ಇಂದಿನಿಂದ ಮನೆ ಮನೆ ಸರ್ವೆ ಕೆಲಸ ಆರಂಭ. ರದ್ದಾಗಲಿದೆ ಇಂತಹ ಕುಟುಂಬಗಳ ರೇಷನ್ ಕಾರ್ಡ್, ಇಲ್ಲಿದೆ ನೋಡಿ ಸರ್ಕಾರದ ಹೊಸ ಮಾನದಂಡಗಳು.!

ರೇಷನ್ ಕಾರ್ಡ್ ಗಳು (Ration card) ಕೂಡ ಸರ್ಕಾರ ನೀಡುವ ಒಂದು ಅಧಿಕೃತ ಗುರುತಿನ ಚೀಟಿ (proof if address). ಇದನ್ನು ಆದಾಯ ಮಾಪನವಾಗಿ ಕೂಡ ಪರಿಗಣಿಸುತ್ತಾರೆ ಎಂದರೆ ತಪ್ಪಾಗದಾರರು. ಯಾಕೆಂದರೆ ರೇಷನ್ ಕಾರ್ಡ್ ವಿತರಣೆ ಮಾಡುವಾಗ ಬಡತನ ರೇಖೆಗಿಂತ ಮೇಲೆ ಇರುವವರು (above poverty line) ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (below poverty line) ಪ್ರತ್ಯೇಕವಾದ ರೇಷನ್ ಕಾರ್ಡ್ ನೀಡಲಾಗುತ್ತದೆ.

ಕುಟುಂಬಗಳು ಹೊಂದಿರುವ ರೇಷನ್ ಕಾರ್ಡ್ ನೋಡುವುದರಿಂದ ಆ ಕುಟುಂಬವು ಆರ್ಥಿಕವಾಗಿ ಯಾವ ಪರಿಸ್ಥಿತಿಯಲ್ಲಿ ಇದೆ ಎನ್ನುವುದನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು. ಇದೇ ಕಾರಣಕ್ಕಾಗಿ ರೇಷನ್ ಕಾರ್ಡ್ ವಿತರಣೆ ಮಾಡಿರುವ ಆಧಾರದ ಮೇಲೆ ಸರ್ಕಾರವು ಬಡ ಜನರಿಗೆ ಉಚಿತ ಪಡಿತರ ಮತ್ತು ಇನ್ನಿತರ ಯೋಜನೆಗಳನ್ನು ತಲುಪಿಸಲು ಸರಳವಾಗಿದೆ.

ರೇಷನ್ ಕಾರ್ಡ್ ನಲ್ಲಿ ಮನೆ ಯಜಮಾನಿ ಹೆಸರು ಬದಲಾಯಿಸಲು ನಾಳೆಯೇ ಕೊನೆ ದಿನ.! ತಿದ್ದುಪಡಿಗೆ ಬೇಕಾಗುವ ದಾಖಲೆಗಳೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಸದ್ಯಕ್ಕೆ ರಾಜ್ಯ ಸರ್ಕಾರದಿಂದಲೇ ನೋಡುವುದಾದರೆ ಗೃಹಲಕ್ಷ್ಮಿ (Gruhalakshmi) ಮತ್ತು ಅನ್ನಭಾಗ್ಯದಂತಹ (Annabhagya) ಯೋಜನೆಗಳ ಫಲಾನುಭವಿಗಳಾಗಲು ಬಡತನ ರೇಖೆಗಿಂತ ಕೆಳಗಿರುವ BPL ಮತ್ತು AAY ಕಾರ್ಡ್ ಹೊಂದಿರುವ ಕುಟುಂಬಗಳು ಮಾತ್ರ ಅರ್ಹವಾಗಿವೆ (BPL and AAY card holders are only eligible).

ಇಂತಹದೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸರ್ಕಾರಿ ಯೋಜನೆಗಳು, ವೈದ್ಯಕೀಯ ಶುಲ್ಕ ಹಾಗೂ ಶೈಕ್ಷಣಿಕ ಶುಲ್ಕದ ರಿಯಾಯಿತಿಗಳಿಗೆ ಕೂಡ ಬಡತನ ರೇಖೆಗಿಂತ ಕೆಳಗಿರುವ BPL ಮತ್ತು AAY ಕಾರ್ಡುಗಳು ಮಾತ್ರ ಅರ್ಹವಾಗಿರುತ್ತವೆ. ಆದರೆ ಇತ್ತೀಚೆಗೆ ಅನುಕೂಲಸ್ಥರು ಕೂಡ ಈ ಯೋಜನೆಗಳನ್ನು ಪಡೆಯುವ ಸಲುವಾಗಿ ಸರ್ಕಾರಕ್ಕೆ ಮರೆಮಾಚಿ ಅಥವಾ ನಕಲಿ ದಾಖಲೆಗಳನ್ನು ಸೃಷ್ಟಿಸಿ ಇಂತಹ ಕಾರ್ಡುಗಳನ್ನು ಪಡೆದಿದ್ದಾರೆ ಎನ್ನುವ ಮಾಹಿತಿ ಸರ್ಕಾರಕ್ಕೆ ಸಿಕ್ಕಿದೆ.

ಅಂಚೆ ಇಲಾಖೆಯಲ್ಲಿ ಖಾಲಿ ಇರುವ 30,041 ಹುದ್ದೆಗಳಿಗೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಕೆಗೆ ಆಗಸ್ಟ್ 23 ಕೊನೇ ದಿನ. ವೇತನ 29,380/-

ಇದನ್ನು ಮಟ್ಟ ಹಾಕಲು ನಿರ್ಧರಿಸಿರುವ ಸರ್ಕಾರವು 2016ರಲ್ಲಿ BPL ಕಾರ್ಡ್ ಗೆ ನೀಡಿದ್ದ ಮಾನದಂಡಗಳ (Ration card Eligible Criteria) ಬಗ್ಗೆ ಕಟ್ಟುನಿಟ್ಟಾದ ತನಿಖೆ ನಡೆಸಲು ನಿರ್ಧರಿಸಿದೆ. ಶೀಘ್ರವಾಗಿ ಇದನ್ನು ಕೈಗೊತ್ತಿಕೊಂಡಿರುವ ಸರ್ಕಾರವು ಮನೆಮನೆಗೆಗಳಿಗೂ ಕೂಡ ತೆರಳಿ ಸರ್ವೆ (Survey) ಕಾರ್ಯ ಕೂಡ ಶುರು ಮಾಡಿದೆ.

ನೀವೇನಾದರೂ ಸರ್ಕಾರ ವಿಧಿಸಿರುವ ಅರ್ಹತಾ ಮನದಂಡ ಮೀರಿ ಈ ರೇಷನ್ ಕಾರ್ಡ್ ಗಳನ್ನು ಪಡೆದಿದ್ದರೆ ನಿಮ್ಮ ರೇಷನ್ ಕಾರ್ಡ್ ಗಳು ರದ್ದಾಗಲಿವೆ (Card Cancel). ಅದೇ ರೀತಿಯಾಗಿ ನೀವೇನಾದರೂ ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುತ್ತಿದ್ದರೂ ಕೂಡ ನೀವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪಡೆಯುವ ರೇಷನ್ ಕಾರ್ಡ್ ಪಡೆಯಲು ಅರ್ಹರಿದ್ದೀರಿ ಎಂದು ಈ ಮಾನದಂಡಗಳನ್ನು ನೋಡಿ ನಿರ್ಧರಿಸಬಹುದು.

ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ ಕೇವಲ 4 ದಿನಗಳು ಮಾತ್ರ ಅವಕಾಶ, ಈ ದಾಖಲೆಗಳು ಕಡ್ಡಾಯವಾಗಿ ಇರಲೇಬೇಕು ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!

