ಬ್ಯಾಂಕಿಂಗ್ ಕ್ಷೇತ್ರದಲ್ಲಿ (Banking) ಉದ್ಯೋಗ ಮಾಡಬೇಕು ಎನ್ನುವುದು ಬಹುತೇಕರ ಕನಸು. ಆದರೆ ಈ ಕನಸು ನನಸಾಗಿಸಿಕೊಳ್ಳುವುದಕ್ಕೆ ಅಷ್ಟೇ ಶ್ರಮವನ್ನು ಕೂಡ ಪಡಬೇಕು. ಯಾಕೆಂದರೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅರ್ಹರನ್ನು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೂಕ್ತ ಹುದ್ದೆಗಳಿಗೆ ಆಯ್ದುಕೊಳ್ಳ ಬೇಕಾಗುತ್ತದೆ ಮತ್ತು ಇದಕ್ಕೆ ಈಗ ವಿಪರೀತವಾದ ಕಾಂಪಿಟೇಶನ್ ಕೂಡ ಇದೆ.
ಆದರೆ SBI (State Bank Of India Recruitment) ಈಗ ನೇರ ನೇಮಕಾತಿ ಮಾಡಿಕೊಳ್ಳುವ ಮೂಲಕ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗ ಬಯಸುವವರಿಗೆ ಒಂದು ಅದ್ಭುತ ಅವಕಾಶವನ್ನು ನೀಡಿದೆ. ಈ ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮೂಲಕ ಆಯ್ಕೆ ಆಗಬಹುದು.
ಈ ಸುದ್ದಿ ಓದಿ:- ಸ್ವಂತ ಉದ್ಯಮ ಮಾಡಲು ಸರಕಾರದಿಂದ ಸಿಗಲಿದೆ 10 ಲಕ್ಷ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!
ಇದರ ಕುರಿತಾದ ಮಾಹಿತಿಯು SBI ಅಧಿಕೃತ ವೆಬ್ಸೈಟ್ನಲ್ಲಿ ಕೂಡ ಬಿಡುಗಡೆ ಆಗಿದ್ದು ಇದರಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಂಡು ನೆರವಾಗಿ.
ನೇಮಕಾತಿ ಸಂಸ್ಥೆ:- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಹುದ್ದೆ ಹೆಸರು:- SBI ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 03 ಹುದ್ದೆಗಳು
ಹುದ್ದೆ ವಿವರ:- ಹೆಡ್ (ಕಾರ್ಪೊರೇಟ್ ಕಮಿಷನ್ ಅಂಡ್ ಮಾರ್ಕೆಟಿಂಗ್)
ಉದ್ಯೋಗ ಸ್ಥಳ:- ಕಾರ್ಪೋರೇಟ್ ಸೆಂಟರ್, ಮುಂಬೈ
ವೇತನ ಶ್ರೇಣಿ:- ಬ್ಯಾಂಕ್ ನಿಯಮಗಳ ಪ್ರಕಾರವಾಗಿ ಅತ್ಯುತ್ತಮ ವೇತನ ನೀಡಲಾಗುತ್ತದೆ.
ಈ ಸುದ್ದಿ ಓದಿ:- RTO ಆಫೀಸಿಗೆ ಹೋಗದೆ ಆನ್ಲೈನ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವ ವಿಧಾನ.!
ಶೈಕ್ಷಣಿಕ ವಿದ್ಯಾರ್ಹತೆ:-
* ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಷಯದಲ್ಲಿ ಪದವಿ ಪಡೆದಿರಬೇಕು.
* ಪದವಿಯಲ್ಲಿ ಮ್ಯಾನೇಜ್ಮೆಂಟ್ ಅಥವಾ MBA, PGDBM / PGDM ಅಭ್ಯಾಸ ಮಾಡಿದವರಿಗೆ ಹೆಚ್ಚಿನ ಆದ್ಯತೆ ಇರುತ್ತದೆ
* ಇದಿಷ್ಟು ಮಾತ್ರವಲ್ಲದೆ ಸಂಬಂಧಿತ ಕ್ಷೇತ್ರದಲ್ಲಿ ಕೆಲಸದ ಅನುಭವ ಹೊಂದಿದ್ದವರಿಗೆ ಕೂಡ ಮೊದಲ ಆದ್ಯತೆ ಇರುತ್ತದೆ.
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 55 ವರ್ಷಗಳು
ವಯೋಮಿತಿ ಸಡಿಲಿಕೆ:-
* SC / ST ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 05 ವರ್ಷಗಳು
* OBC ಅಭ್ಯರ್ಥಿಗಳಿಗೆ 03 ವರ್ಷಗಳು
* ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆ 8ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ ಇಲ್ಲದಿದ್ರೆ ಹಣ ಬರಲ್ಲ.!
ಅರ್ಜಿ ಶುಲ್ಕ:-
* ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ / UPI ಆಧಾರಿತ ಆಪ್ ಗಳ ಮೂಲಕ ಪೇ ಮಾಡಬೇಕು
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.250
* ಇತರೆ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು
* ಅರ್ಜಿ ಸಲ್ಲಿಸುವ ಮುನ್ನ ನಿಯಮಗಳನ್ನು ಓದಿ ಅರ್ಥೈಸಿಕೊಂಡಿದ್ದರೆ ಉತ್ತಮ
*https://recruitment.bank.sbi/crpd-sco-2023-24-34/apply ಇಲ್ಲಿ ಕ್ಲಿಕ್ ಮಾಡುವ ಮೂಲಕ ಅರ್ಜಿ ಫಾರಂ ಪಡೆದು ದಾಖಲೆಗಳನ್ನು ಸರಿಯಾಗಿ ನಮೂದಿಸಬೇಕು
* ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅಥವಾ ದಾಖಲೆಗಳ ಸಂಖ್ಯೆಯನ್ನು ನಮೂದಿಸಿ ಅರ್ಜಿ ಸಲ್ಲಿಕೆ ಯಶಸ್ವಿಗೊಳಿಸಬೇಕು. ಅರ್ಜಿ ಶುಲ್ಕ ಪಾವತಿ ಮಾಡಿದಕ್ಕಾಗಿ ಇ-ರಸೀದಿ ಮತ್ತು ಸಬ್ಮಿಟ್ ಆದ ಮೇಲೆ ಅರ್ಜಿ ಪ್ರತಿಯನ್ನು ತಪ್ಪದೆ ಪಡೆದುಕೊಳ್ಳಬೇಕು.
ಈ ಸುದ್ದಿ ಓದಿ:- BSNL ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 50,500
ಆಯ್ಕೆ ವಿಧಾನ:-
* ಕೇಳಿರುವ ಶೈಕ್ಷಣಿಕ ಅವಧಿಗಳಲ್ಲಿ ಪಡೆದಿರುವ ಅಂಕ, ಕೆಲಸದ ಅನುಭವ ಮತ್ತು ಇತ್ಯಾದಿ ಮೇಲೆ ಮೆರಿಟ್ ಲಿಸ್ಟ್ ತಯಾರಿಸಿ ಅವರ ದಾಖಲೆಗಳ ಪರಿಶೀಲನೆ ಮತ್ತು ನೇರ ಸಂದರ್ಶನ ನಡೆಸಿ ಆಯ್ದುಕೊಳ್ಳಲಾಗುವುದು
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 20 ಮಾರ್ಚ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 09 ಏಪ್ರಿಲ್, 2024.