ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು (Government) ರೈತನಿಗಾಗಿ (Farmers Schemes) ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಪ್ರತಿ ಬಜೆಟ್ ನಲ್ಲೂ ಕೂಡ ರಾಜ್ಯದಿಂದ ಹಾಗೂ ಕೇಂದ್ರದಿಂದ ಕೃಷಿ ಕ್ಷೇತ್ರಕ್ಕಾಗಿ ದೊಡ್ಡ ಮೊತ್ತದ ಹಣ ಈ ಕ್ಷೇತ್ರಕ್ಕಾಗಿ ಮೀಸಲಾಗಿರುತ್ತದೆ. ಈ ಅನುದಾನವನ್ನು ಗ್ರಾಮ ಪಂಚಾಯಿತಿಗಳು, ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆ ಪಡೆದು ಅವುಗಳ ಮೂಲಕ ರೈತರಿಗೆ ಸೂಕ್ತವಾದ ಯೋಜನೆಯನ್ನು ರೂಪಿಸಿ ತಲುಪಿಸುತ್ತವೆ.
ಇದರ ಜೊತೆಗೆ ಕೃಷಿಗೆ ಸಂಬಂಧಿಸಿದ ಬ್ಯಾಂಕ್ ಗಳು, ಸಹಕಾರಿ ಬ್ಯಾಂಕ್ ಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳು ಕೂಡ ಕೃಷಿ ಕ್ಷೇತ್ರಕ್ಕಾಗಿ ಸಾಲ ಸೌಲಭ್ಯವನ್ನು ನೀಡುತ್ತಿವೆ. ಇದರಲ್ಲಿ ಕೆಲವೊಮ್ಮೆ ಬಡ್ಡಿರಹಿತ ಸಾಲ ಸೌಲಭ್ಯವಿದ್ದರೆ, ಕೆಲವೊಮ್ಮೆ ಸಬ್ಸಿಡಿ ರೂಪದ ಸಾಲ ಸೌಲಭ್ಯ ಸಿಗುತ್ತದೆ, ಕೆಲವೊಮ್ಮೆ ರೈತನ ಕ’ಷ್ಟ’ದ ಸಮಯದಲ್ಲಿದ್ದಾಗ ಸಾಲ ಮತ್ತು ಬಡ್ಡಿ ಕೂಡ ಮನ್ನಾ ಆಗುತ್ತದೆ.
ಅದೇ ರೀತಿ ಈಗ ರೈತನ ಒಂದು ಲಕ್ಷದವರೆಗಿನ ಸಾಲ ಮನ್ನಾ ಮಾಡುವ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಲೋನ್ ಪಡೆದ ರೈತರ ಒಂದು ಲಕ್ಷದವರೆಗಿನ ಸಾಲ ಮನ್ನಾ (loan waiver) ಆಗಿದೆ. ಕಿಸನ್ ಕ್ರೆಡಿಟ್ ಕಾರ್ಡ್ ಗಳು ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ರೈತನಿಗೆ ಹಲವು ಸೌಲಭ್ಯವನ್ನು ಒದಗಿಸುತ್ತವೆ.
ಅಪಾಯವಾದ ಸಂದರ್ಭದಲ್ಲಿ ಅ’ಪ’ಘಾ’ತ ವಿಮೆ ಹಾಗೂ ಮರಣ ಹೊಂದಿದ ಸಂದರ್ಭದಲ್ಲಿ ವಿಮೆ ನೀಡುವುದರ ಜೊತೆಗೆ ರೈತನಿಗೆ ಕೃಷಿ ಚಟುವಟಿಕೆ ಸಂಬಂಧಪಟ್ಟ ಹಾಗೆ ಹೂಡಿಕೆಗೆ ಮತ್ತು ಖರೀದಿಗಳಿಗೆ ಸಾಲದ ನೆರವು ನೀಡಿ ನೆರವಾಗುತ್ತಿದೆ. ಅದೇ ರೀತಿ ನ’ಷ್ಟ ಹೊಂದಿದ ಸಮಯದಲ್ಲಿ ಸಾಲ ಮನ್ನ ಮಾಡುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ.