ಅದಕ್ಕಾಗಿ ಈ ಅಂಕಣದಲ್ಲಿ ಯಾವೆಲ್ಲ ಕುಟುಂಬಗಳಿಗೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುವ ರೇಷನ್ ಕಾರ್ಡ್ ಗಳನ್ನು ಪಡೆಯಲು ಸಾಧ್ಯವಿಲ್ಲ ಎನ್ನುವ ಅಂಶವನ್ನು ತಿಳಿಸಿ ಕೊಡುತ್ತಿದ್ದೇವೆ. ಅದರ ಪಟ್ಟಿ ಈ ರೀತಿ ಇದೆ ನೋಡಿ.

● ಹೊಸ ಪಡಿತರ ಚೀಟಿ ನಿಯಮದ ಪ್ರಕಾರ ಯಾವುದೇ ಅಭ್ಯರ್ಥಿಯು 50 ಚದರ ಮೀ. ಗಿಂತ ದೊಡ್ಡದಾದ ನಿವೇಶನವನ್ನು ಹೊಂದಿರಬಾರದು.
● ಗ್ರಾಮೀಣ ಪ್ರದೇಶದಿಂದ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಭ್ಯರ್ಥಿಗಳು ವರ್ಷಕ್ಕೆ 2,00,000 ಕ್ಕಿಂತ ಹೆಚ್ಚಿನ ಆದಾಯ ಗಳಿಸಬಾರದು.

ಗೃಹಲಕ್ಷ್ಮಿಗೆ ಹಣ ಹಾಕಲು ಡೇಟ್ ಫಿಕ್ಸ್ ಆದ್ರೆ ಈ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ 2000 ಹಣ ಪಡೆಯುವ ಭಾಗ್ಯ ಇಲ್ಲ.!

● ಹೆಚ್ಚುವರಿಯಾಗಿ, ಮೆಟ್ರೋಪಾಲಿಟನ್ ಪ್ರದೇಶಗಳಿಂದ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಾರ್ಷಿಕ ಆದಾಯವು 300,000 ಕ್ಕಿಂತ ಹೆಚ್ಚಿರಬಾರದು.
● ಕುಟುಂಬದಲ್ಲಿ ಯಾರಾದರೂ ಸರ್ಕಾರಿ ಹುದ್ದೆಯಲ್ಲಿದ್ದರೆ, ಅಥವಾ ಆದಾಯ ತೆರಿಗೆ, ಪ್ರೊಫೆಷನಲ್ ತೆರೆಗೆ, GST ರಿಟರ್ನ್ ಸಲ್ಲಿಸುತ್ತಿದ್ದರೆ ಅವರು ಕೂಡ ಬಡತನ ರೇಖೆಗಿಂತ ಕೆಳಗಿರುವ ಕುಟುಂಬ ಪಡೆಯುವ ರೇಷನ್ ಕಾರ್ಡ್ ಪಡೆಯಲು ಸಾಧ್ಯವಿಲ್ಲ.

● ನಾಲ್ಕು ಚಕ್ರದ ಸ್ವಂತ ವೈಟ್ ಬೋರ್ಡ್ ವಾಹನ ಅಥವಾ ಟ್ರಾಕ್ಟರ್ ಹೊಂದಿದ್ದರು ಕೂಡ ಅವರು ಈ ಕಾರ್ಡುಗಳನ್ನು ಪಡೆಯಲು ಅವಕಾಶವಿರುವುದಿಲ್ಲ.
● ಅಭ್ಯರ್ಥಿಗಳು ಈ ಮೇಲೆ ತಿಳಿಸಿದ ಮಾನದಂಡ ಮೀರಿ ಹೆಚ್ಚಿನ ಸ್ಥಳ ಅಥವಾ ವಾಹನವನ್ನು ಹೊಂದಿದ್ದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಪಡೆಯುವ ಪಡಿತರ ಚೀಟಿಯನ್ನು ಪಡೆದಿದ್ದರೆ ಆ ಕಾರ್ಡ್ಗಳನ್ನು ರದ್ದುಪಡಿಸುವುದು ಮಾತ್ರವಲ್ಲದೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಆಹಾರ ಇಲಾಖೆಯು ಎಚ್ಚರಿಕೆ ನೀಡಿದೆ.

Leave a Comment

%d bloggers like this: