ಸರ್ಕಾರದಿಂದ ರೈತರಿಗಾಗಿ (Farmer) ಹಲವಾರು ಯೋಜನೆಗಳ ನಿರೂಪಿಸಿ ಸಹಾಯ ಮಾಡಲಾಗುತ್ತದೆ. ಈ ಬಗೆಯ ಯಾವುದೇ ಯೋಜನೆಗಳ ಉಪಯೋಗ ಪಡೆಯಬೇಕು ಎಂದರೆ ರೈತನು ತನ್ನ ಹೆಸರಿನಲ್ಲಿ ಜಮೀನಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಜಮೀನಿನ ಪಹಣಿ ಪತ್ರವನ್ನು (RTC) ನೀಡಬೇಕು ಮತ್ತು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನಲ್ಲಿರುವಂತೆ (Aadhar Card and Passbook) ಪಹಣಿ ಪತ್ರದಲ್ಲೂ ಕೂಡ ಹೆಸರು ಸರಿಯಾಗಿರಬೇಕು.
ಈ ರೀತಿ ಎಲ್ಲಾ ದಾಖಲೆಗಳು ಸರಿಯಾಗಿದ್ದಾಗ ಮಾತ್ರ ರೈತನಿಗೆ ಆ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಅನುದಾನಗಳನ್ನು ಮತ್ತು ಸಹಾಯಧನವನ್ನು ಪಡೆಯಲು ಸಾಧ್ಯವಾಗುತ್ತದೆ ಇಲ್ಲವಾದಲ್ಲಿ ರೈತನಾಗಿದ್ದರು ಈ ಯೋಜನೆಗಳ ಪ್ರಯೋಜನ ಪಡೆಯಲು ಆಗುವುದಿಲ್ಲ.
ಈ ಸುದ್ದಿ ಓದಿ:- ಸ್ವಂತ ವಾಹನ ಖರೀದಿ ಮಾಡುವವರಿಗೆ ಸರ್ಕಾರದಿಂದ ಸಿಗಲಿದೆ 4 ಲಕ್ಷ ಸಹಾಯಧನ
ಆದರೆ ಅನೇಕ ರೈತರಿಗೆ ಇದರ ಬಗ್ಗೆ ಮಾಹಿತಿ ಇಲ್ಲ, ಆಧಾರ್ ಕಾರ್ಡ್ ನಲ್ಲಿ ಮತ್ತು ಪಹಣಿ ಪತ್ರದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಹೆಸರಿನಲ್ಲಿ ಆಗಿರುವುದರಿಂದ ಸಮಸ್ಯೆ ಪಡುತ್ತಿದ್ದಾರೆ. ಅಂತಹ ರೈತರು ಈಗ ನಾವು ಹೇಳುವ ಈ ವಿಧಾನವನ್ನು ಅನುಸರಿಸಿ ಆಧಾರ್ ಕಾರ್ಡ್ ನಲ್ಲಿರುವಂತೆ ಪಹಣಿ ಪತ್ರದಲ್ಲೂ ಕೂಡ ಹೆಸರನ್ನು ತಿದ್ದುಪಡಿ ಮಾಡಿಸಿಕೊಳ್ಳಬಹುದು ಪ್ರತಿಯೊಬ್ಬ ರೈತನಿಗೂ ಅನುಕೂಲ ಮಾಡಿಕೊಡುವ ಮಾಹಿತಿ ಇದಾಗಿದ್ದು, ತಪ್ಪದೇ ಇದನ್ನು ಹೆಚ್ಚಿನ ರೈತರ ಜೊತೆ ಶೇರ್ ಮಾಡಿ.
ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಿಸುವುದಕ್ಕೆ ಈ ದಾಖಲೆಗಳ ಅವಶ್ಯಕತೆ ಇರುತ್ತದೆ :-
* ಆಧಾರ್ ಕಾರ್ಡ್
* 20ರೂ. ಸ್ಟ್ಯಾಂಪ್ ಪೇಪರ್ ನಲ್ಲಿ ಹೆಸರು ತಿದ್ದುಪಡಿ ಕುರಿತು ಡೆಕ್ಲರೇಷನ್ ಕೊಡಬೇಕಾಗುತ್ತದೆ ( ಹೆಸರು ತಿದ್ದುಪಡಿಗೆ ಕಾರಣ ಮತ್ತು ಅದರ ವಿವರಗಳನ್ನು ತಹಶೀಲ್ದಾರ್ ರವರಿಗೆ ಸ್ವಯಂ ಡಿಕ್ಲರೇಷನ್ ಕೊಟ್ಟು ಸಹಿ ಮಾಡುವುದು)
* ಮುಖ್ಯ ದಾಖಲೆಯಾಗಿ ಜಮೀನಿನ ಪಹಣಿ ಪತ್ರ ಬೇಕಿರುತ್ತದೆ
* ಈ ಮೇಲೆ ತಿಳಿಸಿದ ದಾಖಲೆಗಳೊಂದಿಗೆ ತಿದ್ದುಪಡಿಗಾಗಿ ಒಂದು ಅರ್ಜಿಯನ್ನು ಕೂಡ ಬರೆಯಬೇಕು.
ತಿದ್ದುಪಡಿ ಪ್ರಕ್ರಿಯೆ ಈ ರೀತಿ ನಡೆಯುತ್ತದೆ:-
* ತಿದ್ದುಪಡಿಗೆ ಕಾರಣ ಹಾಗೂ ವಿವರಗಳನ್ನು ಒಳಗೊಂಡ ಅರ್ಜಿಯನ್ನು ಬರೆದು ಅದಕ್ಕೆ ಈ ಮೇಲೆ ತಿಳಿಸಿದ ಪೂರಕ ದಾಖಲೆಗಳನ್ನು ಲಗತ್ತಿಸಿ ನಿಮ್ಮ ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಇರುವ ಅವಕ (Inward) ವಿಭಾಗಕ್ಕೆ ಕೊಡಬೇಕು.
ಈ ಸುದ್ದಿ ಓದಿ:- ಬ್ಯಾಂಕ್ ನಲ್ಲಿ ಸಾಲ ಮಾಡಿದವರಿಗೆ RBI ನಿಂದ ಗುಡ್ ನ್ಯೂಸ್.! ಇಂದಿನಿಂದ ಹೊಸ ರೂಲ್ಸ್.!
* ನೀವು ಕೊಟ್ಟಿರುವ ದಾಖಲೆಗಳ ಕಡತವು ಭೂಮಿ ಕೇಂದ್ರದ ಮೂಲಕ ಎಂಟ್ರಿ ಆಗಿ, ನೀವು ಕೊಟ್ಟಿರುವ ದಾಖಲೆಗಳು ಸರಿಯಾಗಿತ್ತು ಮಾಹಿತಿಯಲ್ಲಿ ಸ್ಪಷ್ಟತೆ ಇದ್ದರೆ ಅವುಗಳ ಪರಿಶೀಲನೆ ನಡೆದು ಮುಂದಿನ 15 ದಿನಗಳ ಒಳಗೆ ನಿಮ್ಮ ಹೆಸರು ಆಧಾರ್ ಕಾರ್ಡ್ ನಲ್ಲಿ ಯಾವ ರೀತಿ ಇರುತ್ತದೆ ಅದೇ ರೀತಿ ಪಹಣಿ ಪತ್ರದಲ್ಲಿ ಕೂಡ ಬದಲಾವಣೆ ಆಗಿರುತ್ತದೆ.
