ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವ SBI (State bank of Mysore) ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದೆ. ರಾಜ್ಯದಲ್ಲಿರುವ ಎಲ್ಲಾ ನಿರುದ್ಯೋಗಿಗಳು ಅಥವಾ ಬ್ಯಾಂಕಿಂಗ್ ಸೆಕ್ಟರ್ ನಲ್ಲಿ ಉದ್ಯೋಗ ಪಡೆಯಬೇಕು ಎಂದು ಆಸಕ್ತಿ ಇರುವವರು ಅಥವಾ ಈಗಷ್ಟೇ ಪದವಿ ಮುಗಿಸಿ ಉದ್ಯೋಗ ಅರಸುತ್ತಿರುವ ಎಲ್ಲರೂ ಕೂಡ ಈ ಸದಾವಕಾಶವನ್ನು ಉಪಯೋಗಿಸಿಕೊಳ್ಳಬಹುದು.
SBI ತನ್ನಲ್ಲಿ ಖಾಲಿ ಇರುವ 2000 ಅಧಿಕಾರಿ ವರ್ಗದ (Probationary officers) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಈ ಹುದ್ದೆಗಳಿಗೆ ಭಾರತದಾದ್ಯಂತ ಇರುವ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಆ ಅಭ್ಯರ್ಥಿಗಳು SBI ಹೊರಡಿಸಿರುವ ಅಧಿಸೂಚನೆಯಲ್ಲಿರುವ ಮಾನದಂಡಗಳನ್ನು ಪೂರೈಸಬೇಕು.
ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೂ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲಿ ಹುದ್ದೆಗಳ ಕುರಿತ ಕೆಲ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ತಪ್ಪದೆ ಹಂಚಿಕೊಳ್ಳಿ.
ಉದ್ಯೋಗ ಸಂಸ್ಥೆ:- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಉದ್ಯೋಗ ಸ್ಥಳ:- ಭಾರತದಾದ್ಯಂತ…
ಒಟ್ಟು ಹುದ್ದೆಗಳ ಸಂಖ್ಯೆ:- 2,000
ಹುದ್ದೆ ಹೆಸರು:- ಪ್ರೊಫೆಷನರಿ ಆಫೀಸರ್
ವೇತನ ಶ್ರೇಣಿ:- 36,000 ದಿಂದ 63,840
ಶೈಕ್ಷಣಿಕ ವಿದ್ಯಾರ್ಹತೆ:- ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಾದರೂ ಪದವಿ ಪರೀಕ್ಷೆ ಉತ್ತೀರ್ಣಗೊಂಡಿರಬೇಕು.
ಅಕ್ರಮ ಜಮೀನನ್ನು ಸಕ್ರಮ ಮಾಡಿಕೊಳ್ಳುವುದು ಹೇಗೆ ಬೇಕಾಗುವ ದಾಖಲೆಗಳೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ವಯೋಮಿತಿ:-
● ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
● ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 30 ವರ್ಷಗಳು
ವಯೋಮಿತಿ ಸಡಿಲಿಕೆ:-
● SC / ST ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳು
● OBC ಅಭ್ಯರ್ಥಿಗಳಿಗೆ 3 ವರ್ಷಗಳು
● ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು
ಅರ್ಜಿ ಶುಲ್ಕ:-
● SC / ST ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
● ಉಳಿದ ಅಭ್ಯರ್ಥಿಗಳಿಗೆ 750ರೂ.
● ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು.
ಇದುವರೆಗೆ ಯಾರಿಗೆಲ್ಲಾ ಗೃಹಲಕ್ಷ್ಮೀ ಹಣ ಬಂದಿಲ್ಲ ಈ ದಿನಾಂಕದಂದು ಒಂದೇ ಬಾರಿಗೆ 4,000 ರೂಪಾಯಿ ಜಮೆ ಆಗುತ್ತೆ.!
ಅರ್ಜಿ ಸಲ್ಲಿಸುವ ವಿಧಾನ:-
● ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯಲ್ಲಿರುವ ಎಲ್ಲಾ ಅಂಶಗಳನ್ನು ಓದಿ ಅರ್ಥೈಸಿಕೊಳ್ಳಬೇಕು.
● ಮುಖ್ಯವಾಗಿ ನೀಡಿರುವ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ಪೂರೈಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
● ಅರ್ಜಿ ಸಲ್ಲಿಸುವಾಗ ಪದವಿ ಉತ್ತೀರ್ಣರಾಗಿರುವ ಪ್ರಮಾಣ ಪತ್ರವನ್ನು ತಪ್ಪದೆ ಹೊಂದಿರಬೇಕು.
● SBI ಅಧಿಕೃತ ವೆಬ್ಸೈಟ್ಗೆ ಭೇಟಿಕೊಟ್ಟು ಅರ್ಜಿ ಸಲ್ಲಿಸುವ ಅರ್ಜಿ ಫಾರ್ಮ್ ಲಿಂಕ್ ಕ್ಲಿಕ್ ಮಾಡಿ ವಿವರಗಳನ್ನು ತುಂಬಿಸಬೇಕು.
● ಕೇಳಲಾಗುವ ಎಲ್ಲಾ ದಾಖಲೆಗಳ ಕಾಪಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ಅರ್ಜಿ ಶುಲ್ಕ ಪಾವತಿಸಿದ ಪಕ್ಷದಲ್ಲಿ ಅರ್ಜಿ ಶುಲ್ಕವನ್ನು ಪಾವತಿ ಮಾಡಿ ಇ-ರಸೀದಿ ಪಡೆದುಕೊಳ್ಳಬೇಕು.
● ಅರ್ಜಿ ಸಲ್ಲಿಕೆ ಪೂರ್ತಿಯಾದ ಬಳಿಕ ತಪ್ಪದೇ ಅರ್ಜಿ ಸ್ವೀಕೃತಿ ಪ್ರತಿಯನ್ನು ಪಡೆದು ಇಟ್ಟುಕೊಳ್ಳಬೇಕು, ಮುಂದಿನ ದಿನಾಂಕಗಳಲ್ಲಿ ಇದು ಬಳಕೆಗೆ ಬರಲಿದೆ.
ಆಯ್ಕೆ ವಿಧಾನ:-
● ಪೂರ್ವಭಾವಿ ಪರೀಕ್ಷೆ
● ಪ್ರಮುಖ ಪರೀಕ್ಷೆ
● ಸೈಕಾಮೆಟ್ರಿಕ್ ಪರೀಕ್ಷೆ
● ಗ್ರೂಪ್ ಟಾಸ್ಕ್
● ಗ್ರೂಪ್ ಡಿಸ್ಕಶನ್
● ಸಂದರ್ಶನ
● ಅಭ್ಯರ್ಥಿಗಳ ದಾಖಲೆ ಪ್ರತಿಶೀಲನೆ
● ಮೆಡಿಕಲ್ ಟೆಸ್ಟ್
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 07.09.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 27.09.2023.