ಕಾಂಗ್ರೆಸ್ ಪಕ್ಷವು (Congress) ಚುನಾವಣೆ ಮುನ್ನ ಕೊಟ್ಟಿದ್ದ 5 ಗ್ಯಾರಂಟಿ ಭರವಸೆಗಳ ಪೈಕಿ ಈಗಾಗಲೇ ಮೂರು ಯೋಜನೆಗಳ ಪ್ರಯೋಜನವನ್ನು ಕರ್ನಾಟಕದ ಜನತೆ ಪಡೆಯುತ್ತಿದ್ದಾರೆ. ನಿನ್ನೆಯಷ್ಟೇ ಅಂದರೆ ಆಗಸ್ಟ್ 30, 2023ರಂದು ನಾಲ್ಕನೇ ಗ್ಯಾರಂಟಿ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆಯು (Guarantee Scheme Gruhalakshmi) ಕೂಡ ಲಾಂಚ್ ಆಗಿದೆ.
ಗೃಹಲಕ್ಷ್ಮಿ ಯೋಜನೆ ಮೂಲಕ ಕರ್ನಾಟಕದ ಪಡಿತರ ಚೀಟಿ ಹೊಂದಿರುವ ಎಲ್ಲಾ ಕುಟುಂಬದ ಮುಖ್ಯಸ್ಥೆ ಖಾತೆಗೂ ಕೂಡ ಸರ್ಕಾರದಿಂದ ಸಹಾಯಧನವು DBT ಮೂಲಕ ಅವರ ಆಧಾರ್ ಕಾರ್ಡ್ ಲಿಂಕ್ ಆಗಿ NPCI ಮ್ಯಾಪಿಂಗ್ (Aadhar linking NPCI Mapping ) ಆಗಿರುವ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತಿದೆ. ಬಡ ಜನರಿಗೆ ನೆರವಾಗುವ ಉದ್ದೇಶದಿಂದ ಈ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದಾಗಿ ಹೇಳಿಕೊಳ್ಳುತ್ತಿರುವ ಸರ್ಕಾರವು ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡುವ ಸಲುವಾಗಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ.
ಪೋಸ್ಟ್ ಆಫೀಸಿನ 5 ಬೆಸ್ಟ್ ಸ್ಕೀಮ್ ಗಳು ಇವು, 5,000 ಹೂಡಿಕೆ ಮಾಡಿದರೆ ಸಾಕು ಲಕ್ಷಗಳಲ್ಲಿ ರಿಟರ್ನ್ಸ್ ಪಡೆಯಬಹುದು.!
ಈಗಾಗಲೇ ಕರ್ನಾಟಕದ 1.28 ಕೋಟಿ ಮಹಿಳಾ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯಾಗಿ ಮಂಜೂರಾತಿ ಪತ್ರವನ್ನು ಕೂಡ ಪಡೆದಿದ್ದಾರೆ. ನಿನ್ನೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮುಖ್ಯಸ್ಥಿಕೆಯಲ್ಲಿ ಕಾರ್ಯಕ್ರಮ ನಡೆದಿದೆ.
ಖರ್ಗೆ ಅವರು DBT ಮೂಲಕ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡುವ ಡಿಜಿಟಲ್ ಬಟನ್ ಪ್ರೆಸ್ (AICC President Mallikarjuna Kharge launch through press DBT Digital button ) ಮಾಡುತ್ತಿದ್ದಂತೆಯೇ ಅನೇಕ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ವರ್ಗಾವಣೆ ಆಗುವ ಕುರಿತು SMS ರವಾನೆಯಾಗಿದೆ. ಮಹಿಳೆಯರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ AX-GOKWCD ವತಿಯಿಂದ ಅಭಿನಂದನೆಗಳ ಮೆಸೇಜ್ ಕೂಡ ಬಂದಿದೆ.
ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಂಖ್ಯೆಯನ್ನು ಅನುಮೋದಿಸಲಾಗಿದೆ. ಆಗಸ್ಟ್ 2023ರಿಂದ 1000ರೂ. ಮೊತ್ತವನ್ನು ನೋಂದಾಯಿತ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಧನ್ಯವಾದಗಳು ಕರ್ನಾಟಕ ಸರ್ಕಾರ ಎಂದು ಆ SMS ನಲ್ಲಿ ತಿಳಿಸಲಾಗಿದೆ. ಈ ರೀತಿ SMS ಪಡೆದ ಎಲ್ಲರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಆಗಿಲ್ಲ, SMS ಬಂದಿದ್ದರೂ ಕೂಡ ಕೆಲವರಿಗೆ ಹಣ ವರ್ಗಾವಣೆ ಆಗುವುದು ತಡವಾಗುತ್ತಿದೆ.
ಆದರೆ ಖಂಡಿತವಾಗಿಯೂ ಕೂಡ ಹಣ ವರ್ಗಾವಣೆ ಆಗುತ್ತದೆ ಆದರೆ SMS ಬರದೆ ಇದ್ದವರು ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲವೆಂದು ಗಾಬರಿಗೊಳ್ಳುವ ಅಗತ್ಯ ಇಲ್ಲ. ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಎಲ್ಲರಿಗೂ SMS ತಲುಪದೇ ಇರಬಹುದು ಅಥವಾ ಸರ್ವರ್ ಸಮಸ್ಯೆ, ನೆಟ್ವರ್ಕ್ ಸಮಸ್ಯೆ ಆಗಿರಬಹುದು.
ಆಗಸ್ಟ್ 30 ರಿಂದ ಸೆಪ್ಟೆಂಬರ್ 5ರ ಒಳಗೆ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದ ಕರ್ನಾಟಕದ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಹಣ ವರ್ಗಾವಣೆ ಮಾಡುವ ಭರವಸೆಯನ್ನು ಸರ್ಕಾರ ನೀಡಿದೆ. ನಿಮ್ಮ ಯಾವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದರೆ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅನ್ನ ಭಾಗ್ಯ ಯೋಜನೆಯ ಹಣದ DBT ಸ್ಟೇಟಸ್ ಚೆಕ್ ಮಾಡುತ್ತಿದ್ದ ವಿಧಾನದಿಂದ ಚೆಕ್ ಮಾಡಿ ತಿಳಿದುಕೊಳ್ಳಬಹುದು (Check Gruhalakshmi amount transfer details through food department website).
ಅನ್ನಭಾಗ್ಯ ಯೋಜನೆ ಹೆಚ್ಚುವರಿ ಹಣವು ನಿಮ್ಮ ಯಾವ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ ಅದೇ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವು ಕೂಡ ವರ್ಗಾವಣೆಯಾಗುತ್ತಿದೆ (Annabhagya amount and Gruhalakshmi Scheme amount transferred to the same account).