ನಟ ಪುನೀತ್ ರಾಜಕುಮಾರ್ ಅವರನ್ನು ಮಿಸ್ಟರ್ ಪರ್ಫೆಕ್ಟ್ ಎಂದೇ ಹೇಳಬಹುದು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಾಗ ತಮ್ಮ ವರ್ಕೌಟ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ನಮ್ಮ ದೇಹಕ್ಕೆ ವ್ಯಾಯಾಮ ಎಷ್ಟು ಮುಖ್ಯ ಎಂದು ಅವರು ವಿಡಿಯೋಗಳ ಮೂಲಕ ತಿಳಿಸುತ್ತಿದ್ದರು ನಟ ಪುನೀತ್ ರಾಜ್ಕುಮಾರ್ ಅವರು ಫಿಟ್ನೆಸ್ಗೆ ಸಾಕಷ್ಟು ಗಮನ ಸೆಳೆದಿದ್ದಾರೆ. ಪ್ರತಿದಿನ ವರ್ಕೌಟ್ ಮಾಡುವುದನ್ನು ಅವರು ತಪ್ಪಿಸುತ್ತಾ ಇರಲಿಲ್ಲ ಆಗಾಗ ತಮ್ಮ ವರ್ಕೌಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ಇತರರಿಗೂ ಸ್ಫೂರ್ತಿ ತುಂಬುತ್ತಿದ್ದರು. ಅವರ ವರ್ಕೌಟ್ ವಿಡಿಯೋಗಳನ್ನು ನೋಡುವುದಕ್ಕೆ ಅಭಿಮಾನಿಗಳೂ ಕಾದಿರುತ್ತಿದ್ದರು. ಹೀರೋ ಆಗುವುದು ಸುಖಾ ಸುಮ್ಮನೆಯಲ್ಲ ಅವರ ದೇಹ ದಂಡಿಸಿ, ಫಿಟ್ ಆಗಿರಲು ನಾಲ್ಕಾರು ಗಂಟೆ ಕಸರತ್ತು ಮಾಡಬೇಕು.
ಪುನೀತ್ ಅವರು ಸ್ಕಿಪ್ಪಿಂಗ್ನಿಂದ ಹಿಡಿದು, ರೋಪ್ ವ್ಯಾಯಾಮದ ತನಕ ಬೇರೆ ಬೇರೆ ರೀತಿಯಲ್ಲಿ ದೇಹವನ್ನು ದಂಡಿಸುತ್ತಿರುವ ವೀಡಿಯೋಗಳು ನಮಗೆ ಕಾಣಸಿಗುತ್ತವೆ. ಇಷ್ಟು ಹಾರ್ಡ್ ವರ್ಕ್ ಔಟ್ ಮಾಡಿದರೆ ದೇಹದಲ್ಲಿ ಬೊಜ್ಜು ಜೀರೋ ಆಗೋದು ಗ್ಯಾರಂಟಿ. ನಟಿ ಮಣಿಯರು ಮಾಡುವ ವರ್ಕ್ ಔಟನ್ನೂ ಪುನೀತ್ ಮಾಡುತ್ತಿದ್ದರು ಪುನೀತ್ ಫಿಟ್ನೆಸ್ ಚಾಲೆಂಜ್ಗಳನ್ನು ಹಾಕಿದ ಹಲವಾರು ಉದಾಹರಣೆಗಳು ಸಹ ಇವೆ. ಈ ಮೂಲಕ ಅವರು ಫಿಟ್ನೆಸ್ ಪ್ರಿಯರು ಪದೇ ಪದೇ ಪ್ರಯತ್ನಿಸುತ್ತಿದ್ದರು. ಕೊರೊನಾ ವೈರಸ್ ನಿಂದಾಗಿ ಎಲ್ಲರೂ ಮನೆಯಲ್ಲೇ ಕೂರುವಂತಾಗಿದೆ. ಜಿಮ್ಸ್ ಕೂಡ ಓಪನ್ ಆಗದ ಕಾರಣ ಫಿಟ್ ನೆಸ್ ಪ್ರಿಯರಿಗೆ ಬೇಸರ ಉಂಟಾಗಿತ್ತು. ಇಂಥಹ ಸಂದರ್ಭದಲ್ಲಿ ಮನೆಯಲ್ಲೇ ವರ್ಕೌಟ್ ಮಾಡಿ ಎಂದು ನಟ ಪುನೀತ್ ರಾಜ್ ಕುಮಾರ್ ಕರೆ ನೀಡಿದ್ದರು. ರಾಜ್ ಕುಮಾರ್ ಕುಟುಂಬವೇ ಹಾಗೆ.
