PF ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್, ವೇತನ ಮಿತಿ 15,000 ದಿಂದ 21,000ಕ್ಕೆ ಹೆಚ್ಚಳ.!

 

WhatsApp Group Join Now
Telegram Group Join Now

ನೌಕರರ ಭವಿಷ್ಯ ನಿಧಿ (Employee provident Fund) ಈ ವಿಚಾರವಾಗಿ ಮಾಧ್ಯಮಗಳಲ್ಲಿ ಆಗಾಗ ಸುದ್ದಿ ಪ್ರಸಾರವಾಗುತ್ತಲೇ ಇರುತ್ತದೆ. ಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕನ ವೇತನದಲ್ಲಿ ಆತನ ದುಡಿಮೆಯ ಮೂಲ ವೇತನದ 12% ನ್ನು ಕಡಿತಗೊಳಿಸಿ ಆತನ PF ಖಾತೆಗೆ ಜಮಾ ಮಾಡಿ ಆತ ಕೆಲಸ ಬಿಟ್ಟ ನಂತರ ಅಥವಾ ನಿವೃತ್ತಿ ಹೊಂದಿದ ನಂತರ.

ಆತನಿಗೆ ಅದನ್ನು ಅನ್ವಯವಾಗುವ ಬಡ್ಡಿದರಗಳ ಲಾಭದೊಂದಿಗೆ ಹಿಂತಿರುಗಿಸುವ ನಿಯಮವನ್ನು ಇಟ್ಟುಕೊಂಡು ಭಾರತದ ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಯ (EPFO) ಈ EPF ಸ್ಕೀಮ್ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಮತ್ತೊಂದು ಗಮನಿಸಲೇಬೇಕಾದ ಅಂಶವೇನೆಂದರೆ, ಉದ್ಯೋಗದಾತನ ವತಿಯಿಂದ ಕೂಡ ಈ ಉದ್ಯೋಗಿ ಖಾತೆಗೆ ಪ್ರತಿ ತಿಂಗಳು ಅಷ್ಟೇ ಮೊತ್ತದ ಹಣವು ಕೂಡ ಜಮೆ ಆಗುತ್ತದೆ ಎನ್ನುವುದು.

ಹೀಗೆ ಒಟ್ಟು 24% ಹಣ ಜಮೆಯಾದಂತಾಗುತ್ತದೆ. ಆದರೆ ಇದುವರೆಗೆ ಈ ಸೌಲಭ್ಯ ಪಡೆಯಲು ವೇತನ ಮಿತಿ ಮೂಲವೇತನ 15,000 ವರೆಗೆ ಇತ್ತು, ಈಗ ಇದನ್ನು ಹೆಚ್ಚಿಸುವ ಕುರಿತು ಅಮೂಲಕ PF ಕಡಿತಗೊಳಿಸುವ ಮಿತಿಯನ್ನು ಹೆಚ್ಚಿಸುವ ಬಗ್ಗೆ ವಿಷಯ ಪ್ರಸ್ತಾಪವಾಗುತ್ತಿದೆ.

ಈ ಸುದ್ದಿ ಓದಿ:- ಸ್ಟೇಟ್ ಬ್ಯಾಂಕ್ ನಲ್ಲಿ 5 ಲಕ್ಷ FD ಇಟ್ಟರೆ ಎಷ್ಟು ಹಣ ಲಾಭ ಸಿಗುತ್ತದೆ ಗೊತ್ತಾ.? ನಿಮ್ಮ ಹಣ ದುಪ್ಪಟ್ಟು ಮಾಡಲು ಇದೇ ಬೆಸ್ಟ್

ಕಾರ್ಮಿಕರ ಈ EPF ಮಾಸಿಕ ಗರಿಷ್ಠ ಮಿತಿಯನ್ನು ಹೆಚ್ಚಿಸಲು ಕೇಂದ್ರ ಸರಕಾರ ನಿರ್ಧಾರ ಮಾಡಿದೆ ಎನ್ನುವ ಮಾಹಿತಿಗಳು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಪ್ರಸ್ತುತ, ಸದ್ಯಕ್ಕೆ ಕನಿಷ್ಠ ವೇತನದ ಗರಿಷ್ಠ ಮಿತಿ ರೂ.15,000 ಇದ್ದು, ಈ ಮಿತಿಯನ್ನು ರೂ.21,000 ರೂ.ಗೆ ಏರಿಸಲು ಚರ್ಚಿಸಲಾಗಿದೆ ಎನ್ನುವ ಮಾತುಗಳು ಹರಿದಾಡುತ್ತಿವೆ.

ಹೀಗಾದರೆ ಸಹಜವಾಗಿ PF ಖಡಿತಗೊಳ್ಳುವ ಮಿತಿಯು ಹೆಚ್ಚಾಗುತ್ತದೆ. ಇದು ದೇಶದ ಲಕ್ಷಾಂತರ ಕಾರ್ಮಿಕರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಶೀಘ್ರವಾಗಿ ಈ ಯೋಜನೆ ಜಾರಿಗೆ ಬಂದರೆ ಇದು ಲಕ್ಷಾಂತರ ಕುಟುಂಬಗಳಿಗೆ ನೆರವಾಗುವುದರಲ್ಲಿ ಅನುಮಾನವೇ ಇಲ್ಲ ಹಾಗಾಗಿ ಇಡೀ ಕಾರ್ಮಿಕ ಸಮೂಹವು ಇಂತಹದೊಂದು ಘೋಷಣೆಗಾಗಿ ಎದುರು ನೋಡುತ್ತಿದ್ದೆ.

