ಭಾರತೀಯ ಅಂಚೆ ಇಲಾಖೆಯಲ್ಲಿ (India Post Payments Bank) ಪ್ರತಿ ವರ್ಷವೂ ಕೂಡ ತೆರವಾಗುವ ಅನೇಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ತುಂಬಿಸುವ ಪ್ರಕ್ರಿಯೆ ನಡೆಯುತ್ತದೆ. ಆ ಪ್ರಕಾರವಾಗಿ ಈಗ ಇಲಾಖೆ ವತಿಯಿಂದ ಮತ್ತೊಂದು ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ದೇಶದಾದ್ಯಂತ ಇರುವ ಯಾವುದೇ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಇವುಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ನೇಮಕಾತಿ ಅಧಿಸೂಚನೆಯಲ್ಲಿರುವ ಎಲ್ಲಾ ಮಾನದಂಡಗಳನ್ನು ಪೂರೈಸಲು ಸಮರ್ಥರಾಗಿರಬೇಕು ಎನ್ನುವುದೊಂದೇ ಕಂಡೀಶನ್ ಆಗಿರುತ್ತದೆ. ನೀವು ಕೂಡ ಆಸಕ್ತರಾಗಿದ್ದರೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಕೇಂದ್ರ ಸರ್ಕಾರದ ಹುದ್ದೆ ಹೊಂದಿರಿ.
ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಲೇಖನದಲ್ಲಿ ಪ್ರಕಟಣೆಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:- ರೈತರಿಗೆ ಸಿಹಿಸುದ್ದಿ ಈ ಯೋಜನೆ ಮೂಲಕ ಸರ್ಕಾರದಿಂದ ಸಿಗಲಿದೆ 10 ಸಾವಿರ ಸಹಾಯಧನ.!
ನೇಮಕಾತಿ ಸಂಸ್ಥೆ:- ಭಾರತೀಯ ಅಂಚೆ ಇಲಾಖೆ
ಹುದ್ದೆ ಹೆಸರು:- ಕಾರ್ಯನಿರ್ವಾಹಕ (executive)
ಒಟ್ಟು ಹುದ್ದೆಗಳ ಸಂಖ್ಯೆ:- 47 ಹುದ್ದೆಗಳು
ಹುದ್ದೆಯ ಬಗೆ:- ಗುತ್ತಿಗೆ ಆಧಾರದ ಹುದ್ದೆಗಳಾಗಿವೆ
ಉದ್ಯೋಗ ಸ್ಥಳ:- ಭಾರತದಾದ್ಯಂತ.
* ಬಿಹಾರ – 05
* ದೆಹಲಿ – 01
* ಗುಜರಾತ್ – 08
* ಹರಿಯಾಣ – 04
* ಜಾರ್ಖಂಡ್ – 01
* ಕರ್ನಾಟಕ – 01
* ಮಧ್ಯಪ್ರದೇಶ – 03
* ಮಹಾರಾಷ್ಟ್ರ- 02
* ಒಡಿಶಾ – 01
* ಪಂಜಾಬ್ – 04
* ರಾಜಸ್ಥಾನ – 04
* ತಮಿಳುನಾಡು – 02
* ಉತ್ತರ ಪ್ರದೇಶ – 11
ವೇತನ ಶ್ರೇಣಿ:-
ಮಾಸಿಕವಾಗಿ ಗರಿಷ್ಠ ರೂ.30,000 ವರೆಗೂ ಕೂಡ ವೇತನ ಇರುತ್ತದೆ.
ಈ ಸುದ್ದಿ ಓದಿ:- ಕೇವಲ 5 ಲಕ್ಷಕ್ಕೆ ಸಿಗಲಿದೆ 7 ಸೀಟರ್ ಕಾರ್, ಫ್ಯಾಮಿಲಿಗೆ ಹೇಳಿ ಮಾಡಿಸಿದ ಕಾರ್.! ಈ ಕಾರ್ ಮೈಲೇಜ್ & ವೈಶಿಷ್ಟ್ಯವೇನು ನೋಡಿ.!
