ಹಿಂದಿನ ಕಾಲದಲ್ಲಿ ವ್ಯವಹಾರಗಳು ವಸ್ತುವಿನ ಮೂಲಕ ನಡೆಯುತ್ತಿದ್ದವು ನಂತರ ಕಾಲ ಬದಲಾದಂತೆ ಹಣದ ಮೂಲಕ ಕೊಡುಕೊಳ್ಳುವಿಕೆ ರೂಢಿಯಾಯಿತು. ಈಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹಳ ದೊಡ್ಡ ಕ್ರಾಂತಿಯೇ ಆಗಿರುವುದರಿಂದ ಡಿಡಿ, ಚೆಕ್ ಇನ್ನೂ ಮುಂತಾದ ಅನುಕೂಲತೆಗಳು ಇದೆ.
ಇಬ್ಬರು ವ್ಯಕ್ತಿಗಳ ನಡುವೆ ಅಥವಾ ಎರಡು ಸಂಸ್ಥೆಗಳ ನಡುವೆ ಹಣಕಾಸಿನ ವಹಿವಾಟು ನಡೆದರೆ ಹಣಕ್ಕಿಂತ ಈಗ ಚೆಕ್ ಹೆಚ್ಚಾಗಿ ಬಳಸುತ್ತಾರೆ. ಆದರೆ ಆ ಚೆಕ್ ನ್ನು ಹಣವಾಗಿ ಮಾಡಿಕೊಳ್ಳಲು ಹಣ ಕೊಡಬೇಕಾದವರ ಕಡೆಯಿಂದ ಚೆಕ್ ತೆಗೆದುಕೊಂಡು ನಿಮ್ಮ ಖಾತೆಗೆ ಜಮೆ ಮಾಡಿಕೊಳ್ಳಬೇಕು.
ಗ್ರಾಮೀಣ ಜನರಿಗೆ ಸಿಹಿ ಸುದ್ದಿ, ಇನ್ಮುಂದೆ ಬಾಪೂಜಿ ಸೇವಾ ಕೇಂದ್ರಗಳಲ್ಲಿ 44 ಹೆಚ್ಚುವರಿ ಸೇವೆಗಳು ಲಭ್ಯ.!
ಈ ಚೆಕ್ ನಲ್ಲಿ ಹಣ ಕೊಡಬೇಕಾದವರ ಹೆಸರು, ಅವರ ಖಾತೆ ಸಂಖ್ಯೆ, ಅವರ ಬ್ರಾಂಚ್, ದಿನಾಂಕ ಮತ್ತು ಮುಖ್ಯವಾಗಿ ಅವರ ಸಹಿ ಹಾಗೂ ಕೊಡಬೇಕಾದ ಮೊತ್ತದ ಹಣವನ್ನು ನಮೂದಿಸಲಾಗಿರುತ್ತದೆ. ಈ ರೀತಿ ಚೆಕ್ ಕೊಟ್ಟ ವ್ಯಕ್ತಿ ಎಲ್ಲವನ್ನು ಸರಿಯಾಗಿ ನೀಡಿದ್ದರೆ ಅದನ್ನು ತೆಗೆದುಕೊಂಡ ವ್ಯಕ್ತಿಯು ಖಾತೆಗೆ ಜಮೆ ಮಾಡಿದ ತಕ್ಷಣ ಹಣ ಆತನ ಖಾತೆಗೆ ಜನರೇಟ್ ಆಗುತ್ತದೆ.
ಅಲ್ಲಿಗೆ ಅವರಿಬ್ಬರ ನಡುವಿನ ವ್ಯವಹಾರ ಮುಗಿಯುತ್ತದೆ. ಆದರೆ ಮೋಸ ಮಾಡಲೇಬೇಕು ಎನ್ನುವ ಉದ್ದೇಶ ಹೊಂದಿರುವವರು ಈ ರೀತಿ ಚೆಕ್ ಗಳನ್ನು(Check) ಕೊಡುವಾಗ ಖಾತೆಯಲ್ಲಿ ಕಡಿಮೆ ಹಣ ಇದ್ದರೂ ಹೆಚ್ಚಿನ ಮೊತ್ತಕ್ಕೆ ಚೆಕ್ ಬರೆದು ಕೊಡುತ್ತಾರೆ ಆಗ ಚೆಕ್ ಬೌನ್ಸ್ ಆಗುತ್ತದೆ ಚೆಕ್ ಕೊಟ್ಟ ಮೇಲೆ ತಮ್ಮ ಬ್ಯಾಂಕಿಗೆ ಹೋಗಿ ಸ್ಟಾಪ್ ಪೇಮೆಂಟ್ ಮಾಡಿಸುತ್ತಾರೆ ಅಥವಾ ಸಹಿಯಲ್ಲಿ ವ್ಯತ್ಯಾಸ ಮಾಡಿಕೊಡುತ್ತಾರೆ.
LIC ಯಲ್ಲಿ ಪಾಲಿಸಿ ಮಾಡಿಸಿದವರಿಗೆ ಗುಡ್ ನ್ಯೂಸ್ ಪ್ರತಿ ತಿಂಗಳು ಸಿಗಲಿದೆ 1 ಲಕ್ಷ ರೂಪಾಯಿ ಪಿಂಚಣಿ.!
