ಅಪ್ಪುಗೆ ಅಶ್ವಿನಿ ಪರಿಚಯ ಆಗಿದ್ದು ಹೇಗೆ ಗೊತ್ತ.? ಇವರ ಲವ್ ಸ್ಟೋರಿನೇ ಒಂದು ರೋಚಕ, ಕೊನೆ ಬಾರಿ ಸಂದರ್ಶನದಲ್ಲಿ ಹೇಳಿದ ಈ ಮಾತು ಕೇಳಿ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಹಗಲಿ ಒಂದು ವರ್ಷ ಕಳೆದು ಹೋಗಿದೆ ಈ ಒಂದು ವರ್ಷದಲ್ಲಿ ನಮ್ಮ ಕರುನಾಡಿನ ಜನರು ನೋವು ಎದುರಿಸಿದ ಸಂಕಷ್ಟದ ದಿನಗಳು ಜೊತೆಗೆ ಆ ನೋವಿನ ಕ್ಷಣಗಳನ್ನು ನಾವು ಮರೆಯಲು ಎಂದಿಗೂ ಸಾಧ್ಯವಿಲ್ಲ. ಪುನೀತ್ ರಾಜ್‌ಕುಮಾರ್ ಅವರು ಬದುಕಿರುವಾಗ ಕೊಟ್ಟ ಮಾರ್ಗದರ್ಶಗಳಿಗೂ ಅವರು ಹೋದ ಮೇಲೆ ಅವರು ನೀಡಿದಂತಹ ಒಂದಷ್ಟು ಆದರ್ಶಗಳು ಸಾವಿರ ಪಾಲು ದೊಡ್ಡದು. ಅದರಲ್ಲಿಯೂ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಹಗಲಿದ ದಿನದಿಂದಲೂ ಇಂದಿನವರೆಗೂ ಸಾಕಷ್ಟು ಅಭಿಮಾನಿಗಳು ಕಂಬನಿ ಮಿಡಿದ್ದಾರೆ. ಅದರಲ್ಲಿಯೂ ತಾನು ಪ್ರೀತಿಸಿ ಮದುವೆ ಆದಂತಹ ಗಂಡ ಇನ್ನಿಲ್ಲ ಎಂದು ಸುದ್ದಿಯನ್ನು ಕೇಳಿದ ಕ್ಷಣದಿಂದ ಇವತ್ತಿನವರೆಗೂ ಕೂಡ ಪ್ರತಿಕ್ಷಣ ಅಶ್ವಿನಿ ಅವರು ನೋವನ್ನು ಅನುಭವಿಸುತ್ತಾ ಇದ್ದಾರೆ.

WhatsApp Group Join Now
Telegram Group Join Now

ಪುನೀತ್ ರಾಜ್‌ಕುಮಾರ್ ಮತ್ತು ಅಶ್ವಿನಿ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್, ಪುನೀತ್ ರಾಜ್‌ಕುಮಾರ್ ಅವರದ್ದು ವಿಶೇಷವಾದ ಬದುಕು ದೊಡ್ಡಮನೆ ಹಾಗೆಯೇ ಶ್ರೀಮಂತಿಕೆ ಬದುಕು ಇಷ್ಟೆಲ್ಲಾ ಹಣ ಆಸ್ತಿ ಸಂಪತ್ತು ಇದ್ದರೂ ಸಹ ಪುನೀತ್ ರಾಜ್‌ಕುಮಾರ್ ಅವರಲ್ಲಿ ಅಹಂಕಾರ ಎನ್ನುವಂತದ್ದು ಒಂದು ಸ್ವಲ್ಪವೂ ಇರಲಿಲ್ಲ. 1996ರಲ್ಲಿ ಒಂದು ಹುಡುಗಿಯ ಪರಿಚಯವಾಗುತ್ತದೆ ಆ ಹುಡುಗಿ ಮೊದಲಿಗೆ ಯಾರು ಏನು ಎಂದು ತಿಳಿದಿರುವುದಿಲ್ಲ ಒಬ್ಬ ಕಾಮನ್ ಫ್ರೆಂಡ್ ನ ಮೂಲಕ ಪರಿಚಯ ಆಗುತ್ತದೆ ನೋಡಲು ಸ್ವಲ್ಪ ಗುಂಡಾಗಿ ಮುದ್ದು ಮುದ್ದಾಗಿ ಇದ್ದರು ಅವರೇ ಅಶ್ವಿನಿ.