ಫಿಟ್ನೆಸ್ಗೆ ತುಂಬಾನೇ ಪ್ರಾಮುಖ್ಯತೆ ಕೊಡುತ್ತಾರೆ ವರನಟ ಡಾ ರಾಜ್ ಕುಮಾರ್ ನಿತ್ಯವೂ ತಪ್ಪದೇ ಯೋಗಾಸನ ಮಾಡುತ್ತಿದ್ದರು. ಈ ಮೂಲಕ ಅವರು ಎಲ್ಲರಿಗೂ ಮಾದರಿಯಾಗಿದ್ದರು. ಇನ್ನು ನಟ ಶಿವರಾಜ್ ಕುಮಾರ್ ಅವರ ಫಿಟ್ನೆಸ್ ಬಗ್ಗೆ ಯಾರು ಮಾತನಾಡಲಿಲ್ಲ ವಯಸ್ಸು 58 ಆದರೂ ಇನ್ನೂ ಯಂಗ್ ಆಂಡ್ ಎನರ್ಜಿಟಿಕ್ ಆಗಿದ್ದಾರೆ ಪುನೀತ್ ಕೂಡ ಈ ವಿಚಾರದಲ್ಲಿ ಹಿಂದೆ ಉಳಿದಿರಲಿಲ್ಲ ನಿತ್ಯ ಜಿಮ್ ಗೆ ತೆರಳಿ ಪಿಟ್ನೆಸ್ ಕಾಯ್ದುಕೊಂಡಿದ್ದರು. ಅವರು ಮನೆಯಲ್ಲೇ ವರ್ಕೌಟ್ ಮಾಡುವ ವಿಡಿಯೋಗಳು ವೈರಲ್ ಆಗುತ್ತಿವೆ. ವರ್ಕೌಟ್ ಮಾಡಿ ಮತ್ತು ಫಿಟ್ ಆಗಿ ಎಂದು ಎಲ್ಲರಿಗೂ ಸಹ ಹೇಳುತ್ತಿದ್ದರು ಈ ಮೂಲಕ ಅಭಿಮಾನಿಗಳಿಗೆ ಪುನೀತ್ ಫಿಟ್ನೆಸ್ ಪಾಠ ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅವರು ಬೀಚ್ನಲ್ಲಿ ಮಾಡುತ್ತಿರುವಂತಹ ವರ್ಕೌಟ್ ವಿಡಿಯೋ ಎಲ್ಲರ ಗಮನವನ್ನು ತಿಳಿದಿತ್ತು.
ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ನಂತರ ಅವರ ಕೊನೆ ಸಿನಿಮಾ ಗಂಧದ ಗುಡಿ ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ ಈ ಒಂದು ಸಿನಿಮಾಗು ಸಹ ವರ್ಕೌಟ್ಸ್ ಅನ್ನು ಮಾಡುತ್ತಿದ್ದರು ಪುನೀತ್ ರಾಜಕುಮಾರ್ ಅವರು ಎಲ್ಲರಿಗೂ ಸ್ಪೂರ್ತಿ ಎಂದೇ ಹೇಳಬಹುದು. ಅಭಿಮಾನಿಗಳು ಅಪ್ಪು ಅವರ ಒಳ್ಳೆಯ ಅಭ್ಯಾಸಗಳನ್ನು ರೂಡಿಸಿಕೊಂಡಿದ್ದಾರೆ ಅದರಲ್ಲಿ ಅವರ ವರ್ಕೌಟ್ ಸಹ ಒಂದು ಅವರ ವರ್ಕೌಟ್ ಅನ್ನು ಹಲವಾರು ಜನರು ಇಷ್ಟಪಡುತ್ತಿದ್ದರು ಹಾಗೆ ಫಿಟ್ಟಾಗಿ ಇರಬೇಕು ಎಂದು ಅವರನ್ನು ನೋಡಿ ಕಲಿತಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.