ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಪ್ರತಿಯೊಬ್ಬ ಸ್ಪರ್ಧಿಗಳು ಸಹ ಒಂದೊಂದು ರೀತಿಯಾದಂತಹ ಮನಸ್ಥಿತಿಯನ್ನ ಒಳಗೊಂಡಿರುತ್ತಾರೆ. ಅದರಲ್ಲಿಯೂ ಸೋನು ಗೌಡ ಅವರು ಬಿಗ್ ಬಾಸ್ ಮನೆಗೆ ಹೋಗಿರುವುದು ಯಾರಿಗೂ ಸಹ ಇಷ್ಟವಿಲ್ಲ ಅಂದರೆ ಪ್ರೇಕ್ಷಕರಿಗೆ ಸೋನು ಗೌಡ ಅವರು ಬಿಗ್ ಬಾಸ್ ಮನೆಗೆ ಹೋಗಲು ಅರ್ಹರಲ್ಲ ಎನ್ನುವಂತಹ ಅಭಿಪ್ರಾಯಗಳನ್ನು ಒಳಗೊಂಡಿದ್ದಾರೆ. ಸೋನು ಗೌಡ ಅವರು ಬಿಗ್ ಬಾಸ್ ನಲ್ಲಿ ನಡೆದುಕೊಳ್ಳುತ್ತಿರುವಂತಹ ರೀತಿ ಯಾರಿಗೂ ಸಹ ಇಷ್ಟ ಆಗುತ್ತಿಲ್ಲ. ಮನೆಯಲ್ಲಿ ಇರುವಂತಹ ಸದಸ್ಯರು ಹಾಗೆ ನೋಡುವ ಪ್ರೇಕ್ಷಕರಿಗೂ ಸಹ ಅವರ ನಡವಳಿಕೆ ಅಷ್ಟೊಂದು ಸರಿ ಅನಿಸುತ್ತಿಲ್ಲ. ಮನಸ್ಸಿಗೆ ತೋಚಿದಂತೆ ಮಾತುಗಳನ್ನು ಹರಿಬಿಡುತ್ತಾ ಇದ್ದಾರೆ ನನ್ನನ್ನು ನೋಡುವಂತಹ ಪ್ರೇಕ್ಷಕರು ತಪ್ಪು ತಿಳಿದುಕೊಳ್ಳುತ್ತಾರೆ ಅಥವಾ ನಾನು ತಪ್ಪು ಮಾತನಾಡುತ್ತಿದ್ದೇನೆ ಎನ್ನುವಂತಹ ಅರಿವು ಸಹ ಅವರಲ್ಲಿ ಇಲ್ಲ.
ಸೋನು ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಅವರೊಂದಿಗೆ ತುಂಬಾ ಕ್ಲೋಸ್ ಆಗಿದ್ದಾರೆ ಅಷ್ಟೇ ಅಲ್ಲದೆ ರಾಕೇಶ್ ಅಡಿಗ ಅವರು ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಇತರ ಹುಡುಗಿಯರೊಂದಿಗೆ ಮಾತನಾಡಿದರೆ ಸೋನು ಗೌಡ ಅವರಿಗೆ ಜಲಸ್ ಉಂಟಾಗುತ್ತದೆ ಇದನ್ನು ನೋಡಿದರೆ ಸೋನು ಗೌಡ ಅವರು ರಾಕೇಶ್ ಅವರನ್ನು ಪ್ರೀತಿ ಮಾಡುತ್ತಿದ್ದಾರೆ ಎನ್ನುವಂತಹ ವಿಚಾರ ಸಾಮಾನ್ಯವಾಗಿ ಗೊತ್ತಾಗುತ್ತೆ. ಆದರೆ ಇದೀಗ ಅದಕ್ಕೆ ತೆರೆ ಬಿದ್ದಿದೆ ಎಂದೇ ಹೇಳಬಹುದು ಬಿಗ್ ಬಾಸ್ ಮನೆಯ ಸ್ಪರ್ಧೆಗಳು ಸೋನು ರಾಕೇಶ್ ಅವರನ್ನು ಪ್ರೀತಿಸುತ್ತಿದ್ದೀಯ ಎಂದು ಅವರಿಗೆ ಹೇಳುತ್ತಾರೆ ಆದರೆ ಸೋನು ಗೌಡ ರಾಕೇಶ್ ಅವರನ್ನು ನಾನು ಪ್ರೀತಿ ಮಾಡುತ್ತಿಲ್ಲ ನನಗೆ ಯಾವುದೇ ಜಲಸ್ ಕೂಡ ಇಲ್ಲ ಎಂದು ಹೇಳುತ್ತಾರೆ.
