ಬಿಗ್ ಬಾಸ್ ಸೀಸನ್ 9 ಈಗಾಗಲೇ ಪ್ರಾರಂಭವಾಗಿದ್ದು 3 ವಾರಗಳು ಸಹ ಕಳೆದಿದೆ ಇಬ್ಬರು ಎಲಿಮಿನೇಷನ್ ಆಗಿದ್ದು ಮನೆ ಒಳಗೆ ಇರುವಂತಹ ಎಲ್ಲಾ ಸ್ಪರ್ಧಿಗಳು ಸಹ ತುಂಬಾ ಉತ್ತಮವಾಗಿ ತಮ್ಮ ಆಟವನ್ನು ಆಡುತ್ತಿದ್ದಾರೆ. ಇಲ್ಲಿರುವಂತಹ ಸ್ಪರ್ಧಿಗಳು ತಮ್ಮಲ್ಲಿ ಏನೇ ಬದಲಾವಣೆ ಆದರೂ ಸಹ ಅಂದರೆ ಅವರ ಎಮೋಷನ್ಸ್ ಕೋಪ ಏನೇ ಇದ್ದರೂ ಸಹ ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಸ್ಪರ್ಧಿಗಳಿಗೆ ತೋರಿಸಬೇಕು. ಆದಷ್ಟು ಎಲ್ಲರ ಜೊತೆ ಹೊಂದಾಣಿಕೆಯಲ್ಲಿ ಇದ್ದು ಪ್ರೇಕ್ಷಕರನ್ನು ತಮ್ಮತ್ತ ಸೆಳೆಯಬೇಕು. ಈಗಾಗಲೇ ಸಾಕಷ್ಟು ಬಿಗ್ ಬಾಸ್ ಸ್ಪರ್ಧಿಗಳು ಅಭಿಮಾನಿ ಬಳಗವನ್ನೇ ಕಟ್ಟಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇನ್ನು ಮನೆಯಲ್ಲಿ ಇರುವಂತಹ ಕಾವ್ಯಶ್ರೀ ಗೌಡ ಅವರು ಬಿಗ್ ಬಾಸ್ ಅವರಲ್ಲಿ ಒಂದು ಬೇಡಿಕೆಯನ್ನು ಇಟ್ಟಿದ್ದಾರೆ ಅದೇನೆಂದರೆ ತಮಗೂ ಒಬ್ಬರು ಜೋಡಿ ಬೇಕು ಎನ್ನುವಂತಹ ಒಂದು ಮನವಿಯನ್ನು ತಿಳಿಸಿದ್ದಾರೆ.
ಬಿಗ್ ಬಾಸ್ ಮನೆಗೆ ಬಂದಂತಹ ಪ್ರಾರಂಭದಲ್ಲಿ ಕಾವ್ಯಶ್ರೀ ಗೌಡ ಅವರು ಎಲ್ಲರೊಂದಿಗೂ ಹೊಂದಿಕೊಳ್ಳಲು ಸ್ವಲ್ಪ ಕಷ್ಟಪಟ್ಟಿದ್ದರು. ಆದರೆ ದಿನಗಳು ಕಳೆಯುತ್ತಾ ಇವರು ಎಲ್ಲರೊಟ್ಟಿಗೆ ಹೊಂದಿಕೊಂಡು ಹೋಗುತ್ತಿದ್ದಾರೆ ಹಾಗೆಯೇ ಜನರನ್ನು ರಂಜಿಸುವತ್ತ ಗಮನ ಹರಿಸುತ್ತಿದ್ದಾರೆ. ಕೆಲದಿನಗಳ ಕಾಲ ರಾಕೇಶ್ ಮತ್ತು ಕಾವ್ಯಶ್ರೀ ಅವರು ಒಟ್ಟಿಗೆ ಕೂತುವ ಮಾತನಾಡುವುದು, ಇವರ ಸ್ನೇಹ ಮುಂದುವರೆದಿತ್ತು ಆದರೆ ಇತ್ತೀಚಿಗೆ ರಾಕೇಶ್ ಅವರು ಅಮೂಲ್ಯ ಅವರ ಜೊತೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೆ ಅವರೊಡನೆ ಹೆಚ್ಚು ಬೆರೆಯುತ್ತಿದ್ದಾರೆ ಈ ಕಾರಣಕ್ಕಾಗಿ ಕಾವ್ಯಶ್ರೀ ಅವರು ರಾಕೇಶ್ ಅವರ ಮೇಲೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ರಾಕೇಶ್ ಜೊತೆಯಲ್ಲಿ ಮಾತು, ಹಾಡು, ಹರಟೆ ಹಾಗೆಯೇ ಸ್ವಲ್ಪ ತರಲೆ ಈ ರೀತಿಯಾಗಿ ಇದ್ದಂತಹ ಕಾವ್ಯಶ್ರೀ ಅವರಿಗೆ ರಾಕೇಶ್ ಅವರು ತಮ್ಮನ್ನು ಮಾತನಾಡಿಸುತ್ತಿಲ್ಲ ಆದ್ದರಿಂದ ನನಗೆ ಯಾರಾದರೂ ಒಬ್ಬರು ಜೋಡಿ ಬೇಕು ಎಂದು ಹೇಳಿ ಗೋಳಾಡುತ್ತಿದ್ದಾರೆ.
