ಜನಸಾಮಾನ್ಯರಿಗೆ ಆಸ್ತಿಯ ವಿಚಾರವಾಗಿ ಅನೇಕ ಪ್ರಶ್ನೆಗಳು ಮತ್ತು ಗೊಂದಲಗಳು ಇರುತ್ತವೆ, ಅದರಲ್ಲೂ ನಮ್ಮ ದೇಶದಲ್ಲಿ ಆಸ್ತಿ ಕಾರಣಕ್ಕಾಗಿ ತಂದೆ-ಮಕ್ಕಳು, ಒಡಹುಟ್ಟಿದವರು ಕಿತ್ತಾಡಿಕೊಂಡು ಕೋರ್ಟು ಕಛೇರಿ ಅಲೆಯುತ್ತಿರುವ ಸಾಕಷ್ಟು ಉದಾಹರಣೆಗಳನ್ನು ನೋಡುತ್ತಿದ್ದೇವೆ. ವಾಸ್ತವವಾಗಿ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಅನೇಕ ಬಾರಿ ಕಾನೂನಿನಲ್ಲಿ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ ಆದರೆ ಕಾನೂನಿನ ಕುರಿತಾಗಿ ಜನರಿಗೆ ಮಾಹಿತಿಯ ಕೊರತೆ ಇರುವುದರಿಂದ ಆಸ್ತಿ ಸಂಬಂಧಿತ ವಿವಾದಗಳು ಉದ್ಭವಿಸುತ್ತಲೇ ಇವೆ.
ಈ ರೀತಿಯ ಅನೇಕ ಪ್ರಶ್ನೆಗಳಲ್ಲಿ ಸೊಸೆಗೆ ಅತ್ತೆ-ಮಾವನ ಆಸ್ತಿಯಲ್ಲಿ ಸಿಗುವ ಪಾಲಿನ ಕುರಿತು ಸೊಸೆಯ ಹಕ್ಕುಗಳು ಯಾವುವು? ವಿಶೇಷವಾಗಿ ಅತ್ತೆಯ ಮನೆ ಮತ್ತು ಆಸ್ತಿಯಲ್ಲಿ ಅವಳಿಗೆ ಎಷ್ಟು ಹಕ್ಕಿದೆ ಎನ್ನುವುದು ಕೂಡ ಸೇರಿದೆ ಇದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
2005ರಲ್ಲಿ ತಿದ್ದುಪಡಿಯಾದ ಹಿಂದೂ ಉತ್ತರಾಧಿತ್ವದ ಕಾಯಿದೆ ಪ್ರಕಾರ ಒಬ್ಬ ತಂದೆಯ ಹೆಣ್ಣು ಮಗಳು ಕೂಡ ಗಂಡು ಮಕ್ಕಳಷ್ಟೇ ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ಹೊಂದಿರುತ್ತಾಳೆ. ಮತ್ತು ಮದುವೆಯಾದ ನಂತರ ಆ ಹೆಣ್ಣಿನ ಹಕ್ಕುಗಳಲ್ಲಿ ವ್ಯತ್ಯಾಸವಾಗುತ್ತದೆ.
ಈ ಸುದ್ದಿ ಓದಿ:- ಕಾರ್ಮಿಕ ಕಾರ್ಡ್ ಇದ್ದವರಿಗೆ ಸಿಗಲಿದೆ 60 ಸಾವಿರ.!
ಇದರ ಬಗ್ಗೆ ಭಾರತೀಯ ಕಾನೂನು ಏನು ಹೇಳುತ್ತದೆ ಎಂದರೆ ಭದ್ರತಾ ಕಾಯ್ದೆಯು ಮಹಿಳೆಗೆ ತನ್ನ ಪತಿಯೊಂದಿಗೆ ಪತಿಯ ಪೋಷಕರ ಮನೆಯಲ್ಲಿ ಉಳಿಯುವ ಹಕ್ಕನ್ನು ನೀಡಿದೆ, ಈ ಹಕ್ಕು ಮಹಿಳೆಗೆ ಕಾಳಜಿಯ ಹಕ್ಕು ಹಾಗೂ ಮಾನಸಿಕ ಮತ್ತು ದೈಹಿಕ ಹಿಂಸೆಯಿಂದ ರಕ್ಷಣೆ ನೀಡುತ್ತದೆ.
ಆದರೆ ಪತಿ ಮತ್ತು ಅತ್ತೆಯ ಆಸ್ತಿಯಲ್ಲಿ ಹೆಂಡತಿಯ ಹಕ್ಕುಗಳ ಬಗ್ಗೆ ಇರುವ ಕಾನೂನು ನಿಬಂಧನೆ ಏನೆಂದರೆ ಮಹಿಳೆಯನ್ನು ಮದುವೆಯಾಗಿರುವ ವ್ಯಕ್ತಿಯು ತನ್ನ ಸ್ವಂತ ದುಡಿಮೆಯಿಂದ ಸಂಪಾದಿಸಿರುವ ಆಸ್ತಿಯ ಸಂಪೂರ್ಣ ಮಾಲೀಕತ್ವ ಆತನೇ ಹೊಂದಿರುತ್ತಾನೆ, ಇದರಲ್ಲಿ ಪಾಲು ಕೇಳಲು ಪೋಷಕರಿಗೆ ಆಗಲಿ ಹೆಂಡತಿ ಮಕ್ಕಳಿಗಾಗಿ ಕಾನೂನಿನಲ್ಲಿ ಅವಕಾಶ ಇರುವುದಿಲ್ಲ.
