ಮನೆ ಕಟ್ಟಲು ಸರ್ಕಾರದಿಂದ ದೊರೆಯಲಿದೆ ಬಡ್ಡಿ ರಹಿತ ಸಾಲ, ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!

ಮನೆ ಎನ್ನುವುದು ಮನುಷ್ಯನ ಮೂಲಭೂತ ಅವಶ್ಯಕತೆ ಪ್ರತಿಯೊಬ್ಬರೂ ಕೂಡ ಸ್ವಂತ ಸೂರಿನಡಿ ವಾಸಿಸುವಂತೆ ಆಗಬೇಕು ಎನ್ನುವುದು ಸರ್ಕಾರಗಳ ಆಶಯ ಕೂಡ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಸಾಕಷ್ಟು ವಸತಿ ಯೋಜನೆಗಳನ್ನು (Government Housing Schemes) ಜಾರಿಗೆ ತರಲಾಗಿದೆ ಮತ್ತು ರಾಜ್ಯ ಸರ್ಕಾರಗಳು ಕೂಡ ಈ ಯೋಜನೆಗಳಿಗೆ ಅನುದಾನ ನೀಡಿ ನೆರವಾಗುತ್ತಿದೆ.

WhatsApp Group Join Now
Telegram Group Join Now

ಸರ್ವರಿಗೂ ಸ್ವಂತ ಊರು ಎನ್ನುವ ಧ್ಯೇಯವನ್ನು ಸಾಧಿಸುವ ಸಲುವಾಗಿ ಅನೇಕ ಪ್ರಯೋಗಗಳನ್ನು ಕೈಗೊಂಡಿರುವ ಸರ್ಕಾರ ಪ್ರತಿ ಬಾರಿ ಬಜೆಟ್ ಮಂಡನೆ ಮಾಡಿದಾಗ ಕೂಡ ದೊಡ್ಡ ಮಟ್ಟದ ಬಜೆಟ್ ಈ ಯೋಜನೆಗಳಿಗಾಗಿ ಮೀಸಲಿಟ್ಟಿರುತ್ತದೆ. ಸರ್ಕಾರದ ನೆರವಿನಿಂದ ಸ್ವಂತ ಮನೆಯ ಕನಸುಗಳು ನನಸಾಗಿಸಿಕೊಳ್ಳಲು ಕಾಯುತ್ತಿರುವವರಿಗೆ ಈಗ ಇದರ ಕುರಿತಾಗಿ ಮತ್ತೊಂದು ಸಿಹಿ ಸುದ್ದಿ ಇದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ದೇಶದ ಅಧಿಕಾರ ವಹಿಸಿಕೊಂಡ ಮೇಲೆ ಜಾರಿಗೆ ತಂದಿರುವ ಅನೇಕ ಯೋಜನೆಗಳ ಪೈಕಿ ಸ್ವಂತ ಮನೆಯ ಕನಸು ಹೊಂದಿರುವವರಿಗೆ ಕೈಜೋಡಿಸುವ ಸಲುವಾಗಿ ರೂಪಿಸಿರುವ ವಿಶೇಷ ಯೋಜನೆಯಾದ ಪ್ರಧಾನಮಂತ್ರಿ ಆವಾಸ್ ಯೋಜನೆ (Pradana Mantri Avas Yojane) ಎನ್ನುವ ಯೋಜನೆ ಕೂಡ ಒಂದು.

ಈ ಸುದ್ದಿ ಓದಿ:-  ಭಾರತೀಯ ರೈಲ್ವೆ ಹುದ್ದೆಗಳ ಬೃಹತ್ ನೇಮಕಾತಿ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ ವೇತನ 29,200/-

2014 ರಲ್ಲಿ ದೇಶದ ಪ್ರತಿ ಕುಟುಂಬಕ್ಕೂ ಮನೆ ದೊರಕಿಸಿ ಕೊಡುವ ಗುರಿ ಇಟ್ಟುಕೊಂಡು ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಪ್ರಾರಂಭಿಸಿದರು. ನಮ್ಮ ದೇಶದಲ್ಲಿ ಗ್ರಾಮೀಣ ಭಾಗದಲ್ಲೂ ಕೂಡ ಅನೇಕರಿಗೆ ತಮ್ಮದೇ ಆದ ಆಶ್ರಯ ಇಲ್ಲ ಬಡ ಹಾಗೂ ಮಧ್ಯಮ ಕುಟುಂಬಗಳು ದುಡಿದ ಹೆಚ್ಚಿನ ಮೊತ್ತದ ಹಣವನ್ನು ಮನೆ ಬಾಡಿಗೆಗಾಗಿ ಖರ್ಚು ಮಾಡುತ್ತಿವೆ.

ಹಾಗಾಗಿ ಈ ಯೋಜನೆಯಡಿಯಲ್ಲಿ ಭಾರತದಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸ್ವಂತ ಮನೆ ಇಲ್ಲದೆ ವಾಸಿಸುತ್ತಿರುವ ಜನರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಮನೆಯನ್ನು ನಿರ್ಮಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಇಲ್ಲಿಯವರೆಗೆ 40 ಲಕ್ಷಕ್ಕೂ ಹೆಚ್ಚು ಕಾಂಕ್ರೀಟ್ ಮನೆಗಳನ್ನು ನಿರ್ಮಿಸಿ ಹಂಚಲಾಗಿದೆ.

2024 ನೇ ವರ್ಷದ ಅಂತ್ಯದೊಳಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಒಟ್ಟು 100 ಮಿಲಿಯನ್ (100 Million) ಮನೆಗಳನ್ನು ನಿರ್ಮಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ.

ಈ ಸುದ್ದಿ ಓದಿ:- ಒಂದು ವರ್ಷದಲ್ಲಿ ಒಂದು ರೇಷನ್ ಕಾರ್ಡ್’ಗೆ ಇಷ್ಟು ಗ್ಯಾಸ್ ಮಾತ್ರ ಬುಕ್ ಮಾಡಲು ಅವಕಾಶ.! ಕೇಂದ್ರದ ಹೊಸ ನಿಯಮ.!

ಜನಪರವಾದ ಈ ಯೋಜನೆಯನ್ನು ಯಶಸ್ವಿಗೊಳಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 2024 ರಲ್ಲಿ ಮಂಡಿಸಲಿರುವ ಬಜೆಟ್ ನಲ್ಲಿ ಈ ಯೋಜನೆಗೆ ಬಹಳ ಪ್ರಾಮುಖ್ಯತೆಯನ್ನು ನೀಡಿದ್ದಾರೆ ಮತ್ತು ಈ ಯೋಜನೆಗೆ ಹಣಕಾಸಿನ ನೆರವನ್ನು ಹೆಚ್ಚಿಸಿದ್ದಾರೆ.2023-24ನೇ ಸಾಲಿನ ಬಜೆಟ್ ನಲ್ಲಿ ವಸತಿ ಯೋಜನೆಗಾಗಿ 790 ಶತಕೋಟಿ ರುಪಾಯಿಗಳನ್ನು ಈ ಯೋಜನೆಗೆ ಮೀಸಲಿಡಲಾಗಿತ್ತು.

2024-25 ರ ಬಜೆಟ್ ನಲ್ಲಿ ಇದರ ಪ್ರಮಾಣವನ್ನು ಶೇಕಡ 15% ರಷ್ಟು ಹೆಚ್ಚಿಸಲಾಗಿದೆ. ಅಂದರೆ 1,013 ಶತ ಕೋಟಿ ರೂಪಾಯಿಗಳಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಹೆಚ್ಚುವರಿ ಹಣವನ್ನು ಕಡಿಮೆ ವೆಚ್ಚದಲ್ಲಿ ವಸತಿ ಗೃಹಗಳನ್ನು ನಿರ್ಮಿಸುವುದಕ್ಕಾಗಿ ಬಳಸಲಾಗುತ್ತಿದೆ.

ಈ ಬಗ್ಗೆ ಇರುವ ಸಿಹಿ ಸುದ್ದಿ ಏನೆಂದರೆ, ಸರ್ಕಾರದ ಜೊತೆ ಈ ಯೋಜನೆ ಯಶಸ್ಸಿಗಾಗಿ ಬ್ಯಾಂಕುಗಳು(Banks) , ಖಾಸಗಿ ವಲಯದ ಹಣಕಾಸು ಸಂಸ್ಥೆಗಳು(Private Company) ಮತ್ತು ಪ್ರತಿಷ್ಠಿತ ವಾಣಿಜ್ಯ ಸಂಸ್ಥೆಗಳೂ ಸಹಕರಿಸುತ್ತಿವೆ. ಇವು ಜನರಿಗೆ ಸಾಲ ಸೌಲಭ್ಯವನ್ನು ಒದಗಿಸುವುದರ ಮೂಲಕ ಸ್ವಂತ ಮನೆಯನ್ನು ಕಟ್ಟಲು ಸಹಾಯ ಮಾಡಲಿವೆ.

ಈ ಸುದ್ದಿ ಓದಿ:- ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ, ಅಂಚೆ ಕಚೇರಿಯ ಈ ಯೋಜನೆಯಲ್ಲಿ 5 ಲಕ್ಷ ಹಾಕಿದ್ರೆ 10 ಲಕ್ಷ ಗ್ಯಾರಂಟಿ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now