ಅದಕ್ಕೀಗ ಕಾಲ ಕೂಡಿ ಬಂದಿದ್ದು EPF ನ ಗರಿಷ್ಠ ಮಿತಿ ಹೆಚ್ಚಿಸಲು ಕೇಂದ್ರ ಸರಕಾರ ಕೂಡ ಮನಸ್ಸು ಮಾಡಿದೆ. ಇದನ್ನು ಆದ್ಯತಾ ವಿಷಯವಾಗಿ ಪರಿಗಣಿಸಿ, ಲೋಕಸಭಾ ಚುನಾವಣೆ 2024ರ ನಂತರ ಸ್ಥಾಪನೆಯಾಗುವ ಹೊಸ ಸರಕಾರವು ಇದರ ಸಂಬಂಧ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು EPFO ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿ ಓದಿ:- ಮನೆ ಕಟ್ಟಿಸುತ್ತಿದ್ದೀರಾ.? ಆಗಿದ್ರೆ ಈ ವಿಷ್ಯ ತಿಳ್ಕೋಳಿ ವುಡನ್, UPVC, ಅಲ್ಯೂಮಿನಿಯಂ ಯಾವ ರೀತಿ ಕಿಟಕಿ ಹಾಕಿಸುವುದು ಬೆಸ್ಟ್ ಅಂತ ನೋಡಿ.!

ಆದರೆ ಹತ್ತಾರು ಅನುಕೂಲದ ಜೊತೆ ಕಾರ್ಮಿಕರಿಗಾಗುತ್ತಿರುವ ಒಂದು ಸಣ್ಣ ಸಮಸ್ಯೆ ಎಂದರೆ ಈ ರೀತಿ EPF ಕಡಿತಗೊಳ್ಳುವ ಮಿತಿ ಹೆಚ್ಚಳದಿಂದ ನೌಕರರ ಕೈಗೆ ಸೇರುವ ಟೇಕ್‌ ಹೋಮ್‌ ಸ್ಯಾಲರಿ (take home Salary) ಕಡಿಮೆಯಾಗಲಿದೆ. ಸಣ್ಣ ಪ್ರಮಾಣದ ಈ ಹೊರಿಯನ್ನು ಕಾರ್ಮಿಕ ಭರಿಸುವುದಾದರೆ ಆತನಿಗೆ ಭವಿಷ್ಯದ ದೃಷ್ಟಿಯಿಂದ ಬಹಳ ಲಾಭವಾಗಲಿದೆ, ಹಾಗಾಗಿ ಸದ್ಯಕ್ಕೀಗ ಇದನ್ನು ಇಬ್ಬರ ಹೊರೆ ಎಂದು ಹೇಳಬಹುದು.

ಕನಿಷ್ಠ ವೇತನ ಮಿತಿ ಹೆಚ್ಚಳವಾಗುವುದರ ಬಗ್ಗೆ ಹೇಳುವುದಾದರೆ
ಈ ಹಿಂದೆ ಹಲವು ಬಾರಿ ವೇತನ ಮಿತಿ ಪರಿಷ್ಕರಣೆಯಾಗಿದೆ, ಕಳೆದ ಬಾರಿಗೆ ವೇತನ ಮಿತಿ 2014ರಲ್ಲಿ ಪರಿಷ್ಕರಿಸಲಾಗಿತ್ತು. ಆ ಸಮಯದಲ್ಲಿ ರೂ.6,500 ರೂ.ಗಳಿಂದ ರೂ.15,000 ಏರಿಕೆಯಾಗಿತ್ತು. ಈಗ ಇದನ್ನು ರೂ.15000 ದಿಂದ ಇದು ರೂ.21,000 ಕ್ಕೆ ಏರಿಸಲು ಮಾತುಕತೆ ನಡೆಯುತ್ತಿದೆ.

ಈ ಸುದ್ದಿ ಓದಿ:- HSRP ಪ್ಲೇಟ್ ಜೊತೆ ಇನ್ಮುಂದೆ ಈ ದಾಖಲೆ ಕಡ್ಡಾಯವಾಗಿ ಇರಲೇಬೇಕು, ಇಲ್ಲದಿದ್ರೆ ಸ್ಥಳದಲ್ಲೇ ಗಾಡಿ ಸೀಜ್, ಹೊಸ ರೂಲ್ಸ್.!

ಇದು ಸಾಧ್ಯವಾದರೆ ಗಣನೀಯವಾಗಿ PF ಖಾತೆಯಲ್ಲಿ ಹಿಂಪಡೆಯುವ ಮೊತ್ತ ಹಾಗೂ ಪಿಂಚಣಿ ಪಡೆಯುವ ಮೊತ್ತವು ಕೂಡ ಏರಿಕೆ ಆಗಲಿದೆ. ಈ ಬಗ್ಗೆ ಸರ್ಕಾರದ ಅಧಿಕೃತ ಘೋಷಣೆ ಯಾವಾಗ ಎಂದು ಎದುರು ನೋಡೋಣ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now