ಆಧಾರ್ ಕಾರ್ಡ್, ವೋಟರ್ ಐಡಿ ರೀತಿ ಪ್ಯಾನ್ ಕಾರ್ಡ್ (Pan Card) ಕೂಡ ಪ್ರತಿಯೊಬ್ಬ ವ್ಯಕ್ತಿ ಹೊಂದಿರಬೇಕಾದ ಅಗತ್ಯ ದಾಖಲೆಯಾಗಿದೆ. ಈ ದಾಖಲೆ ಇಲ್ಲದೇ ಇದ್ದರೆ ಆದಾಯ ತೆರಿಗೆ ಪಾವತಿ ಮಾಡಲು (ITR ಸಲ್ಲಿಸಲು) ಸಾಧ್ಯವಾಗುವುದೇ ಇಲ್ಲ. ಆದಾಯ ತೆರಿಗೆ ಇಲಾಖೆಯೇ ಪ್ಯಾನ್ ಕಾರ್ಡ್ ಗಳನ್ನು ವಿತರಿಸುತ್ತದೆ 10 ಅಲ್ಪ ನ್ಯೂಮರಿಕ್ ಅಂಕಿಗಳುಳ್ಳ ವಿಶಿಷ್ಟ ಸಂಖ್ಯೆಯನ್ನು ಪಾನ್ ಕಾರ್ಡ್ ನಲ್ಲಿ ನೀಡಲಾಗುತ್ತದೆ.
ಇದು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಭಿನ್ನವಾಗಿದ್ದು ಶಾಶ್ವತ ಸಂಖ್ಯೆ ಆಗಿರುತ್ತದೆ. ಒಮ್ಮೆ ಈ ಸಂಖ್ಯೆ ಪಡೆದರೆ ಇದನ್ನು ಎಂದಿಗೂ ಸಹ ಬದಲಾಯಿಸಲು ಸಾಧ್ಯವಾಗುವುದಿಲ್ಲ. ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ (Aadhar link) ಮಾಡುವ ಪ್ರಕ್ರಿಯೆ 2023ರ ವರ್ಷದಲ್ಲಿ ಹೆಚ್ಚು ಚರ್ಚೆಯಲ್ಲಿ ಇತ್ತು. ಸಾಕಷ್ಟು ಬಾರಿ ಉಚಿತ ಅವಕಾಶ ಕೊಟ್ಟಿದ್ದ ಸರ್ಕಾರವು ರೂ.1000 ದಂಡದೊಂದಿಗೆ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಜೂನ್ 30ರವರೆಗೆ ಕಾಲಾವಕಾಶ ನೀಡಿತ್ತು.
ಈ ಸುದ್ದಿ ಓದಿ:- ಬರ ಪರಿಹಾರ ಹಣ ಜಮೆ ಆಗದ ರೈತರು ಕೂಡಲೇ ಈ ಕೆಲಸ ಮಾಡಿ.! ನಿಮ್ಮ ಖಾತೆಗೆ ಹಣ ಬರುತ್ತೆ.!
ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಗೆ ಲಿಂಕ್ ಆಗದೆ ಇದ್ದರೆ ಯಾವುದೇ ರೀತಿ ಹಣಕಾಸಿನ ವ್ಯವಹಾರ ಕೂಡ ನಡೆಯುವುದಿಲ್ಲ. ಹಾಗೆಯೇ ಪ್ಯಾನ್ ಕಾರ್ಡ್ ಗಳಲ್ಲಿ ಸಮಸ್ಯೆ ಇದ್ದರೂ ಕೂಡ ಇಂತಹ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೆಲವು ಸಮಯದಲ್ಲಿ ಆದಾಯ ತೆರಿಗೆ ಇಲಾಖೆ ಈ ವಿಷಯಕ್ಕಾಗಿ ನಿಮಗೆ ದಂಡ ಕೂಡ ವಿಧಿಸುತ್ತದೆ.
ಇದಾದ ನಂತರವೂ ಕೂಡ ಆದಾಯ ತೆರಿಗೆ ಇಲಾಖೆ ಪಾನ್ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ನೀವೇನಾದರೂ ಈ ನಿಯಮಗಳನ್ನು ಮುರಿದರೆ ಗರಿಷ್ಠ ರೂ.10,000 ದವರೆಗೆ ನಿಮ್ಮಿಂದ ದಂಡ ವಸೂಲಿ ಮಾಡುತ್ತದೆ. ಇದರ ಕುರಿತಾದ ಮಾಹಿತಿ ಹೀಗಿದೆ ನೋಡಿ…
* ಆದಾಯ ತೆರಿಗೆ ಪಾವತಿ ಮಾಡುವ ಸಮಯದಲ್ಲಿ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ತಪ್ಪಾಗಿ ನೀಡಿ ಸಮಸ್ಯೆ ಉಂಟಾದರೆ ರೂ.10,000 ದಂಡ ಬೀಳುತ್ತದೆ.
ಈ ಸುದ್ದಿ ಓದಿ:- ಫೆಬ್ರವರಿ ತಿಂಗಳ ಅಕ್ಕಿಯ ಹಣ ಪಡೆಯಲು ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!