ಇದೀಗ ಸೋನು ಗೌಡ ರಾಕೇಶ್ ಅಡಿಗ ಅವರೊಂದಿಗೆ ಮಾತನಾಡುವುದನ್ನೇ ಕಡಿಮೆ ಮಾಡಿದ್ದಾರೆ ಅಷ್ಟೇ ಅಲ್ಲದೆ ರಾಕೇಶ್ ಅಡಿಗ ಅವರನ್ನು ನೀವು ಹೋಗಿ ಬನ್ನಿ ಎಂದು ಗೌರವಯುತವಾಗಿ ಮಾತನಾಡಿಸುತ್ತಾ ಇದ್ದಾರೆ ಹಾಗೆಯೇ ರಾಕೇಶ್ ಅವರು ಸಹ ಸೋನು ಗೌಡ ಅವರನ್ನು ಅದೇ ರೀತಿಯಲ್ಲಿ ಕರೆಯಬೇಕು ಎಂದು ಸಹ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಎಲ್ಲಾ ಸದಸ್ಯರು ಕುಳಿತು ಮಾತನಾಡುತ್ತಿರುವ ಸಂದರ್ಭದಲ್ಲಿ ಸೋನು ಗೌಡ ಅವರು ನನಗೆ ಈಗ 22 ವರ್ಷ ನನಗೆ 24 ವರ್ಷದ ಒಬ್ಬ ಹುಡುಗನನ್ನು ಕಳುಹಿಸು ದೇವರೇ ಎಂದು ಕೇಳಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಯಾವ ಹುಡುಗರು ನನಗೆ ಬೇಡ ಅವರು ನನಗೆ ಸರಿ ಹೊಂದುವುದಿಲ್ಲ ಎನ್ನುವ ವಿಚಾರವನ್ನು ತಿಳಿಸಿ ನನಗೆ 24 ವರ್ಷದ ಹುಡುಗನೇ ಬೇಕು ಎಂದು ಹೇಳಿದ್ದಾರೆ. ಇದನ್ನು ನೋಡಿದಂತಹ ಪ್ರೇಕ್ಷಕರಿಗೆ ಆಗುತ್ತಿರುವಂತಹ ಉಪಯೋಗವಾದರೂ ಏನು ಹಾಗೆಯೇ ಇದರಿಂದ ಯಾವುದೇ ರೀತಿಯಾದಂತಹ ಅರಿವು ಉಂಟಾಗುತ್ತದೆ ಎನ್ನುವಂತಹ ಸಮಯ ಪ್ರಜ್ಞೆ ಕೂಡ ಅವರಲ್ಲಿ ಇಲ್ಲ. ಬಿಗ್ ಬಾಸ್ ಮನೆಗೆ ಹೋಗಬೇಕು ಎಂದರೆ ತಮ್ಮದೇ ಆದಂತಹ ಕೆಲವೊಂದು ಅರ್ಹತೆಗಳು ಇರುತ್ತದೆ ಆದರೆ ಆ ಅರ್ಹತೆಗಳು ಇಲ್ಲದೆ ಹೋಗಿರುವಂತಹ ಸೋನು ಗೌಡ ಅವರು ಈ ರೀತಿಯಾದಂತಹ ವರ್ತನೆಯನ್ನು ಮಾಡುತ್ತಿದ್ದಾರೆ. ಈ ನಡವಳಿಕೆ ಎಲ್ಲರಲ್ಲೂ ಸಹ ಬೇಸರವನ್ನು ಉಂಟು ಮಾಡಿದೆ. ಸೋನು ಗೌಡ ಅವರೇ ಈ ವರ್ತನೆಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.