ರೈತರಿಗೆ ಬೆಳೆ ಹಾನಿಯಾಗುವ ಅಥವಾ ಕಷ್ಟಪಟ್ಟು ಶ್ರಮವಹಿಸಿ ಬೆಳೆದ ಬೆಳೆಗಳಿಗೆ ಬೆಲೆ ಸಿಗದೆ ನ’ಷ್ಟವಾಗುವ ಕಷ್ಟಗಳು ಒಂದು ಕಡೆಯಾದರೆ ತಾನು ಹೊಂದಿರುವ ಆಸ್ತಿ ಕುರಿತಾದ ವಿವಾದಗಳು ಮತ್ತೊಂದು ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತಿವೆ.
ಉದಾಹರಣೆಗೆ ಒಬ್ಬ ರೈತನಿಗೆ ಆತನ ಜಮೀನಿನಲ್ಲಿ ಫಲವತ್ತತೆ ಇದೆ, ಉತ್ತಮವಾದ ಇಳುವರಿ ಕೂಡ ಪಡೆಯುತ್ತಿದ್ದಾನೆ, ಹಾಗೆಯೇ ಆತ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಬೇಡಿಕೆ ಕೂಡ ಇದೆ ಎಲ್ಲವೂ ಸರಿ ಆದರೆ ಆತನ ಜಮೀನಿಗೆ ಹೋಗಲು ಮುಂದೆ ಇರುವ ರೈತ ಜಾಗ ಬಿಡದೆ ಹೋದರೆ ಈ ವಿಚಾರವಾಗಿ ಪ್ರತಿನಿತ್ಯವೂ ಹೊಟ್ಟೆಕಿಚ್ಚಿನಿಂದ ತಕರಾರು ಮಾಡುತ್ತಿದ್ದರೆ ಒಂದು ದಿನ ದಾರಿಯೇ ಮುಚ್ಚಿ ಬಿಟ್ಟರೆ ಪರಿಸ್ಥಿತಿ ಹೇಗೆ?
ಹಳ್ಳಿಗಳಲ್ಲಿ ಒಬ್ಬ ರೈತನ ಜಮೀನಿನಿಂದ ಹಿಂದೆ ಇರುವ ಜಮೀನುಗಳಿಗೆ ಹೋಗಲು ದಾರಿ ಬೇಕೇ ಬೇಕು. ಆತ ತನ್ನ ಕೃಷಿ ಪರಿಕರಗಳನ್ನು ಸಾಗಿಸಲು, ಆಳುಕಾಳು ಹೋಗಲು, ನಂತರ ಬೆಳೆಯನ್ನು ಮಾರುಕಟ್ಟೆಗೆ ತಲುಪಿಸಲು, ಸಾರಿಗೆ ವ್ಯವಸ್ಥೆಗೆ, ವಾಹನಗಳು ಓಡಾಡಲು ಹೀಗೆ ಇತ್ಯಾದಿ ಕಾರಣಕ್ಕಾಗಿ ದಾರಿ ಬೇಕು ಮತ್ತು ಪ್ರತಿನಿತ್ಯ ಆದರೆ ಮೇಲೆ ಓಡಾಡಬೇಕು.
ಈ ಸುದ್ದಿ ಓದಿ:- ಜಮೀನು ಖರೀದಿ ಮಾಡುವ ಮುನ್ನ ಈ ದಾಖಲೆ ಚೆಕ್ ಮಾಡುವುದು ಕಡ್ಡಾಯ.! ಹೊಸ ರೂಲ್ಸ್ ತಂದ ಸರ್ಕಾರ
ಅಣ್ಣ ತಮ್ಮಂದಿರು ಒಟ್ಟಿಗೆ ಇದ್ದಾಗ ಬಾಯಿ ಮಾತಿನಲ್ಲಿ ದಾರಿ ಬಿಟ್ಟುಕೊಂಡು ನಂತರ ಅವರ ಮಕ್ಕಳುಗಳು ದಾರಿ ಬಿಡದೆ ತಕರಾರು ತೆಗೆದರೆ ಅಥವಾ ಅವರು ಮಾರಾಟ ಮಾಡಿದ ಮೇಲೆ ಬೇರೆ ವ್ಯಕ್ತಿ ಇನ್ನು ಮುಂದೆ ದಾರಿ ಬಿಡುವುದಿಲ್ಲ ಎಂದು ಜ’ಗ’ಳ ತೆಗೆದರೆ ಹಿಂದೆ ಇರುವ ಭೂಮಿಯ ರೈತನ ಪರಿಸ್ಥಿತಿ ಏನು? ಇದೇ ಕಾರಣಕ್ಕಾಗಿ ಕೋರ್ಟು ಕಛೇರಿ ಮೆಟ್ಟಿಲು ಹತ್ತಿರುವವರ ಸಂಖ್ಯೆಯೂ ಬೇಕಾದಷ್ಟು ಇದೆ.
ಹಾಗಾದರೆ ಕಾನೂನಿನಲ್ಲಿ ಇದಕ್ಕೆ ಪರಿಹಾರ ಏನಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇನೆ. ನಮ್ಮ ದೇಶದಲ್ಲಿ ಸಣ್ಣ ರೈತರ ಪ್ರಮಾಣವೇ ಹೆಚ್ಚಾಗಿದೆ ಮತ್ತು ಪ್ರತಿ ಹಳ್ಳಿಯಲ್ಲೂ ಇಂತಹದೊಂದು ಸಮಸ್ಯೆ ಇದೆ. ಅಸೆಸ್ಮೆಂಟ್ ಕಾಯ್ದೆ (Assesment act) ಮೂಲಕ ಇದಕ್ಕೆ ಪರಿಹಾರ ಕಾಣಬಹುದು.
