ಬಿಗ್ ಬಾಸ್ ಮನೆಗೆ ಬಂದಿರುವ ಸೋನು ಗೌಡಗೆ ನೀಡುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತ ನಿಜಕ್ಕೂ ಆಶ್ಚರ್ಯ ಆಗುತ್ತೆ.

ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ನ ಕುರಿತಾದಂತಹ ಹಲವಾರು ವಿಚಾರಗಳು ಹರಿದಾಡುತ್ತಲೇ ಇದೆ. ಬಿಗ್ ಬಾಸ್ ಕನ್ನಡ ಮೊದಲು ಆರಂಭವಾದಂತಹ ದಿನಗಳಲ್ಲಿ ಸ್ಪರ್ಧಿಗಳು ಯಾವ ರೀತಿಯಾಗಿ ಇರುತ್ತಿದ್ದರು ಎಂದರೆ ತಮ್ಮದೇ ಆದಂತಹ ಕ್ಷೇತ್ರಗಳಲ್ಲಿ ಒಂದಷ್ಟು ಸಾಧನೆಯನ್ನು ಮಾಡಿರುವಂತಹ ಪ್ರತಿಭಾನ್ವಿತರನ್ನು ಬಿಗ್ ಬಾಸ್ ಮನೆಗೆ ಕರೆಸಲಾಗುತ್ತಿತ್ತು ಅವರುಗಳ ಮೂಲಕ ಜನರಿಗೆ ಒಂದಷ್ಟು ರೀತಿಯಾದಂತಹ ಸಂದೇಶಗಳನ್ನು ಸಹ ನೀಡುವ ಕೆಲಸವನ್ನು ಮಾಡಲಾಗುತ್ತಿತ್ತು. ಹಿಂದಿನ ಸೀಸನ್ ಗಳನ್ನು ನೋಡುವುದಾದರೆ ಜನರಿಗೆ ಒಂದಷ್ಟು ಸ್ಪೂರ್ತಿದಾಯಕವಾದಂತ ವಿಚಾರಗಳನ್ನು ಸ್ಪರ್ಧಿಗಳ ಮೂಲಕ ತಿಳಿಯಪಡಿಸುತ್ತಿದ್ದರು.

WhatsApp Group Join Now
Telegram Group Join Now

ಇದೀಗ ಬಿಗ್ ಬಾಸ್ OTT ಪ್ರಾರಂಭವಾಗಿದ್ದು ಸಮಾಜದಲ್ಲಿ ಅತಿ ಹೆಚ್ಚು ಕಂಟ್ರೋವರ್ಸಿಗಳನ್ನು ಮಾಡಿಕೊಂಡಿರುತ್ತಾರೋ, ಯಾರು ಬೇರೆ ಬೇರೆ ವಿಚಾರಗಳ ಮೂಲಕ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿರುತ್ತಾರೆ ಅಂತಹವರಿಗೆ ಈ ಒಂದು ಬಿಗ್ ಬಾಸ್ ಅವಕಾಶ ಕಲ್ಪಿಸಿ ಕೊಟ್ಟಿರುವುದು ಜನರಿಗೆ ಅಷ್ಟೊಂದು ಇಷ್ಟವಾಗುತ್ತಿಲ್ಲ. ಇದೀಗ ಈ ಸಾಲಿಗೆ ಬಿಗ್ ಬಾಸ್ ಮನೆಗೆ ಎಂಟ್ರಿ ಯನ್ನು ನೀಡಿರುವಂತಹ ಸೋನು ಗೌಡ ಒಬ್ಬರು ಇವರು ಸಹ ತಮ್ಮ ಸೋಶಿಯಲ್ ಮೀಡಿಯಾದ ಮೂಲಕ ಸಾಕಷ್ಟು ರೀತಿಯಾದಂತಹ ಹೆಸರನ್ನು ಮಾಡಿದ್ದಾರೆ ಸಾಕಷ್ಟು ರೀತಿಯಾದಂತಹ ವಿವಾದಗಳನ್ನು ತಮ್ಮ ಮೈ ಮೇಲೆ ಎಳೆದುಕೊಂಡಿರುವಂತ ಸೋನು ಗೌಡ ಅವರು ಬಿಗ್ ಬಾಸ್ ಮನೆಗೆ ಬಂದಿರುವುದು ಸಾಕಷ್ಟು ಜನರಿಗೆ ಬೇಸರವನ್ನು ಉಂಟುಮಾಡಿದೆ.

