HSRP ನಂಬರ್ ಪ್ಲೇಟ್ ಇಲ್ಲದಿದ್ರೂ ದಂಡ ಬೀಳಬಾರದು ಅಂದರೆ ಈ 2 ಕೆಲಸ ಮಾಡಿ ಸಾಕು.!

 

WhatsApp Group Join Now
Telegram Group Join Now

ಸಾರಿಗೆ ಇಲಾಖೆಯು ವಾಹನ ಸವಾರರಿಗೆ HSRP ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳಲು ನೀಡಿದ್ದ ಗಡುವು ಇನ್ನು ಕೆಲವೇ ದಿನಗಳು ಮುಕ್ತಾಯವಾಗುತ್ತಿದೆ. ಕೇಂದ್ರ ಸರ್ಕಾರದ ಸಾರಿಗೆ ಸಚಿವಾಲಯವು 1 ಏಪ್ರಿಲ್‌ 2019 ಕ್ಕಿಂತ ಮುನ್ನ ನೋಂದಣಿಯಾದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯಗೊಳಿಸಿದೆ.

ಕರ್ನಾಟಕ ಸರ್ಕಾರವು ಕೂಡ ಆಗಸ್ಟ್ 17ರಂದು 90 ದಿನಗಳ ಒಳಗೆ ಕೇಂದ್ರ ಸರ್ಕಾರದ ನಿಯಮದಂತೆ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳಿಗೆ HSRP ಫಲಕ ಅಳವಡಿಸಬೇಕು ಎಂದು ಅಧಿಸೂಚನೆ ಹೊರಡಿಸಿತ್ತು. ಆ ಪ್ರಕಾರವಾಗಿ ನವೆಂಬರ್‌ 17, 2023ಕ್ಕೆ ನಂಬರ್‌ ಪ್ಲೇಟ್‌ ಅಳವಡಿಕೆ ನೀಡಿದ್ದ ಗಡುವು ಮುಕ್ತಾಯವಾಗಿತ್ತು.

ಆದರೆ ಈ ಸಮಯದಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳು ಎದುರಾದ ಕಾರಣ ಮತ್ತು ವಾಹನ ಸವಾರರ ಮನವಿ ಮೇರೆಗೆ ಮತ್ತೊಮ್ಮೆ ಅವಕಾಶ ನೀಡಿ ಫೆಬ್ರವರಿ 17ವರೆಗೂ ಗಡುವು ವಿಸ್ತರಿಸಲಾಗಿದೆ, ಆದರೆ ಈಗ ಈ ಸಮಯ ಕೂಡ ಮುಗಿಯುತ್ತಿದೆ.

ಈ ಸುದ್ದಿ ಓದಿ:- ಗೃಹ ನಿರ್ಮಾಣ ಅಗ್ರಿಮೆಂಟ್ ಹೇಗಿರಬೇಕು ಗೊತ್ತಾ.? ಈ ರೀತಿ ಇದ್ರೆ ನೀವು ಮೋಸ ಹೋಗಲ್ಲ.! ಮನೆ ಕಟ್ಟುವ ಆಸೆ ಇರುವವರು ತಪ್ಪದೆ ನೋಡಿ.!

ಒಂದು ವೇಳೆ ನೀಡಿರುವ ಈ ಕಾಲಾವಕಾಶದ ಒಳಗೆ ನಂಬರ್ ಪ್ಲೇಟ್ ಅಳವಡಿಕೆ ಮಾಡಿಸದೇ ಇದ್ದಲ್ಲಿ ಅಂತಹ ವಾಹನ ಸವಾರರಿಗೆ ಸಂಚಾರಿ ಪೊಲೀಸರು ದಂಡ ವಿಧಿಸಲಿದ್ದಾರೆ. ಆದರೆ ಈಗ ನಾವು ಹೇಳುವ ಈ ವಿಧಾನದಿಂದ ನೀವು ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದೇ ಇದ್ದರೂ ಕೂಡ ನಿಮಗೆ ದಂಡ ಬೀಳುವುದರಿಂದ ವಿನಾಯಿತಿ ಸಿಗಲಿದೆ. ಆದರೆ ಅದಕ್ಕೆ ನೀವು ಈ ಮೂರು ಕೆಲಸ ಮಾಡಿರಬೇಕು.

* ನೀವು ಡೀಲರ್ ಬಳಿ HSRP ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳುವುದಕ್ಕೆ ಅಪ್ಲಿಕೇಶನ್ ಹಾಕಿದ್ದರೆ ಅವರು ನಿಮಗೆ ಒಂದು ಅಕ್ನಾಲೆಜ್ಮೆಂಟ್ ಕಾಪಿ ಕೂಡ ನೀಡಿರುತ್ತಾರೆ, ಕಾರಣಾಂತರಗಳಿಂದ ನೀವು ಆ ಸಮಯಕ್ಕೆ ಹೋಗಲು ಆಗಿರುವುದಿಲ್ಲ ಅಥವಾ ನಿಮಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ನೀಡಿದ ಸಮಯ ಫೆಬ್ರವರಿ 17ರ ನಂತರ ಇರಬಹುದು ಹಾಗಾಗಿ ನಿಮ್ಮ ಬಳಿ ನೀವು ಬಿಲ್ ಪೇ ಮಾಡಿದ ಆಥವಾ ಡೀಲರ್ ನಿಂದ ಪಡೆದ ಎಕ್ನೋಲೆಜ್ಮೆಂಟ್ ಕಾಪಿ ಇಟ್ಟುಕೊಂಡಿದ್ದರೆ ಸಂಚಾರಿ ಪೊಲೀಸರು ತಡೆದಾಗ ಅದನ್ನೇ ತೋರಿಸಬಹುದು, ಆಗ ದಂಡ ಬೀಳುವುದಿಲ್ಲ.