ಈ ಕಾಯ್ದೆಯು ಮೂಲಕ ರೈತನ ತನ್ನ ಜಮೀನಿಗೆ ಎಂದಿನಂತೆ ಹೋಗಲು ದಾರಿ ಬಿಡದಿದ್ದ ಸಂದರ್ಭದಲ್ಲಿ ಅಡ್ಡಿಪಡಿಸಿದವರ ವಿರುದ್ಧ ದೂರು ದಾಖಲಿಸಬಹುದು ಎಂದು ಹೇಳುತ್ತದೆ. .ಎಸೆಸ್ಮೆಂಟ್ ಆಕ್ಟ್ ನಲ್ಲಿ ಬೇರೆ ಬೇರೆ ಪ್ರಕಾರಗಳು ಇದ್ದು ಯಾವ ಪ್ರಕಾರವಾಗಿ ನ್ಯಾಯ ಪಡೆಯಬಹುದು ಎನ್ನುವುದರ ವಿವರ ಹೀಗಿದೆ ನೋಡಿ.
ಈ ಸುದ್ದಿ ಓದಿ:- ಉಚಿತ ಟೈಲರಿಂಗ್ ತರಬೇತಿ ಆರಂಭ ಆಸಕ್ತರು ಅರ್ಜಿ ಸಲ್ಲಿಸಿ.!
* ಸುಮಾರು 15-20 ವರ್ಷಗಳಿಂದ ಇದ್ದ ಕಾಲುದಾರಿಯನ್ನು ಏಕಾಏಕಿ ಮುಚ್ಚಿ ಅದರಲ್ಲಿ ನಾಟಿ ಮಾಡುವುದು ಅಥವಾ ಬೆಳೆ ಬೆಳೆಯುವುದು ಮಾಡಿದರೆ ದಾರಿ ಇಲ್ಲದಂತೆ ಆಗಬಹುದು. ಇಂತಹ ಸಂದರ್ಭದಲ್ಲಿ ಇಸ್ಸ್ಮೆಂಟ್ ಪ್ರಿಸ್ಕ್ರಿಪ್ಷನ್ (Easement Priscription) ನಡಿಯಲ್ಲಿ ಕೇಸ್ ದಾಖಲಿಸಬಹುದು
* ಬಹಳ ವರ್ಷಗಳಿಂದ ಅಂದರೆ ತಲತಲಾಂತರದಿಂದ ಯಾವುದಾದರೂ ಜಮೀನಿಗೆ ಹೋಗಲು ಕಾಲು ದಾರಿ ಇದ್ದರೆ ಅದನ್ನು ಯಾರೂ ಕೂಡ ತಮ್ಮ ಜಾಗ ಎಂದು ಏಕಾಏಕಿ ವಶಕ್ಕೆ ತೆಗೆದುಕೊಳ್ಳುವಂತೆ ಇಲ್ಲ ಎಂದು ಹೇಳುತ್ತದೆ ರೂಲ್ಸ್
* ಒಂದು ಜಮೀನಿಗೆ ಹೋಗುವ ದಾರಿ ಸರ್ಕಾರದಲ್ಲದೆ ಇದ್ದರೆ, ಖಾಸಗಿದಾರರದ್ದಾರೆ ಅದು ಬಹಳ ವರ್ಷಗಳಿಂದಲೂ ದಾರಿಯಾಗಿಯೇ ಉಪಯೋಗಿಸಲ್ಪಟ್ಟಿದ್ದರೆ ಅಂತಹ ದಾರಿಯನ್ನು ಯಾರು ಮುಚ್ಚುವಂತಿಲ್ಲ. ಒಂದು ವೇಳೆ ಆ ರೀತಿ ಮಾಡಿದರೆ ಕಸ್ಟಮ್ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಬಹುದು. ಹೀಗೆ ನೀವು ಕಾನೂನನ್ನು ಸರಿಯಾಗಿ ತಿಳಿದುಕೊಂಡರೆ ನಿಮ್ಮ ಜಮೀನಿಗೆ ಹೋಗಲು ದಾರಿ ಕೊಡದೆ ತೊಂದರೆ ಮಾಡುವವರ ವಿರುದ್ಧ ಕೇಸ್ ಹಾಕಿ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು.
ಈ ಸುದ್ದಿ ಓದಿ:- ಕೆನರಾ ಬ್ಯಾಂಕ್ ಅಕೌಂಟ್ ನಲ್ಲಿ ಅಕೌಂಟ್ ಇದ್ದವರಿಗೆ ಬಂಪರ್ ಕೊಡುಗೆ, ನಿಮ್ಮ ಹಣ ಡಬಲ್ ಆಗುವ ಹೊಸ ಸ್ಕೀಮ್.!
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಇದ್ದಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈಗೊಂಡು ನಿಮಗೆ ದಾರಿ ಸಿಗುವಂತೆ ಮಾಡಿಕೊಡುತ್ತಾರೆ. ಇದಕ್ಕೆ ಅವಕಾಶ ಕೊಡದೆ ರೈತರು ಒಬ್ಬರ ಕಷ್ಟವನ್ನು ಮತ್ತೊಬ್ಬರು ಅರ್ಥ ಮಾಡಿಕೊಂಡು ಒಗ್ಗಟ್ಟಾಗಿದ್ದರೆ ಒಳ್ಳೆಯದು ಅಲ್ಲವೇ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.