ರಚಿತಾರಾಮ್ ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ಎಂದೇ ಹೆಸರುವಾಸಿ ಆಗಿರುವ ಇವರು ಸದ್ಯಕ್ಕೆ ಕನ್ನಡದಲ್ಲಿ ನಂಬರ್ ಒನ್ ಸ್ಟಾರ್ ನಟಿ ಆಗಿ ಮಿಂಚುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಸಿ ಎನ್ನುವ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಮಾಡುತ್ತಾ ಬಣ್ಣ ಹಚ್ಚಲು ಶುರು ಮಾಡಿದ ರಚಿತಾ ರಾಮ್ ಅವರು ಮೊದಲ ಬಾರಿಗೆ ದರ್ಶನ್ ಅವರೊಂದಿಗೆ ಅವರದೇ ಪ್ರೊಡಕ್ಷನ್ ಆದ ಬುಲ್ ಬುಲ್ ಎನ್ನುವ ಸಿನಿಮಾದಲ್ಲಿ ನಾಯಕ ನಟಿಯಾಗಲು ಸೆಲೆಕ್ಟ್ ಆದರು. ಬರೋಬ್ಬರಿ 200 ಹುಡುಗಿಯರ ಆಡಿಷನ್ ಇದ್ದ ಆ ಚಿತ್ರದ ನಾಯಕಿಯ ಸ್ಪರ್ಧೆಗೆ ಆಯ್ಕೆಯಾದ ಬಳಿಕ ರಚಿತಾ ರಾಮ್ ಅವರ ಅದೃಷ್ಟವೇ ಬದಲಾಯಿತು ಎಂದು ಹೇಳಬಹುದು. ಅಂದಿನಿಂದ ಇಂದಿನವರೆಗೂ ಕೂಡ ಕನ್ನಡ ಸಿನಿಮಾರಂಗದಲ್ಲಿ ಬಹಳಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಇವರು ಅನೇಕ ಪಡ್ಡೆ ಹುಡುಗರ ಫೇವರೆಟ್ ಹೀರೋಯಿನ್ ಕೂಡ.
ಬಿಂದಿಯಾ ರಾಮ್ ಎನ್ನುವ ಇವರ ಹೆಸರನ್ನು ಸಿನಿಮಾಗಳಿಗಾಗಿ ರಚಿತಾರಾಮ್ ಎಂದು ಬದಲಾಯಿಸಲಾಯಿತು. ರಚಿತಾ ರಾಮ್ ಹೆಸರು ರಚಿತ ಅವರಿಗೆ ಬಹಳ ಅದೃಷ್ಟ ತಂದು ಕೊಟ್ಟಿತ್ತು ಕನ್ನಡದಲ್ಲಿ ಅನೇಕ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುವ ಅದೃಷ್ಟ ಪಡೆದಿರುವ ಇವರು ದರ್ಶನ್ ಅವರೊಂದಿಗೆ ಬುಲ್ ಬುಲ್ ಮತ್ತು ಅಂಬರೀಶ ಎನ್ನುವ ಎರಡು ಸಿನಿಮಾ ಸುದೀಪ್ ಅವರೊಂದಿಗೆ ರನ್ನ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ದಿಲ್ ರಂಗೀಲಾ ಉಪೇಂದ್ರ ಅವರೊಂದಿಗೆ ಐ ಲವ್ ಯು ಮತ್ತು ಶಿವಣ್ಣನೊಂದಿಗೆ ರುಸ್ತು ಮತ್ತು ಆಯುಷ್ಮಾನ್ಭವ ಹಾಗೂ ಪುನೀತ್ ರಾಜಕುಮಾರ್ ಅವರೊಂದಿಗೆ ಚಕ್ರವ್ಯೂಹ ಮತ್ತು ನಟಸಾರ್ವಭೌಮ ಎನ್ನುವ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗೆ ಧ್ರುವ ಸರ್ಜಾ ಅವರೊಂದಿಗೆ ಭರ್ಜರಿ ಎನ್ನುವ ಸಿನಿಮಾದಲ್ಲೂ ನಾಯಕಿಯಾದ ಇವರು ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಅಭಿನಯಿಸಿದ್ದಾರೆ.
