ರಾಜ್ಯದ ಮುಖ್ಯಮಂತ್ರಿಗಳಾಗಿರುವಂತಹ ಬಸವರಾಜ್ ಬೊಮ್ಮಾಯಿ ಅವರು ಈಗಾಗಲೇ ಬಜೆಟ್ ಮಂಡನೆ ಮಾಡಿದ್ದು. ವಾಸಿಸಲು ಸ್ವಂತ ಮನೆ ಇಲ್ಲದವರಿಗೆ, ಬೇರೆ ಮನೆಯಲ್ಲಿ ಅಂದರೆ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿರುವವರಿಗೆ, ಹಾಗೂ ಸ್ವಂತ ಜಾಗ ಇಲ್ಲದೆ ಇರುವ ಬಡ ಕುಟುಂಬಗಳಿಗೆ, ಭರ್ಜರಿ ಬಂಪರ್ ಗಿಫ್ಟ್ ಅನ್ನು ನೀಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ರೂ 5,000 ಕೋಟಿ ರೂಪಾಯಿ ವೆಚ್ಚದಲ್ಲಿ 5 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ತಿಳಿಸಿದ್ದಾರೆ.
ವಿಧಾನ ಸೌಧದಲ್ಲಿ ಶುಕ್ರವಾರ 2023-24 ನೇ ಸಾಲಿನ ರಾಜ್ಯದ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು. ಎಲ್ಲರಿಗೂ ಇರಲು ಮನೆಯನ್ನು ನಿರ್ಮಿಸಲು ರಾಜ್ಯ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ಬಡವರ ಹಿತಾಸಕ್ತಿ ದೃಷ್ಟಿಯಿಂದ ಹಿಂದಿನ ಸರ್ಕಾರದ ಅವಧಿಯಲ್ಲಿ ಘೋಷಿಸಿದ್ದ ಮನೆಗಳಿಗೆ 2 ವರ್ಷದ ಹಿಂದಿನ ಕೋವಿಡ್ ಸಂಕಷ್ಟದ ನಡುವೆಯೂ 10,173 ಕೋಟಿ ರೂ ಅನುದಾನವನ್ನು ಹಂಚಿಕೆ ಮಾಡಿ ಈಗಾಗಲೇ ಸುಮಾರು 5 ಲಕ್ಷ ಮನೆಗಳನ್ನು ಪೂರ್ಣಗೊಳಿಸುವು ದಷ್ಟೇ ಅಲ್ಲದೆ 5 ಲಕ್ಷ ಹೊಸ ಮನೆಗಳ ನಿರ್ಮಾಣಕ್ಕೆ ಅನುಮೋದನೆ ಯನ್ನು ನೀಡಲಾಗಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಪ್ರಸಕ್ತ ವರ್ಷ 20,000 ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು. ಈ ಯೋಜನೆಯ ಅಡಿ ಇಚ್ಛೆಪಡುವ ಮನೆಯನ್ನು ಆನ್ಲೈನ್ ನಲ್ಲಿ ಫಲಾನುಭವಿಗಳೆ ಆಯ್ಕೆ ಮಾಡಿಕೊಳ್ಳು ವಂತಹ ಪಾರದರ್ಶಕ ವ್ಯವಸ್ಥೆಯನ್ನು ರೂಪಿಸಲಾಗಿದೆ. ಅಭಿವೃದ್ಧಿ ಆಕಾಂಕ್ಷೆ ತಾಲೂಕುಗಳಿಗೆ ಎಲ್ಲಾ ವಸತಿ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ.
ಈ ಉದ್ದೇಶಕ್ಕೆ ಪ್ರಸಕ್ತ ಸಾಲಿನಲ್ಲಿ, 5,000 ಕೋಟಿ ರೂ ಒದಗಿಸಲಾಗಿದ್ದು ಅವಶ್ಯಕತೆ ಇದ್ದಲ್ಲಿ ಹೆಚ್ಚುವರಿ ಅನುದಾನ ವನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ. ಅತಿವೃಷ್ಟಿಯಿಂದ ಸಂಪೂರ್ಣವಾಗಿ ಹಾನಿಯಾಗಿರುವ ಮನೆಗಳ ಪುನರ್ ನಿರ್ಮಾಣಕ್ಕೆ ನೀಡುತ್ತಿರುವಂತಹ ಸಹಾಯ ಧನವನ್ನು ಸರ್ಕಾರ 5 ಲಕ್ಷ ವರೆಗೆ ಹೆಚ್ಚಿಸಿದೆ. ವಿವಿಧ ವರ್ಗಗಳ ಅಡಿ ಕಳೆದ ನಾಲ್ಕು ವರ್ಷದಲ್ಲಿ 3,01884 ಮನೆಗಳ ಪುನರ್ ನಿರ್ಮಾಣಕ್ಕೆ ಅನುಮೋದನೆಯನ್ನು ನೀಡಲಾಗಿತ್ತು.
ಇದಕ್ಕೆ ಇಲ್ಲಿಯವರೆಗೂ 2627 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಸರ್ಕಾರಿ ಮಾಲೀಕತ್ವದಲ್ಲಿ ಇರುವ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ 1.14 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರವನ್ನು ನೀಡಿದ್ದು. ವರ್ಷಾಂತ್ಯದಲ್ಲಿ ಎಲ್ಲಾ 3.36 ಲಕ್ಷ ಕುಟುಂಬಗಳಿಗೂ ಭೂ ಮಾಲೀಕತ್ವದ ಹಕ್ಕು ಪತ್ರಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ಕರ್ನಾಟಕ ಗೃಹ ಮಂಡಳಿಯಿಂದ ಅನುಮೋದನೆಯಾಗಿ ನಾನಾ ಕಾರಣಗಳಿಗೆ ಯಾವುದೇ ರೀತಿಯ ನೆನೆಗುದಿಗೆ ಬಿದ್ದಿದ್ದ 3382 ಎಕರೆ ಪ್ರದೇಶದಲ್ಲಿನ 48,000 ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ಗಳನ್ನು ವಹಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಅಂದಾಜು 2,000 ಎಕರೆ ಜಮೀನನ್ನು ವಸತಿ ಯೋಜನೆಗಾಗಿ ಸಂಗ್ರಹಿಸಿ ಅಂದಾಜು 30,000 ಸ್ವತ್ತುಗಳನ್ನು ಅಭಿವೃದ್ಧಿಪಡಿಸಿ, ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗು ವುದು ಎಂದು ತಿಳಿಸಿದ್ದಾರೆ. ಇದರ ಉದ್ದೇಶ ಪ್ರತಿಯೊಬ್ಬರಿಗೂ ಕೂಡ ಮನೆಯನ್ನು ನಿರ್ಮಿಸಿ ಕೊಡಬೇಕು ಅವರು ಯಾವುದೇ ರೀತಿಯಲ್ಲೂ ತೊಂದರೆಯನ್ನು ಅನುಭವಿಸಬಾರದು ಎನ್ನುವ ಉದ್ದೇಶದಿಂದ ಈ ಎಲ್ಲಾ ರೀತಿಯ ಕಾನೂನು ಕ್ರಮಗಳನ್ನು ತೆಗೆದು ಕೊಳ್ಳುತ್ತಿದ್ದಾರೆ. ಆದ್ದರಿಂದ ವಾಸವಾಗಿರಲು ಮನೆ ಇಲ್ಲದವರು ಸ್ವಂತ ಜಾಗ ಇಲ್ಲದೆ ಇರುವವರು ಈ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.