ಇಂತಹ ಹಲವು ಕಾರಣಗಳಿಂದಾಗಿ ಹಣ ಪಡೆದುಕೊಳ್ಳಬೇಕಿದ್ದ ವ್ಯಕ್ತಿಗೆ ತೊಂದರೆಗಳಾಗುತ್ತವೆ. ಇಂತಹ ಸಮಯದಲ್ಲಿ ಮತ್ತೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎನ್ನುವುದನ್ನು ಕೂಡ ಕಾನೂನಿನಲ್ಲಿ ತಿಳಿಸಲಾಗಿದೆ. ಈ ರೀತಿ ಸಮಸ್ಯೆಗಳು ಎದುರಾದಾಗ ನೆಗೋಟೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ 1881 (Negotiable instrument act 1881) ಬಳಸಿ ದಾವೆ ಕೊಡುವ ಮೂಲಕ ನ್ಯಾಯ ಪಡೆದುಕೊಳ್ಳಬಹುದು.
ಈ ಆಕ್ಟ್ ನ 138 ಪ್ರೋವಿಷನ್ ನಲ್ಲಿ ಇದಕ್ಕೆ ಅವಕಾಶವಿದೆ. ಯಾವುದೇ ವ್ಯಕ್ತಿ ಈ ರೀತಿ ತಾನು ಕೊಡಬೇಕಾದ ಕಮಿಟ್ ಮೆಂಟ್ ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ದುರುದ್ದೇಶದಿಂದ ಈ ರೀತಿ ಹಣ ಇರದ ಖಾತೆಯ ಚೆಕ್ ನೀಡಿದರೆ ಆತನ ಮೇಲೆ ಆಕ್ಷನ್ ಆಗುತ್ತದೆ. ಆದರೆ ಈ ಸಮಯದಲ್ಲಿ ಕೆಲ ಮುಖ್ಯ ಅಂಶಗಳನ್ನು ಪಾಲಿಸಬೇಕು ಅದೇನೆಂದರೆ ಈ ಕಾಯ್ದೆ ಜಾರಿಗೆ ಬಂದಾಗ ವ್ಯಕ್ತಿ ಚೆಕ್ ಕೊಟ್ಟ ಆರು ತಿಂಗಳ ಒಳಗಡೆ ಆ ಚೆಕ್ಕನ್ನು ಖಾತೆಗೆ ಹಾಕಬೇಕಿತ್ತು.
ನಾಲ್ಕನೇ ಸ್ಟೇಜ್ ಕ್ಯಾನ್ಸರ್ ಅನ್ನು ಗುಣಪಡಿಸುವ ನಾಟಿ ವೈದ್ಯೆ ಕ್ಯಾನ್ಸರ್ ಸಮಸ್ಯೆ ಇರುವವರು ತಪ್ಪದೆ ನೋಡಿ.!
ಈಗ 2012ರಲ್ಲಿ ಈ ಕಾನೂನನ್ನು ಬದಲಾಯಿಸಲಾಗಿದೆ. ಈ ರೀತಿ ವ್ಯಕ್ತಿ ಚೆಕ್ ಕೊಟ್ಟ ದಿನಾಂಕದಿಂದ 90 ದಿನದ ಒಳಗೆ ಆ ಚೆಕ್ಕನ್ನು ತೆಗೆದುಕೊಂಡು ಖಾತೆಗೆ ಹಾಕಬೇಕು ಈ ಸಮಯದಲ್ಲಿ ನಿಮಗೆ ಚೆಕ್ ಬೌನ್ಸ್ (Check bounce) ಆಗಿದೆ ಎನ್ನುವುದು ಕನ್ಫರ್ಮ್ ಆದರೆ ನಿಮಗೆ ಅವರ ಖಾತೆಯಿಂದ ಹಣ ವರ್ಗಾವಣೆ ಆಗಲು ಸಮಸ್ಯೆಯಾಗಿದೆ ಎನ್ನುವುದಾದರೆ ಲಾಯರ್ ಮೂಲಕ ಅವರಿಗೆ ತಲುಪುವಂತೆ ನೋಟಿಸ್ ಕಳುಹಿಸಬೇಕು.
ಈ ರೀತಿ ನೀವು ಅವರು ಕೊಟ್ಟ 90 ದಿನದ ಒಳಗಡೆ ನಿಮ್ಮ ಖಾತೆಗೆ ಹಣ ತುಂಬಿಸಲು ಪ್ರಯತ್ನಿಸಿ ವಿಫಲರಾಗಿದ್ದರೆ ಅದಕ್ಕೆ ಸಂಬಂಧಪಟ್ಟ ಸಾಕ್ಷಿವನ್ನು ಕೋರ್ಟ್ ಗೆ ಒದಗಿಸಿದರೆ ನಿಮಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ, ದಂಡದ ರೂಪದಲ್ಲಿ ಅವರು ಎರಡರಷ್ಟು ಹಣ ಕಟ್ಟಬೇಕಾಗಿ ಕೂಡ ಬರಬಹುದು. ಈ ಕುರಿತಂತೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದಲ್ಲಿರುವ ಕಾನೂನು ಸಲಹ ಕೇಂದ್ರವನ್ನು ಸಂಪರ್ಕಿಸಿ. ವಿಸ್ತಾರವಾದ ಮಾಹಿತಿ ಬೇಕಾದರೆ ಕೆಳಗಿನ ವಿಡಿಯೋ ನೋಡಿ.!