ಅಲ್ಲದೆ ಕಥೆ ಚೆನ್ನಾಗಿದ್ದರೆ ಯಾವ ನಟ ನೊಂದಿಗೂ ನಟಿಸಲು ನಾನು ರೆಡಿ ಎಂದು ಒಪ್ಪಿಕೊಂಡ ರಚಿತಾ ರಾಮ್ ಅವರು ನೀನಾಸಂ ಸತೀಶ್ ಅವರೊಂದಿಗೆ ಅಯೋಗ್ಯ ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಸಕ್ಕತ್ ಮಿಂಚಿದ್ದರು ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಸೀತಾರಾಮ ಕಲ್ಯಾಣ ಸಿನಿಮಾದಲ್ಲೂ ಕೂಡ ಮುಖ್ಯ ಭೂಮಿಯಲ್ಲಿ ಇವರಿದ್ದರು. ಸದ್ಯಕ್ಕೆ ತೆಲುಗು ಸಿನಿಮಾರಂಗದಲ್ಲೂ ಕೂಡ ಪಾದರ್ಪಣೆ ಮಾಡಿರುವ ಇವರು ಅಲ್ಲೂ ಕೂಡ ಅನೇಕ ಹೃದಯಗಳನ್ನು ಗೆದ್ದಿದ್ದಾರೆ ನಮ್ಮ ಕನ್ನಡದ ಈ ಗುಳಿ ಕೆನ್ನೆ ಚೆಲುವೆ ಈಗ ತಮಿಳಿನಲ್ಲೂ ಕೂಡ ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರೆ ಹಲವು ವರದಿಗಳ ಪ್ರಕಾರ ಮುಂದಿನ ವರ್ಷ ತಮಿಳಿನ ಒಬ್ಬ ಸ್ಟಾರ್ ನಟರೊಂದಿಗೆ ರಚಿತಾ ರಾಮ್ ಅವರು ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತುಗಳು ಕೂಡ ಹರಿದಾಡುತ್ತಿವೆ.
ಇದರ ನಡುವೆ ಕನ್ನಡದ ಕಿರುತೆರೆ ಕಾರ್ಯಕ್ರಮಗಳಲ್ಲೂ ಕೂಡ ಭಾಗವಹಿಸುವ ರಚಿತಾ ರಾಮ್ ಅವರು ಮಜಾ ಭಾರತ ಎನ್ನುವ ಹಾಸ್ಯ ಕಾರ್ಯಕ್ರಮದಲ್ಲಿ ಹಲವು ದಿನಗಳವರೆಗೆ ಜಡ್ಜ್ ಆಗಿ ಭಾಗವಹಿಸಿದ್ದರು. ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಲ್ಲರ ಮೆಚ್ಚಿನ ಕಾರ್ಯಕ್ರಮ ಡ್ರಾಮಾ ಜೂನಿಯರ್ ಸೀಸನ್ 4ರಲ್ಲೂ ಕೂಡ ತೀರ್ಪುಗಾರರಾಗಿ ಬರುತ್ತಿದ್ದಾರೆ. ಇದರಲ್ಲಿ ಮಕ್ಕಳ ಅಭಿನಯ ಹಾಗೂ ಅಲ್ಲಿರುವ ಮಕ್ಕಳ ಟ್ಯಾಲೆಂಟ್ ನೋಡಿ ಮೆಚ್ಚುವ ಜನರ ಸಂಖ್ಯೆ ಹೆಚ್ಚಿದ್ದರೂ ಕೂಡ ರಚಿತಾ ರಾಮ್ ಅವರನ್ನು ನೋಡುವ ಸಲುವಾಗಿ ಕಾರ್ಯಕ್ರಮ ನೋಡುವ ಅಭಿಮಾನಿಗಳು ಕೂಡ ಅಷ್ಟೇ ಸಂಖ್ಯೆಯಲ್ಲಿ ಇದ್ದಾರೆ ಎಂದು ಹೇಳಬಹುದು. ರಚಿತಾ ರಾಮ್ ಅವರು ಈ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಮಕ್ಕಳಾಗಿ ನಡೆದುಕೊಳ್ಳುತ್ತಿರುವ ರೀತಿ ಅವರ ನಗು ಅವರ ಹಾಸ್ಯ ಪ್ರಜ್ಞೆ ಎಲ್ಲರಿಗೂ ಬಹಳ ಇಷ್ಟವಾಗುತ್ತಿದೆ. ಇಷ್ಟೆಲ್ಲ ಬಿಜಿ ಆಗಿರುವ ರಚಿತಾ ರಾಮ್ ಅವರು ಇತ್ತೀಚೆಗೆ ಖಾಸಗಿ ವಾಹನಿಯ ಸಂದರ್ಶನ ಒಂದಕ್ಕೆ ಸಿಕ್ಕಿದರು.