ಭಾರತೀಯ ಕಾನೂನಿನ ಪ್ರಕಾರ ಗಂಡನ ಮನೆಯಲ್ಲಿ ವಾಸಿಸಲು ಹೆಣ್ಣಿಗೆ ಅವಕಾಶ ಇದ್ದರೂ ಕೂಡ ಆಕೆ ಮಾವನ ಅಥವಾ ಅತ್ತೆಯ ಹೆಸರಿನಲ್ಲಿ ಇರುವ ಆಸ್ತಿಯ ಮೇಲೂ ಕೂಡ ಯಾವುದೇ ರೀತಿಯ ಹಕ್ಕು ಇರುವುದಿಲ್ಲ. ಗಂಡನ ಮ’ರ’ಣದ ನಂತರ ಆತನ ಸ್ವಯಾರ್ಜಿತ ಆಸ್ತಿಯಲ್ಲಿ ಆಕೆಗೆ ಪಾಲು ಸಿಗಬಹುದೇ ಹೊರತು ಅತ್ತೆ ಅಥವಾ ಮಾವನ ಆಸ್ತಿಯಲ್ಲಿ ಆಕೆಗೆ ಪಾಲು ಪಡೆದುಕೊಳ್ಳುವ ಹಕ್ಕು ಇರುವುದಿಲ್ಲ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಹಣ & ಪೆಂಡಿಂಗ್ ಇರುವ ಎಲ್ಲಾ ಹಣ ಈ ದಿನ ನಿಮ್ಮ ಖಾತೆಗೆ ಜಮೆ ಆಗುತ್ತೆ.!
ಆಕೆ ಕಾನೂನಾತ್ಮಕವಾಗಿ ಮಾವ ಅಥವಾ ಅತ್ತೆಯ ಆಸ್ತಿಯಲ್ಲಿ ಪಾಲು ಬೇಕು ಎಂದು ಪ್ರಶ್ನಿಸುವಂತಿಲ್ಲ. ಒಂದು ವೇಳೆ ಅತ್ತೆ ಅಥವಾ ಮಾವ ಮ’ರ’ಣ ಹೊಂದಿದ ನಂತರ ಅವರ ಆಸ್ತಿ ಸಹಜವಾಗಿಯೇ ಮಗನಿಗೆ ಸೇರುತ್ತದೆ. ಅಂತಹ ಸಂದರ್ಭಗಳಲ್ಲಿ ಗಂಡನಿಂದ ಆತನ ಹೆಂಡತಿಗೆ ಬರಬಹುದು ಹೀಗೆ ಸೊಸೆಯು ಮಾವ ಅಥವಾ ಅತ್ತೆ ಆಸ್ತಿಯಲ್ಲಿ ಪಾಲು ಕೇಳುವಂತೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು.
ಇಂತಹ ಕಾನೂನಿನಿಂದ ಅತ್ತೆ ಮಾವನಿಗೆ ಕೆಲವೊಂದು ಸಂದರ್ಭದಲ್ಲಿ ಅನ್ಯಾಯವಾಗುವುದು ತಪ್ಪುತ್ತದೆ ನಿಜ ಆದರೆ ಅಂತೆಯೇ ಇನ್ನಷ್ಟು ಪ್ರಕರಣಗಳಲ್ಲಿ ಸೊಸೆಗೆ ಮೋ’ಸವಾಗುತ್ತದೆ. ಆದರಿಲ್ಲಿ ಮದುವೆಯಾದ ಹೆಣ್ಣು ಮಕ್ಕಳಿಗೆ ಇರುವ ಒಂದೇ ಒಂದು ಬೆನಿಫಿಟ್ ಏನೆಂದರೆ ಮದುವೆಯಾದ ಬಳಿಕ ಅಥವಾ ಮದುವೆಯ ಸಂದರ್ಭದಲ್ಲಿ ಯಾರೇ ದುಬಾರಿ ಬೆಲೆಯ ಗಿಫ್ಟ್ ನೀಡಿದ್ದರೆ ಅದನ್ನು ಆಕೆ ಹಿಂಪಡೆಯುವ ಹಕ್ಕನ್ನು ಮಾತ್ರ ಹೊಂದಿರುತ್ತಾಳೆ.
ವಿ’ಚ್ಛೇ’ದ’ನದ ಸಂದರ್ಭದಲ್ಲಿಯೂ ಕೂಡ ಆಕೆ ಈ ಎಲ್ಲಾ ವಸ್ತುಗಳನ್ನು ಹಿಂಪಡೆಯಲು ಅರ್ಹಳಾಗಿರುತ್ತಾಳೆ. ಹಾಗಾಗಿ ಹೆಣ್ಣು ಮಕ್ಕಳು ಮದುವೆಯ ಸಂದರ್ಭದಲ್ಲಿ ತಮಗೆ ಸಿಕ್ಕ ಗಿಫ್ಟ್ ಅಥವಾ ಚಿನ್ನಾಭರಣಗಳ ಬಗ್ಗೆ ಸರಿಯಾಗಿ ಮಾಹಿತಿ ಹೊಂದಿರುವುದು ಒಳ್ಳೆಯದು.