ಅಪ್ಪು ತಮ್ಮ ಅಣ್ಣನಿಗೆ ಅತ್ಯದ್ಭುತ ಮನೆಯನ್ನು ನಿರ್ಮಾಣ ಮಾಡಿಕೊಟ್ಟಿದ್ದರು. ಈ ವಿಷಯವನ್ನು ಭಾವುಕರಾಗಿ ಹಂಚಿಕೊಂಡ ರಾಘವೇಂದ್ರ ರಾಜಕುಮಾರ್.

ನಮ್ಮ ನಿಮ್ಮೆಲ್ಲರ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಹಗಲಿ ಒಂದು ವರ್ಷ ಕಳೆದರೂ ಸಹ ಅವರೊಂದಿಗಿನ ನೆನಪು ಇನ್ನೂ ಸಹ ಮಾಸಿಲ್ಲ ಅಚ್ಚಳಿಯದ ಹಾಗೆ ಕನ್ನಡಿಗರ ಮನಸ್ಸಿನಲ್ಲಿ ರಾರಾಜಿಸುತ್ತಿರುವಂತಹ ಅಪ್ಪು ಅವರು ಸರಳತೆಯ ಸಾಹುಕಾರ ಎಂದೇ ಹೆಸರಾಗಿದ್ದರು. ಪುನೀತ್ ರಾಜ್‌ಕುಮಾರ್ ಅವರು ತಮ್ಮ ಅಣ್ಣಂದಿರೊಂದಿಗೆ ಉತ್ತಮವಾದಂತಹ ಬಾಂಧವ್ಯವನ್ನು ಹೊಂದಿದ್ದರು. ಅಣ್ಣಂದಿರನ್ನು ತಂದೆಯ ಸಮಾನರಾಗಿ ಕಾಣುತ್ತಿದ್ದರು ಅಷ್ಟೇ ಗೌರವವನ್ನು ಸಹ ನೀಡುತ್ತಿದ್ದರು. ಪುನೀತ್ ರಾಜ್‌ಕುಮಾರ್ ಅವರು ಕುಟುಂಬಕ್ಕೆ ಎಲ್ಲಿಲ್ಲದ ಮಹತ್ವವನ್ನು ನೀಡುತ್ತಿದ್ದರು. ಮನೆಯ ಎಲ್ಲಾ ಜವಾಬ್ದಾರಿಗಳನ್ನು ಸಹ ನಿಭಾಯಿಸುತ್ತಾ ಇದ್ದರು ಪುನೀತ್ ರಾಜ್‌ಕುಮಾರ್ ಅವರು ತಮ್ಮ ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಒಂದು ಮನೆಯನ್ನು ಕಟ್ಟಿಸಿ ಕೊಟ್ಟಿದ್ದರು ಹೌದು ತಮ್ಮ ಅಣ್ಣನ ಮೇಲೆ ಅಪಾರವಾದಂತಹ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದರು.

ಪುನೀತ್ ರಾಜ್‌ಕುಮಾರ್ ಅವರು ತಾವು ನಿರ್ಮಿಸಿಕೊಂಡಿರುವಂತಹ ಮನೆಗಿಂತ ಅತ್ಯದ್ಭುತವಾಗಿ ತಮ್ಮ ಅಣ್ಣನ ಮನೆಯನ್ನು ನಿರ್ಮಾಣ ಮಾಡಿ ಕೊಟ್ಟಿದ್ದರು. ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ತಂದೆಯ ಸ್ಥಾನದಲ್ಲಿ ನಿಂತುಕೊಂಡು ಅವರ ಮನೆಯನ್ನು ನಿರ್ಮಾಣ ಮಾಡಿಕೊಟ್ಟರು. ಈ ಒಂದು ವಿಷಯವನ್ನು ಸ್ವತಹ ರಾಘವೇಂದ್ರ ರಾಜ್‌ಕುಮಾರ್ ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಪುನೀತ್ ರಾಜ್‌ಕುಮಾರ್ ಅವರು ತಮ್ಮ ಅಣ್ಣನನ್ನು ಎಲ್ಲಿಯೂ ಸಹ ಬಟ್ಟು ಕೊಟ್ಟಿರಲಿಲ್ಲ ಉದಾಹರಣೆಗೆ ಯಾವುದೇ ಒಂದು ಸಿನಿಮಾ ಕಥೆಗಳನ್ನು ಒಪ್ಪಿಕೊಳ್ಳಬೇಕಾದರೂ ಸಹ ಮೊದಲಿಗೆ ರಾಘವೇಂದ್ರ ರಾಜ್‌ಕುಮಾರ್ ಅವರು ಕಥೆಯನ್ನು ಕೇಳಿ ನಂತರ ಅವರು ಒಪ್ಪಿಗೆ ನೀಡಿದರೆ ಮಾತ್ರ ಪುನೀತ್ ರಾಜ್‌ಕುಮಾರ್ ಅವರು ಆ ಸಿನಿಮಾ ಗೆ ಒಪ್ಪಿಗೆಯನ್ನು ನೀಡುತ್ತಿದ್ದರು.

