ಯಾವುದೇ ಜಮೀನು ಸೈಟು ಕೊಂಡುಕೊಳ್ಳುವ ಮುನ್ನ ಹತ್ತಾರು ಬಾರಿ ಯೋಚಿಸಿ ಪರಿಚಯಸ್ಥರ ಬಳಿ ವಿಚಾರಿಸಿ ಕೈ ಹಾಕಬೇಕು. ಅದರಲ್ಲೂ ನಗರ ಪ್ರದೇಶದಲ್ಲಿ ಆಸ್ತಿ ಮಾಡುವುದಾದರೆ ಖಾಲಿ ನಿವೇಶನವಾಗಲಿ ಅಥವಾ ಮನೆಯಾಗಲಿ ಕೊಂಡುಕೊಳ್ಳುವ ಸಂದರ್ಭದಲ್ಲಿ ಎಷ್ಟು ಜಾಗೃತೆ ವಹಿಸಿದರೂ ಸಾಲದು.
ಯಾಕೆಂದರೆ ಒಂದೇ ಸೈಟ್ ನ್ನು ಏಕಕಾಲದಲ್ಲಿ 4-5 ಮಂದಿಗೆ ಮಾರಾಟ ಮಾಡಿ ಮೋ’ಸ ಮಾಡುವವರು ಇರುತ್ತಾರೆ ಅಥವಾ ಬೇರೆಯವರ ಹೆಸರಿನಲ್ಲಿರುವ ಭೂಮಿಯನ್ನು ತಮ್ಮದು ಎಂದು ಸುಳ್ಳು ಹೇಳಿ ನ’ಕ’ಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಹೊಡೆದಿರುತ್ತಾರೆ. ಹೀಗಾಗಿ ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಹೇಗೆ? ಆಸ್ತಿ ಖರೀದಿಗೆ ಮುನ್ನ ಯಾವೆಲ್ಲಾ ದಾಖಲೆಗಳನ್ನು ಅವಶ್ಯಕವಾಗಿ ಚೆಕ್ ಮಾಡಬೇಕು? ಎನ್ನುವುದರ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಸಿಕೊಡುತ್ತಿದ್ದೇವೆ.
ಯಾವ ರೀತಿಗಳಲ್ಲಿ ಮೋ’ಸವಾಗಬಹುದು:-
* ಈ ಮೇಲೆ ತಿಳಿಸಿದಂತೆ ಒಂದೇ ಆಸ್ತಿಯನ್ನು ಹಲವರಿಗೆ ಮಾರಾಟ ಮಾಡಿರಬಹುದು.
* ಸರ್ಕಾರಿ ಭೂಮಿಯನ್ನು ಸ್ವಂತದ್ದು ಎಂದು ನಕಲಿ ದಾಖಲೆ ಸೃಷ್ಟಿ ಮಾಡಿ ಮಾರಾಟ ಮಾಡಿರಬಹುದು
* ಸರ್ಕಾರಿ ಸೌಲಭ್ಯಕ್ಕೆ ಮೀಸಲಿರುವ ಆಸ್ತಿಯನ್ನು ಮಾರಾಟ ಮಾಡಿರಬಯಹುದು.
* ರಸ್ತೆ ಅಳತೆ ಕೂಡ ಸೈಟ್ ಗೆ ಸೇರಿಸಿ ಜಾಸ್ತಿ ಇದೆ ಎಂದು ಹೇಳಿ ಹಣ ಪಡೆದಿರಬಹುದು.