ಶೈಕ್ಷಣಿಕ ವಿದ್ಯಾರ್ಹತೆ:-
* ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಿಂದ ಪದವಿ ಪಡೆದಿರಬೇಕು.
* ಅದರಲ್ಲಿ ಸೇಲ್ಸ್ ಅಥವಾ ಮಾರ್ಕೆಟಿಂಗ್(Sales/Marketing) ವಿಭಾಗದಲ್ಲಿ MBA ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 21 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು.
ವಯೋಮಿತಿ ಸಡಿಲಿಕೆ:-
* SC / ST / PWD ಅಭ್ಯರ್ಥಿಗಳಿಗೆ 05 ವರ್ಷಗಳು
* OBC ಅಭ್ಯರ್ಥಿಗಳಿಗೆ 03 ವರ್ಷಗಳು
ಅರ್ಜಿ ಸಲ್ಲಿಸುವ ವಿಧಾನ:-
* ಅರ್ಜಿ ಸಲ್ಲಿಸಲು ಮೊದಲು ಅಭ್ಯರ್ಥಿಗಳು ಅಧಿಸೂಚನೆಯಲ್ಲಿರುವ ಕಂಡೀಶನ್ ಗಳನ್ನು ಓದಿ ಪೂರೈಸಿದ ಬಲ್ಲಿರಾ ಎನ್ನುವುದನ್ನು ಅರ್ಥೈಸಿಕೊಳ್ಳಿ
* https://www.ippbonline.com/ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಂಚೆ ಇಲಾಖೆಯ ವೆಬ್ಸೈಟ್ ಆಗಿದ್ದು,ಅಪ್ಲಿಕೇಶನ್ ಓಪನ್ ಆಗುತ್ತದೆ
* ಸ್ವ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
ಈ ಸುದ್ದಿ ಓದಿ:- LIC ಹೊಸ ಸ್ಕೀಮ್ ಕೇವಲ 121 ರೂಪಾಯಿ ಹೂಡಿಕೆ ಮಾಡಿ ಸಾಕು 27 ಲಕ್ಷ ಸಿಗಲಿದೆ.!
* ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅಥವಾ ದಾಖಲೆಗಳ ಸಂಖ್ಯೆ ಕೇಳಿದ್ದಲ್ಲಿ ಸರಿಯಾಗಿ ನಮೂದಿಸಿ
* ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿ ಮಾಡಿ
* ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆಯಿರಿ ಇದು ಭವಿಷ್ಯದಲ್ಲಿ ಅನುಕೂಲಕ್ಕೆ ಬರುತ್ತದೆ ಹಾಗೆಯೇ ಶುಲ್ಕ ಪಾವತಿ ಮಾಡಿರುವುದಕ್ಕೆ ಇ-ರಸೀದಿ ಪಡೆಯಿರಿ
ಆಯ್ಕೆ ವಿಧಾನ:-
* ಕಂಪ್ಯೂಟರೈಸ್ಡ್ ಪರೀಕ್ಷೆ,
* ದಾಖಲೆಗಳ ಪರಿಶೀಲನೆ
* ಸಂದರ್ಶನ
ಅರ್ಜಿ ಶುಲ್ಕ:-
* ಕ್ರೆಡಿಟ್/ ಡೆಬಿಟ್ ಅಥವಾ ನೆಟ್ ಬ್ಯಾಂಕಿಂಗ್ ಅಥವಾ UPI ಪೇಮೆಂಟ್ ಮೂಲಕ ಆನ್ಲೈನ್ ನಲ್ಲಿ ಪಾವತಿಸಬೇಕು
* SC / ST / PWD ಅಭ್ಯರ್ಥಿಗಳಿಗೆ ರೂ. 150
* ಇತರೆ ವರ್ಗದವರಿಗೆ ರೂ. 750
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 15 ಮಾರ್ಚ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 5 ಏಪ್ರಿಲ್, 2024.