ಈಗಿನ ಕಾಲದಲ್ಲಿ ಸಾಲ ತೆಗೆದುಕೊಳ್ಳುವುದಕ್ಕೆ ಸಮಸ್ಯೆ ಇಲ್ಲ. ಕಡಿಮೆ ಕಾಗದ ಪತ್ರಗಳಿಗೆ ಶೀಘ್ರದಲ್ಲಿ ಬ್ಯಾಂಕ್ ಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳು ಸಾಲ ಕೊಡುತ್ತವೆ ಆದರೆ ಒಂದು ವೇಳೆ ಯಾವುದಾದರೂ ಒಂದು ಸಮಯದಲ್ಲಿ EMI ಕಟ್ಟುವುದು ತಡವಾದರೆ ಬಹಳ ಅ’ಮಾ’ನ’ವೀ’ಯವಾಗಿ ವರ್ತಿಸುತ್ತವೆ.
ಅದರಲ್ಲೂ ರಿಕವರಿ ಏಜೆಂಟ್ ಗಳಿಂದ ಆಗುವ ಚಿತ್ರಹಿಂ’ಸೆ ಸಾಲ ತೆಗೆದುಕೊಂಡವ ಮಾನಸಿಕನನ್ನಾಗಿ ಮಾಡುತ್ತಿದೆ. ಆದರೆ RBI ಎಲ್ಲ ಬ್ಯಾಂಕ್ ಗಳಿಗೂ ಸಾಲ ಮರುಪಾವತಿ ಮಾಡುವ ಬಗ್ಗೆ ಗೈಡ್ ಲೈನ್ ನೀಡಿದೆ ಅದೇ ಪ್ರಕಾರವಾಗಿ ಎಲ್ಲಾ ಹಣಕಾಸು ಸಂಸ್ಥೆಗಳು ನಡೆದುಕೊಳ್ಳಬೇಕು.
ಯಾವುದೇ ಹೋಂ ಲೋನ್, ವೆಹಿಕಲ್ ಲೋನ್, ಗೋಲ್ಡ್ ಲೋನ್ ಅಥವಾ ಪರ್ಸನಲ್ ಲೋನ್ ತೆಗೆದುಕೊಂಡಿದ್ದರೂ ಮರುಪಾವತಿಗೆ ಹೆದರುವ ಅವಶ್ಯಕತೆ ಇಲ್ಲ ಸಮಸ್ಯೆ ಇದ್ದರೆ ಕಾನೂನಾತ್ಮಕ ಪರಿಹಾರವನ್ನು RBI ಗೈಡ್ ಲೈನ್ಸ್ ಅನುಸಾರ ನೀವು ಪರಿಹಾರ ಪಡೆದುಕೊಳ್ಳಬಹುದು. ಇದರ ಸಂಬಂಧಿತ ಕೆಲ ಮುಖ್ಯ ವಿಷಯಗಳನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್, ತಪ್ಪದೇ ಇಂದೇ ಅರ್ಜಿ ಸಲ್ಲಿಸಿ.!
* ಬ್ಯಾಂಕಿನಲ್ಲಿ ಯಾವುದೇ ಲೋನ್ ಗಳಿಗೆ ಅಪ್ಲಿಕೇಶನ್ ಗಳು ಹಾಗೂ ಅಗ್ರಿಮೆಂಟ್ ಗಳು ಪ್ರಾದೇಶಿಕ ಭಾಷೆಯಲ್ಲಿ ಇರಬೇಕು, ದಪ್ಪ ಅಕ್ಷರಗಳಲ್ಲಿ ಬರೆದಿರಬೇಕು ಅದು ಗ್ರಾಹಕನಿಗೆ ಅರ್ಥವಾಗಬೇಕು ಎನ್ನುವ ನಿಯಮ ಇದೆ.
