ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆ ಕಳೆದು ಹೋದರೆ ಹೊಸ ನಂಬರ್ ಸೇರಿಸುವುದು ಹೇಗೆ.? ನಿಮ್ಮ ಮೊಬೈಲ್ ಮೂಲಕವೇ ನಂಬರ್ ಬದಲಾವಣೆ ಮಾಡುವ ವಿಧಾನ.!

 

WhatsApp Group Join Now
Telegram Group Join Now

ಆಧಾರ್ ಕಾರ್ಡ್ (Aadhar Card) ಎನ್ನುವುದು ಈಗ ಎಷ್ಟು ಅಗತ್ಯ ದಾಖಲೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದೇ ಇದೆ. ಖಾಸಗಿ ವಲಯದ, ಸರ್ಕಾರಿ ಕಛೇರಿಗಳ ಅಥವಾ ಬ್ಯಾಂಕಿಂಗ್ ಕ್ಷೇತ್ರದ ಕೆಲಸವೇ ಆಗಿರಲಿ ಎಲ್ಲದಕ್ಕೂ ಕೂಡ ಆಧಾರ್ ಕಾರ್ಡನ್ನು ದಾಖಲೆಯಾಗಿ ನೀಡಲೇಬೇಕಾಗಿದೆ. ಆಧಾರ್ ಕಾರ್ಡ್ ಅಲ್ಲಿರುವ ಅಷ್ಟು ಮಾಹಿತಿ ಜೊತೆಗೆ ಮೊಬೈಲ್ ಸಂಖ್ಯೆ (Aadhar linked mobile number) ಕೂಡ ಅಷ್ಟೇ ಪ್ರಮುಖವಾದ ಒಂದು ಮಾಹಿತಿ.

ಯಾಕೆಂದರೆ, ನೀವು ಯಾವುದೇ ಒಂದು ಅಪ್ಲಿಕೇಶನ್ ಹಾಕಬೇಕಿದ್ದರೂ ಅಥವಾ ಮನವಿ ಸಲ್ಲಿಸಬೇಕಿದ್ದರೂ ಆಧಾರ್ ಕಾರ್ಡ್ ಅಲ್ಲಿರುವ ಮೊಬೈಲ್ ಸಂಖ್ಯೆ ಮೂಲಕವೇ ಸಲ್ಲಿಸಬೇಕು. ಆಧಾರ್ ಸಂಖ್ಯೆಗೆ ಇರುವಷ್ಟೇ ಪ್ರಾಮುಖ್ಯತೆ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೂ ಇದೆ ಎಂದೇ ಹೇಳಬಹುದು.

ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಉಚಿತವಾಗಿ ಸಿಗಲಿದೆ ಹೊಸ ಸೈಕಲ್, ಇದೊಂದು ದಾಖಲೆ ಜೊತೆ ಅರ್ಜಿ ಸಲ್ಲಿಸಿ ಸಾಕು.!

ಈಗ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯು (Gruhalakshmi Scheme) ಕೂಡ ಅರ್ಜಿ ಹಾಕಲು OTP ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುತ್ತದೆ. ಹಾಗಾಗಿ ಆಧಾರ್ ಕಾರ್ಡ್ ಅಲ್ಲಿರುವ ಮೊಬೈಲ್ ಸಂಖ್ಯೆ ಕಳೆದುಹೋಗದಂತೆ ನೋಡಿಕೊಳ್ಳಬೇಕಾದದ್ದು ಜವಾಬ್ದಾರಿತನ ಆದರೆ ಕೆಲವೊಮ್ಮೆ ಆ ಮೊಬೈಲ್ ಸಂಖ್ಯೆ ಕಳೆದು ಹೋಗುತ್ತದೆ ಅಥವಾ ನಾವು ಯಾವುದಾದರೂ ಹೊಸ ಸಿಮ್ ಖರೀದಿಸಿದಾಗ ಹಳೆ ನಂಬರ್ ಬದಲಾಗಿ ಹೊಸ ನಂಬರ್ ಅನ್ನು ಆಧಾರ್ ಕಾರ್ಡ್ ಗೆ ಅಪ್ಡೇಟ್ ಮಾಡಿಸಬೇಕಾಗುತ್ತದೆ.

ಇಂತಹ ಸಮಯ ಬಂದಾಗ ಇದಕ್ಕೆ ಆನ್ಲೈನ್ ನಲ್ಲಿ ಅವಕಾಶ ಸಿಗುವುದಿಲ್ಲ ನೀವು ನೇರವಾಗಿ ಆಧಾರ್ ಕೇಂದ್ರಗಳಿಗೆ (Aadhar centre) ಹೋಗಿ ಆಧಾರ್ ಎನ್ರೋಲ್ಮೆಂಟ್ ಅಥವಾ ಕಲೆಕ್ಷನ್ ಅಪ್ಡೇಟ್ ಫಾರ್ಮ್ (Aadhar enrollment / correction update form) ಭರ್ತಿ ಮಾಡಿ ನಿಮ್ಮ ಹೊಸ ಸಂಖ್ಯೆಯನ್ನು ಆಧಾರ್ ಗೆ ಅಪ್ಡೇಟ್ ಮಾಡಿಸಬೇಕು.