* ಕೆಲವು ವರ್ಷ ಕಳೆದ ಮೇಲೆ ಅದೇ ಸೈಟ್ ನಲ್ಲಿ ರಾಜಕಾಲುವೆ, ಸಾರ್ವಜನಿಕ ರಸ್ತೆ, ಕಾಲುದಾರಿ ಅಥವಾ ರಸ್ತೆ ಅಗಲೀಕರಣಕ್ಕೆ ಬಳಸಿಕೊಳ್ಳಲು ನಿಯೋಜಿಸಿರುವ ಭೂಮಿ ಆಗಿರಬಹುದು
* ಕೃಷಿ ಭೂಮಿಯನ್ನು ವಸತಿ ಪ್ರದೇಶ ಎಂದು ಸುಳ್ಳು ಹೇಳಿ ಮಾರಾಟ ಮಾಡಿರಬಹುದು. ಕೃಷಿ ಭೂಮಿಯನ್ನು ಲೇಔಟ್ ಮಾಡದೆ ಸೈಟ್ ಮಾಡಿ ಮಾರಾಟ ಮಾಡಿರಬಹುದು.
ಈ ಸುದ್ದಿ ಓದಿ:- ಸ್ಟೇಟ್ ಬ್ಯಾಂಕ್ ನಲ್ಲಿ 5 ಲಕ್ಷ FD ಇಟ್ಟರೆ ಎಷ್ಟು ಹಣ ಲಾಭ ಸಿಗುತ್ತದೆ ಗೊತ್ತಾ.? ನಿಮ್ಮ ಹಣ ದುಪ್ಪಟ್ಟು ಮಾಡಲು ಇದೇ ಬೆಸ್ಟ್
* ಖರೀದಿದಾರ ಹಾಗೂ ಮಾರಾಟ ಮಾಡುವವರ ನಡುವೆ ಇರುವ ದಲ್ಲಾಳಿ ಹೆಚ್ಚು ಹಣ ವಸೂಲಿ ಮಾಡಬಹುದು.
* ಪೂರ್ಣ ಹಕ್ಕು ಹೊಂದಿರದ ಆಸ್ತಿಗಳನ್ನು ತಮ್ಮದೇ ಎಂದು ಬಿಂಬಿಸಿ ಮಾರಾಟ ಮಾಡಿರುತ್ತಾರೆ.
* ನಗರಸಭೆ ಅನುಮತಿ ಇಲ್ಲದೆ ಮಾರಾಟ ಮಾಡಿರುವುದು
* ಸೈಟ್ ಖರೀದಿಸಿ ಮನೆ ಕಟ್ಟುವುದಾದರೆ ನಗರ ಪ್ರದೇಶದಲ್ಲಿ ಹಲವಾರು ಇಲಾಖೆಯಿಂದ ಪರ್ಮಿಷನ್ ಪಡೆದಿರಬೇಕು. ಇದ್ಯಾವುದನ್ನು ಪರ್ಮಿಷನ್ ಪಡೆಯದೆ ಅಕ್ರಮವಾಗಿ ಕಟ್ಟಿ ಮೋ’ಸ ಮಾಡಿ ಮಾರಾಟ ಮಾಡಿದ್ದರೆ ನಂತರ ಖರೀದಿಸಿದವರು ಸಮಸ್ಯೆ ಎದುರಿಸಬೇಕಾಗುತ್ತದೆ
* ತೋರಿಸಿದ್ದೆ ಬೇರೆ ಸೈಟ್ ಈಗ ಮಾರಾಟ ಮಾಡಿರುವುದೇ ಬೇರೆ ಸೈಟ್ ಆಗಿರುವ ಉದಾಹರಣೆಗಳು ಇವೆ.
ಈ ಸುದ್ದಿ ಓದಿ:- ಮನೆ ಕಟ್ಟಿಸುತ್ತಿದ್ದೀರಾ.? ಆಗಿದ್ರೆ ಈ ವಿಷ್ಯ ತಿಳ್ಕೋಳಿ ವುಡನ್, UPVC, ಅಲ್ಯೂಮಿನಿಯಂ ಯಾವ ರೀತಿ ಕಿಟಕಿ ಹಾಕಿಸುವುದು ಬೆಸ್ಟ್ ಅಂತ ನೋಡಿ.!