* ಹಾಗೆಯೇ ಗ್ರಾಹಕನು ಯಾವುದೇ ಅಪ್ಲಿಕೇಶನ್ ಅಥವಾ ಅಗ್ರಿಮೆಂಟ್ ಗಳಿಗೆ ಸಹಿ ಮಾಡುವ ಮುನ್ನ ಅದನ್ನು ಓದಿ ಸಹಿ ಮಾಡಬೇಕು, ಒಮ್ಮೆ ಸಹಿ ಹಾಕಿದ ಮೇಲೆ ಯಾವುದೇ ಕಾರಣಕ್ಕೂ ಗ್ರಾಹಕನಿಗೆ ನೋಟಿಸ್ ಕೊಡದೆ EMI ಕಂತುಗಳನ್ನು ಹೆಚ್ಚು ಮಾಡುವುದಾಗಲಿ ಅಥವಾ ಬಡ್ಡಿ ದರಗಳಲ್ಲಿ ವ್ಯತ್ಯಾಸ ಮಾಡುವುದಾಗಲಿ ಅಥವಾ ಇನ್ಯಾವುದೇ ಬದಲಾವಣೆಗಳನ್ನಾಗಲಿ ಮಾಡುವಂತಿಲ್ಲ ಎನ್ನುವ ನಿಯಮ ಇದೆ.
* ಮತ್ತೊಂದು ಮುಖ್ಯವಾದ ವಿಷಯವೇನೆಂದರೆ, ಯಾವುದೇ ಕಾರಣಕ್ಕೂ ರಿಕವರಿ ಮಾಡುವವರು ಕಚೇರಿ ಅವಧಿ ಬಿಟ್ಟು ಬೇರೆ ಸಮಯದಲ್ಲಿ ಕರೆ ಮಾಡಿ ತೊಂದರೆ ಕೊಡುವಂತಿಲ್ಲ ಎನ್ನುವ ನಿಯಮ ಇದೆ. ಇಷ್ಟೇ ಕರೆಗಳನ್ನು ಮಾಡಬೇಕು ಎನ್ನುವ ನಿಯಮ ಇಲ್ಲದಿದ್ದರೂ ಮಿನಿಮಮ್ ಕರೆಗಳನ್ನು ಮಾಡಬೇಕು ಎಂದಿದೆ.
ಈ ಸುದ್ದಿ ಓದಿ:-Ayushman mitra recruitment: PUC ಪಾಸ್ ಆದವರಿಗೆ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಉದ್ಯೋಗ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 30,000/-
ಆದರೆ ರಿಕವರಿ ಏಜೆಂಟ್ ಗಳು ಗಂಟೆಗೆ 10 ಬಾರಿ ಕರೆ ಮಾಡಿ ತೊಂದರೆ ಕೊಡುತ್ತಿರುತ್ತಾರೆ ಇದು ಮೆಂಟಲ್ ಅರಾಸ್ ಮೆಂಟ್ ಆಗುತ್ತದೆ ಈ ರೀತಿ ಮಾಡುವಂತಿಲ್ಲ ಎಂದು RBI ಸ್ಪಷ್ಟವಾಗಿ ತಿಳಿಸಿದೆ. ಮತ್ತೊಂದು ವಿಚಾರವೇನೆಂದರೆ, ವಾಹನಗಳ ಲೋನ್ ಗಳನ್ನು ರಿಕವರಿ ಮಾಡುವಾಗ ರೈತರು ಬಲಿಷ್ಠರು ಬಂದು ಹಲ್ಲೆ ಮಾಡಿ ಕಿತ್ತುಕೊಂಡು ಹೋಗುವುದನ್ನು ಕೂಡ ನೋಡಿರುತ್ತೇವೆ ಯಾವುದೇ ಕಾರಣಕ್ಕೂ ದೇಹ ಬಲ ಉಪಯೋಗಿಸಿ ಲೋನ್ ರಿಕವರಿ ಮಾಡುವಂತಿಲ್ಲ ಎಂದು ಕೂಡ RBI ತನ್ನ ನಿಯಮದಲ್ಲಿ ತಿಳಿಸಿದೆ.
