ಮನೆ ಎಂದ ಮೇಲೆ ಪ್ರತಿಯೊಂದು ವಿಷಯವು ಕೂಡ ಬಹಳ ಇಂಪಾರ್ಟೆಂಟ್. ಸ್ವಿಚ್ ಬೋರ್ಡ್ ಎನ್ನುವುದು ಎಷ್ಟು ಚಿಕ್ಕ ವಸ್ತು ಹಾಗೇ ಅತಿ ದೊಡ್ಡ ಪ್ರಾಮುಖ್ಯತೆ ಕೂಡ. ಹಾಗಾಗಿ ಈ ವಿಚಾರದ ಬಗ್ಗೆ ಇಂದಿನ ಲೇಖನದಲ್ಲಿ ಮಾಹಿತಿ ತಿಳಿಸಲು ಬಯಸುತ್ತಿದ್ದೇವೆ. ಮನೆಯಲ್ಲಿ ಸ್ವಿಚ್ ಬೋರ್ಡ್ ಎನ್ನುವುದು ಎಲ್ಲೆಲ್ಲಿ ಬರಬೇಕು ಎನ್ನುವುದು ಮನೆ ಕಟ್ಟುವ ಸಮಯದಲ್ಲಿ ಪ್ಲಾನ್ ಮಾಡಬೇಕು.
ಎಕ್ಸ್ಪರ್ಟ್ ಕನ್ಸ್ಟ್ರಕ್ಟರ್ ಆದರೆ ಅವರೇ ಗೈಡ್ ಮಾಡುತ್ತಾರೆ ಇಲ್ಲವಾದಲ್ಲಿ ನೀವು ನಿಮ್ಮ ಮನೆಯಲ್ಲಿ ಇರುವ ಎಲೆಕ್ಟ್ರಿಕಲ್ ಅಪ್ಲೈಯನ್ಸಸ್ ಗಳನ್ನು ಎಲ್ಲೆಲ್ಲಿ ಹಾಕ ಬಯಸುತ್ತೀರಾ? ಎನ್ನುವುದರ ಮೇಲೆ ಮತ್ತು ಮುಂದೆ ಏನನ್ನು ಖರೀದಿಸಲು ಬಯಸುತ್ತೀರಾ? ಎನ್ನುವುದನ್ನು ಪ್ಲಾನ್ ಮಾಡಿಕೊಂಡು ಮನೆ ಕಟ್ಟುವ ಸಮಯದಲ್ಲಿ ಜಾಗೃತೆ ವಹಿಸಿ ಪಾಯಿಂಟ್ ಗಳನ್ನು ಮಾಡಿಸಿಕೊಳ್ಳಬೇಕು.
ಈ ಸುದ್ದಿ ಓದಿ:- ಕಂದಾಯ ಇಲಾಖೆ ನೇಮಕಾತಿ, PUC ಆಗಿದ್ರೆ ಸಾಕು ಅರ್ಜಿ ಸಲ್ಲಿಸಿ ವೇತನ 42,000/-
ಪಾರ್ಕಿಂಗ್ ನಲ್ಲಿ ಎಲೆಕ್ಟ್ರಿಕಲ್ ಕಾರ್ ಸ್ಕೂಟರ್ ಇದ್ದರೆ ಅಥವಾ ಮುಂದೆ ಖರೀದಿಸುವ ಪ್ಲಾನ್ ಇದ್ದರೆ ಒಂದು ಪಾಯಿಂಟ್ ಬೇಕು. ಸಿಸಿಟಿವಿ ಕ್ಯಾಮೆರಾ ಮುಂದೆ ಹಾಕಿಸುವುದಾದರೂ ಕೂಡ ಪಾಯಿಂಟ್ ಬೇಕು, ಎಸಿ ಎಲ್ಲಿ ಸೆಟ್ ಮಾಡ್ತೀವಿ, UPS ಇನ್ಸ್ಟಾಲ್, ಅಡುಗೆ ಮನೆಯಲ್ಲಿ ಫ್ರಿಜ್ ಓವನ್ ಗ್ರೈಂಡರ್ ಇಡುವುದಾದರೆ ಅಲ್ಲಲ್ಲಿ, ಬೆಡ್ರೂಮ್ ದೇವರಕೋಣೆ ಹೀಗೆ ಎಲ್ಲೆಲ್ಲಿ ಯಾವುದೆಲ್ಲಾ ಹಾಕಬಯಸುತ್ತೇವೆ ಎನ್ನುವುದರ ಮೇಲೆ ಇದು ಡಿಸೈಡ್ ಆಗುತ್ತದೆ.
POP ಮಾಡಿಸುವುದು ಸ್ಪಾಟ್ ಲೈಟ್ ಹಾಕಿಸುವ ಪ್ಲಾನ್ ಇದ್ದರೆ ಎಲ್ಲವನ್ನು ಕೂಡ ಮನೆ ಕಟ್ಟುವ ಸಮಯದಲ್ಲಿ ಹೇಳಿರಬೇಕು. ಈ ರೀತಿ ಮುಂಚೆ ಎಲ್ಲವನ್ನು ಪ್ಲಾನ್ ಮಾಡಿದರೆ ಪದೇ ಪದೇ ಇದನ್ನು ಗ್ರೌಂಡ್ ವರ್ಕ್ ಮಾಡುವುದು ಪ್ಯಾಚ್ ಮಾಡುವುದು ತಪ್ಪುತ್ತದೆ ಅದಕ್ಕೆ ಕೊಡಬೇಕಾದ ಸಮಯ ಹಾಗೂ ಅನಗತ್ಯ ಖರ್ಚು ಉಳಿಯುತ್ತದೆ.
