kg ಗೆ ರೂ.47.02
* ಪಾಸ್ಪೇಟಿಕ್‌ (Phospatic) – ಪ್ರತಿ Kg ಗೆ ರೂ.28.72
* ಪೊಟ್ಯಾಶಿಯಂ (Potassium) – ಪ್ರತಿ Kgಗೆ ರೂ.2.38
* .ಸಲ್ಫರ್‌ (Sulphur) – ಪ್ರತಿ Kg ಗೆ ರೂ.1.89
* ಅಮೋನಿಯಂ ಫಾಸ್ಪೇಟ್‌ (DAP) ಮೇಲಿನ ಸಬ್ಸಿಡಿ ಟನ್‌ಗೆ ರೂ.4,500, ಸರಕಾರದ ಸಹಾಯಧನ ಘೋಷಣೆಯಾದ ಬಳಿಕ ಪ್ರತಿ ಬ್ಯಾಗ್‌ ಬೆಲೆ ರೂ.1,350 ರೂ
* ಮ್ಯೂರಿಯೇಟ್‌ ಪಾಸ್ಪೇಟ್‌(MOP) ಪ್ರತಿ ಬ್ಯಾಗ್ ಬೆಲೆ ರೂ.1,670
* ಎನ್‌ಪಿಪಿ (NPP) ಪ್ರತಿ ಬ್ಯಾಗ್ ಬೆಲೆ ರೂ.1,470 ನಿಗದಿಯಾಗಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now