ಮೊದಲಿಗೆ ಅಶ್ವಿನಿ ಮತ್ತು ಪುನೀತ್ ರಾಜ್‌ಕುಮಾರ್ ಅವರ ನಡುವೆ ಫ್ರೆಂಡ್ಶಿಪ್ ಶುರುವಾಗುತ್ತದೆ ಪುನೀತ್ ರಾಜ್‌ಕುಮಾರ್ ಅವರ ಸಿಂಪ್ಲಿ ಸಿಟಿ ಅಶ್ವಿನಿ ಅವರಿಗೆ ತುಂಬಾ ಇಷ್ಟವಾಗುತ್ತದೆ. ಅಶ್ವಿನಿ ಅವರು ಚಿಕ್ಕಮಂಗಳೂರಿನ ಮಲ್ಲಂದೂರಿನವರು ಆದ್ದರಿಂದ ಅಪ್ಪು ತುಂಬಾ ಇಷ್ಟಪಡುತ್ತಾರೆ. ಕಾಡು ಮಲೆನಾಡಿನ ಪ್ರದೇಶ ಎಂದರೆ ತುಂಬಾ ಇಷ್ಟ ಆದ್ದರಿಂದ ಮಲೆನಾಡಿನ ಹುಡುಗಿ ಆದ್ದರಿಂದ ಪುನೀತ್ ರಾಜ್‌ಕುಮಾರ್ ಗೆ ಅಶ್ವಿನಿ ಅವರ ಮೇಲೆ ಬಾಂಡಿಂಗ್ ಹೆಚ್ಚಾಗುತ್ತದೆ ಹೀಗೆ ಇರುವಂತಹ ಸಂದರ್ಭದಲ್ಲಿ ಆರು ತಿಂಗಳುಗಳ ಕಾಲ ಇವರು ಫೋನಿನಲ್ಲಿ ಮಾತಾಡಿಕೊಂಡು ಮೆಸೇಜ್ ಮಾಡಿಕೊಂಡು ಹೀಗೆ ಕಳೆಯುತ್ತಾರೆ ಹೀಗೆ ಆರು ತಿಂಗಳ ನಂತರ ಇವರ ಫ್ರೆಂಡ್ಶಿಪ್ ತುಂಬಾ ಸ್ಟ್ರಾಂಗ್ ಆಗುತ್ತದೆ ತದನಂತರದಲ್ಲಿ ಪುನೀತ್ ರಾಜ್‌ಕುಮಾರ್ ಅವರು ಅಶ್ವಿನಿ ಬಳಿಯಲ್ಲಿ ನನ್ನನ್ನು ಮದುವೆಯಾಗುತ್ತೀರಾ ಎಂದು ಡೈರೆಕ್ಟಾಗಿ ಕೇಳುತ್ತಾರೆ ಆಗ ಅಶ್ವಿನಿ ಅವರು ಪುನೀತ್ ರಾಜ್‌ಕುಮಾರ್ ಅವರನ್ನು ಒಪ್ಪಿಕೊಳ್ಳುತ್ತಾರೆ.

ಪುನೀತ್ ರಾಜ್‌ಕುಮಾರ್ ಅವರು ತಮ್ಮ ಪ್ರೀತಿಯ ವಿಚಾರವನ್ನು ತಮ್ಮ ಅಣ್ಣನದಂತಹ ಶಿವರಾಜ್ ಕುಮಾರ್ ಅವರ ಬಳಿಯಲ್ಲಿ ಹೇಳುತ್ತಾರೆ ತಮ್ಮ ತಂದೆ ಡಾಕ್ಟರ್ ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ಅವರನ್ನು ಒಪ್ಪಿಸಲು ಶಿವಣ್ಣ ಅವರನ್ನು ಮುಂದೆ ಬಿಡುತ್ತಾರೆ. ಈ ವಿಷಯವನ್ನು ಶಿವರಾಜ್ ಕುಮಾರ್ ಅವರು ತಮ್ಮ ತಂದೆ ತಾಯಿಯ ಬಳಿಯಲ್ಲಿ ಹೇಳಿ ಮದುವೆಗೆ ಒಪ್ಪಿಗೆ ಸೂಚಿಸುತ್ತಾರೆ. ಆದರೆ ಅಶ್ವಿನಿ ಅವರ ಮನೆಯಲ್ಲಿ ಮದುವೆಗೆ ಹಿಂದೆಟು ಹಾಕುತ್ತಾರೆ ಕಾರಣ ಪುನೀತ್ ರಾಜ್‌ಕುಮಾರ್ ಅವರದ್ದು ದೊಡ್ಡ ಮನೆ ಕುಟುಂಬ ತಮ್ಮ ಮಗಳು ಅಲ್ಲಿ ಹೋಗಿ ಹೊಂದಿಕೊಳ್ಳಲು ಕಷ್ಟವಾಗುತ್ತದೆ ಎನ್ನುವಂತಹ ದೃಷ್ಟಿಯಿಂದ ಅಶ್ವಿನಿ ಅವರನ್ನು ಪುನೀತ್ ಅವರಿಗೆ ಮದುವೆ ಮಾಡಿಕೊಡಲು ಸ್ವಲ್ಪ ಹಿಂದೆಟು ಹಾಕುತ್ತಾರೆ ಆದರೆ ಮುಂದಿನ ದಿನಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರು ಅಶ್ವಿನಿ ಅವರ ಮನೆಯವರನ್ನು ಒಪ್ಪಿಸಿ ಅಶ್ವಿನಿ ಅವರನ್ನು ಶಾಸ್ತ್ರೋತ್ರವಾಗಿ ಕೈಹಿಡಿಯುತ್ತಾರೆ. ಪುನೀತ್ ಮತ್ತು ಅಪ್ಪು ಅವರ ಪ್ರೀತಿ ನಿಮಗೆ ಏನನಿಸುತ್ತದೆ ಎಂದು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now