ಆ ಸಂದರ್ಶನದಲ್ಲಿ ರಚಿತಾ ರಾಮ್ ಅವರಿಗೆ ಸಂದರ್ಶಕರು ಹಲವಾರು ಪ್ರಶ್ನೆಗಳನ್ನು ಕೇಳಿದ್ದರು. ರಚಿತಾ ರಾಮ್ ಅವರಿಗೆ ರಾಪಿಡ್ ಫೈಯರ್ ಫೈವ್ ಪ್ರಶ್ನೆಗಳನ್ನು ಕೇಳಲಾಯಿತು ಅವುಗಳಲ್ಲಿ ಅವರ ಕ್ರಶ್ ಗೆ ಸಂಬಂಧಪಟ್ಟ ಹಾಗೆ ಕೂಡ ಪ್ರಶ್ನೆಗಳು ಇದ್ದವು. ಅದಕ್ಕೆಲ್ಲ ರಚಿತಾ ರಾಮ್ ಅವರಿಗೆ ಏನೆಲ್ಲ ಉತ್ತರ ಕೊಟ್ಟಿದ್ದಾರೆ ಗೊತ್ತಾ ಮೊದಲಿಗೆ ರಚಿತಾ ರಾಮ್ ಅವರಿಗೆ ನಿಮಗೆ ಯಾರ ಮೇಲಾದರೂ ಲವ್ ಅಟ್ ಫಸ್ಟ್ ಸೈಟ್ ಆಗಿದೆಯಾ ಎಂದು ಪ್ರಶ್ನೆ ಕೇಳಲಾಯಿತು ಅದಕ್ಕೆ ತಟ್ಟನೆ ಹೌದು ಎಂದು ಉತ್ತರ ಕೊಟ್ಟರು ರಚಿತಾರಾಮ್. ಹಾಗಾದರೆ ಅದು ಯಾರು ಎಂದು ಸಂದರ್ಶಕರು ಕೇಳಿದಾಗ ಇಲ್ಲ ಆ ಹೆಸರು ಮಾತ್ರ ಹೇಳುವುದಿಲ್ಲ ಎಂದು ಹೇಳಿದರು. ಹಾಗೆಯೇ ನಿಮಗೆ ಯಾವಾಗಲಾದರೂ ಸೆಟ್ ಅಲ್ಲಿ ಇರುವಾಗ ಕೋಪ ಬರುತ್ತದೆಯೇ ಎಂದು ಪ್ರಶ್ನೆ ಕೇಳಿದಾಗ ಅದಕ್ಕೂ ಕೂಡ ಹೌದು ಎಂದು ಉತ್ತರ ಕೊಟ್ಟಿದ್ದಾರೆ.
ನನಗೆ ನಾನು ಯಾವಾಗಲೂ ಸೆಟ್ ಅಲ್ಲಿ ಆಕ್ಟಿವ್ ಆಗಿರುತ್ತೇನೆ. ಅಲ್ಲಿರುವ ಹುಡುಗರುಗಳು ಉಡಾಫೆ ಆಗಿದ್ದಾಗ ಅಥವಾ ಆಕ್ಟಿವ್ ಆಗಿ ಇಂಟರೆಸ್ಟ್ ಆಗಿ ಕೆಲಸ ಮಾಡದೆ ಹೋದಾಗ ನನಗೆ ವಿಪರೀತ ಕೋಪ ಬರುತ್ತದೆ ಎಂದು ನೇರವಾಗಿ ಉತ್ತರ ಕೊಟ್ಟಿದ್ದಾರೆ. ನೀವು ಜನರನ್ನು ಕಣ್ಮುಚ್ಚಿಕೊಂಡು ನಂಬುತ್ತೀರಾ ಎಂದು ಪ್ರಶ್ನೆ ಕೇಳಲಾಯಿತು ಇದಕ್ಕೂ ಕೂಡ ರಚಿತರಾಮ್ ಅವರು ಹೌದು ಎಂದೇ ಉತ್ತರ ಕೊಟ್ಟಿದ್ದಾರೆ. ಮುದ್ದುಮುಖದ ಈ ಚೆಲುವೆ ತಮ್ಮ ನೇರ ವ್ಯಕ್ತಿತ್ವ ಹಾಗೂ ತುಂಬಾ ಸಿಂಪಲ್ ತನದಿಂದ ಈಗಾಗಲೇ ಬಹಳ ಜನರ ಪ್ರೀತಿ ಗಿಟ್ಟಿಸಿಕೊಂಡಿದ್ದಾರೆ. ಎಷ್ಟೇ ದೊಡ್ಡ ಸ್ಟಾರ್ ನಟಿ ಆಗಿದ್ದರೂ ಕೂಡ ರಚಿತಾ ರಾಮ್ ಅವರು ಸುತ್ತಮುತ್ತಲಿನವರೊಂದಿಗೆ ಒಂದಾಗಿ ಬದುಕುತ್ತಾರೆ ಹಾಗೂ ಎಲ್ಲರೊಂದಿಗೆ ಬಹಳ ಬೇಗ ಒಗ್ಗಿಕೊಳ್ಳುತ್ತಾರೆ ಇವರ ಈ ಗುಣವೇ ಇವರೊಂದಿಗೆ ಕೆಲಸ ಮಾಡುವವರಿಗೆ ಬಹಳ ಜನರಿಗೆ ಇಷ್ಟ ಆಗುತ್ತಿದೆ.