ಸೆಲ್ಫಿ ತೆಗೆಯಲು ಬಂದ ಅಭಿಮಾನಿಗೆ ರಚಿತಾ ರಾಮ್ ಮಾಡಿದ್ದೇನು ಗೊತ್ತ.? ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.

ಕನ್ನಡದ ಮುದ್ದುಮುಖದ ಚೆಲುವೆ ನಟಿ ರಚಿತಾ ರಾಮ್ ಕಿರುತೆರೆ ಮುಖಾಂತರ ಬೆಳ್ಳಿತೆರೆಗೆ ಹೆಜ್ಜೆ ಇಟ್ಟಂತಹ ನಟಿ. 2013ರ ಮೇ 10 ರಂದು ಬಿಡುಗಡೆಯಾದಂತಹ ಬುಲ್ ಬುಲ್ ಸಿನಿಮಾದ ಮುಖಾಂತರ ರಚಿತಾ ರಾಮ್ ಅವರು ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡುತ್ತಾರೆ. ಇದೀಗ ರಚಿತಾ ರಾಮ್ ಅವರು ಕನ್ನಡ ಚಿತ್ರರಂಗಕ್ಕೆ ಬಂದು 9 ವರ್ಷಗಳೇ ಆಗಿದೆ ರಚಿತಾ ರಾಮ್ ಅವರ ಮೊದಲ ಹೆಸರು ಬಿಂದ್ಯಾ ರಾಮ್. ಇವರು 2013ರಲ್ಲಿ ತೆರೆಕಂಡಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಯಲ್ಲಿ ಅಭಿನಯ ಮಾಡಿದಂತಹ ಬುಲ್ ಬುಲ್ ಸಿನಿಮಾದ ಬಳಿಕ ಬಿಂದ್ಯಾ ರಾಮ್ ಎಂಬ ಹೆಸರಿನಿಂದ ರಚಿತಾ ರಾಮ್ ಎಂಬ ಹೆಸರಿಗೆ ಬದಲಾದರು. ನಂತರದಲ್ಲಿ ರಚಿತಾ ರಾಮ್ ಅವರ ಬದುಕೆ ಬದಲಾಗುತ್ತದೆ ಕನ್ನಡದಲ್ಲಿ ಟಾಪ್ ನಟಿ ಎನ್ನುವಂತಹ ಹೆಗ್ಗಳಿಕೆಗೆ ಇವರು ಪಾತ್ರರಾಗುತ್ತಾರೆ.

WhatsApp Group Join Now
Telegram Group Join Now

ಸಾಲು ಸಾಲು ಸಿನಿಮಾಗಳಲ್ಲಿ ಇವರು ನಟನೆಯನ್ನು ಮಾಡುತ್ತಿದ್ದು ಇದೀಗ ರಚಿತರಾಮ್ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳು ಇದ್ದು ಕನ್ನಡದಲ್ಲಿ ಬಿಸಿಯಾಗಿ ಇರುವಂತಹ ನಟಿ ಇವರಾಗಿದ್ದಾರೆ ಸುಮಾರು 10 ಸಿನಿಮಾಗಳ ಚಿತ್ರೀಕರಣಗಳಲ್ಲಿ ರಚಿತಾ ರಾಮ್ ಅವರು ತೊಡಗಿಕೊಂಡಿದ್ದಾರೆ. ನಟ ಡಾಲಿ ಧನಂಜಯ್ ಅವರ ಜೋಡಿಯಾಗಿ ನಟಿಸುತ್ತಿದ್ದು ರಚಿತಾ ರಾಮ್ ಹೊಸದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಯಾವ ಸಿನಿಮಾ ಎಂದು ನೋಡುವುದಾದರೆ ಮಾನ್ಸೂನ್ ರಾಗ, ಹೌದು ಈ ಸಿನಿಮಾದ ಚಿತ್ರೀಕರಣವು ಮುಕ್ತಾಯಗೊಂಡಿದ್ದು ಆಗಸ್ಟ್ 12ಕ್ಕೆ ತೆರೆ ಕಾಣಲು ಸಜ್ಜಾಗಿದೆ. ಅಷ್ಟೇ ಅಲ್ಲದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾದ ಚಿತ್ರೀಕರಣದಲ್ಲಿಯೂ ರಚಿತಾ ರಾಮ್ ತೊಡಗಿಸಿಕೊಂಡಿದ್ದಾರೆ ಹಾಗೆ ನೀನಾಸಂ ಸತೀಶ್ ಜೊತೆಗೆ ಮ್ಯಾಟ್ನಿ, ಲವ್ ಮೀ ಆರ್ ಹೇಟ್ ಮಿ, ಶಬರಿ ಹೀಗೆ ಅವರ ಸಿನಿಮಾ ಪಟ್ಟಿ ಬೆಳೆಯುತ್ತಲೇ ಹೋಗುತ್ತಾ ಇದೆ. ರಚಿತಾ ರಾಮ್ ಅವರು ಸಿನಿಮಾಗಳಿಗೆ ಅಷ್ಟೇ ಸೀಮಿತವಾಗದೆ ಸಾಕಷ್ಟು ರೀತಿಯಾದಂತಹ ಶೋಗಳಲ್ಲಿಯೂ ಇವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಸಾಕಷ್ಟು ಶೋಗಳಲ್ಲಿ ತೀರ್ಪುಗಾರ್ತಿಯಾಗಿ ರಚಿತಾ ರಾಮ್ ಅವರು ಬ್ಯುಸಿಯಾಗಿದ್ದಾರೆ ರಚಿತರಾಮ್ ಅವರು ಮಾನ್ಸೂನ್ ರಾಗ ಎಂಬ ಸಿನಿಮಾದಲ್ಲಿ ನಟನೆಯನ್ನು ಮಾಡಿದ್ದು ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ ಈ ಒಂದು ಪಾತ್ರ ರಚಿತಾ ರಾಮ್ ಅವರ ಸಿನಿ ಜರ್ನಿಯಲ್ಲಿ ಮಾಡುತ್ತಿರುವಂತಹ ಒಂದು ವಿಭಿನ್ನ ಪಾತ್ರ ಎಂದೇ ಹೇಳಬಹುದು. ರಚಿತಾ ರಾಮ್ ಅವರು ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ಸಹ ನಟನೆಯನ್ನು ಮಾಡಿದ್ದಾರೆ ಇವರು ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ಇವರು ಅಭಿನಯ ಮಾಡುತ್ತಿರುವಂತಹ ಮಾನ್ಸೂನ್ ರಾಗ ಸಿನಿಮಾದ ಶೂಟಿಂಗ್ ಚಿತ್ರೀಕರಣ ಎಲ್ಲಾ ಮುಕ್ತಾಯಗೊಂಡಿದ್ದು ಆಗಸ್ಟ್ 12ಕ್ಕೆ ಚಿತ್ರವು ಕರ್ನಾಟಕದಾದ್ಯಂತ ತೆರೆ ಕಾಣಲು ಸಿದ್ಧವಾಗಿದೆ.