* ಬದುಕಿರುವ ವ್ಯಕ್ತಿಗೆ ಸುಳ್ಳು ಮ.ರಣ ಪ್ರಮಾಣ ಪತ್ರ ಸೃಷ್ಟಿಸಿ ಆಸ್ತಿ ಮಾರಾಟ ಮಾಡಿರುವುದು. ಇನ್ನು ಇತ್ಯಾದಿ ಹಲವು ಪ್ರಕರಣಗಳು ಕೋರ್ಟ್ ಆವರಣದಲ್ಲಿವೆ. ಯಾವುದೇ ರೀತಿಯಾಗಿ ಸಮಸ್ಯೆ ಆದರೂ ಪರಿಣಾಮ ನಿಮ್ಮ ಮೇಲೆ ಬೀಳುತ್ತದೆ. ನೀವು ಎಚ್ಚರ ವಹಿಸಿದ ಕಾರಣ ಹತ್ತಾರು ವರ್ಷ ಕೋರ್ಟು ಕಚೇರಿ ಅಲೆಯಬೇಕಾಗುತ್ತದೆ. ಕೆಲವೊಮ್ಮೆ ಕಾನೂನು ಪ್ರಕಾರವಾಗಿ ನೀವು ನಡೆದುಕೊಳ್ಳದೆ ಎಡವಿದ ಕಾರಣ ಹಣ ಕೂಡ ಕೈ ಸೇರದೆ ಆಸ್ತಿಯು ನಿಮ್ಮ ಹೆಸರಿಗೆ ಆಗದೆ ಹೋಗಿಬಿಡಬಹುದು. ಹಾಗಾಗಿ ಈ ಕೆಳಕಂಡ ದಾಖಲೆಗಳನ್ನು ಪರಿಶೀಲಿಸಿ ಮುಂದುವರೆಯಿರಿ.
* ಲೇಔಟ್ ನಕ್ಷೆ ಪರಿಶೀಲನೆ ಮಾಡಿ, ಆ ಸೈಟ್ ಪುರಸಭೆ ನಗರಸಭೆ ವ್ಯಾಪ್ತಿಗೆ ಬಂದಿದೆಯೋ? ಇಲ್ಲವೋ? ಅಪ್ರೂವಲ್ ಆಗಿದಿಯೋ ಎಲ್ಲವೋ ಎಲ್ಲಾ ಮಾಹಿತಿ ಸಿಗುತ್ತದೆ.
* ಮ್ಯೂಟೇಷನ್ ರಿಪೋರ್ಟ್ ನೋಡಬೇಕು ಇದರಲ್ಲಿ ಯಾರಿಂದ ಯಾರಿಗೆ ಆಸ್ತಿ ವರ್ಗಾವಣೆ ಆಗಿದೆ ಯಾವ ವಿಧಾನದಲ್ಲಿ ಆಗಿದೆ ಎಲ್ಲ ಮಾಹಿತಿ ಸಿಗುತ್ತದೆ.
* EC ಇದನ್ನು Encumbrance Certificate ಎನ್ನುತ್ತಾರೆ. ಈ ಡಾಕುಮೆಂಟ್ ನೋಡುವುದರಿಂದ ಸದರಿ ಆಸ್ತಿ ಮೇಲೆ ಎಷ್ಟು ಸಾಲ ಇದೆ, ಋಣಭಾರ ಹಾಗೂ ನಿರ್ದಿಷ್ಟ ಹಕ್ಕುಗಳ ಬಗ್ಗೆ ತಿಳಿಯುತ್ತದೆ.
ಈ ಸುದ್ದಿ ಓದಿ:- HSRP ಪ್ಲೇಟ್ ಜೊತೆ ಇನ್ಮುಂದೆ ಈ ದಾಖಲೆ ಕಡ್ಡಾಯವಾಗಿ ಇರಲೇಬೇಕು, ಇಲ್ಲದಿದ್ರೆ ಸ್ಥಳದಲ್ಲೇ ಗಾಡಿ ಸೀಜ್, ಹೊಸ ರೂಲ್ಸ್.!