ತಿದ್ದುಪಡಿ ಕುರಿತಾದ ಕೆಲವು ಮುಖ್ಯ ಅಂಶಗಳು:-
* ಸಣ್ಣ ಪುಟ್ಟ ತಿದ್ದುಪಡಿಗಳು ಅಂದರೆ ಹೆಸರಿನಲ್ಲಿ ಲಿಪ್ಯಂತಕರದೋಷ (Spelling Mistakes) ಇದ್ದರೆ ಮಾತ್ರ ತಿದ್ದುಪಡಿ ಮಾಡುತ್ತಾರೆ
* ಪೂರ್ಣ ಹೆಸರು ಬದಲಾವಣೆ ಮಾಡುವುದಾಗಲಿ ಅಥವಾ ಹೊಸ ಹೆಸರು ಸೇರಿಸುವುದಾಗಲಿ ಮಾಡುವುದಿಲ್ಲ
* ಪೂರ್ತಿ ಹೆಸರು ಬದಲಾವಣೆ ಅಥವಾ ಪೂರ್ತಿ ಹೆಸರು ತಿದ್ದುಪಡಿ ಮಾಡಬೇಕಿದ್ದರೆ ನೋಂದಣಿ (Register) ಮೂಲಕ ಮಾಡಬಹುದು.
ಈ ಸುದ್ದಿ ಓದಿ:- ಗ್ರಾಮ ಪಂಚಾಯಿತಿಯಲ್ಲಿ ಭರ್ಜರಿ ನೇಮಕಾತಿ, ಬರೋಬ್ಬರಿ 25,000 ಜನ ಮಿತ್ರ ಹುದ್ದೆಗಳು.! ಆಸಕ್ತರು ಅರ್ಜಿ ಸಲ್ಲಿಸಿ.!
* ಈ ಕುರಿತಾದ ಯಾವುದೇ ಹೆಚ್ಚಿನ ಮಾಹಿತಿ ಬೇಕಿದ್ದರೆ ಅಥವಾ ಗೊಂದಲಗಳ ಪರಿಹಾರಕ್ಕಾಗಿ ನಿಮ್ಮ ತಾಲೂಕಿನ ಉಪ ನೋಂದಣಿ ಕಚೇರಿ ಅಥವಾ ತಹಶೀಲ್ದಾರ್ ಕಚೇರಿಗೆ ಭೇಟಿ ಕೊಟ್ಟು ಮಾಹಿತಿ ಪಡೆಯಬಹುದು.
* ನಿಮ್ಮ ಜಮೀನಿಗೆ ಸಂಬಂಧಿಸಿದ ಎಲ್ಲ ವಹಿವಾಟುಗಳ ಮಾಹಿತಿಯನ್ನು ನೀವು ಸುಲಭವಾಗಿ ತಿಳಿದುಕೊಳ್ಳಬೇಕು ಎಂದರೆ ನಿಮ್ಮ ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿರುವ ಭೂಮಿ ಕೇಂದ್ರಕ್ಕೆ ಹೋಗಿ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್ ನಂಬರ್ ನ್ನು ನಿಮ್ಮ ಪಹಣಿ ಪತ್ರಕ್ಕೂ (RTC) ಕೂಡ ಲಿಂಕ್ ಮಾಡಿಸಿ.
ಈ ಸುದ್ದಿ ಓದಿ:- ಯಾವುದೇ ಗ್ಯಾರಂಟಿ ಇಲ್ಲದೆ ಸ್ವಂತ ಉದ್ಯೋಗ ಮಾಡಲು ಬಡ್ಡಿ ಇಲ್ಲದೆ 2 ಲಕ್ಷ ಸಾಲ.! ಕೆಂದ್ರ ಸರ್ಕಾರದಿಂದ ಘೋಷಣೆ.!
* ಒಂದು ವೇಳೆ ಆಧಾರ್ ಕಾರ್ಡ್ ನಲ್ಲಿ ಇರುವಂತೆ ಪಹಣಿ ಪತ್ರದಲ್ಲಿ ಹೆಸರು ಬದಲಾಯಿಸುವುದು ಕಷ್ಟದ ಕೆಲಸ ಎನಿಸಿದರೆ ನೀವು ಪಹಣಿ ಪತ್ರದಲ್ಲಿ ಇರುವಂತೆ ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಾಯಿಸಿಕೊಳ್ಳಬಹುದು. ಇದು ಶೀಘ್ರವಾಗಿ ಮತ್ತು ಸರಳವಾಗಿ ಆಗುತ್ತದೆ.