ಈ ಒಂದು ವಿಷಯದ ಬಗ್ಗೆ ಮಾತನಾಡಲು ಚಿತ್ರತಂಡ ಒಂದು ಪ್ರೆಸ್ ಮೀಟ್ ಅನ್ನು ಆಯೋಜನೆ ಮಾಡಲಾಗಿರುತ್ತು ಅಂತಹ ಸಂದರ್ಭದಲ್ಲಿ ಪ್ರೇಕ್ಷಕರನ್ನು ಸಹ ಆಹ್ವಾನ ಮಾಡಿರುತ್ತಾರೆ ಈ ವೇಳೆ ಪ್ರೆಸ್ ಮೀಟ್ ಮುಗಿದ ಬಳಿಕ ಅಭಿಮಾನಿಗಳು ಡಾಲಿ ಧನಂಜಯ್ ಹಾಗೂ ರಚಿತಾ ರಾಮ್ ಅವರ ಜೊತೆಯಲ್ಲಿ ಫೋಟೋವನ್ನು ತೆಗೆದುಕೊಳ್ಳಲು ಮುಂದಾಗುತ್ತಾರೆ. ಈ ವೇಳೆ ಡಾಲಿ ಧನಂಜಯ್ ಅವರ ಜೊತೆಯಲ್ಲಿ ಫೋಟೋವನ್ನು ತೆಗೆದುಕೊಂಡ ನಂತರ ರಚಿತಾ ರಾಮ್ ಅವರ ಜೊತೆಯಲ್ಲಿ ಫೋಟೋವನ್ನು ತೆಗೆದುಕೊಳ್ಳುವ ಅಭಿಮಾನಿಯೊಬ್ಬರು ಬರುತ್ತಾರೆ ಅವರಿಗೆ ಗೊತ್ತಿಲ್ಲದಂತೆ ಫೋಟೋವನ್ನು ತೆಗೆದುಕೊಳ್ಳಲು ಹೋಗುತ್ತಾರೆ ಆಗ ರಚಿತಾ ರಾಮ್ ಅವರು ನಿರಾಕರಿಸುತ್ತಾರೆ. ಆದಾಗಿಯೂ ಅಭಿಮಾನಿ ಫೋಟೋ ತೆಗೆದುಕೊಳ್ಳಲು ಮುಂದಾದಾಗ ರಚಿತಾ ರಾಮ್ ಅವರು ಕೋಪದ ವರ್ತನೆಯನ್ನು ತೋರಿಸುತ್ತಾರೆ ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದ್ದು ರಚಿತಾ ರಾಮ್ ಅವರ ಈ ವರ್ತನೆ ಸಾಕಷ್ಟು ಜನರಿಗೆ ಬೇಸನವನ್ನು ಉಂಟು ಮಾಡಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now