* ನೀವು ಪ್ಯಾನ್ ಕಾರ್ಡ್ ಇಲ್ಲದೆ ITR ಸಲ್ಲಿಸಲು ಕೂಡ ಸಾಧ್ಯವೇ ಇಲ್ಲ. ಒಂದು ವೇಳೆ ಪಾನ್ ಕಾರ್ಡ್ ನೀಡಲು ವಿಫಲವಾದರೆ, ಪಾನ್ ಕಾರ್ಡ್ ಇಲ್ಲದೆ ಇದ್ದರೆ ಅಥವಾ ಪಾನ್ ಕಾರ್ಡ್ ನಲ್ಲಿ ಸಮಸ್ಯೆ ಇದ್ದರೆ ದಂಡ ಪಾವತಿಸಬೇಕಾಗುತ್ತದೆ.
* ನಿಮ್ಮ ಬಳಿ ಇರುವ ಪ್ಯಾನ್ ಕಾರ್ಡ್ ಏನಾದರು ಕಳ್ಳತನವಾದರೆ ನೀವು ತಕ್ಷಣವೇ ಆದಾಯ ತೆರಿಗೆ ಇಲಾಖೆ ಹಾಗೂ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಬೇಕು.
* ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿರುವುದು ಕೂಡ ಅಕ್ಷಮ್ಯ ಅಪರಾಧ. ನಿಮ್ಮ ಬಳಿ ಏನಾದರೂ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಇದ್ದರೆ ಅದನ್ನು ತಕ್ಷಣವೇ ಆದಾಯ ತೆರಿಗೆ ಇಲಾಖೆಗೆ ಹಿಂತಿರುಗಿಸಿ. ಒಂದು ವೇಳೆ ನಿಮ್ಮ ಬಳಿ ಎರಡು ಕಾರ್ಡ್ ಇದ್ದು ಎರಡು ಬೇರೆ ಬೇರೆ ಪಾನ್ ಸಂಖ್ಯೆಯನ್ನು ಬಳಸಿ ಆದಾಯ ತೆರಿಗೆ ಉಳಿತಾಯ ಮಾಡಲು ಪ್ರಯತ್ನಿಸಿದರೆ, ಈ ವಂಚನೆಗೂ ಬಾರಿ ಪ್ರಮಾಣದ ದಂಡ ಹಾಗೂ ಶಿಕ್ಷೆಯಾಗುತ್ತದೆ.
ಈ ಸುದ್ದಿ ಓದಿ:- ರೈತರಿಗೆ ಶುಭ ಸುದ್ದಿ ಸರ್ಕಾರದಿಂದ 2 ಲಕ್ಷದವರೆಗಿನ ಸಾಲ ಮನ್ನಾ.!
* ಪಾನ್ ಕಾರ್ಡ್ ಇಲ್ಲದವರು ಆದಾಯ ತೆರಿಗೆ ರಿಟರ್ನ್ ಪಾವತಿಸಲು ಸಾಧ್ಯವಿಲ್ಲ. ಅವರ ಬ್ಯಾಂಕ್ ಖಾತೆ ಹಾಗೂ ಡಿಮ್ಯಾಟ್ ಖಾತೆ ತೆರೆಯಲು ಆಗುವುದಿಲ್ಲ
* ಆಧಾರ್ ಕಾರ್ಡ್ ಅಪ್ಡೇಟ್ ಅದರ ವ್ಯಾಲಿಡಿಟಿ ಬಗ್ಗೆ ಹಲವರಿಗೆ ಗೊಂದಲವಿದೆ. ಇದು ಶಾಶ್ವತ ಸಂಖ್ಯೆ, ನೀವು ನಿಮ್ಮ ಜೀವಿತಾವಧಿಯಲ್ಲಿ ಒಮ್ಮೆ ಪ್ಯಾನ್ ಕಾರ್ಡ್ ಪಡೆದುಕೊಂಡರೆ ಮತ್ತೆ ಅದನ್ನು ಬದಲಾಯಿಸುವುದು ಅಥವಾ ತಿದ್ದುಪಡಿ ಮಾಡುವ ಅಗತ್ಯ ಇರುವುದಿಲ್ಲ. ಪಾನ್ ಕಾರ್ಡ್ ನವೀಕರಣ ಮಾಡುವ ಅಗತ್ಯವಿಲ್ಲ ಒಂದು ವೇಳೆ ನಿಮ್ಮ ಪಾನ್ ಕಾರ್ಡ್ ನವೀಕರಿಸಿಕೊಳ್ಳಿ ಎಂದು ನಿಮ್ಮ ಮೊಬೈಲ್ ಗೆ ಅಥವಾ ಬೇರೆ ಯಾವುದೇ ರೀತಿಯಲ್ಲಿ ಫೋನ್ ಕರೆ ಹಾಗೂ ಇತರ ನೋಟಿಫಿಕೇಶನ್ ಬಂದರೆ ಅದನ್ನು ನಂಬಬೇಡಿ. ಇದು ಮೋ’ಸದ ಜಾಲವಾಗಿರುತ್ತದೆ.
* ವ್ಯಕ್ತಿಯ ಮ’ರ’ಣ’ದ ನಂತರ ಅವರ ಪ್ಯಾನ್ ಕಾರ್ಡ್ ರದ್ದು ಮಾಡುವುದು ಒಳ್ಳೆಯದು. ಇಲ್ಲವಾದರೆ ಅಂತಹ ಪ್ಯಾನ್ ಕಾರ್ಡ್ ಇಟ್ಟುಕೊಂಡು ವಂ’ಚ’ನೆ ಮಾಡುವ ಸಾಧ್ಯತೆ ಇರುತ್ತದೆ.