ಭಾರತೀಯ ಜೀವ ವಿಮೆ (LIC) ಭಾರತದ ಹೆಸರಾಂತ ವಿಮೆ ಕಂಪನಿಯಾಗಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಈ ಕಂಪನಿಯು ಜನಸಾಮಾನ್ಯರಿಗೆ ಜೀವವಿಮೆಯ ಜೊತೆಗೆ ಅನೇಕ ಹೂಡಿಕೆ ಯೋಜನೆಗಳ ಅನುಕೂಲತೆಯನ್ನು ಕೂಡ ನೀಡುತ್ತಿದೆ. LIC ಮೂಲಕ ಜನರು ಇನ್ಶುರೆನ್ಸ್ ಮಾತ್ರವಲ್ಲದೆ ಆದಾಯ ತರುವಂತಹ ಯೋಚನೆಗಳ ಹೂಡಿಕೆದಾರರು (Invest) ಆಗಬಹುದು.
ಆದರೆ ಸರ್ಕಾರ ಕಾಲ ಕಾಲಕ್ಕೆ ಹೊರಡಿಸಿರುವ ಆದೇಶಗಳ ನಿಯಮಕ್ಕೆ ಒಳಪಟ್ಟಿರುತ್ತಾರೆ. ಈಗ LIC ಯ ಗ್ರಾಹಕರಿಗೆ ಕೇಂದ್ರ ಸರ್ಕಾರವು (Central government) ಹೊಸದಾದ ನಿಯಮಗಳನ್ನು ಜಾರಿ ಮಾಡಿದೆ. ನೀವು ಕೂಡ LIC ಗ್ರಾಹಕರಾಗಿದ್ದರೆ ತಪ್ಪದೆ ಈ ನಿಯಮಗಳ ಬಗ್ಗೆ ತಿಳಿದುಕೊಂಡಿರಲೇಬೇಕು. ಅವುಗಳ ಬಗ್ಗೆ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ನೋಡಿ.
LIC ಪಾಲಿಸಿ ಮಾಡಿಸಿರುವವರಿಗೆ ಕೇಂದ್ರ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಅದೇನೆಂದರೆ, ಜೀವ ವಿಮಾ ಪಾಲಿಸಿಯಿಂದ ಪಡೆದ ಆದಾಯದ ಮೇಲೆ ತೆರಿಗೆಗೆ ಸಂಬಂಧಿಸಿದ ಹೊಸ ನಿಯಮಗಳು ಇನ್ನು ಮುಂದೆ ಅನ್ವಯವಾಗಲಿದೆ. ಈ ಹೊಸ ನಿಯಮಗಳು 5 ಲಕ್ಷ ರೂ. ಗಿಂತ ಹೆಚ್ಚು ವಾರ್ಷಿಕ ಪ್ರೀಮಿಯಂ ಹೊಂದಿರುವ ಪಾಲಿಸಿಗಳಿಗೆ ಮಾತ್ರ ಅನ್ವಯಿಸಲಿದೆ ಎನ್ನುವುದು ಗಮನಾರ್ಹ ಅಂಶ.
ವಾರ್ಷಿಕ ಪ್ರೀಮಿಯಂ 5 ಲಕ್ಷ ರೂಪಾಯಿಗಿಂತ ಹೆಚ್ಚಿಗೆ ಇದ್ದರೆ ಆ ಜೀವ ವಿಮಾ ಪಾಲಿಸಿಯಿಂದ ಪಡೆದ ಆದಾಯವನ್ನು ಲೆಕ್ಕಾಚಾರ ಮಾಡಲು ಆದಾಯ ತೆರಿಗೆ ಇಲಾಖೆ ನಿಯಮಗಳನ್ನು ರೂಪಿಸಿದೆ, ಅದರ ಆಧಾರದ ಮೇಲೆ ತೆರಿಗೆಗಳು ಬೀಳಲಿದೆ ಎನ್ನುವುದನ್ನು LIC ತಿಳಿಸಿದೆ. ಅದೇ ರೀತಿ ಈಗ ಜಾರಿಗೆ ತಂದಿರುವ ಮತ್ತೊಂದು ಹೊಸ ನಿಯಮ ಏನೆಂದರೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT ) ಆದಾಯ ತೆರಿಗೆ ಕಾಯಿದೆ 2023 ಅನ್ನು ಸೂಚಿಸಿದೆ.
