ಪ್ರತಿಯೊಬ್ಬರಿಗೂ ಕೂಡ ತಮ್ಮ ಸ್ವಂತ ಮನೆಯಲ್ಲಿ ವಾಸಿಸಬೇಕು ಎನ್ನುವ ಇಚ್ಛೆ ಇದ್ದೇ ಇರುತ್ತದೆ. ಅದಕ್ಕಾಗಿ ತಮ್ಮದೇ ಆದ ಗೂಡು ಕಟ್ಟಿಕೊಳ್ಳಲು ಅವರು ಪಡುವ ಕಷ್ಟ ಅಷ್ಟಿಷ್ಟಲ್ಲ. ಯಾಕೆಂದರೆ, ಸ್ವಂತ ಪರಿಶ್ರಮದಿಂದ ಕಟ್ಟುಕೊಂಡ ಪುಟ್ಟ ಗೂಡಿನ ನೆಮ್ಮದಿಯನ್ನು ಅಂಗಿನ ಅರಮನೆಯು ಕೊಡಲಾರದು. ಈ ಕಾರಣಕ್ಕಾಗಿ ಪ್ರತಿಯೊಬ್ಬರೂ ಕೂಡ ಮೂಲಭೂತ ಸೌಕರ್ಯಗಳು ಇರುವ ಒಂದು ಮನೆಯನ್ನು ಆದಷ್ಟು ಬೇಗ ಹೊಂದಬೇಕು ಎಂದು ಪ್ಲಾನ್ ಮಾಡುತ್ತಾರೆ.
ಇವುಗಳಿಗೆ ಈಗ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಕೂಡ ಕೈಜೋಡಿಸುತ್ತಿವೆ. ನಮ್ಮ ದೇಶದಲ್ಲಿ ಇನ್ನೂ ಕೂಡ ಅನೇಕರಿಗೆ ಸ್ವಂತ ಮನೆ ಇಲ್ಲ, ಇವರೆಲ್ಲರೂ ಬಾಡಿಗೆ ಮನೆಯನ್ನೇ ಅವಲಂಬಿಸಿ ಬದುಕುತ್ತಿದ್ದಾರೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಈ ರೀತಿ ಬಾಡಿಗೆ ಮನೆಯಲ್ಲಿ ಅವಲಂಬಿತರಾಗಿ ಬದುಕುವರ ಸಂಖ್ಯೆ ಹೆಚ್ಚು. ಅವರು ಅವರ ದುಡಿಮೆಯ ಅತಿ ಹೆಚ್ಚು ಭಾಗವನ್ನು ಬಾಡಿಗೆ ಕಟ್ಟುವುದರಲ್ಲಿ ಕಳೆಯುತ್ತಿದ್ದಾರೆ.
ಹಾಗಾಗಿ ಇವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ ಭಾರತದ ಪ್ರತಿಯೊಂದು ಕುಟುಂಬವು ಕೂಡ ಸ್ವಂತ ಸೂರು ಹೊಂದಬೇಕು ಎನ್ನುವ ಮಾತೃಕಾಂಕ್ಷೆಯಿಂದ ಜಾರಿಗೆ ತಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ (PM Avas Scheme) ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. 2015ರಲ್ಲಿ ಈ ಯೋಜನೆ ಜಾರಿಗೆ ಬಂದಿತ್ತು ಅದರ ಪ್ರಕಾರವಾಗಿ 2022 ಮಾರ್ಚ್ ಗೆ ಈ ಯೋಜನೆ ಮುಕ್ತಾಯವಾಗುತ್ತದೆ ಎಂದು ಊಹಾಪೋಹ ಶುರುವಾಗಿತ್ತು.
ಆದರೆ 77ನೇ ಸ್ವತಂತ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ನರೇಂದ್ರ ಮೋದಿ (PM Narendra Modi) ಅವರು ದೇಶದ ಜನತೆಗಾಗಿ ನೀಡಿದ ಅನೇಕ ಘೋಷಣೆಗಳಲ್ಲಿ ಆವಾಸ್ ಯೋಜನೆ ಬಗ್ಗೆ ಕೂಡ ಮಾತನಾಡಿ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ರಿಲೀಫ್ ಸಿಗುವಂತೆ ಮಾಡಿದ್ದಾರೆ. ಈ ಪ್ರಕಾರವಾಗಿ ಅವರು ಆವಾಸ್ ಯೋಜನೆಯ ಗಡವನ್ನು ಇನ್ನಷ್ಟು ವರ್ಷಗಳವರೆಗೆ ವಿಸ್ತರಿಸುವ ಮುನ್ಸೂಚನೆಯನ್ನು ನೀಡಿದ್ದಾರೆ.
