ನಮ್ಮ ಕರ್ನಾಟಕದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿಯ ಪ್ರಸಿದ್ಧವಾದ ದೇವಸ್ಥಾನ ಎಂದರೆ ಅದು ಕುಮಾರಧಾರೆ ನದಿಯ ತೀರದಲ್ಲಿರುವ ಶ್ರೀ ಕುಕ್ಕೆಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ. ಈ ಕ್ಷೇತ್ರಕ್ಕೆ ಪ್ರತಿನಿತ್ಯ ಕೂಡ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ಕೊಡುತ್ತಾರೆ. ಅದರಲ್ಲೂ ವಿಶೇಷ ದಿನಗಳಲ್ಲಿ ಈ ಸಂಖ್ಯೆ ಲಕ್ಷವನ್ನು ಮೀರುತ್ತದೆ.
ಶ್ರೀ ಕುಕ್ಕೆ ಸುಬ್ರಮಣ್ಯ ಸ್ವಾಮಿ ಸನ್ನಿಧಾನದಲ್ಲಿ ನಿತ್ಯೋತ್ಸವ ಪೂಜೆ, ನಿತ್ಯ ರಥೋತ್ಸವ, ಪಕ್ಷ ಮಹೋತ್ಸವ, ಕೃತೋತ್ಸವ ಹಾಗೂ ಬ್ರಹ್ಮರಥೋತ್ಸವ ಈ ರೀತಿ ಸಾಕಷ್ಟು ರಥೋತ್ಸವಗಳು ನಡೆಯುತ್ತವೆ. ಹಾಗೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಾನದ ಮತ್ತೊಂದು ವಿಶೇಷತೆ ಏನೆಂದರೆ ಈ ದೇವಸ್ಥಾನಕ್ಕೆ ಬ್ರಹ್ಮಚಾರಿಗಳು ಒಮ್ಮೆಯಾದರೂ ಭೇಟಿ ಕೊಡಬೇಕು. ಪುರುಷರೇ ಅಡುಗೆ ಮಾಡುವ ಹಾಗೂ ನೈವೇದ್ಯವನ್ನು ಅರ್ಪಿಸುವಂತಹ ವಿಶೇಷವಾದ ದೇವಸ್ಥಾನ ಇದು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧಿಪತಿ ಸುಬ್ರಮಣ್ಯ ಸ್ವಾಮಿ ಎಂದು ಎಲ್ಲರಿಗೂ ಗೊತ್ತಿದೆ. ಕುಕ್ಕೆ ಎಂದರೆ ಹೊಟ್ಟೆ ಎಂದು ಅರ್ಥ. ಹೊಟ್ಟೆ ರವಿಯನ್ನು ಸೂಚಿಸುತ್ತದೆ. ಹೊಟ್ಟೆಯೂ ಸಂತಾನ ಮೂಲವಾದ್ದರಿಂದ ಹೊಟ್ಟೆಯನ್ನು ಕಾಯುವ ನಾಗದೇವತೆಯನ್ನು ಸಂತಾನ ಭಾಗ್ಯಕ್ಕಾಗಿ ಪ್ರಾರ್ಥಿಸುತ್ತೇವೆ. ಹಾಗಾಗಿ ಸುಬ್ರಮಣ್ಯ ಸ್ವಾಮಿ ಹಾಗೂ ನಾಗ ಇರುವಂತಹ ವಿಶೇಷ ದೇವಸ್ಥಾನ ಇದು.
ಹಾಗೆ ಸುಬ್ರಹ್ಮಣ್ಯನ ಮೂಲಸ್ಥಾನವಾದ ಈ ಗುಡಿಯೊಳಗೆ ಒಂದು ಹುತ್ತವೂ ಕೂಡ ಇದೆ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಮಾಡಿಸಿದವರಿಗೆ ಪ್ರಸಾದ ರೂಪದಲ್ಲಿ ಹುತ್ತದ ಮಣ್ಣು ಅಂದರೆ ಅದನ್ನು ಮೃತ್ತಿಗೆ ಎಂದು ಕರೆಯುತ್ತಾರೆ. ಇದೂ ಹಾಗೂ ಇದರ ಜೊತೆಗೆ ಬಿದುರಿನ ತುಂಡನ್ನು ಕೂಡ ಕೊಡುತ್ತಾರೆ.
ಟಾಟಾ ನ್ಯಾನೋ ಗಿಂತ ಕಡಿಮೆ ಬೆಲೆಯ ಕಾರು ಬಿಡುಗಡೆ, ಕಾರು ಕೊಂಡುಕೊಳ್ಳುವುದಕ್ಕೆ ಮುಗಿಬಿದ್ದ ಜನತೆ.!