ಈ ರೀತಿಯಾದಂತಹ ಬಾಂಧವ್ಯ ನಾವು ಅಣ್ಣ ತಮ್ಮಂದಿರ ಮಧ್ಯೆ ಕಾಣಲು ಸಾಧ್ಯವಿಲ್ಲ ಹುಟ್ಟುತ್ತ ಅಣ್ಣ ತಮ್ಮಂದಿರು ಬೆಳೆಯುತ್ತ ದಾಯಾದಿಗಳು ಎಂಬ ಗಾದೆ ಮಾತಿನ ಹಾಗೆ ಈಗಿನ ಸಮಾಜದಲ್ಲಿ ಸಾಕಷ್ಟು ಅಣ್ಣ-ತಮ್ಮಂದಿರು ಸಹೋದರರು ನಡೆದುಕೊಳ್ಳುತ್ತಿದ್ದಾರೆ ಆದರೆ ನಮ್ಮ ಅಪ್ಪು ಅವರು ಎಂದಿಗೂ ಸಹ ತಮ್ಮ ಅಣ್ಣಂದಿರನ್ನು ಬೇರೆಯವರ ರೀತಿಯಲ್ಲಿ ಕಂಡೆ ಇಲ್ಲ ಸ್ವತಹ ತನ್ನ ತಂದೆಯ ಹಾಗೆ ಇಬ್ಬರನ್ನೂ ಕಾಣುತ್ತಿದ್ದರು. ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರ ವಿಷಯಕ್ಕೆ ಬಂದರೆ ಎಲ್ಲಿಯೂ ಸಹ ಇವರು ಬಿಟ್ಟುಕೊಟ್ಟವರಲ್ಲ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಅಣ್ಣಂದಿರನ್ನು ತಮ್ಮ ಎರಡು ಪಿಲ್ಲರ್ ಗಳು ಎಂದು ಹೇಳುತ್ತಿದ್ದರು ಆಧಾರ ಸ್ತಂಭಗಳಂತೆ ಕಾಣುತ್ತಿದ್ದಂತಹ ಅಣ್ಣಂದಿರು ಇಂದು ಅಪ್ಪು ಅವರನ್ನು ಕಳೆದುಕೊಂಡು ನೋವನ್ನು ಅನುಭವಿಸುತ್ತಾ ಇದ್ದಾರೆ.

ಮನೆಗೆ ಕಿರಿಯವನಾದರೂ ಸಹ ಹೆಚ್ಚು ಬುದ್ಧಿವಂತಿಕೆಯಿಂದ ಇದ್ದರೂ ಹಾಗೆಯೇ ಅಣ್ಣಂದಿರಿಗೆ ಏನೇ ಕೆಲಸ ಆಗಬೇಕಾದರೂ ಸಹ ಮುಂದೆ ನಿಂತು ಅದನ್ನು ನೆರವೇರಿಸಿ ಕೊಡುತ್ತಾ ಇದ್ದರು. ರಾಘವೇಂದ್ರ ರಾಜ್‌ಕುಮಾರ್ ಅವರು ಸಂದರ್ಶನ ಒಂದರಲ್ಲಿ ಭಾವುಕರಾಗಿ ಮಾತನಾಡಿದ್ದಾರೆ ಹೌದು ಪುನೀತ್ ರಾಜ್‌ಕುಮಾರ್ ಅವರು ನನ್ನ ತನ್ನ ತಮ್ಮನಲ್ಲ, ನನ್ನ ತಂದೆಯ ಹಾಗೆ ಎಂದು ಹೇಳಿಕೊಂಡಿದ್ದಾರೆ ಪುನೀತ್ ರಾಜ್‌ಕುಮಾರ್ ಅವರು ಸಹ ಅಣ್ಣನನ್ನು ತಂದೆಯ ಸ್ಥಾನದಲ್ಲಿ ನಿಂತುಕೊಂಡು ಎಲ್ಲಾ ಕಾರ್ಯಕ್ರಮಗಳನ್ನು ನೆರವೇರಿಸಿಕೊಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಈ ಇಬ್ಬರು ಅಣ್ಣ ತಮ್ಮಂದಿರ ಪ್ರೀತಿಯನ್ನು ನೋಡಿದರೆ ದೇವರಿಗೂ ಸಹ ಹೊಟ್ಟೆಕಿಚ್ಚು ಆಗುವ ರೀತಿಯಲ್ಲಿತ್ತು ಆದ್ದರಿಂದಲೇ ಪುನೀತ್ ರಾಜ್‌ಕುಮಾರ್ ಅವರನ್ನು ಇಷ್ಟು ಬೇಗ ನಮ್ಮೆಲ್ಲರಿಂದ ಕತ್ತುಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತೆ ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

%d bloggers like this: