Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಆಧಾರ್ ಕಾರ್ಡ್ (Aadhar card) ಎಷ್ಟು ಪ್ರಮುಖವಾದ ದಾಖಲೆ ಎನ್ನುವುದು ಎಲ್ಲರಿಗೂ ಅರ್ಥವಾಗಿದೆ. ಇಂದು ಮಗುವನ್ನು ಶಾಲೆಗೆ ಸೇರಿಸಬೇಕು ಎನ್ನುವುದರಿಂದ ಹಿಡಿದು ರೇಷನ್ ಕಾರ್ಡ್ ಮಾಡಿಸಲು, ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು, ಕೊನೆಗೆ ಪಿಂಚಣಿ, ವೃದ್ದಾಪ್ಯ ವೇತನ ಪಡೆಯುವವರೆಗೂ ಕೂಡ ಪ್ರತಿಯೊಂದು ಹಂತದಲ್ಲೂ ಸರ್ಕಾರಿ ಹಾಗೂ ಸರ್ಕಾರೇತರ ಎಲ್ಲಾ ಕೆಲಸಗಳಿಗೂ ಆಧಾರ್ ಕಾರ್ಡ್ ಬೇಕೇ ಬೇಕು.
ಆಧಾರ್ ಕಾರ್ಡನ್ನು ಗ್ಯಾಸ್ ಸಬ್ಸಿಡಿ, ಬ್ಯಾಂಕ್ ಅಕೌಂಟ್ ಮತ್ತು ವಿದ್ಯಾರ್ಥಿಗಳು ಅಂಕಪಟ್ಟಿಗೂ ಕೂಡ ಲಿಂಕ್ ಮಾಡಲಾಗುತ್ತಿದೆ. ಇಂತಹ ಆಧಾರ್ ಕಾರ್ಡ್ ಕುರಿತು ಒಂದು ಹೊಸ ಅಪ್ಡೇಟ್ (update) ಇದೆ. ನೀವೇನಾದರೂ ಈ ಪ್ರಕಾರ ಆಧಾರ್ ಅಪ್ಡೇಟ್ ಮಾಡಿಸದೆ ಹೋದಲ್ಲಿ ನಿಮ್ಮ ಆಧಾರ್ ಕಾರ್ಡ್ ಸ್ಥಗಿತಗೊಂಡು ನೀವು ಆಧಾರ್ ಸಂಬಂಧಿತ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ.
ಅದೇನೆಂದರೆ ಪ್ರತಿ 10 ವರ್ಷಕ್ಕೊಮ್ಮೆ ಆದರೆ ಅಪ್ಡೇಟ್ ಮಾಡಬೇಕು (Aadhar updates compulsory 10 years once) ಎನ್ನುವ ನಿಯಮ ಇದೆ. ಆಧಾರ್ ಕಾರ್ಡ್ ನಲ್ಲಿ ನಮ್ಮ ಹೆಸರು, ಭಾವಚಿತ್ರ, ಹುಟ್ಟಿದ ದಿನಾಂಕ, ವಿಳಾಸ ಮತ್ತು ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಜೊತೆಗೆ ಅಂಚಿನಲ್ಲಿ ನಮಗೆ ಆಧಾರ್ ನೀಡಿರುವ ದಿನಾಂಕವನ್ನು ಕೂಡ ನೀಡಲಾಗಿರುತ್ತದೆ.
ಈಗ ಯಾರಿಗೆಲ್ಲ ಆ ದಿನಾಂಕಕ್ಕೆ ಸರಿಯಾಗಿ 10 ವರ್ಷ ತುಂಬಿದೆ ಅಂತವರು ಮತ್ತೊಮ್ಮೆ ತಮ್ಮ ವಿಳಾಸದ ಪುರಾವೆ ಅಥವಾ ಗುರುತಿನ ಪುರಾವೆಯನ್ನು ಕೊಟ್ಟು ಅಪ್ಡೇಟ್ ಮಾಡಿಸಿಕೊಳ್ಳಬೇಕು. 2013ಕ್ಕೂ ಮುನ್ನ ಆಧಾರ್ ಕಾರ್ಡ್ ಪಡೆದವರಿಗೆ ಇದು ಅನ್ವಯ ಆಗಲಿದೆ, ಒಂದು ವೇಳೆ ನೀವು 2013ಕ್ಕೂ ಮೊದಲು ಆಧಾರ್ ಕಾರ್ಡ್ ಪಡೆದಿದ್ದರೂ ಈ 10 ವರ್ಷಗಳಲ್ಲಿ ಯಾವುದಾದರೂ ಒಂದು ಕಾರಣಕ್ಕೆ ನಿಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡಿದ್ದರೆ ಅದರ ನವೀಕರಣವಾಗಿರುವ ದಿನಾಂಕ ಇರುವುದರಿಂದ ಸಮಸ್ಯೆ ಆಗುವುದಿಲ್ಲ.
