ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆಯುಷ್ಮಾನ್ ಕಾರ್ಡ್ (Ayushman Card) ನೀಡುತ್ತಿದೆ. ಈ ಆಯುಷ್ಮಾನ್ ಕಾರ್ಡ್ ನಿಂದ ಬಡ ಕುಟುಂಬವೊಂದು ಗರಿಷ್ಠ ರೂ.5,00,000 ವರೆಗೆ ಆರೋಗ್ಯ ಸೇವೆ ಪಡೆಯಬಹುದು. ಆಯುಷ್ಮಾನ್ ಕಾರ್ಡ್ ತಯಾರಿಸುವ ವಿತರಿಸುವ ಕಾರ್ಯವನ್ನು ಆಯುಷ್ಮಾನ್ ಮಿತ್ರ ಮತ್ತು ಕಾಮನ್‌ವೆಲ್ತ್ ಸೇವಾ ಕೇಂದ್ರ ಮಾಡುತ್ತಿವೆ.
ಕೇಂದ್ರ ಸರ್ಕಾರದ ಈ ಯೋಜನೆಯನ್ನು ಯಶಸ್ವಿಯಾಗಿ ಎಲ್ಲಾ ಬಡ ಕುಟುಂಬಗಳಿಗೂ ತಲುಪಿಸುವ ಉದ್ದೇಶದಿಂದ ಈ ಯೋಜನೆ ಮಾಹಿತಿ ನೀಡಿ ಮತ್ತು ಪ್ರಯೋಜನ ಪಡೆಯಲು ಬೇಕಾದ ಸಹಕಾರ ಒದಗಿಸಲು ಪ್ರಾಥಮಿಕ ಕೇಂದ್ರಗಳಲ್ಲಿ ಆಯುಷ್ಮಾನ್ ಮಿತ್ರರನ್ನು (Ayushman Mitra) ನೇಮಕ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದಡಿಯಲ್ಲಿ ಆರೋಗ್ಯ ಮಿತ್ರರಾಗಿ ಕಾರ್ಯನಿರ್ವಹಿಸಲು ಯಾರು ಅರ್ಹರು? ಅರ್ಜಿ ಹೇಗೆ ಸಲ್ಲಿಸಬೇಕು? ಎನ್ನುವ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಈ ಸುದ್ದಿ ಓದಿ:- ಕಡಿಮೆ ಖರ್ಚಿನಲ್ಲಿ ಕನಸಿನ ಮನೆ ನಿರ್ಮಾಣಕ್ಕೆ ಇಲ್ಲಿದೆ ಸುಲಭ ಉಪಾಯ.! ಮನೆ ಕಟ್ಟುವ ಆಸೆ ಇರುವವರು ತಪ್ಪದೆ ನೋಡಿ.!
ನೇಮಕಾತಿ ಸಂಸ್ಥೆ:- ಕೇಂದ್ರ ಸರ್ಕಾರ ಆಯುಷ್ಮಾನ್ ಯೋಜನೆ ವಿಭಾಗ
ಹುದ್ದೆಯ ಹೆಸರು:- ಆಯುಷ್ಮಾನ್ ಮಿತ್ರ
ಉದ್ಯೋಗ ಸ್ಥಳ:- ಭಾರತದಾದ್ಯಂತ…
ವೇತನ ಶ್ರೇಣಿ:- ರೂ.15,000 ದಿಂದ ರೂ.30,000 ವರೆಗೆ ಮಾಸಿಕವಾಗಿ…
ಅರ್ಹತೆಗಳು:-
* ಭಾರತೀಯ ಪ್ರಜೆಯಾಗಿರಬೇಕು.
* 18 ವರ್ಷ ಮೇಲ್ಪಟ್ಟು, ದ್ವಿತೀಯ PUC ಯಲ್ಲಿ ತೇರ್ಗಡೆ ಹೊಂದಿರಬೇಕು.
* ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.
* ಕಡ್ಡಾಯವಾಗಿ ಇಂಗ್ಲಿಷ್ ಮತ್ತು ಹಿಂದಿ ಬಲ್ಲವರಾಗಿರಬೇಕು ಮತ್ತು ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರಬೇಕು.
* ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
* ಅರ್ಜಿ ಸಲ್ಲಿಸಲು ಕೇಳಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಲೇಬೇಕು.
ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್,
* ವೋಟರ್ ID,
* PAN ಕಾರ್ಡ್,
* ಬ್ಯಾಂಕ್ ಪಾಸ್ ಬುಕ್ ಪ್ರತಿ,
* ಮೂಲ ನಿವಾಸ ದೃಢೀಕರಣ ಪ್ರಮಾಣಪತ್ರ
* SSLC, PUC ಮಾರ್ಕ್ಸ್ ಕಾರ್ಡ್,
* ಪಾಸ್ಪೋರ್ಟ್ ಸೈಜ್ ಫೋಟೋ,
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ID
* ಇನ್ನಿತರ ಪ್ರಮುಖ ದಾಖಲೆಗಳು.
ಅರ್ಜಿ ಸಲ್ಲಿಸುವ ವಿಧಾನ:-
* ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿ
* ಆಯುಷ್ಮಾನ್ ಮಿತ್ರ ಅರ್ಜಿ ನಮೂನೆ ಲಿಂಕ್ ಕ್ಲಿಕ್ ಮಾಡಿ, ನಿಮ್ಮ ನೋಂದಣಿ ಮಾಡಬೇಕು.
* ನೋಂದಣಿಯ ನಂತರ, ನಿಮ್ಮ ಬಳಕೆದಾರ ID ಮತ್ತು Password ಬಳಸಿ Login ಆಗಬೇಕು.
* ನಿಮ್ಮ ಹೆಸರು, ವಿಳಾಸ, ಆಧಾರ್ ಸಂಖ್ಯೆ, ಮೊಬೈಲ್ ನಂಬರ್, ನಿಮ್ಮ ವಿದ್ಯಾರ್ಹತೆ ಇತ್ಯಾದಿ ಮಾಹಿತಿಯನ್ನು ನಮೂದಿಸಿ, ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಮತ್ತು ತಪ್ಪದೇ ಅರ್ಜಿ ಸ್ವೀಕೃತಿ ಪ್ರತಿ ಪಡೆಯಿರಿ.
* ನೇಮಕಾತಿ ಸಮಯದಲ್ಲಿ ಸಂಬಂಧಪಟ್ಟ ಅಪ್ಡೇಟ್ ಗಳು ಅಭ್ಯರ್ಥಿ ನೀಡಿರುವ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ID ಗೆ ಸಂದೇಶದ ರೂಪದಲ್ಲಿ ಬರುತ್ತದೆ, ನಂತರ ತಿಳಿಸಿರುವ ಸೂಚನೆಯಂತೆ ನೀವು ಮುಂದುವರೆಯಬೇಕು.
ಈ ಸುದ್ದಿ ಓದಿ:- ರೈತರನ್ನು ಮದುವೆಯಾಗುವ ಯುವತಿಯರಿಗೆ 5 ಲಕ್ಷ ನಗದು.! ಕನ್ಯಾ ಭಾಗ್ಯದ ಬಗ್ಗೆ ಸರ್ಕಾರದ ನಿರ್ಧಾರ.!
ಇದು ಕೇಂದ್ರ ಸರ್ಕಾರದ ಉದ್ಯೋಗವಾಗಿರುವುದರಿಂದ ಯಾವುದೇ ರಾಜ್ಯದ ಆಸಕ್ತ ಅಭ್ಯರ್ಥಿಯು ಅರ್ಜಿ ಸಲ್ಲಿಸಬಹುದು. ಮೇಲೆ ತಿಳಿದಿರುವ ನಿಯಮದಂತೆ ಸರಿಯಾದ ವಿಧಾನದಲ್ಲಿ ಅರ್ಜಿ ಸಲ್ಲಿಸಿ, ಈ ಹುದ್ದೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿ. ಮತ್ತೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಸಾಧ್ಯವಾದಷ್ಟು ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಸಿಗುವಂತೆ ಮಾಡಿ.