ಲೈಫ್ ಇನ್ಶೂರೆನ್ಸ್ ಪಾಲಿಸಿಯ ಮೆಚ್ಯೂರಿಟಿಯಲ್ಲಿ ಪಡೆದ ಮೊತ್ತಕ್ಕೆ ಸಂಬಂಧಿಸಿದಂತೆ ಆದಾಯವನ್ನು ಲೆಕ್ಕಾಚಾರ ಮಾಡಲು ನಿಯಮ 11UACA ಅನ್ನು ಸೂಚಿಸಲಾಗಿದೆ. ಪ್ರೀಮಿಯಂ ಮೊತ್ತವು 5 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಇರುವ ವಿಮಾ ಪಾಲಿಸಿಗಳಿಗೆ ಈ ತೆರಿಗೆ ನಿಯಮ ಅನ್ವಯವಾಗಿಲಿದೆ. ಅಂದರೆ ಇನ್ನು ಮುಂದೆ ವಾರ್ಷಿಕ 5 ಲಕ್ಷಕ್ಕಿಂತ ಹೆಚ್ಚಿನ ಜೀವ ವಿಮಾ ಪಾಲಿಸಿ ಮೊತ್ತಕ್ಕೆ LIC ಗ್ರಾಹಕ ತೆರಿಗೆ ಕಟ್ಟಬೇಕಾಗಿದೆ.
ಹಾಗೆಯೇ ಕೆಲವು ಗ್ರಾಹಕರಿಗೆ ತೆರಿಗೆ ವಿನಾಯಿತಿ ಸೌಲಭ್ಯ ಕೂಡ ಇದೆ. ಯಾರಿಗೆಲ್ಲಾ ಈ ಅನುಕೂಲತೆ ಸಿಗಲಿದೆ ಎಂದು ನೋಡುವುದಾದರೆ ಬದಲಾದ ತಿದ್ದುಪಡಿ ನಿಯಮದ ಪ್ರಕಾರ, ಏಪ್ರಿಲ್ 1 , 2023 ರಂದು ಅಥವಾ ನಂತರ ನೀಡಲಾದ ಪಾಲಿಸಿಗಳಿಗೆ ಮಾತ್ರವೇ ಸೆಕ್ಷನ್ 10 (10D) ಅಡಿಯಲ್ಲಿ ಮೆಚ್ಯುರಿಟಿ ಪ್ರಯೋಜನಗಳ ಮೇಲಿನ ತೆರಿಗೆ ವಿನಾಯಿತಿಯು ಅನ್ವಯಿಸುತ್ತದೆ.
ಒಟ್ಟಾರೆಯಾಗಿ LIC ಮೇಲೆ ಕೇಂದ್ರ ಸರ್ಕಾರವು ಹೇರಿರುವ ಹೊಸ ರೂಲ್ಸ್ ಪ್ರಕಾರ ಒಬ್ಬ ವ್ಯಕ್ತಿಯು ವಾರ್ಷಿಕವಾಗಿ ಪಾವತಿಸುವ ಒಟ್ಟು ಪ್ರೀಮಿಯಂ ಮೊತ್ತವು 5 ಲಕ್ಷ ರೂ. ಮಿತಿಯನ್ನು ಮೀರಿದರೆ ಆ ಮೊತ್ತಕ್ಕೆ ಇನ್ನು ಮುಂದೆ ತೆರಿಗೆ ವಿಧಿಸಲಾಗುತ್ತದೆ. ಅದೇ ರೀತಿ ಮೆಚುರಿಟಿ ವೇಳೆಯು ನೀಡಲಾದ ವಿನಾಯಿತಿ ಮೊತ್ತದ ಮಿತಿಯನ್ನು ಮೀರಿದರೆ ಆಗಲೂ ಸಹಾ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಆದರೆ ಜೀವ ವಿಮಾ ಪಾಲಿಸಿದಾರರ ಮ’ರ’ಣ ಹೊಂದಿದರೆ ಮರಣದ ನಂತರ ವಾರಸುದಾರರು ಪಡೆಯುವ ಮೊತ್ತಕ್ಕೆ ಈ ರೀತಿಯ ಯಾವುದೇ ತೆರಿಗೆ ಅನ್ವಯಿಸುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.