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು (UADAI) ಸರ್ಕಾರದ ಅಂಗಸಂಸ್ಥೆಯಾಗಿದ್ದು, ಇಂತಹದೊಂದು ಆದೇಶವನ್ನು ಈ ವರ್ಷದ ಆರಂಭದಲ್ಲಿಯೇ ತಂದಿತ್ತು. ಜೂನ್ 14ರವರೆಗೆ ಉಚಿತವಾಗಿ ಕಾಲಾವಕಾಶವನ್ನು ಕೂಡ ನೀಡಲಾಗಿತ್ತು, ಈಗ ಮತ್ತೊಮ್ಮೆ ಆ ಸಮಯವನ್ನು ಡಿಸೆಂಬರ್ 14ರ ವರೆಗೆ ವಿಸ್ತರಿಸಲಾಗಿದ್ದು ಈಗಲೂ ಡಿಸೆಂಬರ್ 14ರ ಒಳಗೆ ಉಚಿತವಾಗಿ ಪ್ರಕ್ರಿಯೆ ಪೂರ್ತಿಗೊಳಿಸಬಹುದು.
ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಸ್ಥಗಿತಗೊಂಡರೆ ದಂ’ಡ ತೆತ್ತು ಈ ಪ್ರಕ್ರಿಯೆ ಪೂರ್ತಿಗೊಳಿಸಬಹುದಾದ ಸಂದರ್ಭ ಬರಬಹುದು. ಹಾಗಾಗಿ ಕೂಡಲೇ ಆಧಾರ್ ಅಪ್ಡೇಟ್ ಮಾಡಿಸಿ. ಆಧಾರ್ ಕಾರ್ಡ್ ರೇಷನ್ ಕಾರ್ಡ್ ಗೂ ಹಾಗೂ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವುದರಿಂದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಹಣ ಪಡೆಯುವವರು, ಸಾಮಾಜಿಕ ಭದ್ರತೆ ಯೋಜನೆಯಲ್ಲಿ ಪಿಂಚಣಿ ಪಡೆಯುತ್ತಿರುವವರು.
ಇನ್ನಿತರ ಬ್ಯಾಂಕ್ ಸಂಬಂಧಿಸಿದ ವ್ಯವಹಾರ ಮಾಡುವವರಿಗೂ ಕೂಡ ಸಮಸ್ಯೆ ಆಗಬಹುದು. ಹಾಗಾಗಿ ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ ಅವರಿಗೂ ಮಾಹಿತಿ ಮುಟ್ಟಿಸಿ. ಕಳೆದ 10 ವರ್ಷಗಳಲ್ಲಿ ಮುಖ ಚಹರೆ ಬದಲಾಗಿರುತ್ತದೆ ಮತ್ತು ಅನೇಕರು ವಿಳಾಸವನ್ನು ಬದಲಾಯಿಸಿರುತ್ತಾರೆ ಅನೇಕರ ಮೊಬೈಲ್ ಸಂಖ್ಯೆ ಬದಲಾಗಿರುತ್ತದೆ ಇತ್ಯಾದಿ ವ್ಯತ್ಯಾಸದಿಂದ ಅಧಾರ್ ಡೇಟಾ ಬೇಸ್ ನಲ್ಲೂ ಇರುವ ಮಾಹಿತಿಗೆ ಹೊಂದಾಣಿಕೆ ಆಗುವುದಿಲ್ಲ.
ಆದ್ದರಿಂದ ಸರ್ಕಾರ ಈ ಸೂಚನೆ ನೀಡಿದೆ ಮೊಬೈಲ್ ನಲ್ಲಿ ಮೈ ಆಧಾರ್ ಪೋರ್ಟಲ್ ಗೆ ಭೇಟಿ ಕೊಡುವ ಮೂಲಕ ಈ ಪ್ರಕ್ರಿಯೆ ಪೂರ್ತಿಗೊಳಿಸಬಹುದು. ತಿದ್ದುಪಡಿ ಹಾಗೂ ಎಡಿಟ್ ಎರಡು ಆಪ್ಷನ್ ನೀಡಲಾಗಿದೆ. ಪೂರಕ ದಾಖಲೆಗಳನ್ನು ಸಲ್ಲಿಸುವ ಮೂಲಕ ಯಾವುದೇ ಆಧಾರ್ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ ಜೊತೆಗೆ ಪೂರಕ ದಾಖಲೆಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಬಹುದು.