ಜೀವನದಲ್ಲಿ ಹಣಕಾಸಿನ ಅನಿವಾರ್ಯತೆ ಪ್ರತಿಯೊಬ್ಬರಿಗೂ ಕೂಡ ಬರುತ್ತದ. ಯಾಕೆಂದರೆ ಎಲ್ಲರ ಬಳಿಯೂ ತಮ್ಮ ಖರ್ಚಿಗೆ ಬೇಕಾದಷ್ಟು ಹಣ ಸಮಯದಲ್ಲಿ ಇರುವುದಿಲ್ಲ. ಈ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಕೂಡ ಹೊಂದಿರುವ ಸಾಮಾನ್ಯ ಸಮಸ್ಯೆ ಎಂದರೆ ಅದು ಹಣಕಾಸಿನ ತೊಂದರೆಯಂದೇ ಹೇಳಬಹುದು.
ಬೆರಳೆಣಿಕೆಯಷ್ಟು ಮಂದಿ ಮಾತ್ರ ಈ ವಿಚಾರದಲ್ಲಿ ಅದೃಷ್ಟವಂತರು ಹಾಗಾಗಿ ಇವರನ್ನು ಲಕ್ಷ್ಮಿ ಪುತ್ರರು ಹಾಗೂ ಕುಬೇರ ಪುತ್ರರು ಎಂದು ನಾವು ಕರೆಯುತ್ತೇವೆ. ಹಣಕಾಸಿನ ಅಧಿದೇವತೆ ಲಕ್ಷ್ಮಿ, ಹಾಗೆಯೇ ಸಕಲ ಐಶ್ವರ್ಯಗಳಿಗೂ ರಾಜ ಕುಬೇರ ಹಾಗಾಗಿ ನಾವು ಹಣಕಾಸು ವಿಷಯ ಬಂದಾಗ ಇವರನ್ನು ಉದಾಹರಣೆಸುವುದು.
ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಹಾಗೂ ಕುಬೇರನ ಕೃಪೆ ಉಂಟಾದರೆ ನಾವು ಸಹ ಕುಬೇರನಂತೆ ಬದುಕಬಹುದು ಈ ರೀತಿ ಕುಬೇರನ ಅನುಗ್ರಹ ಉಂಟಾಗಬೇಕು ಎಂದರೆ ನಾವು ಪ್ರತಿನಿತ್ಯ ನಮ್ಮ ಕೆಲಸ ಕಾರ್ಯ ಸಾಧನೆ ಕಡೆ ಗಮನ ಕೊಡುವುದು ಮಾತ್ರವಲದೇ ಇದರ ಜೊತೆ ತಪ್ಪದೆಕುಬೇರನನ್ನು ಒಲಿಸಿಕೊಳ್ಳುವ ಒಂದು ಸಣ್ಣ ಉಪಾಯ ಮಾಡಬೇಕು.
ಇದನ್ನು ಪೂಜೆ ಅಂತಲೂ ಎಂದುಕೊಳ್ಳಬಹುದು ಅಥವಾ ವ್ರತ ಆಚರಣೆ ಎಂದು ಬೇಕಾದರೂ ಕರೆಯಬಹುದು. ಯಾವುದೇ ಕಟ್ಟುಪಾಡುಗಳಿಲ್ಲದೇ ಎಲ್ಲರೂ ಮಾಡಬಹುದಾದ ಅತಿ ಕಡಿಮೆ ಸಮಯದಲ್ಲಿ ಮಾಡಬಹುದಾದ ಉಪಾಯ ಇದಾಗಿತ್ತು ಇದನ್ನು ಆರಂಭಿಸುವ ಮುನ್ನ ಮುಖ್ಯವಾಗಿ ಬೇಕಾಗಿರುವುದು ಭಗವಂತನ ಮೇಲೆ ಅಪಾರವಾದ ನಂಬಿಕೆ.
ತಾಯಿ ಮಹಾಲಕ್ಷ್ಮಿಯನ್ನು ಮನಸ್ಪೂರ್ತಿಯಾಗಿ ನಂಬಿ ಈಗ ನಾವು ಹೇಳುವ ಈ ಉಪಾಯವನ್ನು ಮಾಡಿದರೆ ಸಾಕು ತಾಯಿ ಕೃಪಾ ಕಟಾಕ್ಷ ಹಾಗೂ ಕುಬೇರನ ಆಶೀರ್ವಾದ ದೊರೆತು ನಿಮ್ಮ ಸಮಸ್ಯೆ 28 ದಿನಗಳಲ್ಲಿ ಬಗೆಹರಿಯುತ್ತದೆ.