2 ಹೆಕ್ಟರ್ ಒಳಗಿನ ಕೃಷಿ ಭೂಮಿ ಹೊಂದಿರುವ ರೈತನ 50,000 ದಿಂದ 1 ಲಕ್ಷದವರೆಗಿನ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಸಾಲ ಮನ್ನಾ ಮಾಡಿದೆ. ಯಾವೆಲ್ಲಾ ರೈತರ ಸಾಲ ಮನ್ನಾ ಆಗಿದೆ ಎನ್ನುವ ಪಟ್ಟಿ ಕೂಡ ಬಿಡುಗಡೆ ಆಗಿದ್ದು ಸರ್ಕಾರದ ಅಫಿಶಿಯಲ್ ವೆಬ್ಸೈಟ್ ಗೆ ಭೇಟಿ ಕೊಡುವ ಮೂಲಕ ಆ ಲಿಸ್ಟ್ ಚೆಕ್ ಮಾಡಿ ನೀವು ಫಲಾನುಭವಿಗಳಾಗಿದ್ದೀರಾ (beneficiary list) ಎಂದು ತಿಳಿದುಕೊಳ್ಳಬಹುದು.
ಕಿಸಾನ್ ಕ್ರಿಕೆಟ್ ಕಾರ್ಡ್ ಪಡೆಯುವ ವಿಧಾನ:-
● ಆಫ್ಲೈನ್ ಮೂಲಕ ಪಡೆದುಕೊಳ್ಳಲು ಹತ್ತಿರದಲ್ಲಿರುವ ಬ್ಯಾಂಕ್ ಶಾಖೆಗೆ (Nearest bank branch) ಹೋಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಅರ್ಜಿ ಪಡೆದು ವಿವರಗಳನ್ನು ತುಂಬಿಸಿ ಪೂರಕ ದಾಖಲೆಗಳನ್ನು ಒದಗಿಸಿ ಪಡೆಯಬಹುದು.
● ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದಾದರೆ ಬ್ಯಾಂಕ್ ಶಾಖೆಯ ವೆಬ್ ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಸ್ಕ್ಯಾಲ್ ಮಾಡಿ ಅಪ್ಲೋಡ್ ಮಾಡಿ ಸಲ್ಲಿಸಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಇರುವ ಮನದಂಡಗಳು:-
● ಕೃಷಿ ಭೂಮಿಯ ಮಾಲೀಕನಾಗಿ ಕೃಷಿಕರಾಗಿರುವ ಯಾವುದೇ ವೈಯಕ್ತಿಕ ರೈತ ಮಾತ್ರವಲ್ಲದೇ ಒಂದು ಗುಂಪಿಗೆ ಸೇರಿದ ಜನರು ಒಟ್ಟಿಗೆ ಕೃಷಿ ಮಾಡಿದರೆ ಅವರೂ ಅರ್ಹರಾಗಿರುತ್ತಾರೆ.
● ಶೇರು ಬೆಳೆಗಾರರು, ಹಿಡುವಳಿದಾರ ರೈತರು, ಗುತ್ತಿಗೆದಾರ ರೈತರು, ಸ್ವ-ಸಹಾಯ(SHG) ಗುಂಪು ಸಹಾ KCC ಪಡೆಯಲು ಅರ್ಹರಾಗಿರುತ್ತಾರೆ.
● ಬೆಳೆ ಉತ್ಪಾದನೆಯಲ್ಲಿ ತೊಡಗಿಕೊಂಡಿರುವ ರೈತರು ಮಾತ್ರವಲ್ಲದೇ ಅಥವಾ ಮೀನುಗಾರಿಕೆ ಮತ್ತು ಪಶುಸಂಗೋಪನೆಯಂತಹ ಅವಲಂಬಿಸಿರುವ ರೈತರು ಕೂಡ ಅರ್ಹರಾಗಿರುತ್ತಾರೆ.
KCC ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:-
● ವಿವರಗಳನ್ನು ಭರ್ತಿ ಮಾಡಿ ಸಹಿ ಮಾಡಿದ ಅರ್ಜಿ ನಮೂನೆ.
● ಗುರುತಿನ ಚೀಟಿ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಇವುಗಳಲ್ಲಿ ಒಂದು).
● ವಿಳಾಸದ ಪುರಾವೆ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ , ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಇವುಗಳಲ್ಲಿ ಒಂದು). ಪುರಾವೆಯು ಮಾನ್ಯವಾಗಲು ಅರ್ಜಿದಾರರು ಪ್ರಸ್ತುತ ವಿಳಾಸವನ್ನು ಹೊಂದಿರಬೇಕು.
● ಭೂಮಿಯ ದಾಖಲೆಗಳು.
● ಅರ್ಜಿದಾರರ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.
● ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುವ ಬ್ಯಾಂಕ್‌ನಿಂದ ವಿನಂತಿಸಿದ ಭದ್ರತಾ PDC ದಾಖಲೆಗಳು.