ಚಿತ್ರರಂಗದಲ್ಲಿ ತುಂಬಾ ಕಷ್ಟಪಟ್ಟು ಮೇಲೆ ಬಂದಿರುವಂತಹವರು ಹಾಗೆಯೆ ಚಿತ್ರರಂಗದಲ್ಲಿ ಇಂದಿಗೂ ಉಳಿದುಕೊಂಡು ಕಷ್ಟವನ್ನು ಅನುಭವಿಸುತ್ತಾ ಇರುವಂತಹವರು ಸಾಕಷ್ಟು ಜನ ಪ್ರತಿವಾನ್ವಿತ ಕಲಾವಿದರು ನಮ್ಮ ಚಿತ್ರರಂಗದಲ್ಲಿ ಇದ್ದರೂ ಸಹ ಈ ರೀತಿಯಾದಂತಹ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿರುವ ಕಂಟೆಸ್ಟೆಂಟ್ಗಳನ್ನು ಬಿಗ್ ಬಾಸ್ ಮನೆಗೆ ಕಳಿಸಿರುವುದು ನೋಡುಗಳಲ್ಲಿ ಬೇಸರವನ್ನು ಉಂಟು ಮಾಡಿದೆ. ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿರುವಂತಹ ಸೋನು ಶ್ರೀನಿವಾಸ್ ಗೌಡ ಅವರು ತೆಲುಗು ಸಿನಿಮಾದ ಪರವಾಗಿ ಮಾತನಾಡಿ ಸಾಕಷ್ಟು ರೀತಿಯಾದಂತಹ ಚರ್ಚೆಗೆ ಒಳಗಾಗಿದ್ದರೂ ನಂತರ ಇನ್ಸ್ಟಾಗ್ರಾಮ್, ಟಿಕ್ ಟಾಕ್ ಗಳಲ್ಲಿ ರೀಲ್ಸ್ ಮಾಡುವ ಮೂಲಕ ಸ್ವಲ್ಪ ಮಟ್ಟದ ಫೇಮ್ ಅನ್ನು ಪಡೆದುಕೊಂಡರು. ಅಷ್ಟೇ ಅಲ್ಲದೆ ಒಂದೆರಡು ಸಿನಿಮಾಗಳನ್ನು ಮಾಡುವ ಮೂಲಕ ಇನ್ನು ಹೆಚ್ಚಿನ ಮಟ್ಟದಲ್ಲಿ ಇವರು ಹೆಸರನ್ನು ಪಡೆಯುತ್ತಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ಯನ್ನು ನೀಡಿರುವಂತಹ ಎಲ್ಲಾ ಸ್ಪರ್ಧಿಗಳಿಗೂ ಸಹ ವಾರದ ಲೆಕ್ಕದಲ್ಲಿ ಸಂಭಾವನೆಯನ್ನು ನಿಗದಿ ಮಾಡಲಾಗಿದೆ.

ಈ ರೀತಿಯಲ್ಲಿ ನೋಡುವುದಾದರೆ ನಾವು ಸೋನು ಗೌಡ ಅವರ ಸಂಭಾವನೆ ಸ್ವಲ್ಪ ದುಬಾರಿ ಆಗಿದೆ ಹೌದು ಸೋನು ಗೌಡ ಅವರಿಗೆ ವಾರಕ್ಕೆ 20 ಸಾವಿರದಂತೆ ಅವರ ಸಂಭಾವನೆಯನ್ನು ನಿಗದಿ ಮಾಡಲಾಗಿದೆ ಅಂದರೆ ಇವರು 5 ವಾರಗಳ ಕಾಲ ಸತತವಾಗಿ ಇದ್ದೆ ಆದಲ್ಲಿ ಇವರಿಗೆ 1 ಲಕ್ಷ ರೂಪಾಯಿ ಸಂಭಾವನೆ ದೊರೆಯುತ್ತದೆ. ಹಾಗೆ ಈ ಸೀಸನ್ ಮುಗಿಯುವವರೆಗೂ ಸೋನು ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದರೆ ಇವರಿಗೆ 3 ಲಕ್ಷ ರೂಪಾಯಿ ಬಹು ದೊಡ್ಡ ಮೊತ್ತದ ಹಣ ದೊರೆಯಲಿದೆ. ಸೋಶಿಯಲ್ ಮೀಡಿಯಾದ ಮೂಲಕ ಪ್ರಸಿದ್ಧಿ ಆದಂತಹ ಸೋನು ಗೌಡ ಅವರಿಗೆ ಇಷ್ಟೊಂದು ಸಂಭಾವನೆ ನೀಡುತ್ತಿರುವುದು ಸರಿಯೇ ಅಥವಾ ತಪ್ಪೇ ಎಂದು ನಿಮ್ಮ ಅನಿಸಿಕೆಗಳನ್ನು ಕಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now