* ನಿವೇಶನದ ಚಕ್ಕುಬಂಧಿ ಮಾಹಿತಿ ಪರಿಶೀಲನೆ ಮಾಡಬೇಕು
* ಸೇಲ್ ಡೀಡ್ ಪರಿಶೀಲನೆ ಮಾಡಬೇಕು ಇದರಿಂದ ಈ ಹಿಂದೆ ಯಾರಿಂದ ಯಾರಿಗೂ ಸದರಿ ಆಸ್ತಿ ವರ್ಗಾವಣೆ ಆಗಿದೆ ಯಾವ ರೂಪದಲ್ಲಿ ಆಗಿದೆ ತಿಳಿಯುತ್ತದೆ. https://kaverionline.karnataka.gov.in ಈ ವೆಬ್ಸೈಟ್ ಮೂಲಕ ನೀವು ಪ್ರಾಪರ್ಟಿ ನಂಬರ್ ಹಾಕಿ ದಾಖಲೆಗಳು ಅದೇ ಪ್ರಾಪರ್ಟಿ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ ಅಥವಾ ಮತ್ತೇನು ಎನ್ನುವುದರ ಸತ್ಯನೂ ಸತ್ಯತೆ ತಿಳಿದುಕೊಳ್ಳಬಹುದು
* ನಗರ ಪ್ರದೇಶದಲ್ಲಿ ಆಸ್ತಿ ಖರೀದಿ ಮಾಡುವವರು ಭೂ ಪರಿವರ್ತನೆ ಆದೇಶ ಪತ್ರವನ್ನು ನೋಡಬೇಕು
* ಸದರಿ ಪ್ರಾಪರ್ಟಿಗೆ ಟ್ಯಾಕ್ಸ್ ಕಟ್ಟಿದರೆ ಅದರ ರಿಸಿಪ್ಟ್ ಸಹ ನೋಡಬೇಕು
* ಇ-ಖಾತಾ (E-Khata) ಸರ್ಟಿಫಿಕೇಟ್ ಚೆಕ್ ಮಾಡಬೇಕು ಇದು ಆನ್ಲೈನ್ ನಲ್ಲಿ ಸಿಗುತ್ತದೆ (www.eaasthi.mrc.gov.in ವೆಬ್ ಸೈಟ್ ಗೆ ಹೋಗಿ ಆಸ್ತಿ ಸಂಖ್ಯೆ ಹಾಕಿ ಚೆಕ್ ಮಾಡಬಹುದು)
ಈ ಸುದ್ದಿ ಓದಿ:- ಸಿಂಗಲ್ ಡೋರ್ ಅಥವಾ ಡಬಲ್ ಡೋರ್ ಯಾವ ರೆಫ್ರಿಜರೇಟರ್ ತೆಗೆದುಕೊಳ್ಳುವುದು ಬೆಸ್ಟ್ ನೋಡಿ.!
* ಈ ಮೇಲಿನ ದಾಖಲೆಗಳಂತೆ ಆಸ್ತಿಯ Mother deed, A khata ಅಥವಾ B khata ಸರ್ಟಿಫಿಕೇಟ್ ಇವುಗಳನ್ನು ಪರಿಶೀಲನೆ ಮಾಡಬೇಕು ಹತ್ತಿರದ ಮುನ್ಸಿಪಲ್ ಕಚೇರಿಗೆ ಹೋಗಿ ಸಿವಿಲ್ ಇಂಜಿನಿಯರ್ ಭೇಟಿಯಾಗಿ ಸೈಟ್ ಇರುವ ಜಾಗಕ್ಕೆ ಕರೆದುಕೊಂಡು ಹೋಗುವ ಮೂಲಕ ಆಸ್ತಿ ಅಳತೆಯ ಬಗ್ಗೆ ಅಥವಾ ಇನ್ನಿತರ ವಿಚಾರಗಳ ಬಗ್ಗೆ ಅಸಲಿ ಅಂಶಗಳನ್ನು ತಿಳಿದುಕೊಳ್ಳಬಹುದು.