ಇದುವರೆಗೂ ಕೂಡ ಆವಾಸ್ ಯೋಜನೆ ಅಡಿ ಗ್ರಾಮೀಣ ಭಾಗದವರಿಗೆ ಅತಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಬ್ಯಾಂಕ್ಗಳಲ್ಲಿ ಸಾಲ ಸೌಲಭ್ಯ ದೊರೆಯುತ್ತಿತ್ತು ಅವುಗಳನ್ನು ಉಪಯೋಗಿಸಿಕೊಂಡು ಅವರು ಆವಾಸ್ ಯೋಜನೆಯಡಿ ಮನೆ ಹೊಂದುತ್ತಿದ್ದರು. ಆದರೆ ನಗರ ಪ್ರದೇಶಗಳಿಗೆ ಇದನ್ನು ವಿಸ್ತರಿಸುವುದು ಸವಾಲಾಗಿತ್ತು ಆದರೆ ಈಗ ಈ ಸವಾಲನ್ನು ಸ್ವೀಕರಿಸುವ ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಿದೆ.
ಇನ್ನು ಕೆಲವೇ ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿ ವಾಸ ಮಾಡುವವರಿಗು ಕೂಡ ಸ್ವಂತ ಸೂರಿನ ಕನಸು ನನಸಾಗಬೇಕು ಎಂದು ಪ್ರಯತ್ನ ಪಡುತ್ತಿದೆ. ಗೃಹ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವರಾದ ಕೌಶಲ್ ಕಿಶೋರ್ (Minister Koushal Kishore) ಅವರು ಇತ್ತೀಚಿಗೆ ಲೋಕಸಭೆಯಲ್ಲಿ ಈ ಯೋಜನೆ ಅವಧಿಯು ಮುಕ್ತಾಯ ಆಗಿರುವುದರ ಬಗ್ಗೆ ಪ್ರಸ್ತಾಪ ಮಾಡಿದ್ದರು.
ಅರ್ಹರಿಗೆ ಕನಿಷ್ಠ ಸೌಲಭ್ಯಗಳೊಂದಿಗೆ ಮನೆಯನ್ನು ಕಟ್ಟಿಕೊಟ್ಟು ಅವರ ಬ್ಯಾಂಕ್ ಲೋನ್ ಗಳ ಬಡ್ಡಿದರವನ್ನು ಇನ್ನಷ್ಟು ಇಳಿಸುವ, ನಗರ ಪ್ರದೇಶಗಳಲ್ಲಿ ಬಾಡಿಗೆಗೆ ವಾಸವಾಗಿರುವ ಮಧ್ಯಮ ವರ್ಗದ ಜನರ ಸ್ವಂತ ಸೂರಿನ ಕನಸನ್ನು ನನಸಾಗಿಸುವ ಪ್ರಧಾನಮಂತ್ರಿ ಆವಾಸ್ ಯೋಜನೆಯು ಮುಂದಿನ ಡಿಸೆಂಬರ್ 2024ರವರೆಗೂ ಕೂಡ ಲಭ್ಯವಾಗಲಿದೆ ಎನ್ನುವ ಸುಳಿವನ್ನು ಪ್ರಧಾನ ಮಂತ್ರಿಗಳು ಬಿಟ್ಟುಕೊಟ್ಟಿದ್ದಾರೆ.
ಯೋಜನೆಗೆ ಸಿದ್ಧತೆ ಕೂಡ ಆರಂಭವಾಗಿದ್ದು ನೀವೇನಾದರೂ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಾಡಿಗೆ ಮನೆಯವರಾಗಿದ್ದರೆ ಯೋಜನೆಗೆ ಅರ್ಜಿ ಸಲ್ಲಿಸಿ ಮನೆ ಹೊಂದುವ ಬಗ್ಗೆ ಗಮನ ಕೊಡಿ ಮತ್ತು ಈ ವಿಷಯದ ಕುರಿತು ಇನ್ನಷ್ಟು ಮಾಹಿತಿಗಾಗಿ ಸರ್ಕಾರದ ಅಫೀಷಿಯಲ್ ವೆಬ್ಸೈಟ್ಗಳಿಗೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.