* ನೀವು ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕಿದ್ದರೂ ಕೂಡ ನೀವು ‌HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದಕ್ಕೆ ಪೇಮೆಂಟ್ ಮಾಡಿರುವ ಸ್ಲಿಪ್, ಅಪ್ಲಿಕೇಶನ್ ಸಕ್ಸಸ್ ಆಗಿ ನೀಡಿರುವ ಅಕ್ನೋಲೆಜ್ಮೆಂಟ್ ಇದನ್ನು ತೋರಿಸುವ ಮೂಲಕ ಪಾರಾಗಬಹುದು.

ಈ ಸುದ್ದಿ ಓದಿ:- HSRP ನಂಬರ್ ಪ್ಲೇಟ್ ಹಾಕಿಸದಿದ್ದರೆ ಎಷ್ಟು ದಂಡ ಕಟ್ಟಬೇಕು ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.!

* ಒಂದು ವೇಳೆ ಯಾವುದೇ ಪ್ರಿಂಟ್ ಔಟ್ ಪಡೆಯಲು ಸಾಧ್ಯವಾಗದಿದ್ದರೂ ಕೂಡ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನಂಬರ್ ಪ್ಲೇಟ್ ಅಳವಡಿಕೆ ಅಪ್ಲಿಕೇಶನ್ ಹಾಕುವ ಸಮಯದಲ್ಲಿ ನೀವು ಹಾಕಿದ ಅಪ್ಲಿಕೇಶನ್ ಸಕ್ಸಸ್ ಆಗಿರುವ ಸಂದೇಶ ಅಥವಾ OTP ಬಂದಿರುತ್ತದೆ. ಆ ಮೆಸೇಜ್ ತೋರಿಸುವ ಮೂಲಕ ದಂಡ ಬೀಳುವುದರಿಂದ ತಪ್ಪಿಸಿಕೊಳ್ಳಬಹುದು.

ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ 1989 ಸೆಕ್ಷನ್‌ 50 ಹಾಗೂ 51 ಅನ್ವಯ ಎಲ್ಲಾ ವಾಹನಗಳಿಗೆ ಗರಿಷ್ಠ ಭದ್ರತೆಯ ಈ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ಗಳನ್ನು (HSRP) ಅಳವಡಿಸಬೇಕಿದೆ. ಕೇಂದ್ರ ಸರ್ಕಾರ ರೂಪಿಸಿರುವ ಕಡ್ಡಾಯ ನಿಯಮವಾಗಿದ್ದು, ದೇಶದ ಬಹುತೇಕ ರಾಜ್ಯಗಳು ಅಳವಡಿಸಿಕೊಂಡಿವೆ ಮತ್ತು ಕಳೆದ ಆಗಸ್ಟ್ ನಿಂದ ಕರ್ನಾಟಕದ ವಾಹಗಳಿಗೆ ಇದನ್ನು ಕಡ್ಡಾಯಗೊಳಿಸಲಾಗಿದೆ.

HSRP ನಂಬರ್ ಪ್ಲೇಟ್ ಅಳವಡಿಸದೇ ಇದ್ದಲ್ಲಿ ವಾಹನ ಮಾರಾಟದ ಸಮಯದಲ್ಲಿ ಸಮಸ್ಯೆಗಳಾಗುತ್ತವೆ. ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ನಕಲಿ RC, ವಿಮೆ ಹಾಗೂ ಇನ್ನಿತರ ಕೆಲಸಗಳನ್ನು ಮಾಡಲಾಗುವುದಿಲ್ಲ. ಸಾರಿಗೆ ಇಲಾಖೆ ಹೊರಡಿಸಿರುವ ಈ ಸೂಚನೆಯಿಂದ ಅಧಿಕೃತವಾಗಿಲ್ಲದ ವಾಹನಗಳು ರಸ್ತೆಯಲ್ಲಿ ಓಡಾಡುವುದನ್ನು ಮತ್ತು ವಾಹನಗಳು ದೇಶ ಬಾಹಿರ ಚಟುವಟಿಕೆಗಳಿಗೆ ಭಾಗಿಯಾಗುವುದನ್ನು, ಮತ್ತು ವಾಹನಗಳು ಕಳುವಾದರೆ ಸುಲಭವಾಗಿ ಪತ್ತೆ ಹಚ್ಚಬಹುದು.

https://youtu.be/7cWNRmnL-qw?si=rpeGfF7QYAxBLICP

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now