ಈ ಸುದ್ದಿ ಓದಿ:-ಲೋಕಸಭೆ ಚುನಾವಣೆ ಹಿನ್ನೆಲೆ LPG ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ವರ್ಷಕ್ಕೆ 3 ಸಿಲಿಂಡರ್ ಉಚಿತ.!
ಕೆಲವೊಂದು ಮನೆ ಮೋಲ್ಡ್ ಮಾಡುವ ಸಮಯದಲ್ಲಿ ಕೆಲವೊಂದನ್ನು ವುಡ್ ಗ್ರೂಮ್ ಮಾಡಿ ಹಾಕಲಾಗುತ್ತದೆ. ಎಲ್ಲಿ ಎಷ್ಟು ಆಂಪ್ಸ್ ಸ್ವಿಚ್ ಬೋರ್ಡ್ ಹಾಕಬೇಕು ಎನ್ನುವುದು ಕೂಡ ಪ್ಲಾನಿಂಗ್ ಇರಬೇಕು. ಪಾಯಿಂಟ್ ಎಷ್ಟು ಇಂಪಾರ್ಟೆಂಟ್ ವೈರಿಂಗ್ ಕೂಡ ಅಷ್ಟೇ ಇಂಪಾರ್ಟೆಂಟ್ ವಿಷಯ.
ಮೊದಲೇ ಪಾಯಿಂಟ್ ಗಳನ್ನು ಪ್ಲಾನ್ ಮಾಡಿದರೆ ನೀಟಾಗಿ ವೈರ್ ಗಳು ಫಿನಿಶಿಂಗ್ ಆದಾಗ ಹೊರಗೆ ಕಾಣದಂತೆ ಕವರ್ ಮಾಡಬಹುದು. ಹೈ ವೋಲ್ಟೇಜ್ ಪಾಯಿಂಟ್ ಹಾಕಿಸುವ ಕಡೆ ಕ್ಲೋಸ್ ಸಾಕೆಟ್ ವ್ಯವಸ್ಥೆ ಇರುವ ರೀತಿ ಬೋರ್ಡ್ ಹಾಕಿಸುವುದು ಹೆಚ್ಚು ಸೇಫ್ಟಿ. ವಯರ್ ರೆಸಿಸ್ಟೆನ್ಸ್ ಕೂಡ ಅಷ್ಟೇ ಮುಖ್ಯವಾದ ವಿಷಯ, ಕಡಿಮೆ ರೆಸಿಸ್ಟೆನ್ಸ್ ಪವರ್ ಇರುವ ವಯರ್ ಬಳಸಿ ಹೆಚ್ಚಿನ ಪವರ್ ಇರುವ ಮೆಟೀರಿಯಲ್ ಬಳಸಿದರೆ ಬರ್ನ್ ಆಗುವ ಸಾಧ್ಯತೆಗಳು ಇರುತ್ತದೆ, ಕೆಪಾಸಿಟಿ ಎನ್ನುವುದು ಇದರಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ.
ಈ ಸುದ್ದಿ ಓದಿ:-ಬಡವರಿಗಾಗಿಯೇ ತಯಾರಾದ ಹೊಸ ಎಲೆಕ್ಟ್ರಿಕಲ್ ಸ್ಕೂಟರ್ ಬೆಲೆ ಕೇವಲ ರೂ.36,990 ಮಾತ್ರ.!
ಇನ್ನು ಇವುಗಳಿಗೆ ತಗಲುವ ಖರ್ಚುಗಳ ಬಗ್ಗೆ ಹೇಳುವುದಾದರೆ ಇದು ಕಲರ್ ಮೇಲೆ ಡಿಪೆಂಡ್ ಆಗುವುದಿಲ್ಲ. ವೈರಿಂಗ್ ವಿಚಾರದಲ್ಲಿ ಹೇಳುವುದಾದರೆ ಗೋಲ್ಡ್ ಕವರಿಂಗ್ ಇರುವ ವೈರ್ ಗಳಿಗೆ ಹೆಚ್ಚು ರೇಟ್ ಆಗುತ್ತದೆ ಮಾಡೆಲ್ ಗಳು ಕಂಪನಿಗಳ ಮೇಲು ಕೂಡ ಇದು ನಿರ್ಧಾರ ಆಗುತ್ತದೆ.
ಆದರೆ ಸ್ವಿಚ್ ಬೋರ್ಡ್ ಮತ್ತು ಸ್ವಿಚ್ ಗಳ ಬಗ್ಗೆ ಹೇಳುವುದಾದರೆ ಇವುಗಳು ಮಾತ್ರ ಬಣ್ಣದ ಮೇಲೆ ನಿರ್ಧಾರ ಆಗುತ್ತದೆ. ಕಪ್ಪು ಬಣ್ಣದ ಸ್ವಿಚ್ ಬೋರ್ಡ್ ಹಾಗೂ ಸ್ವಿಚ್ ಗಳಿಗೆ ಬಿಳಿ ಬಣ್ಣದಕ್ಕಿಂತ ಹೆಚ್ಚು ಬೆಲೆ ಗೋಲ್ಡ್ ಮತ್ತು ಸಿಲ್ವರ್ ಬಣ್ಣದವುಗಳಿಗೆ ಇನ್ನು ಹೆಚ್ಚಿನ ಬೆಲೆ ಇರುತ್ತದೆ. ಇವುಗಳ ಬಗ್ಗೆ ಇನ್ನೂ ಡೀಟೇಲ್ ಆಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.