ಮನೆಗೆ ಬಂದ ಮೇಲೆ ಆ ಬಿದುರಿನ ತುಂಡನ್ನು ಮನೆಗೆ ಕಟ್ಟಬೇಕು ಹಾಗೂ ಆ ಮಣ್ಣನ್ನು ನೀರಿನಲ್ಲಿ ಬೆಳೆಸಿ ಸ್ನಾನ ಮಾಡಬೇಕು ಮತ್ತು ಕುಡಿಯಬೇಕು ಈ ರೀತಿ ಮಾಡುವುದರಿಂದ ಕುಟುಂಬದ ಎಲ್ಲರ ಎಲ್ಲಾ ದೋಷಗಳು ಕೂಡ ಪರಿಹಾರ ಆಗುತ್ತವೆ ಎನ್ನುವುದು ನಂಬಿಕೆ. ಹಾಗಾಗಿ ಈ ಸನ್ನಿಧಾನಕ್ಕೆ ಭೇಟಿ ಕೊಟ್ಟಾಗ ತಪ್ಪದೆ ಈ ಎರಡು ಪ್ರಸಾದಗಳನ್ನು ಸ್ವೀಕರಿಸಿ ಮನೆಗೆ ಬಂದು ಈ ರೀತಿ ಮಾಡಿ.
ಅದೇ ರೀತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗದೋಷಗಳ ಪರಿಹಾರಕ್ಕಾಗಿ ವಿಶೇಷ ಪೂಜೆಗಳು ನಡೆಯುತ್ತವೆ. ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ದೋಷಗಳು ಆಗಿದ್ದರೆ ಅದರ ಪರಿಹಾರ ಮಾಡಿಕೊಡಲಾಗುತ್ತದೆ. ನೀವು ಸರ್ಪಗಳ ಸಂತತಿಗೆ ಹಾನಿ ಮಾಡಿದ್ದರೆ, ಅವುಗಳ ಮೊಟ್ಟೆ ಹೊಡೆದು ಹಾಕಿದ್ದರೆ ಅಥವಾ ನೀವೇ ಸರ್ಪವನ್ನು ಕೊಂದಿದ್ದರೆ, ಬೇರೆಯವರು ಸರ್ಪವನ್ನು ಕೊಂದಿದ್ದರು.
ಬಾಡಿಗೆ ಮನೆಯಲ್ಲಿ ಇರುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ.!
ಅದನ್ನು ನೋಡಿ ಸಂಸ್ಕಾರ ಕೊಡದೆ ಹಾಗೆ ಹೋಗಿದ್ದರೆ, ನಾಗರ ಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡಿಯೂ ನೀವು ಸರ್ಪ ದೋಷಕ್ಕೆ ಒಳಗಾಗಿದ್ದರೆ, ನಾಗರ ಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡಿ ಸರಿಯಾಗಿ ಪೂಜೆ ನಿರ್ವಹಿಸದೇ ಹೋಗಿದ್ದರೆ ಈ ಎಲ್ಲಾ ಕಾರಣದಿಂದ ಕೂಡ ನಿಮಗೆ ಸರ್ಪದೋಷಗಳು ಉಂಟಾಗುತ್ತದೆ, ನಿಮ್ಮ ವಂಶದಲ್ಲಿ ಯಾರೇ ಮಾಡಿದ್ದರೂ ಆ ದೋಷ ನಿಮಗೂ ಕೂಡ ತಟ್ಟಿರುತ್ತದೆ.
ಇದೆಲ್ಲದರ ಪರಿಹಾರಕ್ಕೆ ತಪ್ಪದೆ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಡಿ. ಸ್ವಾಮಿಯ ದರ್ಶನ ಪಡೆದು ಈ ರೀತಿ ಪರಿಹಾರಗಳನ್ನು ಮಾಡಿಕೊಂಡು ಸುಬ್ರಮಣ್ಯ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಿ. ಸುಬ್ರಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ಸರ್ಪದೋಷ ಮಾತ್ರವಲ್ಲದೆ ಕುಜ ದೋಷ, ರಾಹು ದೋಷ ಇವುಗಳಿಗೂ ಕೂಡ ಪರಿಹಾರ ಮಾಡಿಕೊಡಲಾಗುತ್ತದೆ. ಹಾಗೆಯೇ ಸುಬ್ರಮಣ್ಯ ಸ್ವಾಮಿಯಲ್ಲಿ ಹರಕೆ ಕಟ್ಟಿಕೊಳ್ಳುವುದು ಹೆಚ್ಚು. ಅಲ್ಲಿ ಹೋಗಿ ಹರಕೆ ಕಟ್ಟಿಕೊಂಡರೆ ಆ ಕಾರ್ಯಗಳು ಖಂಡಿತ ನೆರವೇರುತ್ತದೆ ಎನ್ನುವ ನಂಬಿಕೆಯೂ ಇದೆ.