ರಾಕೇಶ್ ಮತ್ತೆ ಅಮೂಲ್ಯ ಅವರು ಒಟ್ಟಾಗಿ ಮಾತನಾಡುವುದು ಮತ್ತು ಓಡಾಡುವುದನ್ನು ನೋಡಿ ಹಾಸ್ಯ ಸ್ಪದವಾಗಿ ಅವರನ್ನು ವರ್ಣಿಸಿದ್ದಾರೆ ರಾಕೇಶ್ ಅವರನ್ನು ನಾನು ಕಾಳು ಹಾಕಿ ಅಣ್ಣನಂತೆ ಸಾಕಿಕೊಂಡಿದ್ದಾರೆ ಆದರೆ ಪಾರಿವಾಳ ಇಂದು ಹಾರಿ ಹೋಗಿದೆ ಎಂದು ಹೇಳುತ್ತಿದ್ದಾರೆ. ಕಳೆದ ಸೀಸನ್ ಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಕೆಲವೊಂದು ಜೋಡಿಗಳು ಕಂಫರ್ಟ್ ಝೋನ್ ಸೃಷ್ಟಿಸಿಕೊಂಡು ಉತ್ತಮ ಸಂಬಂಧವನ್ನು ಹೊಂದಿದ್ದರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ನಂತರ ರಿಲೇಶನ್ಶಿಪ್ ಹಾಗೆ ಉಳಿಸಿಕೊಂಡಿದ್ದಾರೆ ಇನ್ನು ಕೆಲವರು ಅದನ್ನು ಬ್ರೇಕ್ ಮಾಡಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಬಿಗ್ ಬಾಸ್ ಸೀಸನ್ 9 ನಲ್ಲಿ ರಾಕೇಶ್ ಮತ್ತು ಕಾವ್ಯಶ್ರೀ ಅವರು ಸ್ವಲ್ಪ ಹೆಚ್ಚಾಗಿಯೇ ಕ್ಲೋಸ್ ಆಗಿ ಇದ್ದರು ಕಾವ್ಯ ಅವರು ರಾಕೇಶ್ ಅವರನ್ನು ಅಣ್ಣ ಎಂದೇ ಕರೆಯುತ್ತಾರೆ.
ರಾಕೇಶ್ ಹೆಚ್ಚು ಸಮಯವನ್ನು ಕಾವ್ಯಶ್ರೀ ಅವರ ಜೊತೆಯಲ್ಲಿ ಈ ಹಿಂದೆ ಕಳೆದಿದ್ದರು ಆದರೆ ಇತ್ತೀಚೆಗೆ ಅಮೂಲ್ಯ ಅವರ ಜೊತೆಯಲ್ಲಿ ಹೋಡಾಡುತ್ತಿದ್ದು ಕಾವ್ಯ ಅವರಿಗೆ ಇದನ್ನು ನೋಡಲು ಆಗುತ್ತಿಲ್ಲ. ಬಿಗ್ ಬಾಸ್ ಮನೆಯಲ್ಲಿ ನಾನೊಬ್ಬಳು ಸಿಂಗಲ್ ಯಾರು ನನ್ನನ್ನು ಗ್ರೂಪ್ ನಲ್ಲಿ ಸೇರಿಸಿಕೊಳ್ಳುವುದಿಲ್ಲ ಹಾಗೆಯೇ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೂ ನನ್ನ ತೀರ್ಮಾನವನ್ನು ಸಹ ಕೇಳುವುದಿಲ್ಲ ಎಂದಿದ್ದಾರೆ. ಹಾಸ್ಯದ ಮೂಲಕ ವ್ಯಕ್ತಪಡಿಸಿದ್ದಾರೆ ಹೀಗೆ ರಾಕೇಶ್ ಅವರನ್ನು ಕಾಲೆಳೆಯುವ ಮೂಲಕ ಜನರನ್ನು ರಂಜಿಸುವ ಪ್ರಯತ್ನ ಮಾಡಿದ್ದಾರೆ. ಈ ಮಾಹಿತಿ ಇಷ್ಟ ಆದರೆ ತಪ್ಪದೇ ಕಮೆಂಟ್ಸ್ ಮೂಲಕ ತಿಳಿಸಿ.