ಕರ್ನಾಟಕ ಬ್ಯಾಂಕ್ ನೇಮಕಾತಿ, ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!

ಆದರೆ ನೀವು UIDAI ನ ಅಧಿಕೃತ ವೆಬ್ ಸೈಟ್ ಗೆ ಹೋಗಿ ಅರ್ಜಿ ಶುಲ್ಕ ಪಾವತಿ ಮಾಡಿ ಮೊಬೈಲ್ ಸಂಖ್ಯೆ ಬದಲಾಯಿಸುವುದಕ್ಕೆ ನೋಂದಣಿ ಮಾಡಿಸಿಕೊಳ್ಳಬಹುದು. ಅದಕ್ಕಾಗಿ ಯಾವ ಹಂತಗಳನ್ನು ಪೂರೈಸಬೇಕು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

● ಗೂಗಲ್ ಮೂಲಕ UADAI ಎಂದು ಸರ್ಚ್ ಮಾಡಿ, uidai.gov.in ವೆಬ್ ಪೋರ್ಟಲ್ ಲಿಂಕ್ ಕ್ಲಿಕ್ ಮಾಡಿ.
● ನೀವು ಅಪ್ಡೇಟ್ ಮಾಡಲು ಬದಲಾಯಿಸಬೇಕಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನಂತರ ಕ್ಯಾಪ್ಚಾವನ್ನು ಟೈಪ್ ಮಾಡಿ.
● ಈಗ ಆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ
ಗೆ Send OTP ಆಯ್ಕೆ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜಮೀನಿನ ಪಹಣಿ ಪತ್ರ ತಿದ್ದುಪಡಿ ಮಾಡುವುದು ಹೇಗೆ.? ಎಲ್ಲಾ ರೈತರು ತಿಳಿದುಕೊಳ್ಳ ಬೇಕಾದ ಪ್ರಮುಖ ಮಾಹಿತಿ ಇದು.!

● ನಿಮಗೆ ಬಂದ OTP ಯನ್ನು ನಮೂದಿಸಿ
● ಹೊಸ ಪುಟ ಓಪನ್ ಆಗುತ್ತದೆ. ಅದರಲ್ಲಿ ಆನ್‌ಲೈನ್ ಆಧಾರ್ ಸೇವೆಗಳು ಎಂಬ ಡ್ರಾಪ್-ಡೌನ್ ಆಯ್ಕೆ ಕಾಣುತ್ತದೆ.
● ನೀವು ಅಪ್ಡೇಟ್ ಮಾಡ ಬಯಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಲು ಇರುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

● ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ ಹೊಸ ಪುಟ ತೆರೆಯುತ್ತದೆ, ಅಲ್ಲಿರುವ ಕ್ಯಾಪ್ಚಾವನ್ನು ನಮೂದಿಸಿ
● ನಿಮ್ಮ ಮೊಬೈಲ್ ಸಂಖ್ಯೆಯು OTP ಯನ್ನು ಸ್ವೀಕರಿಸುತ್ತದೆ. ನೀವು OTP ಅನ್ನು ದೃಢೀಕರಿಸಿದ ನಂತರ Save and Continue ಮೇಲೆ ಕ್ಲಿಕ್ ಮಾಡಿ.

ಆಗಸ್ಟ್ ತಿಂಗಳಿನಲ್ಲಿ ಗೃಹಜ್ಯೋತಿ ಯೋಜನೆಯ ಕೆಲವು ಫಲಾನುಭವಿಗಳಿಗೆ ಶೂನ್ಯ ವಿದ್ಯುತ್ ಬಿಲ್ ಬಂದಿಲ್ಲ.! ಯಾಕೆ ಗೊತ್ತ.? ಎಲ್ಲರಿಗೂ ಫ್ರೀ ಕರೆಂಟ್ ಯಾಕೆ ಸಿಗುತ್ತಿಲ್ಲ ನೋಡಿ.!

● ಈಗ ಆನ್‌ಲೈನ್ ಅಪಾಯಿಂಟ್‌ಮೆಂಟ್ ನಿಗದಿಯಾಗಿರುವ ಶುಲ್ಕವನ್ನು ಪಾವತಿಸಿ, ತಪ್ಪದೇ ಅದರ ಪ್ರತಿಯನ್ನು ಪ್ರಿಂಟ್ ಔಟ್ ಪಡೆದುಕೊಳ್ಳಿ.
● ನಂತರ ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿಕೊಟ್ಟು ಮನವಿ ಸಲ್ಲಿಸಿ.
● 90 ದಿನಗಳ ಒಳಗಾಗಿ ಹೊಸ ನಂಬರ್ ನಿಮ್ಮ ಆಧಾರ್ ಕಾರ್ಡ್ ಗೆ ಅಪ್ಡೇಟ್ ಆಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now