* ರಿಕವರಿ ಏಜೆಂಟ್ ಗಳ ಮೂಲಕ ಹಣ ವಸೂಲಿ ಮಾಡಿದರೂ ಕೂಡ ರಿಕವರಿ ಏಜೆಂಟ್ ಗಳ ಬಟ್ಟೆ ಭಾಷೆ ನಡವಳಿಕೆ ಸಂಭಾವ್ಯ ರೀತಿಯಲ್ಲಿಯೇ ಇರಬೇಕು. ಕೆಟ್ಟ ಮಾತುಗಳಲ್ಲಿ ನಿಂದಿಸಿ ಮಾತನಾಡುವುದು, ಕೆಟ್ಟದಾಗಿ ಅಶ್ಲೀಲವಾಗಿ ಸಂದೇಶ ಕಳಿಸುವುದು, ಸಾಲ ತೆಗೆದುಕೊಂಡವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಬಂದು ಹೆಂಡತಿ ಮಕ್ಕಳು ಅಥವಾ ವಯಸ್ಸಾದ ತಂದೆ ತಾಯಿಗೆ ಬೆದರಿಕೆ ಹಾಕಿ ಹೋಗುವುದು, ಕಚೇರಿಗಳಿಗೆ ಹೋಗುವುದು, ಸ್ನೇಹಿತರಿಗೆ ಕರೆ ಮಾಡಿ ಸಂಬಂಧಿಕರಿಗೆ ಕರೆ ಮಾಡಿ ತಿಳಿಸುವುದು ಈ ರೀತಿ ತೊಂದರೆ ಕೊಡಬಾರದು ಎನ್ನುವ ನಿಯಮವು ಇದೆ.
ಈ ಸುದ್ದಿ ಓದಿ:-ಕಡಿಮೆ ಖರ್ಚಿನಲ್ಲಿ ಕನಸಿನ ಮನೆ ನಿರ್ಮಾಣಕ್ಕೆ ಇಲ್ಲಿದೆ ಸುಲಭ ಉಪಾಯ.! ಮನೆ ಕಟ್ಟುವ ಆಸೆ ಇರುವವರು ತಪ್ಪದೆ ನೋಡಿ.!
* ಒಂದು ವೇಳೆ ವೆಹಿಕಲ್ ಲೋನ್ ಕಟ್ಟದಿದ್ದ ಸಮಯದಲ್ಲಿ ಲೋನ್ ಕಟ್ಟದೆ ಸೀಸ್ ಮಾಡಿದ್ದಾಗ ಕೊನೆ ಕ್ಷಣದಲ್ಲಿ ಕೂಡ ಆತ ಹಣ ಕಟ್ಟುವುದಕ್ಕೆ ಒಪ್ಪಿಕೊಂಡರೆ ಸೀಸ್ ಮಾಡಿ ಶೆಡ್ ಗೆ ಹಾಕುವಂತಿಲ್ಲ ಎನ್ನುವ ನಿಯಮ ಇದೆ. ಗ್ರಾಹಕರು ಒಪ್ಪಿಕೊಂಡರು ಕೂಡ ಹೆಚ್ಚಿನ ಚಾರ್ಜಸ್ ಗಳನ್ನು ಹಾಕುವ ಉದ್ದೇಶದಿಂದಲೇ ಶೆಡ್ ಗೆ ಬಂದು ತೆಗೆದು ಕೊಂಡು ಹೋಗಿ ಎಂದು ಹೇಳಿ ಶೆಡ್ ಗೆ ಹಾಕುತ್ತಾರೆ ನಂತರ ಅನೇಕ ಚಾರ್ಜಸ್ ಗಳನ್ನು ಹೇಳುತ್ತಾರೆ.
ಆದರೆ RBI ಈರೀತಿ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ, ಇದೇ ರೀತಿಯ ಇನ್ನು ಸಾಕಷ್ಟು ಕಂಡಿಷನ್ ಗಳಿದ್ದು ಅವುಗಳ ಬಗ್ಗೆ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.