ಇದಕ್ಕಾಗಿ ಮಾಡಬೇಕಿರುವುದು ಏನೆಂದರೆ ಕುಬೇರ ಮುದ್ರೆಯಲ್ಲಿ ಕುಳಿತು ಶ್ರೀ ಲಕ್ಷ್ಮಿ ಕುಬೇರ ಮಂತ್ರವನ್ನು ಪಟಿಸಬೇಕು. ಇದನ್ನು ಗುರುವಾರದಂದು ಆರಂಭಿಸಿ 28 ದಿನಗಳವರೆಗೆ ನಿರಂತರವಾಗಿ ಮಾಡಿದರೆ ಅತಿ ಶೀಘ್ರವಾಗಿ ಫಲ ದೊರೆಯುತ್ತದ. ಆದರೆ ಈ ರೀತಿ ಮಾಡಲು ಸಾಧ್ಯವಾಗದೆ ಇದ್ದವರು ಪ್ರತಿ ಗುರುವಾರ ಈ ರೀತಿ ಕುಬೇರ ಮುದ್ರೆಯಲ್ಲಿ ಕುಳಿತು 15 ನಿಮಿಷಗಳ ವರೆಗೆ ಶ್ರೀ ಲಕ್ಷ್ಮಿ ಕುಬೇರ ಮಂತ್ರವನ್ನು ಪಠಿಸಬೇಕು.
ಮನದಲ್ಲಿ ಭಕ್ತಿಯಿಂದ ನಿಮಗಿರುವ ಹಣಕಾಸಿನ ಸಮಸ್ಯೆ ಬಗ್ಗೆ ಕುಬೇರ ಹಾಗೂ ತಾಯಿ ಮಹಾಲಕ್ಷ್ಮಿಯ ಬಳಿ ಕೇಳಿಕೊಂಡು ಅನುಗ್ರಹಕ್ಕಾಗಿ ಪ್ರಾರ್ಥಿಸಬೇಕು ಈ ರೀತಿ ಮಾಡಿದರೆ ನೀವು ಆಶ್ಚರ್ಯಪಡುವ ರೀತಿಯಲ್ಲಿ ನಿಮ್ಮ ಹಣಕಾಸಿನ ಸಮಸ್ಯೆ ಪರಿಹಾರ ಸಿಗುತ್ತದೆ ನಂತರವೂ ಇದನ್ನು ಮುಂದುವರೆಸಿದರೆ ನಿಮಗೆ ಈ ರೀತಿಯ ಸಮಸ್ಯೆ ಮತ್ತೆ ಬರುಸುವುದಿಲ್ಲ.
ಕುಬೇರ ಮುದ್ರೆಯನ್ನು ಮಾಡುವ ವಿಧಾನ ಹೇಗೆಂದರೆ ನಿಮ್ಮ ಹೆಬ್ಬೆರಳು ತೋರುಬೆರಳು ಹಾಗೂ ಮಧ್ಯದ ಬೆರಳ ತುದಿಯನ್ನು ಜೋಡಿಸಿಕೊಂಡು ಉಂಗುರದ ಬೆರಳು ಹಾಗೂ ಕೊನೆಯ ಬೆರಳನ್ನು ಹಸ್ತದ ಕಡೆ ಮಡುಚಬೇಕು ನಂತರ ಅವುಗಳನ್ನು ಮಂಡಿಯ ಮೇಲೆ ಹಾಕಿಕೊಂಡು ಪದ್ಮಾಸನ ಹಾಕಿ ಕುಳಿತು ಕಣ್ಮುಚ್ಚಿ ಶ್ರೀ ಲಕ್ಷ್ಮಿ ಕುಬೇರ ಮಂತ್ರವನ್ನು ಪಟಿಸಬೇಕು.
ಈ ರೀತಿ ಮಾಡಿದಾಗ ನಿಮ್ಮ ಸುತ್ತಮುತ್ತ ನೆಗೆಟಿವ್ ಎನರ್ಜಿಗಳನ್ನು ಅದು ಹೋಗಲಾಡಿಸುತ್ತದೆ ನಿಮ್ಮಲ್ಲಿ ಪಾಸಿಟಿವ್ ಎನರ್ಜಿ ತುಂಬಿ ಅದೇ ಸಮಯದಲ್ಲಿ ಯಾವುದಾದರೂ ಅನಿರೀಕ್ಷಿತ ಧನಾಗಮನ ಉಂಟಾಗಿ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ. ಇಷ್ಟು ಉಪಯುಕ್ತವಾದ ಈ ಆಚರಣೆ ಆಚರಿಸಲು ಯಾವುದೇ ಕಟ್ಟುನಿಟ್ಟಾದ ನಿಯಮಗಳು ಇಲ್ಲ ಭಕ್ತಿಯಿಂದ ಪ್ರಶಾಂತವಾಗಿ ಕುಳಿತು ಇದನ್ನು ಎಲ್ಲಿಯಾದರೂ ಮಾಡಬಹುದು, ಪ್ರತಿಯೊಬ್ಬರೂ ಕೂಡ ಇದನ್ನು ಮಾಡಬಹುದು.